ಒಟ್ಟು 5 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸೈ ಗುರುರಾಯ ಚರಣತೀರ್ಥವನು ಹರಣ ಭಯದೊಳು ಲಕುಮೀರಮಣನೊಲಿವಂದದಲಿ ಪ ದೇಶ ದೇಶವ ತಿರುಗಿ ಬೇಸರದು ಈ ಚರಣ ಭೂಸುರವ ಪೂಜಿಸುವದು ಈ ದಿವ್ಯ ಚರಣ ಕ್ಲೇಶವೆನಿಸದೆ ತೀರ್ಥದಾಸೆಯ ಬಿಡದ ಈ ಚರಣ ಕಾಶಿ ರಾಮೇಶ್ವರಕೆ ನಡೆದ ಚರಣ1 ಹಾವಿಗೆಯನೊಲ್ಲದೆ ಹಾದಿ ನಡೆದಿಹ ಚರಣ ದೇವಿ ಭಾಗೀರಥಿಗೆ ಇಳಿದ ಚರಣ ಕಾವಿ ವಸ್ತ್ರವನುಟ್ಟ ಕಾಶಿವಾಸಿಯ ಚರಣ ಕೋವಿದರು ವಂದಿಸುವ ದಿವ್ಯ ಚರಣ2 ಗಟ್ಟಿ ಬೆಟ್ಟವ ತಿರುಗಿ ಕಷ್ಟಬಟ್ಟಿಹ ಚರಣ ಸೃಷ್ಟಿಗುತ್ತಮ ನದಿಯ ಮಿಂದ ಚರಣ ಇಷ್ಟಗಳನೆಲ್ಲ ತಾ ಪಡೆದುಕೊಂಡಿಹ ಚರಣ ಕೃಷ್ಣಮೂರ್ತಿಯ ಬಳಿಗೆ ಬಂದ ಚರಣ 3 ಶುದ್ಧ ವೈಷ್ಣವರೆಲ್ಲ ಉಜ್ಜಿ ತೊಳೆವ ಚರಣ ಬದ್ಧ ಮುಕ್ತರಿಗೆಲ್ಲ ಸಿದ್ಧಿಯಹ ಚರಣ ಮಧ್ವರಾಯನ ಮತದಿ ಎದ್ದು ತಿರುಗುವ ಚರಣ ವಿದ್ಯೆನಿಧಿ ಗುರುರಾಯ ಬಾಳ್ದ ಚರಣ 4 ಧರಣಿಯನು ಬಲವಂದು ದಣಿದು ಬಂದಿಹ ಚರಣ ಕೈವಲ್ಯ ಪಡೆದ ಚರಣ ವರಾಹತಿಮ್ಮಪ್ಪನಿಹ ಗಿರಿಯನೇರಿದ ಚರಣ ಸ್ಥಿರವಾಗಿ ಉಡುಪಿಯೊಳು ನಿಂದ ಚರಣ 5
--------------
ವರಹತಿಮ್ಮಪ್ಪ
ಕೊಡು ಕಂಡ್ಯಾ ಹರಿಯೇ | ಶ್ರೀಪತಿ ಉತ್ತಮರ ಸಂಗತಿಯಲೆನ್ನಯಿಟ್ಟು ಪ ಬಂದು ಕುಳ್ಳಿರುವಲ್ಲಿ ಸಿಂಹಾಸನನಾಗುವೆನು | ನಿಂದಲ್ಲಿ ಮೆಟ್ಟುವ ಹಾವಿಗೆಯಾಗುವೆ | ಮಿಂದ ಬಚ್ಚಲಿಗೆ ಹಚ್ಚಿದ ಶಿಲೆಯಾಗುವೆ | ಗಂಧವಾಗುವೆ ನಿನ್ನ ಅಂಗಾಲಿಗೆ 1 ಉಂಬಲ್ಲಿ ಬಿದ್ದ ಎಂಜಲ ತಿಂದು ಬದುಕುವೆ | ಕರವ ತೊಳಿವೆ | ಅಂಬುಜ ಕುಸುಮವಾಗಿ ಹಾಸಿಕೆಯಾಗುವೆ ಬಾಯ | ದೊಂಬಲಿಗೆ ಕರವಡ್ಡಿ ಛಲ ಹೊರುವೆ2 ಪವಡಿಸುವ ಮನೆಯೊಳಗೆ ಸೂಜ್ಯೋತಿಯಾಗುವೆ | ಸಿರಿ ವಿಜಯವಿಠ್ಠಲ | ಜವನ ದೂತರನೊದದು ಸುಶುಚಿಯಾಗುವೆ3
