ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯವ ನೆರೆನಂಬಿ ಕೆಡದಿರು ಮಾಯೆಯ ತಿಳಿದೇಳು ಪ. ನ್ಯಾಯವನರಿಯದೆ ನೀ ಮಾಯಾಮೋಹವೆ ಹೇಯಕಾರ್ಯರಿದೊಳಪಾಯದಿ ನರಳುವ ಅ.ಪ. ತನುಮನಕನಕವಿದು ನಿತ್ಯದಿ ತನದಾಗಿಹುದೆಂದು ಹೊನ್ನು ಮಣ್ಣು ಹೆಣ್ಣೆಂಬೀ ಮೂರರ ಬಣ್ಣದೆ ಬಗೆಗೆಟ್ಟು ಕಣ್ಣು ಕಾಣದೆ ಮುಂಬರುತಿಹ ಭಿನ್ನವನೆಣಿಸದೆಯೆ ಸಣ್ಣತನದಿ ಜೀವನ ವ್ಯರ್ಥವೆನಿಸುವ 1 ಸುಜನರ ಸಂಗತಿ ತ್ಯಜಿಸಿ ಮದದಲಿ ಕುಜನರ ಕೂಟವ ಬಯಸಿ ಋಜುಮಾರ್ಗವ ತೊರೆದು ಕಾಲವ ಅಜಗರನಂದದಿ ಕಳೆದು ಗಜಪತಿ ವರದನ ಪದಪಂಕಜ ಮಹಿಮೆಯ ನಿಜವರಿಯದೆ ದುರ್ಜೀವನವೆನಿಸುವ 2 ನೀರಗುಳ್ಳೆಯ ತೆರದಿ ಕರಗುವ ಸಾರವಿಲ್ಲದ ಭವದಿ ಮೂರುದಿನದ ಬಾಳೆಂದು ನೆನೆಯದೆ ಹಾರಾಡುವರೇ ನಿಂದು ಮಾರಪಿತನ ಪದಸಾರಸವನು ನೆನೆ [ನೆನೆದು] ನೀರ ಶೇಷಗಿರಿವರನೆÀ ಗತಿಯೆನೆ 3
--------------
ನಂಜನಗೂಡು ತಿರುಮಲಾಂಬಾ
ಹ್ಯಾಗೆ ಮುಕ್ತಿಯಾಗುವುದು ಕೂಗಿದರೇನು ಫಲ ಪ ಯೋಗವರಿತು ತನ್ನಲಿರುವ ನಾಗಶಯ್ಯನನ ನೋಡದೆ ಅ.ಪ ಅರಿತೆವೆಂದು ಹಾರಾಡುವ ಅಹಂಕಾರಿಗಳಿಗೆ 1 ವೇದಶಾಸ್ತ್ರ ಓದಲಿಲ್ಲ ವಾದವಿಲ್ಲಿ ಸಲ್ಲ ಬೋಧೆ ಮನಸಿಗಂಟಲಿಲ್ಲ ಬುದ್ಧಿಶೂನ್ಯರಿಗೆಲ್ಲ 2 ನಾವು ನಮ್ಮದೆಂಬುದು ಬಿಡದೆ ಸಾವ ಕುನ್ನಿಗಳಿಗೆ 3 ಬಾಯಿಮಾತಿಲಿಂದಲೇನು ಮಾಯವಾದಗಳೇನು ನ್ಯಾಯಮಾರ್ಗವರಿತವನು ಕಾಯದಾಸೆಮಾಡನು 4 ಗುರುರಾಮವಿಠ್ಠಲನ ಸ್ಮರಣೆಯ ಮಾಡದೆ ದುರುಳ ನರರಿಗೆ 5
--------------
ಗುರುರಾಮವಿಠಲ