ಒಟ್ಟು 5 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

--------ಹರಿ ನಾರದವರದ ಪ ಅಗಣಿತ ಮಹಿಮನ ಆನಂದ ನಿಲಯನ ಬಗೆ ಬಗೆಯಲಿ ಭಕ್ತರನ ಬಿಡದೆ ಪೊರೆವನಾ 1 ಸುಜನ ವಿಲಾಸನ ಕಂದನ ಕಾಯ್ದನ -----ವರದನಾ ಸುಂದರ ರೂಪನಾ 2 ಜಲದೊಳಾಡುವನ ನೆಲದ ಮೇಲಾಡುವನ ಬಲವುಳ್ಳ ಅರಸನ ಬತ್ತಲೆ ಹಯವನೇರಿದನ 3 ಶೃಂಗಾರ ಭೂಷಣನ ಸುರಮುನಿವಂದ್ಯನ ಗಂಗೆಯ ಪಡೆದನ ಕರುಣಾಸಾಗರನ 4 ಕರ್ಣ ಮೌಕ್ತಿಕ ಹಾರನಾ ಸಕಲ ಆಭರಣನ ಸರಸಿಜನಯ್ಯನ 5 ನಿತ್ಯ ಕಲ್ಯಾಣನ ಜಗದೋದ್ಧಾರನ ಜಾನಕಿ ಪ್ರೇಮನಾ 6 ಅಚ್ಯುತಾನಂತನ ಹರಿ 'ಹೊನ್ನ ವಿಠ್ಠಲನ’ ಸಚ್ಚಿದಾನಂದ ಸರ್ವೋತ್ತಮ ದೇವನ 7
--------------
ಹೆನ್ನೆರಂಗದಾಸರು
ಚರಣಾರಾಧಿಸೋ ಚಾರುತರ ಭೂ ವರಹ ವೇಂಕಟೇಶನಾ ಉರಗಾದ್ರಿವಾಸನಾ ವರ ಶ್ರೀನಿವಾಸನಾ ಪ ದುರಿತಕೋಟಿಯ ಹರಿವ ಸ್ವಾಮಿ ಪು ಷ್ಕರಿಣಿ ತೀರ ವಿಹಾರನಾ ಸಿರಿಮನೋಹರನಾ ಪರಮ ಉದಾರನಾ 1 ವಾಹನೋತ್ಸವದಲ್ಲಿ ಪರಿಪರಿ ಮಹಿಮೆ ಜನರಿಗೆ ದೋರ್ವನಾ ಸಹಜದಿ ಮೆರೆವನಾ ಬಹಳ ಪೂರ್ವನಾ 2 ನಡೆದು ಯಾತ್ರೆಗೆ ಬರಲು ಹಯಮೇಧ ಅಡಿಅಡಿಗೆ ಫಲ ನೀವನಾ ಬಿಡದೆವಾ ಕಾವನಾ ಮೃಡಜರ ದೇವನಾ3 ಸಕಲರಿಗೆ ನೈವೇದ್ಯನುಣಿಸುವಿ ಅಖಿಳ ಸಂಶಯ ಹಾರಸೀ ವೈಕುಂಠ ಸೇರಿಸೀ ಸ್ವಕರದಿ ತೋರಿಸೀ 4 ಇಂದು ನಮ್ಮನಿ ದೈವವಾಗಿಹ ತಂದೆ ಮಹಿಪತಿ ಪ್ರೀಯನಾ ಸುಂದರ ಕಾಯನಾ ವೃಂದಸುರ ಧ್ಯೇಯಾನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಲೋಕನೀತಿಯ ಪದಗಳು 448 ಅನ್ನದಾನವನ್ನೆ ಮಾಡು ಕನ್ಯದಾನವನ್ನೆ ಮಾಡುನಿನ್ನ ನಂಬಿದರ ಪೊರೆದುನ್ನತ ಹರ್ಷದಿ ಬಾಳುಸನ್ನುತ ಸರ್ವಲೋಕಗಳನ್ನು ರಕ್ಷಿಸುವನಾಗ ಪ್ರ-ಸನ್ನ ಮೂರುತಿಯಾಗುರನ್ನದ ರಾಶಿಗಳನ್ನು ಚಿನ್ನದ ಆಭರಣಗಳನ್ನುಭೂಸುರರಿಗಿತ್ತು ಮನ್ನಿಸು ಉದಾರನಾಗುಮನ್ನೆಯರೆಲ್ಲರು ಬಂದುನಿನ್ನನೋಲೈಸಲೆಂದು ಅಪರ್ಣೆಪರಿಸಿದಳು 1 ಕೋಟಿ ಗೋದಾನವ ಮಾಡು ಸಾಟಿಯಿಲ್ಲದಂಥಾ ಪಂಚಕೋಟಿ ಗಜದಾನ ಶತಕೋಟಿಯಶ್ವದಾನಗಳಮೀಟಾದ ಬ್ರಾಹ್ಮರಿಗಿತ್ತು ಕೀರ್ತಿವಂತನಾಗು ಕಿ-ರೀಟ ಶೌರ್ಯದೊಳಾಗು ಮೀಟಾದ ಮಂತ್ರಿಗಳ ಕಿ-ರೀಟ ರತ್ನಕಾಂತಿಗಳ ಕೋಟಿ ನಿನ್ನ ಪಾದದಲ್ಲಿಧಾಟಿಯಾಗಿರುವನಾಗುಲೂಟಿಸಿ ವೈರಿಗಳನು ಗೋಟುಗೊಳಿಸುವ ಶಶಿಜೂಟ ಭಕ್ತನಾಗು 2 ಇತ್ತೆರದೆ ಬೀಸುತಿಹ ಮುತ್ತಿನ ಚಾಮರ ಶ್ವೇತಛ್ಛತ್ರ ಸೀಗುರಿಗಳ ಮೊತ್ತದ ಸಾಲೊಳಗೆ ಒ-ಪ್ಪುತ್ತಲಿರುವವನಾಗು ಸತ್ಯವಂತನಾಗು ಸುವ್ರತ ನೀನಾಗುಪೆತ್ತವರ ನೋಡಿ ನಲಿವುತ್ತಿರಲು ಭೂಸುರರುಮುತ್ತಿನಕ್ಷತೆಯನಾಂತುಪೃಥ್ವಿಯ ವೊಳಗೆಲ್ಲಾ ಸ-ರ್ವೋತ್ತಮ ಪುರುಷನಾಗೆನುತ್ತಮಸ್ತಕದಿ ತಳಿವುತ್ತ ಪರಸಿದರು 3 ಇಂದ್ರನಾಗು ಭೋಗದೊಳು ಸತ್ಯವಾಕ್ಯದೊಳು ಹರಿ-ಶ್ಚಂದ್ರನಾಗು ಪಾಲನೆಯ ಮಾಡುವುದರೊಳಗೆ ಉ-ಪೇಂದ್ರನಾಗು ಬುದ್ಧಿ ಕೌಶಲದೊಳು ತಿಳಿಯಲು ನಾ-ಗೇಂದ್ರ ನೀನಾಗುಚಂದ್ರನಾಗು ಶಾಂತಿಯೊಳಗೆಂದು ವಂದಿಮಾಗಧರವೃಂದ ಕರವೆತ್ತಿ ಜಯವೆಂದು ಪೊಗಳುತ್ತಿರಲಾ-ಚಂದ್ರಾರ್ಕವು ಸೌಖ್ಯದಿ ಬಾಳೆಂದು ಸಾನಂದದೊಳಾಗಇಂದಿರೆ ಪರಸಿದಳು4 ಧೀರನಾಗುದಾರನಾಗು ಸೂರಿಜನವಾರಕೆ ಮಂ-ದಾರನಾಗು ಸಂಗರ ಶೂರನಾಗು ವೈರಿ ಜ-ಝ್ಝೂರನಾಗು ಮಣಿಮಯ ಹಾರನಾಗುವೀರಾಧಿವೀರ ನೀನಾಗುಭೂರಮಣನಾಗು ಮಂತ್ರಿವಾರ ಸಂರಕ್ಷಕನಾಗುಕಾರುಣ್ಯಸಾಗರನಾಗು ಕಾಮಿತಫಲಿದನಾಗುಶ್ರೀ ರಾಮೇಶನಪಾದಾಬ್ಜ ವಾರಿಜ ಭಕ್ತನಾಗೆಂದುಶಾರದೆ ಪರಸಿದಳು5
--------------
ಕೆಳದಿ ವೆಂಕಣ್ಣ ಕವಿ
ಹೊಂದಿ ಬದುಕಿರ್ಯೋ ಪ ಹೊಂದಿ ಬದುಕಿರ್ಯೋ ಒಂದು ಮನದಲಿ | ಮಂದ ಹಾಸ ಮುಕುಂದನಾ | ಕುಂದರ ದನಾ ನಂದನಾ | ವಂದ್ಯನಾದ ಮುಕುಂದನಾ 1 ಕುರುಳ ಗೂದಲು ಸರಳ ಗೊರಳವ | ಗರಳಧರನುತ ಚರಣನಾ | ಸಾರ ಸಂಹರಣನಾ | ತರಳ ಗೊಲಿದ ಕರುಣನಾ 2 ಮರುಳು ಸುಯೋಧನ ಇರಲು ಏಳದೇ | ಉರುಳು ಗೆಡಹಿದ ವೀರನಾ | ಅರಳ ಪೂವಿನ ಹಾರನಾ | ಗರಳಧರ ಮದ ಹಾರನಾ 3 ಹಲ್ಲಿದರಿಗಳ ದಲ್ಲಣಾಗಿಹ | ಪುಲ್ಲಲೋಚನ ರಂಗನಾ | ಮಲ್ಲ ಚಾಣೂರ ಭಂಗನಾ | ಸಲ್ಲಲಿತ ಚಲ್ವಾಂಗನಾ 4 ಸಥಿಯ ನಡೆಸುವ ಇಂಗಿತರ ಮಹಿ | ಪತಿಯ ನಂದನ ಜೀವನಾ | ಸತತ ಭಕ್ತರ ಕಾವನಾ | ಪತಿತ ಪಾವನ ದೇವನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು