ಒಟ್ಟು 10 ಕಡೆಗಳಲ್ಲಿ , 8 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೆಂದು ಬಣ್ಣಿಸಲಿ ಎಲೆ ಧನವೆ ನಿನ್ನ ಮಾಣುವ ವಿಷಯಸುಖ ಅಹುದೆನಿಪ ಪರಿಯ ಪ ಏರಿಸುವಿ ಹಿರಿಕುದುರೆ ತೋರಿಸುವಿ ದುರ್ಮದವ ಹಾರಿಸುವಿ ಸುವಿಚಾರ ಮೀರಿಸುವಿ ಸುಪಥ ದೂರಿಸುವಿ ಮಹನೀತಿ ಘೋರಿಸುವಿ ಬಡವರನು ಕಾರಿಸುವಿ ತಿಂದನ್ನ ಧಾರುಣಿಯೊಳು 1 ಮೆರೆಸುವಿ ಅಂದಣದಿ ಸುರಿಸುವಿ ದುರ್ವಚನ ನರಸುವಿ ಎಡಬಲದಿ ಪರಿಪರಿಯ ಜನರ ತರಿಸುವಿ ಸತಿಸುತರ ಇರಿಸುವಿ ಅರಮನೆಯೊಳ್ ಮರೆಸುವಿ ಮಹಿಮರ ಸಂದರುಶನದ ಸುಖವ 2 ವೇದಶಾಸ್ತ್ರಕಿಳಿಸುವಿ ವಾದನುಡಿ ಕಲಿಸುವಿ ನೀ ಸಾಧುಸಜ್ಜನರ ನಿಜಬೋಧ ತೋರಿಸುವಿಯೋ ಭೇದನಿಕ್ಕುತ ವೈರ ಸಾಧಿಸುತ ಪರಲೋಕ ಸಾಧನೆಯ ಕೆಡಿಸ್ಯಮಬಾಧೆಗಾನಿಸುವಿ 3 ತೊಡಿಸುವಿ ವಿಧವಿಧದ ಒಡವೆವಸ್ತ್ರಂಗಳನು ನುಡಿಸುವಿ ಕಡೆತನಕ ಕಡುದುಗುಡ ಬಡಿಸುವಿ ಬಲುಜಂಬ ನಡೆಸುವಿ ದುಷ್ಷಥದಿ ಕೆಡಿಸುವಿಯೋ ಸಲೆ ಪುಣ್ಯಪಡೆದ ನರಜನುಮ 4 ಇನ್ನೆಷ್ಟು ಬಣ್ಣಿಸಲಿ ನಿನ್ನ ಕರುಣದ ಗುಣವ ನಿನ್ನ ನಂಬಲು ಬಿಡದೆ ಕುನ್ನಿಯೆಂದೆನಿಸಿ ಪನ್ನಂಗಶಯನ ಮಮ ಸನ್ನುತಾಂಗ ಶ್ರೀರಾಮ ನುನ್ನತಂಘ್ರಿಯ ಧ್ಯಾನವನ್ನು ಅಗಲಿಸುವಿ 5
--------------
ರಾಮದಾಸರು
ಕೋಲ ಕೋಲೆನ್ನ ಕೋಲ ಕೋಲ ಕೋಲೆನ್ನ ಕೋಲಕೋಲೆಂದು ಪಾಡುವರೆಷ್ಟು ಕೇಳ ವಯ್ಯಾರಿ ಪ. ಚಿತ್ರ ವಿಚಿತ್ರದ ಮುತ್ತು ಮಾಣಿಕ ಎಸವೋಛತ್ರÀ ಹಿಡಿದವರೆಷ್ಟ ಕೇಳ ವೈಯಾರಿ 1 ಶ್ವೇತ ಛತ್ರವುಕೋಟಿ ಪ್ರೀತಿಲಿ ಹಿಡಿದವರೆಷ್ಟ ಕೇಳವಯ್ಯಾರಿ2 ಸೂರ್ಯ ಪಾನವುಕೋಟಿಸಾರೆ ಹಿಡಿದವರೆಷ್ಟ ಕೇಳ ವಯ್ಯಾರಿ3 ಎಡಬಲ ಚಾಮರ ಹಿಡಿಕೆ ನವರತ್ನ ಹೊಳೆವ ಹಿಡಿದು ಬೀಸುವರವರೆಷ್ಟ ಕೇಳ ವಯ್ಯಾರಿ 4 ರತ್ನ ಮಾಣಿಕ ಬಿಗಿದ ಬೀಸಣಿಕೆಯ ಹಿಡಿದುಚೆನ್ನಾಗಿ ಬೀಸುವವರೆಷ್ಟ ಕೇಳ ವಯ್ಯಾರಿ 5 ಚಲುವ ರಂಗನ ಮುಂದೆ ನಲಿಯುತ ನವಿಲಗÀರಿಯಸುಳಿಸುವವರೆಷ್ಟ ಕೇಳ ವಯ್ಯಾರಿ 6 ಅಚ್ಚ ಜರತಾರಿ ವಸ್ತ್ರ ಜತ್ತಾಗಿ ನಿರಿ ಹೊಯ್ದುಬಿಚ್ಚಿಹಾರಿಸುವರೆಷ್ಟ ಕೇಳ ವೈಯ್ಯಾರಿ 7 ಫುಲ್ಲನಾಭನ ಮುಂದೆ ಮಲ್ಲ ಮುಷ್ಠಿಕರುತಮ್ಮೆಲ್ಲವಿದ್ಯೆಯನು ತೋರಿಸುವರೆಷ್ಟ ಕೇಳ ವೈಯಾರಿ 8 ಬಂದಿಗಳು ರಾಮೇಶನ ಒಂದೊಂದು ಗುಣ ರಚಿಸಿಚಂದಾಗಿ ಹೊಗಳುವರೆಷ್ಟ ಕೇಳ ವೈಯ್ಯಾರಿ9
--------------
ಗಲಗಲಿಅವ್ವನವರು
ತಾನೇ ತಾನು ಜಗದಂತರ್ಯಾಮಿ ವಿಶ್ವಂಭರಿತಾ ತಾನೇ ತಾನು ಹರಿಧ್ಯಾನ ಧನ ದಾನ ಮಾನ ಅಣುರೇಣುಗಳಲ್ಲಿ ಪ ವಬ್ಬಸೂರ್ಯಜಗ ಸರ್ವ ಚಕ್ಷಗಳ ಮಬ್ಬುಹಾರಿಸುವಂತೆ ಅ.ಪ ಘಟ ಮಠಾದಿಗಳ ಚದುಳ ಬ್ರಹ್ಮಘಟಿ ನೆಟಗೆ ವ್ಯಾಪ್ತ ನಿಚ್ಚಲ ಗಗನದಂತೆ 1 ಕಂಭಸೂತ್ರದ ಬೊಂಬೆಯಾಟದಲಿ ಇಂಬುಗೊಂಡ ಕುಳೆ ಬಿಂಬಿಸುವಂತೆ2 ಕಂದ ಕುಂದದಾನಂದ ಚಂದ ಘನ ತಂದೆ ಮಹಿಪತಿ ನಂದನ ಪ್ರೀಯಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದನವ ಕಾಯ್ವೊನೆ ದೈನ್ಯ ಬಡುವವನೆ ವನಜಭವಾಂಡಕೆ ಒಡೆಯನಾಗೆಂದರೆಒಲ್ಲದೆ ವನವನ ತಿರುಗಿದನಮ್ಮ ನೋಡಮ್ಮಯ್ಯ ಪ. ದನಗಾಹಿ ಎಂದರೆ ಎನಗೇನು ಸಂಶಯವಿಲ್ಲಜನರೆಲ್ಲ ಬಲ್ಲರು ಈ ಮಾತು ಜನರೆಲ್ಲ ಬಲ್ಲರು ಈ ಮಾತು ಭಾವಯ್ಯನೆನಪಿಸಿ ಕೊಟ್ಟೆಲ್ಲೊ ಮರೆತಿದ್ದೆ 1 ಗೋಪಾಲ ಶಬ್ದಾರ್ಥ ನೀ ಕೇಳಿಶ್ರೀ ಕೃಷ್ಣ ಕೋಪವಿನ್ಯಾಕೊ ಎನಮ್ಯಾಲೆ ಕೋಪ ವಿನ್ಯಾಕೊ ಎನ ಮ್ಯಾಲೆ ಭಾವಯ್ಯನೀ ಪೇಳಿಕೊಂಡ್ಯೊ ನಿಷ್ಕಪಟಿ 2 ಕುದುರೆಯ ಮಾರಿಯ ಹೂವು ಗಣ್ಣಿನ ವರನಿಗೆ ಮದಗಜಗಮನೆ ಮನಸೋತುಮದಗಜಗಮನೆ ಮನಸೋತು ಮ್ಯಾಲಿನ್ನುಬದಲು ಮಾತಾಡಿ ಫಲವೇನೊ3 ನಾರುವ ಮೈಯವ ನೀರೊಳು ಅಡಗಿದ ಹಂದಿ ಮೈಯವನೆ ಮಹಾಕೋಪಿಹಂದಿ ಮೈಯವನೆ ಮಹಾಕೋಪಿ ತಿರುತಿಂಬೊಹಾರುವನ ಗೊಡವೆ ನಮಗ್ಯಾಕೊ 4 ಕೊಡಲಿಯ ಪಿಡಕೊಂಡ ಪಡೆದಮಾತೆಯಕೊಂದೆ ಒಡಲಿಗಿಕ್ಕದಲೆ ಮಡದಿಯಒಡಲಿಗಿಕ್ಕದಲೆ ಮಡದಿಯ ಕೊಂಡೊಯ್ದುಅಡವಿಗಟ್ಟಿದ ಮಹಾ ಮಹಿಮನೆ5 ಜಾರ ಚೋರನೆಂದು ಜಗದೊಳು ಹೆಸರಾದಿಅಪಾರವಾದ ವನಿತೆಯರುಅಪಾರವಾದ ವನಿತೆಯರ ಒಗೆತನಕೆನೀರು ತಂದಿದ್ದ ಮಹಾಮಹಿಮನೆ 6 ಭಂಡ ಗಾರನಂತೆ ದೇಹ ಕಂಡಜನಕೆಲ್ಲತೋರಿ ಪುಂಡಗಾರನಂತೆ ಹಯವೇರಿಪುಂಡಗಾರನಂತೆ ಹಯವೇರಿ ಹಾರಿಸುವ ಲೆಂಡ ರಾಮೇಶನ ಅರಿವೆನೊ7
--------------
ಗಲಗಲಿಅವ್ವನವರು
ದುಂಡು ಮುಖವುಳ್ಳ ಹುಡುಗನ ಕಂಡಿರಾಚಂಡನಾಡುತ ಬಂದ ಚದುರೆಯರ ಓಣಿಯಲಿ ಪ ಕರದೊಳಗೆ ಕೊಳಲಿಹುದು ಚರಣದೊಳು ರುಳಿಗೆಜ್ಜೆಕೊರಳೊಳಗೆ ಸರಪದಕ ಗುರುಳು ಮುಖದಿಜರದೊಲ್ಲಿ ಹೊದ್ದಿಹನು ಸ್ಮರನ ಮೋಹಿಪ ರೂಪಸಿರಿಯ ಕಂಡರೆ ಅವನ ಪರರು ಬಿಡರಮ್ಮ 1 ವಾರಿಜಾಕ್ಷೆರೆ ಬಹಳ ಜಾರಚೋರೆನ್ನ ಮಗವಾರೆನೋಟದಿ ಮನಸು ಹಾರಿಸುವನುಸಾರಿದರೆ ಮನೆಗಳಿಗೆ ದ್ವಾರಯಿಕ್ಕುತೆ ಬನ್ನಿದೂರು ಪೇಳಲು ಕೇಳಿ ಸಾರಿದೆನು ಮೊದಲೆ 2 ಕಂದನಾಗುವ ಕ್ಷಣದಿ ಒಂದೆ ಪ್ರಾಯದ ಪುರುಷಸುಂದರಾಂಗಿಯಳಾಗಿ ಬರುವನಂದಬಾಲನ ಮಹಿಮೆ ಬಂದು ನಂಬಲಿ ಬೇಡಿಇಂದಿರೇಶನು ಬಹಳ ಮಂದಿ ಮೋಹಿಸುವ 3
--------------
ಇಂದಿರೇಶರು
ಬೇಕಿಲ್ಲ ಎನಗನ್ಯ ಏನೇನು ಸ್ವಾಮಿ ಸಾಕು ನಿನ್ನಯ ನಾಮವೊಂದೆ ನುತ ಪ್ರೇಮಿ ಪ ದುರುಳ ಸಂಹರ ನಾಮ ದುರಿತ ಪರಿಹರ ನಾಮ ಶರಧಿಮಥನ ನಾಮ ಸುರರ ಸಲಹಿದ ನಾಮ ಹರನ ಪ್ರೇಮದ ನಾಮ ಪರಮೇಷ್ಟಿಯನು ಪಡೆದ ಸ್ಥಿರನಾಮದ್ಹೊರತು 1 ಸೃಷ್ಟಿಯಾಳುವ ನಾಮ ಶಿಷ್ಟಪಾಲನ ನಾಮ ಕಷ್ಟ ಕಳೆಯುವ ನಾಮ ಇಷ್ಟಪೂರ್ಣ ನಾಮ ಮುಟ್ಟುಮುಡಿ ಹರನಾಮ ಅಷ್ಟಸಿರಿಪತಿನಾಮ (ಹುಟ್ಟುಸಾವಿ)ಲ್ಲದ ಶಿಷ್ಟನಾಮದ್ಹೊರತು 2 ವೇದ ಹೊಗಳಿದ ನಾಮ ಸಾಧುವಂದಿತನಾಮ ಬೋಧರೂಪದ ನಾಮ ಆದಿಮಹನಾಮ ಭೇದವಿಲ್ಲವ ನಾಮ ವೇದಗೋಚರ ನಾಮ ಆದಿ ಅಂತಿಲ್ಲದನಾದಿ ನಾಮದ್ಹೊರತು 3 ತರಳನ್ಪೊರೆದ ನಾಮ ಕರಿಯ ಸಲಹಿದ ನಾಮ ತರುಣಿನುದ್ಧಾರ ನಾಮ ಧರೆಪೊತ್ತ ನಾಮ ಕರುಣೆ ತುಂಬಿದ ನಾಮ ಶರಣಾಗತಪ್ರಿಯ ನಾಮ ನರನ ಬೆಂಬಲನಾದ ಹರಿನಾಮದ್ಹೊರತು 4 ಮೂರು ಕಳೆಯುವ ನಾಮ ಆರುಗೆಲಿಸುವ ನಾಮ ಆರುನಾಲ್ಕು ಸುಲಭದಿ ಹಾರಿಸುವ ನಾಮ ಸಾರ ಮುಕ್ತಿಯ ನಾಮ ಧೀರ ಶ್ರೀರಾಮ ನಿಮ್ಮಪಾರನಾಮದ್ಹೊರತು 5
--------------
ರಾಮದಾಸರು
