ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ತನುವಿನೊಳಗೆ ಅನುದಿನವಿದ್ದು ಎನಗೊಂದು ಮಾತ ಹೇಳದೆ ಹೋದಿ ಹಂಸ ಪ. ಜಾಳಂಧರಯೆಂಬೊ ಮಾಳಿಗೆ ಮನೆಯಲ್ಲಿ ನೋಳ್ಪರೆ ಒಂಬತ್ತು ಬಾಗಿಲು ಬೇರಿಗೆ ಹೇಳಿ ಹೋಯಿತೆ ಒಂದು ಮಾತ 1 ಏರಿಯು ನೀರನು ತೆಗೆದುಕೊಂಡಿದ್ದೇನೊ ಭೋರೆಂಬೋ ಮಳೆ ಹೊಯ್ದು ಭೋರೆಂಬೊ ಮಳೆ ಹೊಯ್ದು ಬಣವೆದ್ದು ಹೋಗುವಾಗ ಈ ಏರಿಗೆ ಹೇಳಿಹೋಯಿತೆ ಒಂದು ಮಾತ 2 ಗಟ್ಟಿ ಬೆಟ್ಟಗಳಲ್ಲಿ ಅಟ್ಟಡವಿಯಲ್ಲಿ ಇಕ್ಕಿತ್ತು ಇಟ್ಟಿತ್ತು ಜೇನು ತನ್ನ ಸುಖಕಾಗಿ [ಇಟ್ಟ]ತುಪ್ಪವನುಂಡು ನೊಣ ಹಾರಿಹೋಗುವಾಗ ಈ ಬೆಟ್ಟಿಗೆ ಹೇಳಿ ಹೋಯಿತೆ ಒಂದು ಮಾತ 3 ಹೆಸರು ಹೇಳುವೆ ನಾನನುದಿನವು ರಸಭೋಜನವವುಂಡು ಜೋತಿತಾಹೋಗುವಾಗ ಪ್ರಣತಿಗೆ ಹೇಳಿ ಹೋಯಿತೆ ಒಂದು ಮಾತ 4 ಸಪರ್Àಶಯನ ಹಯವದನನಾಡಿದ ಮಾತು ಪಣೆ ಲಕ್ಷ್ಯವ ತೊಡೆದು ಮ್ಯಾಲಿರಲಾಗಿ ಸುಪ್ಪಾಣಿಮುತ್ತು ಬಾಯ್ಬಿಟ್ಟು ಹೋಗುವಾಗ ಈ ಚಿಪ್ಪಿಗೆÀ ಹೇಳಿ ಹೋಯಿತೆ ಒಂದು ಮಾತ 5
--------------
ವಾದಿರಾಜ
ಯಾಕೆ ಸುಮ್ಮನೆ ಪೇರಿ ಹೊಡೆಯುವಿ ಕಾಕು ದುರ್ಭವ ಚಕ್ರದಿ ಪ ಲೋಕದಿರುವು ನಿನಗೇನು ಸ್ಥಿರವೆಲೋ ಕಾಕುಜೀವ ವಿಚಾರ ಮಾಡದೆ ಅ.ಪ ಕಾಕುಸಿರಿಗೆ ಕೈಹಾಕಿ ಬಲು ಬಲು ಶೋಕದಬ್ಧಿಲಿ ಮುಳುಗಿದ್ಯೊ ನೂಕಿ ಯಮನರೊದೆದು ಎಳೆವಾಗ ಲೋಕಸಂಪದ ನಿನ್ನ್ಹಿಂದೆ ಬರುವುದೆ 1 ನಾನು ಯಾರೆಂದೆಂಬ ಖೂನ ಸು ಜ್ಞಾನ ವಿಡಿದು ತಿಳಿಯದೆ ಶ್ವಾನಸೂಕನಂದದಿ ಮಹ ಹೀನ ಬವಣೆಯೊಳ್ಬೀಳುತ 2 ಗೋತಗೋಜಲಕುಣಿ ಈ ಸಂಸಾರ ರೋತಿ ಹೊಲಸಿಕ್ಕಿ ನಾರುವ ನೀತಿಗೆಟ್ಟದರೊಳಗೆ ಬಿದ್ದೆಮ ಭೀತಿಯಿಂ ಬಳಲುವುದೇನೆಲೊ 3 ಪೂರ್ವಪುಣ್ಯದಿಂ ಸಿಕ್ಕ ಈ ಮಹ ಪರ್ವಕಾಲ ಸಮಯರಿಯದೆ ದುರ್ವಿಕಾರದಿಂ ಸರ್ವ ಕಳೆಯಲು ದೊರೆವುದೇ ಪುನ:ಬಯಸಲು 4 ತೋರಿ ಇಂದ್ರಜಾಲದಂದದಿ ಹಾರಿಹೋಗುವ ಮಾಯ ನೆಚ್ಚಿ ಸಾರತರ ಮೋಕ್ಷವನು ಕರುಣಿಪ ಶ್ರೀರಾಮನ ನಂಬದೆ 5
--------------
ರಾಮದಾಸರು
ಹಿಂದೂ ಮುಂದೂ ಎಂದೆಂದಿಗೂ ಗೋವಿಂದನೆ ಎನಗೆ ಬಂಧು ಪ. ಮನೆಯೆಂಬೋದೆ ಸುಮ್ಮನೆ ಮಕ್ಕಳೆಂಬೋದೆ ದಂಧನೆಹಣವೆಂಬೋದೆ ಬಲುಬೇನೆ ಹಾರಿಹೋಗುವದು ತಾನೆ 1 ಮಂದಗಮನೆಯರ ಕೂಡಿ ಮದವೆಲ್ಲ ಹೋಗಲಾಡಿಮುಂದೆ ತೋರದಂತೆ ಬಾಡಿ ಮೋಸಹೋಗಲಾಡಬೇಡಿ2 ಪರಧನ ಪರಸತಿ ಪರಕ್ಕೆಬಾರದಿದು ಘಾಸಸಿರಿಹಯವದನನ ಚರಣ ಭಜಿಸಿ ಪಡೆಯೆಲೊ ಕರುಣ3
--------------
ವಾದಿರಾಜ