ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರುದ್ರದೇವರು ಪಾಲಿಸೊ ಪಾರ್ವತಿ ರಮಣಾ ನಿನ್ನಪಾಲಿಗೆ ಬಂದೆನೊ ಪಾಲಿಸೆನ್ನದೆ ಪ ವೇದವೇದಾಂತ ಪುರಾಣಗಳೆಲ್ಲನೀದಯಾಳುವೆಂದು ಪೊಗಳುತಿರೆಹಾದಿಬೀದಿ ದೇವತೆಗಳಿಗೆರಗಿ ನಾಖೇದಬಟ್ಟು ನಿನ್ನ ಮೊರೆ ಹೊಕ್ಕೆ ಮಹದೇವ 1 ತುಂಗಾ ಕುಮದ್ವತಿ ಸಂಗಮೇಶ್ವರ ನಿನ್ನಕಂಗಳಿಂದಲಿ ನೋಡೂ ಕರುಣದಿಂದಕಂಗೆಟ್ಟು ಕಳವಳಿಸುತಿರೆ ನೀ ನೋಡಿಭಂಗಪಡಿಸಿದರೇನು ಭಾಗ್ಯವು ಬರುವದು 2 ಆಪತ್ತು ಕಳೆದು ಸಂಪತ್ತು ನೀಡಿ ನಿನ್ನರೂಪವ ತೋರಿಸೋ ತ್ವರಿತದಲಿಗೋಪತಿಕೃಷ್ಣವಿಠಲನೆಲ್ಲ ಲೋಕವವ್ಯಾಪಿಸಿರಲು ಸಂದೇಹ ವ್ಯಾತಕಯ್ಯಾ 3
--------------
ಗೋಪತಿವಿಠಲರು
ಸಲ್ಲದೊ ಸಲ್ಲದೊ ಸರ್ವರು ಕೇಳಿ ನಮ್ಮ ಪುಲ್ಲನಾಭನ ಬಿಟ್ಟು ಖುಲ್ಲದೇವರ ಪೂಜೆ ಪ ಮಾರಿ ಮಸಣಿ ಜೆಟ್ಟೆ ಜೆಟ್ಟಿಂಗ ಭೇತಾಳ ವರ ಪೋತರಾಜಾ ಬೊಮ್ಮೆಯನು ಬೀರೆದೇವರು ಹಾದಿಬೀದಿಯ ಬಸವಣ್ಣ ಚಾರುದೈವ ಉಚ್ಚಾರವಲ್ಲದೆ ಹೊಲ್ಲಾ 1 ಯಲ್ಲಮ್ಮಾ ಯಕನಾತಿ ಅಡವಿಯ ಗಿಡದಮ್ಮ ಹಳ್ಳದ ತೀರದ ಹಾಳದೇವಿ ಅಮ್ಮ ಜಲದೇವಿ ಜಕ್ಕಮ್ಮನೆಂತೆನಲು ಸೊಲ್ಲು ಬರಿದೆ ವ್ಯರ್ಥವಲ್ಲದೆ ಫಲವಿಲ್ಲ 2 ಬನದಶಂಕರಿ ಕುಳ್ಳಹಟ್ಟಿಗೆ ಕರಿಮಾತೆ ವನಶಕ್ತಿ ಚವಡಮ್ಮ ಜವನಿಕೆ ಬಿನಗ್ಯ ಮಾಳಾದೇವಿ ಮಾಳಿಗೆ ಹಿರಿಯಕ್ಕ ಘನ ