(ಹಿರಿಯಡ್ಕದ ವೀರಭದ್ರ ಸ್ತೋತ್ರ)
ದಕ್ಷಯಜ್ಞ ಭಂಜನ
ನಿರಂಜನ ಪ.
ಪ್ರಮಥ ಭೂತ ನಾಯಕ
ಪ್ರಣತ ಸಿದ್ಧಿದಾಯಕ
ಮಣಿದು ಸ್ತುತಿಪೆ ನಿನ್ನನು
ಮಾನ ಪೊಂದಿಸೆನ್ನನು 1
ಸಂದಿಗೊಂದಿವೇರಿದಾ
ಸರ್ವದಾಪ್ರಕಾರದಾ
ವೈರಿ ಸ್ತೋಮವಾ
ಮಾನಿಸೊ ನಿರ್ನಾಮವಾ 2
ಶಿವಜಟಾಗ್ರ ಜಾತನ
ಶೇಷ ಗಿರೀಶ ದಾಸನೆ
ಭವನ ಬೇಗ ತೋರಿಸೊ
ಭಯವ ದಾರಿ ಹಾರಿಸೊ 3