ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದೆಂದಿಗೂ ಎರಡು ಒಂದಾಗವು | ಒಂದೆ ಕುಲದಲಿ ಜನಿಸಿದ ಪಕ್ಷಿಗಳು ಪ ಒಂದೇ ರೂಪಪಕ್ಷಿ ಒಂದರಲಿ ತಿರಗೋವು | ಒಂದೀಗ ಪಂಚವರ್ಣದ ಕೋವಿದಾ || ಒಂದೆಲ್ಲ ಸಮನೆಂದು ಪೇಳುತ ಬದುಕುವುದು | ಒಂದಕ್ಕೆ ಗುರುತು ಮತ್ತೊಂದಕ್ಕೆ ಯಿಲ್ಲ 1 ಒಂದೇ ಕೊಂಬಿನಲಿ ಎರಡು ಸೇರಿಕೊಂಡು | ಒಂದು ಸಾರವನುಂಬದೊಂದರಿಯದು || ಒಂದು ಬುದ್ಧಿಯಲ್ಲಿಪ್ಪದೊಂದು ಇರಲೊಲ್ಲದು | ಒಂದು ನಾನೆಂಬೋದು ಮತ್ತೊಂದು ಪೇಳದು 2 ಒಂದೀಗ ತನ್ನ ಫಲ ಪರರಿಗೆ ಕೊಡುವದು | ಒಂದು ತನ್ನ ಫಲ ತಾ ತಿಂಬೋದು || ಒಂದು ಏರು ಇಳಿವ ಮೆಟ್ಟಗಳು ಬಲ್ಲದು | ಒಂದೀಗ ಕಾಣದೆ ಕಮರಿ ಬೀಳುವದು 3 ಒಂದು ಸುಡಗಾಡು ಸಿದ್ಧ ಎಂದು ಕೂಗುವದು | ಒಂದು ಕೂಗುವದು ಪ್ರಸಿದ್ಧನೆಂದು || ಒಂದು ಬೆಳೆದಿಂಗಳೊಳು ಹರುಷದಲಿ ಆಡುವದು | ಒಂದು ಕತ್ತಲೆಯೊಳು ಆಡುವುದು ನಿತ್ಯಾ 4 ಒಂದಕೆ ಒಂದು ಸಂವಾದವನು ಮಾಡುವವು | ಹಾರುವುದು | ಪುರಂದರ ವಿಜಯವಿಠ್ಠಲನ್ನ | ಒಂದು ಪೊಂದಿತು | ಒಂದು ಪೊಂದದಲೆ ಹೋಯಿತು 5
--------------
ವಿಜಯದಾಸ
ಕ್ರಿಯ ರೂಪ ಗುಣ ನಾಮ ದರ್ಶನ ಕರ್ತಾ ಪ ದಯವನಧಿ ಗೋಪಾಲಗೈಸು ಅಹಂ ನಾಶ ಅ.ಪ ಉಂಡು ಉಣಿಸುವಿ ನೀನು ದಣುವಿಕೆಗೆ ನಾನಯ್ಯ ಥಂಡ ಥಂಡದಿ ನಿನ್ನ ಲೀಲ ಜಾಲ ಕಂಡರೂ ಕಾಣದಲೆ ಬೆಂಡಾದೆ ಬಹುನೊಂದು ಮಂಡೆ ತಾಗಿದರು ಮನಕೆಚ್ಚರಾಗದು ಸ್ವಾಮಿ 1 ನಾಯಿಯಂದದಿ ವಿಷಯಕ್ಹಾರುವುದು