ಒಟ್ಟು 7 ಕಡೆಗಳಲ್ಲಿ , 4 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೃಂದಾವನಿ ಜನನಿ ವಂದಿಸುವೆ ಸತತ ಜ ಲಂಧರನ ರಾಣಿ ಕಲ್ಯಾಣಿ | ಕಲ್ಯಾಣಿ ಶ್ರೀ ತುಲಸಿ ನಿಜ ಮಂದಿರೆ ಎನಗೆ ದಯವಾಗೆ 1 ಜಲಜಾಕ್ಷನಮಲ ಕಜ್ಜಲ ಬಿಂದು ಪೀಯೂಷ ಕಲಶದಲಿ ಬೀಳೆ ಜನಿಸಿದಿ | ಜನಿಸಿದಿ ಹರಿಯಿಂದ ಶ್ರೀ ತುಲಸಿ ನೀನೆಂದು ಕರೆಸೀದಿ2 ಶ್ರೀ ತರುಣಿವಲ್ಲಭನ ಪ್ರೀತಿ ವಿಷಯಳೆ ನಿನ್ನ ಕೈ ಮುಗಿವೆ ಎನ್ನಯ ಮಹ ಪಾತಕವ ಕಳೆದು ಪೊರೆಯಮ್ಮ 3 ತುಲಸಿ ನಿನ್ನಡಿಗೆ ನಾ ತಲೆವಾಗಿ ಬಿನ್ನೈಪೆ ಕಲುಷ ಕರ್ಮಗಳ ಎಣಿಸದೆ | ಎಣಿಸದೆ ಸಂಸಾರ ಜಲಧಿಯಿಂದೆಮ್ಮ ಕಡೆ ಹಾಯ್ಸು 4 ದುರಿತ ಈಡಾಡಿದವ ನಿನ್ನ ಕೊಂ ನಿತ್ಯ ಹರಿಪಾದ | ಹರಿಪಾದ ಕಮಲಗಳ ಕೂಡಿಸುವೆ ಸತ್ಯವೆಂದೆಂದು 5 ನಿಂದಿಸಿದವರೆಲ್ಲ ನಿಂದ್ಯರಾಗುವರು ಅಭಿ ವಂದಿಸಿದ ಜನರು ಸುರರಿಂದ | ಸುರರಿಂದ ನರರಿಂದ ವಂದ್ಯರಾಗುವರು ಎಂದೆಂದು 6 ಕಲುಷವರ್ಜಿತ ನಿನ್ನ ದಳಗಳಿಂದಲಿ ಲಕ್ಷ್ಮೀ ಪೂಜಿಪರಿಗೆ ಪರಮಮಂ ಗಳದ ಪದವಿತ್ತು ಸಲಹೂವಿ 7 ಶ್ರೀ ತುಲಸಿದೇವಿ ಮನ್ಮಾತೆ ಲಾಲಿಸು ಜಗ ಎನ್ನ ಹೃತ್ಪದ್ಮದಲಿ ನೀ ತೋರೆ ಕೃಪೆಯಿಂದ 8
--------------
ಜಗನ್ನಾಥದಾಸರು
ಕಾಯ ಪಾದ ಪದುಮ ದಾಸ್ಯವನಿತ್ತು ಪ ಕಂಸಾರಿ ತವ ಪಾದಪಾಲಿಸುವನೆ ಶಿರದೊಳಗಸಂಶಯದಿ ಧರಿಸೀ |ವಿಂಶತಿಯ ಮತ್ತೊಂದು ಭಾಷ್ಯ ದೂಷಕ ಮರು-ತ್ತಂಶ ಸಂಭೂತ ಶ್ರೀ ಮಧ್ವ ಮತದವನಾ 1 ಆವ ಭವರೋಗ ಹ | ಭಾವ ಕ್ರಿಯ ದ್ರವ್ಯಾಖ್ಯಅದ್ವೈತ ತ್ರಯಗಳನು ಸಂಧಾನವಿತ್ತೂ |ದೇವ ದತ್ತದಿ ತೃಪ್ತಿ ಭಾವವನೆ ನೀನಿತ್ತುಭಾವದಲಿ ತವರೂಪ ಓವಿ ತೋರುವುದೂ 2 ಆಗಮಸುವೇದ್ಯ ಭವರೋಗ ವೈದ್ಯನೆ ದೇವನಾಗಾರಿ ವಾಹನನೆ | ಯೋಗಿಧ್ಯೇಯಾಆಗು ಹೋಗುಗಳೆರಡು | ನೀನಿತ್ತುದೆಂಬಂಥಜಾಗ್ರತೆಯ ನೀನಿತ್ತು ಕಾಪಾಡು ಹರಿಯೇ 3 ಕುಡುತೆ ಪಾಲನು ಭಕ್ತ ಕೊಡಲದನು ಕುಡಿಯುತ್ತಕಡಲಂತೆ ಹಾಯಿಸಿದೆ ಬಡವರಾಧಾರೀ |ಧೃಡಭಕ್ತಿ ಸುಜ್ಞಾನ ವೈರಾಗ್ಯ ಭಾಗ್ಯಗಳಕಡು ಕರಣಿ ನೀನಿತ್ತು ಕಡೆಹಾಯ್ಸು ಭವವಾ 4 ಸರ್ವಜ್ಞ ಸರ್ವೇಶ ಸರ್ವಾಂತರಾತ್ಮಕನೆದರ್ವಿಜೀವನ ಕಾಯೊ ದುರ್ವಿಭಾವ್ಯಾ |ಗುರ್ವಂತರಾತ್ಮ ಮತ್ಪ್ರಾರ್ಥನೆಯ ಸಲಿಸಯ್ಯಶರ್ವವಂದ್ಯನೆ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಕಾವದೇವ ನಿನಗೆ ನಾ ಕೈಮುಗಿದು ಬೇಡ್ವೆ ಕಾಮಜಪಿತ ಎನ್ನ ಕಾಯಮೋಹ ಬಿಡಿಸೈ ಪ ಮಸಣಬುದ್ದಿಯ ಮರೆಸು ಪುಸಿನುಡಿಯ ಪರಿಹರಿಸು ವಸನ ಒಡವ್ಯೆಂದೆಂಬ ವ್ಯಸನ ಕಡೆಹಾಯ್ಸು ದಿಸೆಗೆಡಿಸಿ ಬಳಲಿಸುವ ಹಸಿವು ತೃಷೆಯನಡಗಿಸಿ ಹಸನಗೆಡಿಸುವ ಮಮ ರಸನೆರುಚಿ ಕೆಡಿಸು 1 ಅಳದ್ಹೋಗ್ವ ಇಳೆಸುಖದ ಹಲುಬಾಟವನೆ ಬಿಡಿಸು ಮಲಿನಸಂಸಾರಮಾಯ ಕಳವಳಿಕೆ ತಪ್ಪಿಸು ಸಲೆ ಸಾಧುಸಂತತಿಯ ಬಳಗದೊಳು ಕೂಡಿಸು ಹೊಳೆಯಮನಸಿನ ಸಕಲ ಚಲನೆ ದೂರೆನಿಸುತ 2 ದೋಷರಾಶಿಯ ತೊಡೆದು ಮೋಸಪಾಶವ ಕಡಿದು ಆಸೆ ನಾಶಗೈದು ನಿರ್ದೋಷನೆನಿಸಿ ಶ್ರೀಶ ಶ್ರೀರಾಮ ನಿಮ್ಮ ಸಾಸಿರ ನಾಮವೆನ್ನ ಧ್ಯಾಸದಲಿ ಸ್ಥಿರನಿಲಿಸಿ ಪೋಷಿಸನುದಿನದಿ3
--------------
ರಾಮದಾಸರು
ನಂಬಿದೆನು ನಿನ್ನ ಅಂಬುಜನಯನ ಬೆಂಬಿಡದೆ ಕಾಯೆನ್ನ ಶಂಬರಾರಿಪಿತನೆ ಪ ಇಂದು ನೀ ಗೆಲಿಸಯ್ಯ ಮಂದರಧರಗೋವಿಂದ ಎರಗುವೆ ಪದಕೆ 1 ಜಡಜಾಕ್ಷ ನಿಮ್ಮಡಿಗೆ ದೃಢದಿಂದ ಬೇಡುವೆನು ತಡೆಯೆನ್ನನು ಕಡೆಹಾಯ್ಸು ದುರಿತದಿಂ 2 ಜಗದೊಳಗೆ ಎನ್ನನು ನಗೆಗೇಡು ಮಾಡದೆ ಮಗನನ್ನ ಸಲಹಯ್ಯ ಖಗಗಮನ ಶ್ರೀರಾಮ 3
--------------
ರಾಮದಾಸರು