ಭೂತರಾಜರ ಸ್ತೋತ್ರ ಭೂತರಾಜರ ಸ್ತುತಿಸಿ ಖ್ಯಾತಿಗೊಳ್ಳೊ ಪ ಪ್ರೀತಿ ಇವರಲಿ ಅಧಿಕ ವಾದಿರಾಜರಿಗೆ ಅ.ಪ. ಆತನಾಜ್ಞೆಯಿಂದ ಧರಿಸಲುಕೋತಿಯಂತೆ ಹುಬ್ಬು ಏಕೆ ಹಾರಿಸುವೆಜ್ಯೋತಿ ಸ್ವರೂಪಕ್ಕೆ ಬೂದಿಯು ಮುಸುಕಲುಪಾತಕಿಯು ತಾ ಮುಟ್ಟಿ ಬೊಚ್ಬಿ ಬಾರಿಸನೆ 1 ಗುರುಸೇವೆ ಇವರಂತೆ ಮಾಡ್ದವರು ಯಾರುಂಟುಗುರುಕೃಪಾ ಇವರಂತೆ ಪಡೆದವರು ಯಾರೊಅರಿತು ನೋಡಲು ನಿರುತ ರತಿಗೆ ಕಾರಣವುಂಟುನರಕುರಿ ಇದರ ಮರ್ಮವ ತಿಳಿವದುಂಟೆ 2 ಇಂದಿಗೂ ಸೋದೇಲಿ ಇವರದೇ ಗುರುಪೂಜೆಸುದ್ದಿ ಸುಳ್ಳೆಂದವಗೆ ದೆಬ್ಬೆ ಪೂಜಾಸದ್ದಿಲ್ಲದಿವರಡಿ ಸ್ಮರಿಸುವುದೇ ಗುರುಪೂಜಾತಂದೆ ಶ್ರೀ ನರಹರಿ ಒಪ್ಪುವಾ ಪೂಜಾ 3
--------------
ತಂದೆ ಶ್ರೀನರಹರಿ
ಸಾವಧಾನವೆಂದು ಶ್ರುತಿಸಾರುತಿದೆಕೋ ಭಾವದಿಂದಲಿ ಮನವೆ ನೀ ಎಚ್ಚತ್ತುಕೋ ಧ್ರುವ ಭವದ ನಿದ್ರಿಗಳೆದು ಸಾವದಾನವಾಗೋ ನಿವಾಂತ ಕೂಡಲಿಕ್ಯದ ಬಲು ಬೆಳಗೋ ವಿವೇಕವೆಂಬ ಸ್ಮರಣೆ ಇದೆ ನಿನಗೋ ಭವಹರ ಗುರುವಿಗೆ ಶರಣಯುಗೋ 1 ಮುಚ್ಚಿದ ಮಾಯದ ಮುಸಕ್ಹಾರಿಸುವದೆ ಙÁ್ಞನ ಎಚ್ಚತ್ತಮ್ಯಾಲಿದೆ ಖೂನ ಸುವಸ್ತು ಧ್ಯಾನ ಅಚ್ಯುತಾನಂತನ ಕಾಂಬುದನುಸಂಧಾನ ಅಚಲವೆಲ್ಲಕ್ಕಿದೆ ಸುಪಥಸಾಧನ 2 ಬೆಳಗಿನ ಬೆಳಗಿದೆ ಬಲು ನಿಶ್ಚಲ ಒಳಗೆ ಹೊರಗೆ ತೋರುವ ಆನಂದ ಕಲ್ಲೋಳ ಹೊಳೆವ ಮಹಿಪತಿಸ್ವಾಮಿ ಪ್ರಭೆಯು ಬಹಳ ಬೆಳಗಾಯಿತು ಗುರುದಯ ಪ್ರಬಳ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಂಬಿದೆ ನಿನ್ನ ಶಾಂಭವೀಸುತಲಂಬೋದರ ಗುರುವರ ಧವಳಾಂಬರಾವೃತ ಪ.