ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ದುಷ್ಕøತ ಫಲವೋ ಸ್ವಾಮಿ ಶ್ರೀನಿವಾಸನೆ ಪೇಳೋ ಪ. ಏನು ಕಾರಣ ಭವಕಾನನದೊಳು ಬಲು ಹಾನಿಯಾಗಿ ಅವಮಾನ ತೋರುವದಿದು ಅ.ಪ. ಹಂಬಲವೂ ಹಿರಿದಾಯ್ತು ಎನ್ನ ನಂಬಿಕೆಯೂ ಕಿರಿದಾಯ್ತು ಸಂಭ್ರಮವಲ್ಲ ಕುಟುಂಬಿಗೆರೆನ್ನಯ ಹಂಬಲಿಸರು ನಾನೆಂಬುವದೇನಿದು 1 ಹಣವಿಲ್ಲಾ ಕೈಯೊಳಗೆ ಸ- ದ್ಗುಣವಿಲ್ಲಾ ಮನದೊಳಗೆ ಜನಿತಾರಭ್ಯದಿ ತನುಸುಖವಿಲ್ಲೈ ಘನದಾಯಾಸವ ಅನುಭವಿಸುವದಾಯ್ತು 2 ಪೋದರೆಲ್ಲ್ಯಾದರು ಅಪ- ವಾದವ ಪೇಳ್ವರು ಜನರು ಆದರವಿಲ್ಲೈ ಶ್ರೀಧರ ತವ ಚರ- ಣಾಧಾರವೆ ಇನ್ನಾದರೂ ಕೃಪೆಯಿಡು 3 ಗೋಚರವಿಲ್ಲೆಲೊ ರಂಗ ಎನ್ನ ಪ್ರಾಚೀನದ ಪರಿಭಂಗ ನಾಚಿಕೆ ತೋರದ ಯಾಚಕತನವ- ನ್ನಾಚರಿಸುವ ಕಾಲೋಚಿತ ಬಂದುದು 4 ಸೇರಿದೆನೆಲೊ ರಂಗ ಕೃಪೆ ದೋರೆನ್ನೊಳ್ ನರಸಿಂಗ ಭಾರವೆ ನಿನ್ನ ಮೈದೋರಿ ರಕ್ಷಿಸುವುದು ನಾರದನುತ ಲಕ್ಷ್ಮೀನಾರಾಯಣ ಗುರು 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಏನು ದುಷ್ಕøತ ಫಲವೋ ಸ್ವಾಮಿ ಶ್ರೀನಿವಾಸನೆ ಪೇಳೋ ಪ. ಏನು ಕಾರಣ ಭವಕಾನನದೊಳು ಬಲು ಹಾನಿಯಾಗಿ ಅವಮಾನ ತೋರುವದಿದು ಅ.ಪ. ಹಂಬಲವೂ ಹಿರಿದಾಯ್ತು ಎನ್ನ ನಂಬಿಕೆಯೂ ಕಿರಿದಾಯ್ತು ಸಂಭ್ರಮವಲ್ಲ ಕುಟುಂಬಿಗೆರೆನ್ನಯ ಹಂಬಲಿಸರು ನಾನೆಂಬುವದೇನಿದು 1 ಹಣವಿಲ್ಲಾ ಕೈಯೊಳಗೆ ಸ- ದ್ಗುಣವಿಲ್ಲಾ ಮನದೊಳಗೆ ಜನಿತಾರಭ್ಯದಿ ತನುಸುಖವಿಲ್ಲೈ ಘನದಾಯಾಸವ ಅನುಭವಿಸುವದಾಯ್ತು 2 ಪೋದರೆಲ್ಲ್ಯಾದರು ಅಪ- ವಾದವ ಪೇಳ್ವರು ಜನರು ಆದರವಿಲ್ಲೈ ಶ್ರೀಧರ ತವ ಚರ- ಣಾಧಾರವೆ ಇನ್ನಾದರೂ ಕೃಪೆಯಿಡು 3 ಗೋಚರವಿಲ್ಲೆಲೊ ರಂಗ ಎನ್ನ ಪ್ರಾಚೀನದ ಪರಿಭಂಗ ನಾಚಿಕೆ ತೋರದ ಯಾಚಕತನವ- ನ್ನಾಚರಿಸುವ ಕಾಲೋಚಿತ ಬಂದುದು4 ಸೇರಿದೆನೆಲೊ ರಂಗ ಕೃಪೆ ದೋರೆನ್ನೊಳ್ ನರಸಿಂಗ ಭಾರವೆ ನಿನ್ನ ಮೈದೋರಿ ರಕ್ಷಿಸುವುದು ನಾರದನುತ ಲಕ್ಷ್ಮೀನಾರಾಯಣ ಗುರು5
--------------
ತುಪಾಕಿ ವೆಂಕಟರಮಣಾಚಾರ್ಯ
ಏನು ಸುಕೃತದ ಫಲವೋ ಶ್ರೀನಿವಾಸನೆ ಹೇಳು ಹಾನಿಯಾಗಿಯೆ ಅವಮಾನ ತೋರುತಿದೆ ಪ ವಾಸುದೇವನೆ ಎನ್ನ ಈಸು ದಿನ ಪರಿಯಂತ ಬೇಸರಿಲ್ಲದೆ ಕಾಯ್ದೆ ಲೇಸ ಕರುಣಿಸಿದೆ ಈಸಾಡಿದೆನು ನಾನು ಈ ಗೃಹದೊಳೀಗೇನು- ದಾಸಿನವು ನಿನಗಾಯಿತು ಮೋಸ ಯೋಚಿಪರೆ 1 ಹಗಲುಗತ್ತಲೆಯಾಗಿ ಮೊಗವು ಕಾಣದೆ ಎನಗೆ ಜಗದುದರ ನಿನ್ನಾಣೆ ನಗೆಯಾಯ್ತು ಜಗಕೆ ಹಗಯ ಮಧ್ಯದಿ ಸಿಲುಕಿ ಮೃಗವು ಬಾಯ್ಬಿಟ್ಟಂತೆ ಮಿಗ ಕ್ಲೇಶಬಟ್ಟು ನರಮೃಗವು ತಾನಾದೆ 2 ಆರು ಹಿತವರು ಇಲ್ಲ ಧಾರುಣಿಯ ಬಲವಿಲ್ಲ ಪಾರಾಗಿ ನಾಚಿಕೆಯು ಬೇರೂರಿತು ಘೋರ ಅಡವಿಯೊಳಗೆ ಗಾರುಗತ್ತಲೆ ಸುತ್ತಿ ಮಾರಿದೆಯ ಚೋರರಿಗೆ ದಾರಿಗಾಣಿಸದೆ 3 ದೊರೆಯು ಮನ್ನಿಸಿ ಕೊಡಲು ನೆರೆಹೊರೆಯ ಕರೆಕರೆಯು ಹರದಿಯೊಳು ನಂಬಿಗೆಯು ಕಿರಿದಾಯಿತು ನೆರವಾಗಿ ತೋರುತಿದೆ ಬರಿಯ ವೃಕ್ಷದ ತೆರದಿ ಮರುಳು ಕಣ್ಣಿಗೆ ಇರುವೆ ಕರಿಯ ತೆರನಂತೆ 4 ಇನ್ನು ಬಂಧಿಸಬೇಡ ಎನ್ನಿಂದ ಅಳವಲ್ಲ ಬನ್ನಬಡುವುದು ಎಲ್ಲ ನಿನ್ನ ಮನಕರುಹು