ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿಡಬೇಡ ರಂಗಯ್ಯ ಬಡವನೂ ಪಿಡಿಕಯ್ಯ ಒಡೆಯ ನಿನ್ನಡಿ ಪಿಡಿದೆ ದಯೆಮಾಡೊ ಜೀಯ ಪ ಕಡಲಣುಗಿಯಣ್ಮನೇ ಕಡೆಹಾಯ್ಸೊ ಕಷ್ಟದಿಂ ಕಡುಮುದದಿ ಕೊಂಡಾಡಿ ಬೇಡುವೆನೊ ದೊರೆಯೆ ಅ.ಪ ಸಪ್ತ ಋಷಿಗಳು ಸತತ ಗುಪ್ತದಿಂ ಧ್ಯಾನಿಸುತ ತೃಪ್ತರಪ್ಪರು ಅಪ್ತ ನಿನ್ನ ನುತಿಸಿ ಅಪ್ಪ ನೀನವರಿಂದೆ ವಿಪ್ರತ್ವವಂ ತೋರಿ ಅಪ್ರತಿಮ ತಾರಕ ಬ್ರಹ್ಮ ಬೋಧಿಸಿದೆ 1 ಉತ್ತರೆಯ ಬಸುರೊಳಗೆ ಬ್ರಹ್ಮಾಸ್ತ್ರ ಬಾಧಿಸಲು ಅತ್ಯಗತ್ಯದಿ ಪ್ರಭುವೆ ಚಕ್ರ ಪಿಡಿದು ಸುತ್ತೆತ್ತಲಾಶಿಶುವ ಸಂರಕ್ಷಣೆಯಗೈದೆ ಉತ್ತಮೋತ್ತಮ ದೈವ ನೀನೆ ಜಗದಯ್ಯ 2 ಅಂಬರೀಷನ ಮೇಲೆ ಜಂಭದಿಂ ಮುನಿ ಮುನಿಯೆ ಕಂಬುಧಾರಿಯೆನೀಂ ಸುನಾಭ ಕಳುಹಿ ಬೆಂಬಿಡದೆ ಸುತ್ತಿಸಲು ಇಂಬಿನಿಂ ಪದಪಡಿಯೆ ಸಂಭ್ರಮದಿ ಕಾಯ್ದಂಥ ಸದ್ಭಕ್ತ ಬಂಧು 3 ಗಜರಾಜನಂ ಸರದಿ ಮೊಸಳೆ ಪೀಡಿಸುತಿರಲು ನಿಜರಥಾಂಗವ ಕಳುಹಿ ನಕ್ರನಂ ಸೀಳಿ ಅಜಪಿತನೆ ನೀನವರ ವಕ್ರ ಹರಿಸುತ ಕಾಯ್ದೆ ತ್ರಿಜಗಾದಿ ನಾಥನೇ ಭಕ್ತಪಾಲ 4 ಶರಣ ರಕ್ಷಣೆಗಾಗಿ ನೀಂ ಸುದರ್ಶನ ಪಿಡಿದೆ ವರದ ವೇಂಕಟರಮಣ ವೈಷ್ಣವೋದ್ಧರಣ ಕರುಣಿ ನನ್ನಪರಾಧವಪರಿಮಿತವಿದೆ ಕ್ಷಮಿಸು ತರಳನಂ ಕಾಪಾಡು ಜಾಜೀಶ ನೋಡು 5
--------------
ಶಾಮಶರ್ಮರು
ಶ್ರೀವರ ಹರಿ ವಿಠಲ | ಕಾಪಾಡೋ ಇವಳಾ ಪ ಭಾವುಕರ ಪಾಲ ನೆಂ | ದೇವೆ ಶ್ರುತಿ ಸಿದ್ಧ ಅ.ಪ. ಹರಿಸೇವೆ ಕೈಕಂರ್ಯ | ನಿರತಳಾಗಿ ಹಳೀಕೆಹರಿಗುರು ದಾಸ್ಯದಲಿ | ದೀಕ್ಷೆಕಾಂಕ್ಷಿಪಳೋ |ಹರಿಯ ತೈಜಸರೂಪಿ | ವರಮಾರ್ಗ ತೋರ್ಪಪರಿಹರಿಯ ನಿನ್ನಂಕಿತವ | ಇತ್ತಿಹೆನೊ ದೇವಾ 1 ಸಾರತಮ ಹರಿಯ ಜಗ | ನಿಸ್ಸಾರವೆಂದು ಸಂ |ಸಾರ ಶರಧಿಯ ಹಾಯೋ | ವಾರಿಜ ಸುನಾಭಾ |ಆರು ಮಾರ್ಭಕುತಿಗಳ | ವೈರಾಗ್ಯ ಸುಜ್ಞಾನಧೀರ ನೀ ಕರುಣಿಸುತ | ಕಡೆ ಹಾಯ್ಸೊ ಇವಳಾ 2 ಮೋದ ತೀರ್ಥರ ಮತದಿ | ಸಾಧನ ಸುಮಾರ್ಗದಲಿಹಾದಿ ಕ್ರಮಿಸುತ್ತಿಹಳೂ | ವೇದಾಂತ ವೇದ್ಯಾಹೇ ದಯಾ ಪೂರ್ಣಹರಿ | ಸ್ವಾಧ್ವಿಗೆ ತವನಾಮಸುಧೆಯನೆ ಉಣಿಸೊ ಸ | ರ್ಪಾರ್ದಿಗೇ ಓಡೆಯ 3 ಶಮದ ಮಾದಿಯನಿತ್ತು | ಭ್ರಮಮಾರ ಪರಿಹರಿಸೊಅಮಿತ ಮಹಿಮೋಪೇತ | ಸುಮನಸಾರಾಧ್ಯಕರ್ಮನಿಷ್ಕಾಮನದಿ | ರಮೆಯರಸಗರ್ಪಿಸುವಸುಮನೊಭಾವದಲಿ | ಕ್ರಮಿಪ ತೆರಮಾಡೋ 4 ನಿತ್ಯ ನಿಗಮಾತೀತ | ದೈತ್ಯ ಜನ ಸಂಹರ್ತಭೃತ್ಯಳಿಗೆ ಮೈದೋರಿ | ಹೃತ್ಕøಕ್ಷಿಯೊಳಗೇಪ್ರತ್ಯಕ್ಷನಾಗೆಂಬ | ಪ್ರಾರ್ಥನೆಯ ಸಲಿಸೋಹರಿಕರ್ತೃ ಕರ್ಮಾಖ್ಯ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು