ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ನಾನೇನೆಂದೆನೊ - ರಂಗಯ್ಯ ರಂಗನಿನ್ನ ನಾನೇಂದೆನೊ ಪ ನಿನ್ನ ನಾನೇನೆಂದೆ ನಿಗಮಗೋಚರ ಸ್ವಾಮಿಪನ್ನಗಶಯನ ಪಾಲ್ಗಡಲೊಡೆಯನೆ ರಂಗ ಅ ಧೀರ ಸೋಮಕ ವೇದಚೋರ ಖಳನನು ಸೀಳಿವಾರಿಧಿಗಿಳಿದು ಪರ್ವತವನೆತ್ತಿಧಾರಿಣಿಯನು ಕದ್ದ ದನುಜದಲ್ಲಣನಾದನಾರಸಿಂಹ ನಿನಗೆ ನಮೊ ಎಂದೆನಲ್ಲದೆನೀರ ಪೊಕ್ಕವನೆಂದೆನೆ - ಬೆನ್ನಲಿ ಘನ್ನಭಾರ ಪೊತ್ತವನೆಂದೆನೆ - ಮಣ್ಣನಗೆದುಬೇರ ಮೆದ್ದವನೆಂದೆನೆ - ರಕ್ಕಸನೊಳುಹೋರಿ ಹೊಯ್ದನೆಂದು ಹೊಗಳಿದೆನಲ್ಲದೆ 1 ಪಾಷಾಣ ಪತಿ ಶರಣೆಂದೆನಲ್ಲದೆತಿರುಕ ಹಾರುವನೆಂದೆನೆ - ಹೆತ್ತ ತಾಯಶಿರವ ತರಿದನೆಂದೆನೆ - ವನವಾಸಕೆಭರದಿ ಚರಿಸಿದನೆಂದೆನೆ - ಪೂತನಿಯನುಸರಕು ಮಾಡದೆ ಕೊಂದ ಹರಿಯೆಂದೆನಲ್ಲದೆ 2 ಚಿತ್ತಜಕೋಟಿ ಲಾವಣ್ಯ ಮುಪ್ಪುರದಉತ್ತಮಸ್ತ್ರೀಯರ ವ್ರತವಳಿದುಮತ್ತೆ ಕಲ್ಕಿಯಾಗಿ ಮಧುಪರ ಮಡುಹಿದಹತ್ತವತಾರದ ಹರಿಯೆಂದೆನಲ್ಲದೆಬತ್ತಲೆ ನಿಂತವನೆಂದೆನೆ - ತೇಜಿಯನೇರಿಒತ್ತಿ ನಡೆದವನೆಂದೆನೆ - ಬಾರಿಬಾರಿಗೆಸತ್ತು ಹುಟ್ಟುವನೆಂದೆನೆ - ಆದಿಕೇಶವಭಕ್ತವತ್ಸಲನೆಂದು ಪೊಗಳಿದೆನಲ್ಲದೆ 3
--------------
ಕನಕದಾಸ
ಬಂಡು ಮಾಡುವರಲ್ಲೊ ರಂಗೈಯ್ಯ ಪ ಮಡುವ ಪೊಕ್ಕೆನುಯೆಂದು ಮಡದೇರೆಲ್ಲರು ಕೂಡಿ ಬಿಡುಗಂಣನಿವನೆಂಬರೋ ರಂಗೈಯ್ಯಾ 1 ಗುಡ್ಡ ಹೊತ್ತನು ಎಂದು ಸಡ್ಡೆನು ಮಾಡದೆ ನಿನ್ನ ದೊಡ್ಡ ದೆವ್ವಯೆಂಬರೊ ರಂಗೈಯ್ಯಾ 2 ಧರಣಿ ಎತ್ತಿದೆ ಎಂದು ಪರಿಹಾಸ ಮಾಡುತ ಕೋರೆದಾಡಿಯನೆಂಬರೊ ರಂಗೈಯ್ಯಾ 3 ತರಳನ ಸಲಹಲು ಸಿರಿಗೆ ಪೇಳದೆ ಬಂದ ಉರಿಮೋರೆಯವನೆಂಬರೊ ರಂಗೈಯ್ಯಾ 4 ಕೃಪೆಯ ಮಾಡದೆ ಬಲಿಯ ತಪಭಂಗ ಮಾಡಿದ ಕಪಟ ತಿರುಕನೆಂಬರೊ ರಂಗೈಯ್ಯಾ 5 ಪಿತನ ಮಾತನು ಕೇಳಿ ಮಾತೃಹತ್ಯವಗೈದ ಪತಿತ ಹಾರುವನೆಂಬರೊ ರಂಗೈಯ್ಯಾ 6 ಸತಿಯ ರಕ್ಕಸನೊಯ್ಯೆ ಅತಿಶೋಕ ಪೊಂದಿದ ಹತಭಾಗ್ಯನಿವನೆಂಬರೊ ರಂಗೈಯ್ಯಾ 7 ನೆರೆಹೊರೆ ಹೆಂಗಳ ಸುರತದಿ ಕೂಡಿದ ಜಾರ ಚೋರನು ಎಂಬರೊ ರಂಗೈಯ್ಯಾ 8 ಬಟ್ಟೆಯಿಲ್ಲದೆ ಪೋಗಿ ನೆಟ್ಟನೆ ನಿಂತಿರ್ದ ಕೆಟ್ಟಾ ಭಂಡನಿವನೆಂಬರೊ ರಂಗೈಯ್ಯಾ 9 ಅಷ್ಟಾ ಭಾಗ್ಯವ ನೀಗಿ ಕಷ್ಟಕ್ಕೆ ಗುರಿಯಾದ ದುಷ್ಟ ರಾಹುತನೆಂಬರೊ ರಂಗೈಯ್ಯಾ 10 ಕಂದಾ ನೀ ನಿರ್ದೋಷ ರಂಗೇಶವಿಠಲ ನೆಂದು ತಿಳಿದು ದೂರುವರೊ ರಂಗೈಯ್ಯಾ 11
--------------
ರಂಗೇಶವಿಠಲದಾಸರು
ಕೊಟ್ಟು ಹೋಗೊ ಎನ್ನ ಸಾಲವ-ಕಣ್ಣ-|ಬಿಟ್ಟರಂಜುವನಲ್ಲ ಹೊರು ಕಲ್ಲ ಕೃಷ್ಣ ಪಕಾಲನೂರಿ ಅಡಿಯಿಟ್ಟರೆ-ಭೂ-|ಪಾಲನಾಣೆ ನರಸಿಂಗನೆ ||ಏಳು ವರ್ಷ ಬಡ್ಡಿ ಮೂಲಸಹಿತವಾಗಿ |ತಾಳುವನಲ್ಲವೊ ತಿರುಕ ಹಾರುವನೆ 1ಕೊರಳುಗೊಯ್ಕ ನೀನು ಸಾಲವ ತೆಗೆದು |ತಿರುಗುವುದುಚಿತವೆ ವನವನವ ||ಎರಡೇಳು ವರ್ಷಕೆ ಎನಗಿಂದು ಸಿಕ್ಕಿದೆ |ಒರಳಿಗೆ ಕಟ್ಟದೆ ಬಿಡುವೆನೆ ಕೃಷ್ಣ 2ಬತ್ತಲೆ ನಿಂತರೂ ಬಿಡುವೆನೆ ನಿನ್ನ |ಉತ್ತಮ ಗುಣಗಳ ತೋರಿದೆ ||ಹತ್ತಿದ್ದ ಕುದುರೆ ಸಹಿತವಾಗಿ ಹಿಡಿತಂದು |ಚಿತ್ತದಿ ಕಟ್ಟುವೆ ಪುರಂದರವಿಠಲ 3
--------------
ಪುರಂದರದಾಸರು