ಒಟ್ಟು 5 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಊ) ಕ್ಷೇತ್ರ ವರ್ಣನೆ 1. ಬೇಲೂರು ಚನ್ನಕೇಶವರಾಯ ಚೆಲುವ ಚೆನ್ನಿಗರಾಯಾ ನಿನ್ನ ಕಾಣದೇ ನಿಲ್ಲಲಾರೆ ಬೇಲೂರ ಪ ವಜ್ರ ಪದುಮ ಪತಾಕಾಂಕುಶಗಳು ನಿಜಸತಿ ಲಕುಮಿದೇವಿಯರಾ ಭುಜ ಕುಚ ಕುಂಕುಮಾಂಕಿತ ಧರಾಂಕಿತ ಭಜಕರ ಭಾಗ್ಯೋದಯ ಪಾದಯುಗಳದಾ 1 ಸುರ ವೈರಿಗಳೆದೆ ಥಲ್ಲಣವೆನಿಸುವಾ ಬಿರುದಿನ ಖಡ್ಡೆಯಪ್ಪ ಚರಣಂಗಳಾ ಗರುಡನ ಹೆಗಲೇರಿ ಉದರದಿ ವಿರಿಂಚಿಯು ಉದುಭವಿಸಿದ ವರನಾಭಿಯ ಚೆಲುವಿನಾ 2 ಪೊಂಬಟ್ಟೆಯಿಂದೆಸೆವ ಪೀತಾಂಬರ ಚೆಂಬೊನ್ನದ ಕಾಂಚಿಯದಾಮದಾ ಅಂಬುಜ ಕೌಮೋದಕಿ ಸುದರುಶನ ಕಂಬುವ ಧರಿಸಿಹ ಚತುರುಭುಜಂಗಳಾ 3 ಶ್ರೀಯಾಲಿಂಗಿಸಿ ಸುಖವ ಕಾಮಿನಿಯರ ಶ್ರೀಯೋಗವ ತೋರಿಸೆನಗೊಮ್ಮೆ ಹಾಯೆಂದು ಬಿಗಿದಪ್ಪಿ ನಂಬಿಸಿ ಚುಂಬಿಸಿ ಬಾಯ ತಂಬುಲವಿತ್ತು ಬಂದೆನ್ನ ನೆರೆಯಾ 4 ಕರೆವೆನ್ನ ಮನದಲ್ಲಿ ಕರೆವ ನಾಲಿಗೆಯಲ್ಲಿ ಕರೆವೆನ್ನ ಕಣ್ಣುಸನ್ನೆಯಲೀ ಕರೆವೆ ನೆರೆವೆ ನಿನ್ನ ಚರಣಕೆರಗುವೆ ನಾ ವರವೈಕುಂಠಕೇಶವ ಬೇಲೂರ 5
--------------
ಬೇಲೂರು ವೈಕುಂಠದಾಸರು
2. ಕವಿ ಲಕ್ಷ್ಮೀಶನ ವಸಂತ ವರ್ಣನೆಯ ಹಾಡುಗಳು ಇಂದು ಮುಖಿಯರು ಬಂದು ನೆರದು ಕಂದರ್ಪನಯ್ಯಗೋವಿಂದ ಮುಕುಂದನೊಳು ದ್ವಂದ್ವದಿಂದೊಲಿದು ವಸಂತವಾಡಿದರೂ ಪ ನವರತ್ನ ಖಚಿತ ಮೋಹನದ ಮಂಟಪದಲ್ಲಿ ನವಕುಸುಮ ಫಲಗಳನು ಕಟ್ಟಿದರು ನಲವಿನಲಿ ನವಮೋಹನಾಂಗಿಯರು ನವರಸ ಪ್ರೌಢೆಯರು ನವನೀತ ಚೋರನನು ನಿಲಿಸಿ ತವ ತವಕದಿಂದ ತರುಣಿಯರೆಲ್ಲ ವೊಲವಿನಲಿ ಕವಕವಿಸಿ ಹೊಳೆವ ಹೊನ್ನಂದುಗೆ ಘಲಿರೆನಲು ಭವ ಭವಕೆ ಕಾಣೆ ಯೆಂದತಿ ಮನೋಪ್ರೀತಿಯಲಿ ಪವಣರಿತು ಕುಂಕುಮವ ತಳಿದರು ಶ್ರೀಹರಿಗೆ 1 ಕಳಹಂಸ ಗಮನೆಯರು ತಳಿರಡಿಯ ನೀರೆಯರು ಸೆಳೆನಡುವಿನಬಲೆಯರು ಹೊಳೆವ ನಳಿದೋಳವನು