--------------
ವಿಜಯದಾಸ
ಶ್ರೀ ಗುರುವಿನ ಮನೆಯ ಮುಂದಣ ಬಾಗಿಲ ಕಾಯ್ದಿರುವೆ ಪ ತ್ಯಾಗಿಸಿ ಸಂಸಾರಾ ಶ್ರೀ ಗುರುವಿನ ಯೋಗಾಸನವಹೆನು ಅ.ಪ. ಕೊಪ್ಪರಿಗೆಯಾಗಿಹೆ ನಾನು ಜಲಹರಿಯಾಗಿಹೆ ನಾನು ಗುರುವಿನ ಚರಣಾಲಂಕರಿಸುವ ಕೇತಕಿ ಗರಿಯಾಗಿದೆ ನಾನು ಗುರು ಮಂತ್ರವನುಚ್ಚರಿಸಿ ಜಪಿಸುವ ಸರವಾಗಿಹೆ ನಾನು 1 ಗುರುವಿನ ಕೊರಳೊಳಗಿಹ ರುದ್ರಾಕ್ಷದ ಸರವಾಗಿಹೆ ನಾನು ಭರಣಿಯಾಗಿಹೆ ನಾನು ಘಟ ಪರಿಯಾಗಿಹೆ ನಾನು ಗುರುವಿನ ಭುಂಜಿಸಿ ಮಿಕ್ಕ ಪ್ರಸಾದಕೆ ಗುರಿಯಾಗಿದೆ ನಾನು2 ನಡೆವ ಹಾವಿಗೆಯಾಗಿಹೆ ನಾನು ಮಿಗೆ ನಿರ್ಮಲದೊಳು ಪವಡಿಸುತ್ತಿಹ ಹಾಸಿಗೆಯಾಗಿಹೆ ನಾನು ಹೊರಜರುಲಿಯ ಸಾರಿಹೆ ನಾನು ಜಗದೀಶ್ವರ ವಿಮಲಾನಂದ ಗುರುವಿಗೆ ಮಗನಾಗಿಹೆ ನಾನು 3
--------------
ಭಟಕಳ ಅಪ್ಪಯ್ಯ
ಹಾವಿಗೆಯ ಮಹಾಪೂಜೆ ನೋಡಿ ಪಾಪಾಖ್ಯ ನಿತ್ಯ ಹಾಡಿ ಪ ಮನುಜನ್ನ ಭೋಕ್ತರಿಕಾಯೈದಿ ಧನದಾತ ಸವಸನ ಭೂಷಣ ವಿದ್ಯಾ ಕನಕ ವಿನಯದಿಂದಲಿ ಇಲ್ಲಿ ತನಕ ಬಂದು ಘನವಾಗಿ ಬೇಡುವರು ಮುಕ್ತಿ ಅಹಿಕಾ 1 ಪಾದ ಕರ್ಮ ಭೂ ಮಿವಾಸ ಮಾಳ್ಪೆನೆಂದಲ್ಲಿಂದ ಇಳಿದು ಪಾವಮಾನಿ ಮತ ಪೊಕ್ಕು ಸುಳಿದು 2 ಒಂದೊಂದು ಪರಿಯಲ್ಲಿ ಸಾಗಿ ಸಾರಿ ನಿಂದಿರದೆ ಇಪ್ಪದು ಕಾವ ಲೇಸಾಗಿ ಅಂದದಿಂದಲಿ ಮೌಳಿ ತೂಗಿ ವೇಗ ಕುಂದನಿಷ್ಟವಾಯಿತು ತಾನೆ ಪೋಗಿ3 ಬೇಕಾದರ್ಥವ ಕೊಡುವದು ವಾಕುವರ ಸಿದ್ಧಿ ಲೋಕ ತುಂಬಿದೆ ಇದೆ ಸುಧಿಕೀರ್ತಿ ತಾ ಕೊಂಡಾಡಿದರಾಗೆ ಬಲು ಚಿತ್ತ ಶುದ್ಧಿ 4 ಸತ್ಯಾಗಿ ಸತ್ಯಬೋಧಯತಿ ಕೈಯ ಗುರು ಸತ್ಯಪ್ರೀಯ ಸ್ತೌತ್ಯರಾಮನ್ನ ಹಾವಿಗೆಯ ನಂಬೆ ಭೃತ್ಯವತ್ಸಲ ವಿಜಯವಿಠ್ಠಲ ಸಹಾಯ5
--------------
ವಿಜಯದಾಸ