ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬಿದೆನೊ ನಂಬಿದೆನೊ ಅಂಬುಜಾಕ್ಷ ತೊಂಬಲಿಗೆ ಹಂಬಲಿಸಿ ಹಾರೈಸಿದೆ ನಿನ್ನ ಪ ಮೊದಲುಂಡ ಪಾಪದಲಿ ಕಳೆಗುಂದಿ ಕಳೆಗುಂದಿ ಮುದದಿಂದ ನಿತ್ರಾಣನಾದೆನಯ್ಯಾ ಪದುಮನಾಭನೆ ನಿನ್ನಭಯದೊಂಬಲನಿತ್ತು ವದನ ಚೇತನನಾಗುವಂತೆ ದಯಮಾಡೊ 1 ವಿಷವ ಸೇವಿಸಿದ ತರುಣನಂತೆ ಮೆಲವು ಭಾವಿಸದೆ ಬೀಳುತೀ ನೀ ನೆಲೆಗಾಣದೆ ಬಿಸಿಜಾಕ್ಷ ನೀನೆ ಕೃಪಾಳು ಎಂದೆಂದಿಗೆ ರಸ ಸುರಿವ ಸುರಿವ ಬಾಯದೊಂಬಲಾನಿತ್ತು ಸಲಹೊ2 ಆವದಾದರುವಲ್ಲೆ ಅನಿಮಿತ್ತ ಬಂಧು ಕೇಳು ಜೀವವೇ ನಿನ್ನ ಪಾದದಾಧೀನವೋ ಶ್ರೀವಧುರಮಣ ನಮ್ಮ ವಿಜಯವಿಠ್ಠಲ ನೀನೆ ದೇವ ಯನಗ ಹುದು ತೊಂಬಲನಿತ್ತು ಪೊರಿಯೊ 3
--------------
ವಿಜಯದಾಸ
ನೊಂದೆನೊ ಭವದೊಳಗೆ | ಗೋಪಾಲ | ಇಂದು ನೀ ಕಾಯಬೇಕು | ಗೋಪಾಲ ಪ ಸಿಂಧುಶಯನಯನ್ನ | ಕುಂದುಗಳೆಣಿಸದೆ | ಬಂದು ನೀ ಸಲಹಬೇಕೋ | ಗೋಪಾಲಅ.ಪ ನಾನಾಜನುಮದಿ | ನಾನಾರೂಪವ | ನಾನೆನಿತಾಂತೆನೋ | ಮಾನನಿಧೇ || ಹೀನಜನರ ಕೂಡಿ | ನಾನರಿಯದೆ ನಿನ್ನ | ಶ್ವಾನನಂತಾದೆನಲ್ಲೋ | ಗೋಪಾಲ 1 ಎಳೆಯತನದಿ ನಾ | ಬೆಳೆದೆನೊ ಲೀಲೆಯೋಳ್ | ಇಳೆಯಭೋಗಕೆ | ಮನವೆಳೆದಿತೊಪ್ರಾಯ || ಕಾಯ | ಬಳಲುವೆನಿಳೆಯೊಳಗೆ | ಗೋಪಾಲ 2 ಸಿರಿಯತನದಿ ನಾ | ಮರೆಯುತ ನಿನ್ನನು | ಪರಿಪರಿವಿಭವದಿ | ಮೆರೆದೆನೊ ಜೀಯ || ಸಿರಿಯು ತಾ ತೊಲಗಲು | ಹೆರರ ಹಾರೈಸಿದೆ | ಪೊರೆಯುವರಾರಿಹರೋ | ಕೃಪಾಳೋ 3 ಎನ್ನಪರಾಧ ಗ | ಳಿನ್ನು ಗಣನೆಯಿಲ್ಲ | ಉನ್ನತಮಹಿಮನೆ | ಘನ್ನಸಂಪನ್ನ || ಮುನ್ನಮಾಡಿದ | ಪರಾಧಗಳೆಣಿಸದೆ | ಮನ್ನಿಪರಾರಿಹರೋ | ಮುರಾರೆ4 ಆಶಪಾಶಂಗಳು | ಬೀಸಿದ ಬಲೆಯೊಳು | ಮೋಸದಿ ಸಿಲುಕುತೆ | ಘಾಸಿಯಾಗಿಹೆನೊ || ಶ್ರೀಶಕೇಶವ | ಯನ್ನಕ್ಲೇಶಗಳಳಿಯುತೆ | ದಾಸನೆಂದೆನಿಸೊ ನಿನ್ನಾ | ಗೋಪಾಲ 5
--------------
ಶ್ರೀಶ ಕೇಶವದಾಸರು