ಸಿರಿವರನೆ ಮರೆಬಿದ್ದೆ ಶರಣಾಗತಪ್ರೇಮಿ ಪರಿಭವದ ಕಿರಿಕಿರಿಯ ಪರಿಹರಿಸು ಸ್ವಾಮಿ ಪ ಅಡಿಗಡಿಗೆ ರಿಣಕೊಟ್ಟ ಒಡೆಯರತಿಕಿರಿಕಿರಿಯು ಇಡತೊಡಲಿಕ್ಕಿಲ್ಲೆಂಬ ಮಡದಿಕಿರಿಕಿರಿಯು ಎಡಬಿಡದೆ ಹಸೆತೃಷೆಯ ಕಡುತರದಕಿರಿಕಿರಿಯು ಕಡೆಹಾಯ್ಸು ಕಡುಬೇಗ ತಡೀಲಾರೆನಭವ 1 ಮಾಡುಣಲು ಕಿರಿಕಿರಿಯು ಬೇಡುಣಲು ಕಿರಿಕಿರಿಯು ನಾಡ ನಾಡ ತಿರುಗಲು ಕಡುಕಿರಿಕಿರಿಯು ಗೂಢದೊತ್ತಟ್ಟಿರಲು ಬಡತನದ ಕಿರಿಕಿರಿಯು ಖೋಡಿ ಕಿರಿಕಿರಿ ಬೇಡ ದೂರಮಾಡಭವ 2 ಕಿರಿಕಿರಿಲ್ಲದ ನಿನ್ನ ಚರಣದಾಸರ ನೆರೆಯು ಕರುಣಿಸಿ ನಿರುತದಿಂ ಪರಿಪಾಲಿಸಭವ ಶಿರಬಾಗ್ವೆ ಚರಣಕ್ಕೆ ನೀನೆ ಪರದೈವೆನಗೆ ತರಳನರಕೆಯ ಕೇಳು ವರದ ಶ್ರೀರಾಮ 3
--------------
ರಾಮದಾಸರು
ನಾನೇಕೆ ಬಡವನೊ -ನಾನೇಕೆ ಪರದೇಶಿನೀನಿರುವತನಕ ಹರಿಯೇ ಪಪುಟ್ಟಿಸಿದ ತಾಯ್ತಂದೆ ಇಷ್ಟಮಿತ್ರರು ನೀನೆಅಷ್ಟೆಲ್ಲ ಬಳಗ ನೀನೆ ||ಪೆಟ್ಟಿಗೆಯೊಳಗಿನ ಅಷ್ಟಾಭರಣ ನೀನೆಶ್ರೇಷ್ಠಮೂರುತಿ ಕೃಷ್ಣ ನೀನಿರುವ ತನಕ 1ಒಡಹುಟ್ಟಿದಣ್ಣ ನೀನೆ, ಒಡಲ ಹೊರೆವನ ನೀನೆಇಡು-ತೊಡುವ ವಸ್ತು ನೀನೆ ||ಮಡದಿ ಮಕ್ಕಳನೆಲ್ಲ ಕಡಹಾಯ್ಸುವವ ನೀನೆಬಿಡದೆ ಸಲಹುವ ಒಡೆಯ ನೀನಿರುವ ತನಕ 2ವಿದ್ಯೆಹೇಳುವಗುರುನೀನೆ ಬುದ್ಧಿ ಹೇಳುವ ಧಣಿ ನೀನೆಉದ್ಧಾರಕರ್ತ ನೀನೆ ||ಮದ್ದು ಶ್ರೀಪುರಂದರವಿಠಲನ ಪಾದದಲಿಬಿದ್ದು ಲೋಲಾಡುತಿರು ಕಾಣು ಮನವೆ 3
--------------
ಪುರಂದರದಾಸರು
ಬಿಡೆ ನಿನ್ನ ಪಾದವ ಬಿಂಕವಿದೇಕೋಕೊಡುವುದೊ ಅಭೀಷ್ಟವ ಕೋಪವಿದೇಕೋ ಪನೀರೊಳು ಪೊಕ್ಕರು ನಿನ್ನನು ಬಿಡೆ ಬೆನ್ನಭಾರವ ಪೊತ್ತಿಹೆನೆಂದರು ಬಿಡೆನೋ ||ಕೋರೆಯ ತೋರಿಸಿ ಕೊಸರಿಕೊಂಡರು ಬಿಡೆಘೋರರೂಪವ ತೋರಿ ಘುಡುಘುಡಿಸಲು ಬಿಡೆ1ತಿರುಕನೆಂದರು ಬಿಡೆ ತರೆದ ತಾಯ್ಕೊರಳಕೊರೆಕನೆಂದರು ಬಿಡೆ ಅವನಿಯೊಳು ||ಕರಕರೆಗಾರದೆ ಕಾಡ ಸೇರಲು ಬಿಡೆದುರಳ ಮಡುವಿನಲ್ಲಿ ಧುಮುಕಿದರೂ ಬಿಡೆ 2ಕಡು ಬತ್ತಲೆ ಕೈಲಿ ಕಾಸಿಲ್ಲೆಂದರು ಬಿಡೆಒಡನೆ ತೇಜಿಯನೇರಿ ಓಡಲು ಬಿಡೆನೋ ||ಒಡೆಯಪುರಂದರವಿಠಲನೇ ಎನ್ನಕಡಹಾಯ್ಸುವಭಾರಕರ್ತನು ನೀನೆಂzು3
--------------
ಪುರಂದರದಾಸರು