ಕರ್ಮ ಬೆನ್ನು ಬಿಡುವಂದದಲಿ ಪನ್ನಗಾದ್ರಿನಿವಾಸ ಪಾಲಿಸೈ ಲೇಸ 5 ದಾಸ ಬಳಲಿದನೆಂಬ ಹೇಸಿಕೆಯ ಮಾತುಗಳ ಕಾಸಕೊಟ್ಟೇಕೆ ನಿರಾಸೆ ಮಾಡುವಿಯೊ ಬೇಸರಾಗದೆ ಪಂಥವಾಸಿಯಿಲ್ಲವೆ ನಿನಗೆ ಸಾಸಿರಾಕ್ಷನೆ ಎನಗೆ ಲೇಸಿತ್ತು ಸಲಹೊ 6 ಪಡೆದ ತಂದೆಯು ನೀನೆ ಕೊಡುವ ಒಡೆಯನು ನೀನೆ ಕಡೆಗೆ ಕೈವಿಡಿದು ಎನ್ನ ರಕ್ಷಿಪನು ನೀನೆ ಮಡದಿ ಮಕ್ಕಳನೆಲ್ಲ ಬಿಡದೆ ಸಲಹುವ ನೀನೆ ಪೊಡವಿಗಧಿಪತಿಯಾದ ವರಾಹತಿಮ್ಮಪ್ಪ 7
--------------
ವರಹತಿಮ್ಮಪ್ಪ
ಕಮಲನಾಭ ನಿಮ್ಮ ಪಾದಕಮಲ ನಂಬಿ ಭಜಿಪೆ ಶ್ರೀ ಮಾಧವ ಪ ಪಕ್ಷಿಗಮನ ನಿಮ್ಮ ನಿರ್ಮಲಕ್ಷಯನಾಮ ಎನ್ನ ಜಿಹ್ವೆಗೆ ಲಕ್ಷ್ಯದಿತ್ತು ಪಿಡಿದು ಬಿಡದೆ ರಕ್ಷಿಸ್ಯಾದವ 1 ಮಂದಭಾಗ್ಯ ನಾನು ನಿಮ್ಮ ಬಂಧುರಂಘ್ರಿಕುಸುಮ ಮರೆ ಬಂದು ಬಿದ್ದೆ ದಯದಿ ಕಾಯೋ ಮಂದರೋದ್ಧಾರ 2 ಅರಿಯದೆ ನಾ ಮಾಡಿದಂಥ ಪರಮದುರಿತ ತರಿದು ತವ ಚರಣಸೇವೆ ನೀಡಿ ಪೊರೆಯೈ ಉರಗಶಯನ 3 ನಾನಾ ಬೇನೆಯೊಳಗೆ ಬಿದ್ದು ಹಾನಿಯಾಗಿ ಬಳಲುವಂಥ ಹೀನ ಬವಣೆ ತಪ್ಪಿಸಿನ್ನು ದಾನವಾಂತಕ 4 ಕ್ಷಣಕೆಕ್ಷಣಕೆ ಮಾನವರಿಗೆ ಮಣಿದು ಬೇಡಿ ಜೀವಿಸುವ ಬಿನಗುಕೃತಿ ಗೆಲಿಸು ದಯದಿ ದೀನಮಂದಾರ 5 ಜನಿಸಿದಂದಿನಿಂದ ನಾನು ಘನ ತಾಪತ್ರಯದಿ ನೊಂದೆ ಮನಕೆ ತಂದು ರಕ್ಷಿಸಿನ್ನು ಜನಕಜಾವರ 6 ಬುದ್ಧಿಯಿಲ್ಲದೆ ಕೆಟ್ಟೆನಭವ ಬಧ್ಧಜನರ ಸಂಗದಿ ಬಿದ್ದು ಶುದ್ಧಮತಿಯ ನೀಡಿ ಸಲಹು ಪದ್ಮನಾಭನೆ 7 ವಿಶ್ವ ವಿಶ್ವಾಕಾರ ನಿಮ್ಮ ವಿಶ್ವಾಸೆನಗೆ ಕೃಪೆಯ ಮಾಡಿ ನಶ್ವರೆನಿಪ ಮತಿಯ ಬಿಡಿಸು ವಿಶ್ವರಕ್ಷನೆ 8 ನೀನೆ ಗತಿಯು ಎನಗೆ ದೇವ ನಾನಾದೈವವರಿಯೆ ಸತ್ಯ ಜ್ಞಾನಪಾಲಿಸೊಳಿದು ಬೇಗ ಜ್ಞಾನಸಾಗರ 9 ಕೆಟ್ಟ ಹೊಟ್ಟೆ ಕಷ್ಟಕಡಿದು ದುಷ್ಟ ಭ್ರಷ್ಟ ಸಂಗ ತರಿದು ಶಿಷ್ಟ ಸಂಗ ದೊರಕಿಸೆನಗೆ ಸೃಷ್ಟಿಕರ್ತನೆ 10 ಸುಜನ ಸಹ ವಾಸದಿರಿಸನುಮೇಷ ಎನ್ನ ವಾಸುದೇವನೆ 11 ಹೀನ ಹೀನ ಜಗ ಅಭಿಮಾನ ತೊಲಗಿಸಧಿಕ ನಿಮ್ಮ ಧ್ಯಾನಾನಂದ ಕರುಣಿಸಯ್ಯ ಜನಾರ್ದನ12 ಭಾರವೆನಿಪ ವಿಷಮಸಂಸಾರ ಸುಲಭದಿಂದ ಗೆಲಿಸು ಘೋರ ಭವದ ತಾಪಹರ ನಾರಾಯಣ 13 ದೇಶದೇಶಂಗಳನು ತಿರುಗಿ ಅಸಂಬದ್ಧನಾದೆ ಸ್ವಾಮಿ ದೋಷ ಮನ್ನಿಸಯ್ಯ ಎನ್ನ ಈಶಕೇಶವ 14 ಸಂಚಿತಿಂದೀಗಳಿ( ಯಿ)ಸೆನ್ನ ಮುಂಚಿತಾಗಮ ಗೆಲಿಸು ಜೀಯ ಸಂಚಿತಾಗಮ ರಹಿತ ವಿರಂಚಿತಾತನೆ 15 ಚಾರುವೇದ ಪೊಗಳುವಂಥ ತೋರಿಸಯ್ಯ ನಿನ್ನ ಮೂರ್ತಿ ಮೂರು ಲೋಕ ಸಾರ್ವಭೌಮ ನಾರಸಿಂಹ 16 ಮದನನಯ್ಯ ಮುದದಿ ಬೇಡ್ವೆ ಸದಮಲ ಸಂಪದವ ನೀಡು ಸದಮಲಾಂಗ ಸರ್ವಾಧಾರ ಮಧುಸೂದನ 17 ಸಕಲ ವಿಘ್ನದೂರ ಮಾಡಿ ಮುಕುತಿಪಥಕೆ ಹಚ್ಚು ತ್ವರಿತ ಭಕುತರಿಷ್ಟ ಪೂರ್ಣ ಆದಿಲಕುಮಿನಾಯಕ 18 ದರ್ಜುಮಾಡಿಸೆನ್ನ ನಿಮ್ಮ ಮರ್ಜಿಪಡೆದ ಭಕ್ತರೊಳಗೆ ದುರ್ಜನಾಗಿ ದಯಾರ್ಣವ ನಿರ್ಜರೇಶನೆ 19 ಪೋಷಿಸೆನ್ನನುಮೇಷ ನಿಮ್ಮ ದಾಸನೆನಿಸಿ ವಸುಧೆಯೊಳು ಆಸೆಯಿಂದ ಬೇಡಿಕೊಂಬೆ ಕ್ಲೇಶನಾಶನೆ 20 ನಿರುತ ಮನದಿ ಹರಿಯ ನಾಮ ಬರೆದು ಓದಿ ಕೇಳುವರಿಗೆ ಪರಮ ಮುಕ್ತಿ ಕೊಡುವ ಮಮ ವರದ ಶ್ರೀರಾಮ 21
--------------
ರಾಮದಾಸರು
