ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನರಹರಿ ತಾರಿಸೊಎನ್ನಾ ದುರಿತಾರಿ ಮುಕ್ತಿ ದಾರಿ ಸಾರಿ ದೋರಿ ದಯಬೀರಿ ಪ ಕಮನೀಯ ಲಾವಣ್ಯ ರೂಪ ಶಂಖಾರಿ ವಿಮಲಗದಾಂಭುಜಧಾರೀ ಸುಮನಸಾಧುಜನ ಹೃದಯ ವಿಹಾರಿ 1 ಮುರ ಅರಿ ಚೆಲುವಕಸ್ತೂರಿ ಶ್ರೀಹರೀ ಸಲಹುತಿಹ ಮಾಮನೋ ಹಾರಿ2
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀರೇರುಹಾನಯನ | ವಾರನಿಧಿ ನಡುಶಯನತೋರೆನಗೆ ತವ ಚರಣ | ಸುಗುಣ ಗಣ ಪೂರ್ಣ ಪ ಅಮಿತ ಕ್ಲೇಶ ಗೊಳಿಸದಂತೆನೀ ಸಲಹೋ ಎನ್ನ | ಶೇಷಾದ್ರಿ ವಾಸಾ ಪರೇಶಾ1 ಭವ | ಸಂಗದೊಳಗಿರಿಸೀಭಂಗ ಪಡಿಸುವಿ ದೊರೆಯೆ | ಶೃಂಗಾರ ನಿಧಿಯೇ |ಸಂಗ ವಿಷಯದಿ ಹರಿಸಿ ನಿ | ಸ್ಸಂಗನೆಂದೆನಿಸಿಲಿಂಗಾಂಗ ಕಳೆಯೊ ಹರಿ | ರಂಗ ಭವಹಾರಿ2 ಸಾಮಸನ್ನುತ ಚರಣ | ಭೂಮಗುಣಿ ಸುಸ್ತವನಪ್ರೇಮದಲಿ ಗೈವ ಮನ | ನೇಮವೀಯೆಲೊ ವಾಮನ |ಈ ಮಹಾ ಕಲಿಯುಗದಿ | ನಾಮ ನಿಸನ್ನದೆ ಗತಿಯೆಶ್ರೀಮಹೀ ಸೇವಿತನೆ | ರಾಮ ಗುಣಧಾಮ 3 ಭವ | ರೋಗ ವೈದ್ಯನೆ ಎನ್ನರೋಗ ಹರಿಸುವುದರಿದೆ | ಇದು ನಿನ್ನ ಬಿರುದೇ4 ನಿರವದ್ಯ ಆದ್ಯಾಅರುಹಲೇನಿಹುದಿನ್ನು | ಸರ್ವಜ್ಞ ನೀನಿನ್ನು ಒರೆವೆನೆಂಬಪರಾಧ | ಮರೆದು ಪಾಲಿಸು ಶ್ರೀಶ 5
--------------
ಗುರುಗೋವಿಂದವಿಠಲರು
ಪಾಲಿಸೊ ಶ್ರೀರಾಮಪೂತನೀರದಶ್ಯಾಮಪ.ಕೌಶಿಕಪ್ರಿಯ ಸುಸತಿ ಸಹಾಯಕೌಸಲ್ಯಾಪುತ್ರಕಮನೀಯಗಾತ್ರ1ಪಶುಪತಿವಂದ್ಯ ಪರಮಾನಂದದೂಷಣಖರಾರಿದಶಶಿರಹಾರಿ2ಋಷಿ ಹೃತ್ಪೂರ್ಣ ರಘುಕುಲರನ್ನಪ್ರಸನ್ವೆಂಕಟೇಶ ಪವನಜತೋಷ 3
--------------
ಪ್ರಸನ್ನವೆಂಕಟದಾಸರು