ಈ ಮನಸು ದಾಯಾದಿಗಳ ವಶದಿ ಸಿಕ್ಕಿ ಸತತ ಕಾಯಜಾಪಿತ ನಿನ್ನ ರೂಪ ಧ್ಯಾನಕೆ ಬರದು ಮಾಯೇಶ ಮಾರಮಣ ಕಾಯೆನ್ನ ಕರುಣಾಬ್ಧಿ 2 ತೆಗಿ ನನ್ನ ಭೋಗ ಬಲೆ ನಗೆ ಮುಖವ ತೋರಯ್ಯ ನಿಗಮ ವೇದ್ಯ ಜಯೇಶವಿಠಲರಾಯ ಖಗಧ್ವಜ ಪರೆ ತೆಗೆದು ಜ್ಞಾನ ಚಕ್ಷುಸು ನೀಡು 3
--------------
ಜಯೇಶವಿಠಲ
ಪಾಲಿಸೈಯ್ಯ ಇವಳಾ ಶ್ರೀ ಭೂತರಾಜರ ಹೃನ್ಮಂದಿರ ನಿಲಯ ಧವಳ ಗಂಗಾವಾಸಿ ಹಯಮುಖನ ತನಯ ವಾಗೀಶಗುರು ಅರ್ಚಕಾ ಪ ನಿತ್ಯ ನಿನ್ನಲ್ಲಿಶ್ರೀಹರಿಯು ಅನುಗಾಲ ಕೋಲಾಹಲದೆ ಮಾಳ್ಪ ಆನಂದ ಕ್ರೀಡೆಗಳ ಕಾರುಣ್ಯರೂಪದಲಿ 1 ಸತಿ ಭಾರತಿಯು ಪರುಶುಕ್ಲಳೊ ಸತತ ಧ್ವನ್ತದುರಾಗಮಾ ನೀನೆಂದು ಸಾರುತಿದೆ ಶೃತಿಯು ಶೃತಿವೇದ್ಯ ನೀನೈಯ್ಯ ಶೃತಿಯಿಂದ ನೀ ಗಮ್ಯ ಶೃತ್ಯರ್ಥರೂಪ ನೀನೆನಗೆ ಸತತಾ 2 ನಾ ಪಾಮರಕೆ ಪಾಮರನು ಎಂದೆಂದು ಮಮಸ್ವಾಮಿ ನಾನು ತುತಿಸಲಾಪೆನೆ ನಿನ್ನ ನಿರ್ದೋಷಗುಣರಾಶಿಯಾ ಗಾನಮಾಡಿ ವೈರಾಗ್ಯ ಶಕ್ತಿ ಭಕ್ತ ಯುಕ್ತಿ ರಾಘವ ಎಮಗಿಲ್ಲವೆನುತಾ ಬಾಗಿ ಬಗ್ಗಿ ಹಾರುವುದು ಪೀಠಕೆ ಸತತ ಶಿವಶೇಷ ಗುರುತಾದಿ ಸುರಕೋಲಿನಿಕರಾ 3 ಒಂದು ಅರಿಯದಾಕಂದ ಇಂದಿರೆಯು ನಂಬಿಹಳು ಗತಿದಾತನೆಂದು ಸತತ ಅಂತರಂಗದಿ ನಲಿವ ಮಮತೆ ನಾನಿನ್ನ ನಿಜ ದೂತನೆಂದು ಹೌದಾದರವಳ ಮನ ಸೆಳೆದು ನಿನ್ನಲ್ಲಿ ಶ್ರೀಕೃಷ್ಣನಲಿ ಬಿಡು ಅವಳ ವಾಜಿವದನಾರ್ಚಿಶ್ರೀವಾದಿರಾಜ 4 ಜಾಗರ ಭಾರತೀಶ 5
--------------
ಗುರುತಂದೆವರದಗೋಪಾಲವಿಠಲರು
ಬಿಡಬೇಕು ಸ್ತ್ರೀಸಂಗ ಬ್ರಹ್ಮನಾಗುದಕೆಬಿಡದಿರಲು ಕೆಡುತಿಹನು ಬಿಡೆಯವಿಲ್ಲಯ್ಯ ಪ ಕಣ್ಣುಗಳು ತಿರುಹಲಿಕೆ ಕಾಲುಕೈಯುಡುಗುವುದುನುಣ್ಣನೆಯ ಗಂಟೊಲಿಯೆ ಎದೆಗುಂದುವುದು ಅಯ್ಯ ಸಣ್ಣ ಹಲ್ಲನು ಕಾಣೆ ಸರಿವುದು ಶಿವಧ್ಯಾನನುಣ್ಣನೆಯ ಮುಖಕ್ಕೆ ನುಗ್ಗಹುದು ದೃಢ ಚಿತ್ತ 1 ಕಿರುನಗೆಯ ಕಾಣಲು ಕಳಚಿಹೋಹುದು ಬುದ್ಧಿಸೆರಗು ಸಡಿಲಲು ಸೈರಣೆಯು ಅಡಗುವುದು ಅಯ್ಯತಿರುಗಾಡುತಿರಲು ತಿಳಿವಳಿಕೆ ಹಾರುವುದು ಮು-ಕುರ ಮುಖ ಕಾಣಲು ಮುಳುಗುವುದು ಅರಿವು ಅಯ್ಯ 2 ಗಾಳಿಯದು ಹಾಯಲಿಕೆ ಗತವಹುದು ಅನುಭವವುಬೀಳೆ ಅವರ ನೆರಳು ಬಯಲಹುದು ಬೋಧನೆಯುಬಾಲ ನುಡಿಗಳ ಕೇಳೆ ಬೀಳುವುದು ಬಲ್ಲವಿಕೆಬಾಲೆಯರ ಸಂಗವದು ಭವದ ತಿರುಗಣೆಯಯ್ಯ 3 ನವನೀತ ಪುರುಷನು ನಾರಿಯೇ ಅಗ್ನಿಯುನವನೀತ ಕರಗದೆ ಅಗ್ನಿಯೆದುರಿನಲಿಯುವತಿ ಸನಿಹದಲಿರಲು ಎಲ್ಲಿ ಬ್ರಹ್ಮವು ನಿನಗೆಶಿವನಾಣೆ ಸತ್ಯವಿದು ಸುಳ್ಳೆಂದಿಗೂ ಅಲ್ಲ 4 ಪಾತಕದ ಬೊಂಬೆಯು ಫಣಿವೇಣಿಯರ ರೂಪಘಾತಕವು ತಾನಹುದು ಯೋಗಗಳಿಗೆಯಲಯ್ಯಮಾತು ಬಹಳವದೇಕೆ ಮಹಿಳೆಯನು ತ್ಯಜಿಸಿದರೆದಾತ ಚಿದಾನಂದನು ತಾನೆ ಅಹನಯ್ಯ5
--------------
ಚಿದಾನಂದ ಅವಧೂತರು
ಲಾವಣಿ ಖೋಡಿಮನಸು ಇದು ಓಡಿ ಹೋಗುತದಬೇಡೆಂದರು ಕೇಳದು ಹರಿಯೆಜೋಡಿಸಿ ಕೈಗಳ ಬೇಡಿಕೊಂಬೆ ದಯಮಾಡಿಹಿಡಿದು ಕೊಡು ನರಹರಿಯೆ ಪ ಗಾಡಿಕಾರ ನಿನ್ನ ಮೋಡಿಯ ಮೂರ್ತಿಯಕೂಡಿಸಿ ಪೂಜಿಸಲಘ ಹರಿಯೆದೂಡುತ ಹೃದಯದ ಗೂಡಿನೊಳಗೆ ಸ್ಥಿರ ಮಾಡಲು ಹದವನು ನಾನರಿಯೆನೋಡಿಂದ್ರಿಯಗಳ ತೀಡಬಲ್ಲೆ ಮನತೀಡುವ ಯತ್ನವು ಬರೆಬರೆಯೆಬೇಡಬೇಡವೆಂದಾಡುವೆನೆ ನಿನ್ನನೋಡುವುದೆಂತೈ ಜಗದೊರೆಯೆಕೋಡಗನಂತಿದು ಕಿಡಿಗೇಡಿ ಜಿಗಿದಾಡಿ ಪೋಗುವುದು ತ್ವರೆಮಾಡಿಕೂಡಿಸದದು ಬಹುಕಾಡಿ ದಿಟಿಸ್ಯಾಡಿ ನೋಡಲದು ಅಡನಾಡಿಕಾಡಿಕಾಡಿ ಬಲು ಪೀಡಿಸುತಿರುವದುಕಾಡುವುದೇನಿದು ಈ ಪರಿಯಾಜೋಡಿಸಿ ಕೈಗಳ 1 ತುಣುಕು ತುಣುಕು ಮನಸು ಇದು ಕ್ಷಣದೊಳು ಹಿಡಿವುದುತಿಣಿಕಿ ತಿಣಿಕಿ ಗಡ ಇದನ್ಹಿಡಿಯೆ ಹೆಣಗಲ್ಯಾತಕೆಂದು ಗೊಣಗುತಿಹರುಜನ ಗುಣ ಗೊತ್ತಿತ್ತಿಲ್ಲಿದೆ ಗುಣ ಖಣಿಯೆಗುಣರಹಿತನೆ ನಿನ್ನ ಗುಣ ನಾಮಂಗಳನೆಣಿಸುತೆ ನಾಲಗೆ ತಾದಣಿಯೆ ಟೊಣೆದು ನಿಮ್ಮನು ಕ್ಷಣಕ್ಷಣಕೊಂದುಕಣಕೆ ಹಾರುವುದು ಸುರಧರಣಿಯೆಇಣಚಿಹಾಂಗೆ ಚಪಲವೋಧಣಿಯೆಅಣಕಿಸಿದ್ಹಾಂಗ ಕುಣಿಕುಣಿಯೆಬಣಗು ಜನರು ನಮಗದು ಹೊಣಿಯೆಒಣ ಮಾತಿದು ಕೇಳ್ ನಿರ್ಗುಣಿಯೆಮಣಿಯದು ದಣಿಯದು ಹಣಿಯದು ತಣಿಯದುಟೊಣಿಯಲು ನಿನ್ನದು ಅದರಣಿಯೆ 2 ಸ್ಪಷ್ಟ ಹೇಳುವೆನು ಚೇಷ್ಟೆಗಳದರದುಯ ಥೇಷ್ಟವಾಗಿ ಕಣಾ ಕಣಾಶಿಷ್ಯರನೆಲ್ಲಾ ಭ್ರಷ್ಟ ಮಾಡುವುದು ದೃಷ್ಟಿ ಇಂದೊಂದೇ ಕಾರಣಎಷ್ಟು ಮಾತ್ರಕಿವರಿಷ್ಟ ನಡೆಸದಿಂದಿಷ್ಟೇ ಇದರದು ಧೋರಣಾಕಷ್ಟದಿ ಹಿಡಿದಿಟ್ಟ ಅಷ್ಟು ಇಂದಿಯಕಿದೆದುಷ್ಟರುಪದೇಶದ ಪ್ರೇರಣಾನಷ್ಟಮಾಡೋ ಈ ಚೇಷ್ಟೆಗುಣ ಸುಪುಷ್ಟ ಮತಿಯ ಕೊಡೊ ಪೂರಣಮುಷ್ಠಿಯೊಳಗಿಸೊ ತನುಹರಣಸೃಷ್ಟಿಸ್ಥಿತಿಲಯ ಕಾರಣಸೃಷ್ಟಿಯೊಳಗೆ ಉತ್ಕøಷ್ಟ ಗದುಗಿನಶ್ರೇಷ್ಠ ವೀರನಾರಾಯಣ 3
--------------
ವೀರನಾರಾಯಣ