ಚಿಂತೆಯನು ಪರಿಹರಿಸು ಚಂದ್ರವದನೇ ಪ ಚಂದ್ರಶೇಖರನಾಣೆ ಬಹುವಿಧದಿ ನೊಂದು ಭ್ರಾಂತನಾದೆತಾಯಿ ಅ.ಪ. ಹೆಣ್ಣಿಗೋಸುಗ ಪೋಗಿ ಹೆಣ್ಣಿನಾಶೆಯ ಮಾಡಿ ಮಣ್ಣುಪಾಲಾದೆನೇಬಣ್ಣಕ್ಕೆ ಮರುಳಾಗಿ ಬಾಣಕ್ಕೆ ಗುರಿಯಾಗಿಕಣ್ಣುಕಾಣದೆ ಕೂಪದೊಳು ಬಿದ್ದೆಅನ್ನಪೂರ್ಣೆಯೆ ನಿನ್ನ ಚರಣವನು ನಂಬಿದ ಶರಣನ ಪಾಲಿಸು ತಾಯಿ 1 ಮನನಿಲ್ಲದೆ ಮತ್ತೆ ಮನಬಂದತ್ಯೆರ ತಿರುಗಿ ಮನ್ಮಥನ ಬಯಸಿದೆ ಮಾನಹಾನಿಯಾಗಿ ಹೀನನಾದೆನು ನಾನು ಮನ್ಮಥನ ತಾಯೆಪ್ರಾಣ ಪೋಗೋದು ಲೇಸು ಪ್ರಾಣಿಗಳ ಮಧ್ಯದಿಮನೋಮಾನಿನೀ2 ಮತ್ಸ್ಯ ಮೂರುತಿ ತಂದೆವರದಗೋಪಾಲವಿಠ್ಠಲನ ಅಚ್ಚಸುಖ ಶರಧಿಯೊಳಿಪ್ಪ ಮೀನಾಕ್ಷಿಯೇ 3
--------------
ತಂದೆವರದಗೋಪಾಲವಿಠಲರು
ಮಾನವಜನುಮ ಖೂನವರಿಯದೇನು ಏನುಕೆಡುವಿಯೋ ಏನುಕೆಡುವಿಯೋ ಜ್ಞಾನವಿಲ್ಲದೆ ಪ ನಾನಾವಿಧದಿ ಅನ್ಯರನ್ನು ಏನುಕಾರಣ ಜರೆದು ಸುಳ್ಳೆ ಹಾನಿಯಾಗಿ ಪೋಗುವಿಯೋ ಅ.ಪ ಅವನ ಸಂಪದ ನಿನಗೇನು ನಿನ್ನಪದವಿ ಅವನಿಗೇನೋ ಅವನ ಇವನ ಭವನ ಸುದ್ದಿ ನೆವನಗೈದು ದಿವನಿಶಿಯು ಸವೆಯದಾಡಿ ಭುವನಸುಖವ ಸವಿಯದೆ ಜವನ ಭವನ ಕಾಣುವಿ 1 ಶೀಲಜನರ ಸಂಗಡಾಡೋ ಮೂಲತತ್ವವಿಚಾರಮಾಡೋ ಕೀಳನಾಗಿ ಹಾಳು ಭ್ರಮೆಯೊಳು ಬಿದ್ದು ಮೂಳನಾಗಿ ಕಾಲನಾಳಿನ ದಾಳಿಗೆ ಸಿಲ್ಕಿ ಗೋಳಿನೊಳು ಬೀಳುವಿಯೊ 2 ಪಾಮರನಾಗಬೇಡೆಲವೋ ಪಾಮರ ಮನದ ಮಲವತೊಳೆಯೋ ಪ್ರೇಮ ಮೋಹಗಳನು ತುಳಿದು ಕಾಮಜನಕ ಸ್ವಾಮಿಶ್ರೀರಾಮಮಂತ್ರ ಪಠಣಮಾಡಿ ಆ ಮಹಾ ಮುಕ್ತಿ ಪಡೆದು ಬಾಳೊ 3
--------------
ರಾಮದಾಸರು