ಥಳಥಳಿಪ ಕುಚದ ಕಾಂತೆಯರು ನಳನಳಿಪ ವದನೆಯರು ಎಳೆನಗೆಯ ಭಾವೆಯರು ಸುಳಿಗುರುಳ ನಾರಿಯರು ಅಳವಟ್ಟ ಚಲುವೆಯರು ನಳಿನನೇತ್ರನಿಗೆ ಕಮ್ಮಲರ ಸೂಸಿದರೂ 2 ಪುಣುಗು ಜವ್ವಾಜಿ ಪಚ್ಚೆ ಪರಿಮಳವನೆ ತೆಯಿದು ಘಣಿರಾಜಶಯನ ಬಾಬಾಯೆಂದು ಪ್ರೇಮದಿ ಕುಣಿವ ಸೋಗೆಗಳ ಮುಡಿಯಂದದಬಲೆ ಬಲೆಯರೆಯಡಿ ಗುಣನಿಧಿಯ ಹಿಡಿಯ ಬೇಕೆನುತಾ ಕ್ಷಣ ಬೇಗದಲಿ ಹಾಯ್ದು ಗಿಣಿವಾಕಿನಲಿ ನುಡಿದು ಕ್ಷಣ ಬೇಗದಲಿ ಹಾಯಿದು ಗಿಣಿವಾಕಿನಲಿ ನುಡಿದು ಯೆಣೆಯಿಲ್ಲ ನಿನಗೆಂದು ಪ್ರಣವಗೋಚರಗೆ ಚಂದನವ ಮಾಡಿದರೂ 3 ಮತ್ತಗಜಗಾಮಿನಿಯರೊತ್ತಾಗಿ ಒಡಂಬಟ್ಟು ಹತ್ತಬಿಗಿದಂಬರವನುಟ್ಟೂ ಒತ್ತರಿಸಿ ಸು ತ್ತುವರಿಯುತ್ತ ಹಾಹಾಯೆಂದು ಚಿತ್ತಿನಿ ಪದ್ಮಿನಿ ಶಂಖಿನಿಯರೊಂದಾಗಿ ಚಿತ್ತಜನ ಪಿತಗೆ ಕತ್ತುರಿಯ ರಚಿಸಿದರೂ 4 ಅಂಬುಜಾಕ್ಷಿಯರೆಲ್ಲ ಹರುಷದಿಂದನೆರದು ಚೆಂಬೊನ್ನ[ಕಳಸ]ಗಳ ಪಿಡಿದು ಪುಳಕವ ಜಡಿದು ಸುರರು ಪೂಮಳೆಗರೆದು ಹಾಯೆಂದು ಕಂಬುಧರ ನಿಲ್ಲು ನಿಲ್ಲೆಸುತಾ ಕುಂಭಿನಿಯೊಳಧಿಕ ಸುರಪುರದ ಲಕ್ಷ್ಮೀಪತಿಯ ಬೆಂಬಿಡದೆ ಪೊಂಬಟ್ಟೆಯಂ ಪಿಡಿದು ಸರಸದಿ ಕುಂಭಕುಚದಿಂದಪ್ಪಿ ತಕ್ಕೈಸಿ ಮನ ಬಂದು ಸಂಭ್ರಮದಲೋಕುಳಿಯನಾಡಿದರು 5
--------------
ಕವಿ ಲಕ್ಷ್ಮೀಶ
ಎಲ್ಲಿದ್ದರು ಕಾಯ್ವ ಯದುಕುಲತಿಲಕ| ಭಕ್ತ ರೆಲ್ಲಿದ್ದರು ಕಾಯ್ವ ಯದುಕುಲತಿಲಕ ಪ ಅಡವಿಯೊಳಿರಲು ಅರಣ್ಯದೊಳಿರಲು ಮಡುವಿನೊಳಿರಲು ಮರದ ಮೇಲಿರಲು ಪೊಡವಿಗೀಶ್ವರ ತಾನು ದೃಢಭಕ್ತನಂ ಬಿಡದೆ ರಕ್ಷಿಸುವ ಯೆಂತೆಂಬೊ ಬಿರುದು 1 ತಂದೆಯ ಬಾಧೆಗೆ ಕಂದ ನಿಮ್ಮನು ಕರೆಯೆ ಬಂದು ಕಂಭದಲಿ ನೀ ಕಾಯ್ದೆ ಗೋವಿಂದಾ ಅಂದು ದ್ರೌಪದಿ ಹಾಯೆಂದು ಬದರಲು ಕೇಳಿ ಆ ನಂದದಿಂದಕ್ಷಯವನಿತ್ತ ರಂಗನು ನೀನು 2 ಭರದೆ ಭಗದತ್ತನು ಅಸ್ತ್ರ ಬಿಡಲು ಕೊರಳ ಚಾಚಿದನಾಗ ಕರುಣಾವಾರಿಧಿಯು ವರುಣಗದೆಯನಾಗ ಮರುಳತನದಿ ಬಿಡೆ ಮರಳಿ ಅವನ ಉರುಳಿಸಿತು ಶೃತಾಯುವು 3 ಸಿಂಧುರಾಜನ ಶಿರವ ಅವನ ತಂದೆ ಕೈಯಲಿ ಹಾಕಿ ಬಂದ ಭಾರವನೆಲ್ಲಾ ಕಾಯ್ದೆ ಗೋವಿಂದ ಕರ್ಣ ಅಪ್ರಮೇಯನು ಭೂಮಿ ಕ್ಷಿಪ್ರದಿಂ ಒತ್ತಿದಾ 4 ಅಂದು ಅರ್ಜುನ ತನ್ನ ಕಂದನೊಡನೆ ಕಾದೆ ಹಿಂದಿನ ವೈರದಿಂ ಶಿರವನ್ನು ಹರಿಯೆ ಬಂದು ಮುಕುಂದ ಸಂಧಿಸಿ ಶಿರವನ್ನು ಆ ಇಂದಿರೆ ರಮಣ5 ಉತ್ತರೆ ಗರ್ಭವು ಬತ್ತಿ ಬೀಳಲು ಆಗ ಉತ್ತಮ ಋಷಿಗಳೆಲ್ಲರ ನೋಡಿ ನಿತ್ಯಬ್ರಹ್ಮಚಾರಿಗಳು ಪಾದದೀ ಮೆಟ್ಟಿದರೆ ಬದುಕುವುದೆಂದನು ಕೃಷ್ಣ 6 ಸನತ್ಕುಮಾರರು ಶೌನಕರು ಮೊದಲಾಗಿ ಪರುಶುರಾಮ ಹನುಮಾದಿಗಳು ಬ್ರಹ್ಮಚರ್ಯವು ನಮಗಿಲ್ಲವೆನುತ ಬ್ರಹ್ಮಚರ್ಯಕ್ಕೆ ಆಧಾರ ನೀನೆನ್ನಲು ವಾಮಪಾದದಿ ತುಳಿದೆಬ್ಬಿಸಿದನು ಶಿಶುವ 7 ಸರಸಿರುಹನಯನಾ ಫಣಿರಾಜಶಯನ ಶರಣಾಗತದುರಿತಾಪಹರಣ ದೈತೇಯಸಂಹರಣ ಗೋವರ್ಧನೋದ್ಧರಣ ಪೀತಾಂಬರಾಭರಣ ಕೌಸ್ತುಭಾಭರಣ 8 ಅಶ್ವತಾಮನ ಅಸ್ತ್ರ ವಿಶ್ವವನು ಸುಡುತಿರೆ ವಿಶ್ವನಾಯಕ ಶಮನ ಮಾಡಿ ಕಾಯ್ದು ಅಸಮಸಾಹಸದಿ ಚಕ್ರವ ಪಿಡಿದು ಗರ್ಭದ ಶಿಶುವನ್ನು ಕಾಯ್ದ ಕುಶಲಿ ವೆಂಕಟಕೃಷ್ಣ 9
--------------
ಯದುಗಿರಿಯಮ್ಮ
ಆವ ಮಾನುನಿ ನಿನಗೇನು ಮಾಡಿದಳೊ ಇಂದಿನಭಾವಬೇರ್ಯಾಗಿದೆ ಮುಖದಲಿ ಕೇಳೊಪ.ಬಿರಿಗಣ್ಣು ಬಿಡುವೆ ಮೊಲೆಯನೆÉೂಲ್ಲೆ ಕಂದ ದಿವ್ಯಶರೀರಕ್ಕೆ ಗ್ರಹಕಪಟೇನೊ ಮುಕುಂದ 1ಬಾಯೊಳು ಬಿರಿಜೊಲ್ಲು ಬರುತಿದೆ ಮಗುವೆ ಹಾ ಹಾಹಾಯೆಂದು ತೆರಬಾಯ ತೆರದ್ಯಾಕೊ ನಗುವೆ 2ತಿರುಕರಣುಗನಂತೆ ತಿರುಗುವೆ ಬಾಲ ಲೇಶಕರುಣವಿಲ್ಲ ಎನ್ನೊಳು ಪುಣ್ಯಶೀಲ 3ಅನ್ನವನೊಲ್ಲೆ ಮನೆಯ ಬಿಟ್ಟೆಯೊ ಕೂಸು ನಿನ್ನಚಿನ್ನತನದ್ಭುತವಾಗಿದೆ ಲೇಸೊ 4ಉದ್ಹಿಡಿದಾಡುವ ಮರುಳಾಂತ ಶಿಶುವೆ ಪುಣ್ಯದೆÉೂಡೆಯ ಪ್ರಸನ್ನವೆಂಕಟನೆ ಎನ್ನಸುವೆ 5
--------------
ಪ್ರಸನ್ನವೆಂಕಟದಾಸರು