ವಿಘ್ನಭಂಜನ ವಿಶ್ವರಂಜನಮಗ್ನಗೈಸಬೇಡ ಭವದಿ ನಿರ್ಗತಾಂಜನ 1ಭಾರಯಾರದು ವಿಘ್ನಹಾರಿಸುವದುಭಾರತಾರ್ಥ ಭಾಸ್ಕರಾಚಾರ್ಯ ನಿನ್ನದು 2ರಕ್ಷಣೀಯನೆ ಮುಮಕ್ಷುಪ್ರಿಯನೆಲಕ್ಷ್ಮೀನಾರಾಯಣಾಂಘ್ರಿ ಲಕ್ಷಿತಾತ್ಮನೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮದ್ದಿನ ಹವಾಯಿ ನೀನೋಡುಬಗಳಮದ್ದಿನ ಹವಾಯಿ ನೀನೋಡುಮದ್ದಿನ ಹವಾಯಿ ಹೃದಯ ಬಯಲಲ್ಲದೆಎದ್ದಿರು ಚತುಷ್ಟ ತನುವಿಗೆ ಬೇರೆಯುಪತೂರ್ವುತಲಿದೆ ಬಿರಿಸಾಕಾಶದ ತುದಿಗೇರ್ವುತಲಿದೆಅಂಬರಬಾಣಬೀರ್ವುತಲಿದೆ ಚಕ್ರದ ಕಿಡಿಯಗಲಕೆಜಾರ್ವುತಲಿದೆ ಅಜ್ಞಾನದಖೂನ1ಗಡಿಗ ಬಾಣದ ಗತಿಯನೆನೋಡುಗಜುಗಿಂಗಳ ಕಾಯಬ್ಬರವಗಿಡುಗಳು ಹಾರ್ವವು ಜಿನಿಸು ಜಿನಿಸುಗಳುಭಡಲ್ ಭಡಲ್ಲಿಹ ಸಪ್ಪಳವು2ಅಂತರ ದೌಸು ಸರಬತ್ತಿಗಳುಅಗಸೆಯ ಹೂವಿನ ಅಚ್ಚರಿಯಕಂತುಕ ಪೆಟಲವು ಮುತ್ತಿ ಸೇ-ವಂತಿಗೆ ಕವಳೆಯ ಹೂವಿನ ಸುರಿಮಳೆಯು3ಕೋಳಿಯು ಮುಳುಗುತಲೇಳುತಲಿರುತಿರೆಕೋಣ ಆನೆಗಳ ಕಾದಾಟಬಾಳೆಯ ಗೊನೆಗಳು ಬೆಳ್ಳಿಯ ಚುಕ್ಕೆಯುಬೆಳ್ಳನೆ ಜ್ಯೋತಿಯ ಕಡಕದಾಟ4ನಿನ್ನ ಕಾಂತಿ ಇವು ನೀನೇ ನೋಡುತಲಿರುತನ್ಮಯ ದೃಷ್ಟಿಯನಿಟ್ಟುಚೆನ್ನ ಚಿದಾನಂದ ಬಗಳೆ ನೀ ಸಾಕ್ಷಿಯಿರೆ ಚೈ-ತನ್ಯಾತ್ಮಕ ಶುದ್ಧನವ5ಸೂಚನೆ :ದೀಪಾವಳಿ ಮುಂತಾದ ಸಂದರ್ಭಗಳಲ್ಲಿ ಹಾರಿಸುವ ಮದ್ದಿನ ವಸ್ತುಗಳ ಬೆಳಕಿಗೆ ದೇವಿಯನ್ನು ಹೋಲಿಸಿದ್ದಾಗಿದೆ. ಇದರಲ್ಲಿ ಬಂದಿರುವಕೆಲವು ಮದ್ದಿನ ಪದಾರ್ಥಗಳ ಹೆಸರುಗಳು ಆಗಿನ ಕಾಲದವು.
--------------
ಚಿದಾನಂದ ಅವಧೂತರು