ವಂದಿಸುವೆ ಸುಂದರಾಂಗ ನಿಜಸೌಂದರ್ಯಜಿತಾನಂಗ
ಬೃಂದಾರಕಾದಿ ಮುನಿ ಬೃಂದವಂದಿತ ಮುಕುಂದ
ಗೋವಿಂದ ನಂದ ಮೂರುತಿ ಹರೆ ಪ
ದೇವಾದಿ ಜೀವ ಸುಪ್ರಭಾವ ಭಾಸಿತ ಮುಖ
ದೇವಕೀ ವಸುದೇವ ಭಾವನಾ ಗೋಚರ 1
ಹಾರಕುಂಡಲ ಮನ ಮಾಲಾವಿರಾಜಿತ
ಕ್ಷೀರಾಬ್ದಿ ಕನ್ಯಕಾ ಲೋಲಾ ಮುರಾಂತಕ2
ಧೇನುನಗರ ಪರಿಪಾಲಕ ವೇಂಕಟೇಶ
ಸಾನುರಾಗದಿ ಪೊರೆ ಗಾನವಿನೋದ ಹರೆ 3