ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನಾರ ಭಜಿಸಲೈಯ್ಯಾ|ಯನ್ನ ಗತಿ ಮುಕುತಿದಾಯಕ ರಂಗ ನೀನಿರಲು ಪ ಸ್ನಾನಪಾನಕಬಪ್ಪ ಸುರನದಿಯನೇ ತ್ಯಜಿಸಿ ಹೀನ ಸರಿತೆಗಳಲ್ಲಿ ಮುಣುಗುವರೇ ಏನ ಬೇಡಿದ ನೀವ ಸುರ ಭೂಜ ಇದಿರಿಡಲು ಕಾನನದ ಶಾಲ್ಮಲಿಯ ಫಲವ ನರಸುವಂತೆ 1 ಕಾಮಧೇನು ಮನಿಗೆ ಬರಲು ಕರೆ ಕೊಳ್ಳದೇ ಆ ಮೊಲದ ಹಾಲವನು ಬಯಸುವಂತೆ ಕಾಮಿತಾರ್ಥವ ನೀವ ಚಿಂತಾ ಮಣಿಯಿರಲು ಪ್ರೇಮದಿಂದಲಿ ಕಾಜು ಮಣಿಯ ನರಸುವಂತೆ2 ತಾಯ ಮಾರಿಯ ತೋತ್ತು ಕೊಂಬಂತೆ ಸಿರಿಯಸುಖ ದಾಯಕ ನಿನ್ನ ಮರದನ್ಯಕೆರಗೀ ಹೇಯ ವೃತ್ತಿಗೆ ಬೆರೆವದುಂಟೇ ನಿನ್ನವನೆನಿಸಿಕಾಯೋ ಭಕುತಿಯ ನಿತ್ತು ಗುರು ಮಹಿಪತಿ ಸ್ವಾಮಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಾಯಸವೇ ವ್ಯರ್ಥಾ | ಆಯೋಗ್ಯಜನ ತಿದ್ದುವ ಕುರ್ತಾ ಪ ಏನು ಹೇಳಿದರೇನು | ಮನಸಿಗೇ ತುಸು ಬಂತ | ಅನುದಿನ ಹಾಲವನು ಬೇವಿನ ಮರಗಳಿಗೆರೆದಂತೆ 1 ಕರಿ ಕಲ್ಲಿನ ಮ್ಯಾಲ ಮೇಘದ ಘನಮಳೆ ಕರೆದರೆ | ತೊರೆದು ಕಠಿಣತನವಾ ನೆನೆಯುವೆ ಎಂದಿಗೆ ಏನಾರೆ 2 ಕತ್ತೆಯ ಮರಿ ತೊಳೆದು ಪರಿಪರಿಶೃಂಗರಿಸಿದರಿಂದೆ | ಉತ್ತಮ ಕುದುರೆಯ ದಶಾಂಶಕ ಬಾಹುದೇ 3 ಲಳಗಿಯೊಳಗ ಹಿಡಿದು ನಾಯಿ ಬಾಲವ ಹಾಕಿದ ಗುರುತ | ಸುಲಲಿತ ವಹುದೆಂದು ತೆಗೆದು ನೋಡಲು ಮೊದಲಂತೆ 4 ಅರವ್ಹಲ್ಲಾ ಮರವ್ಹಲ್ಲಾ ಅರಹು ಮರಹಲಿರುತಿಹುದಲ್ಲಾ | ಹರಿಯೇ ರಕ್ಷಿಸಬೇಕು ನಿಜ ಮಹಿಪತಿನಂದನ ಸೊಲ್ಲಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು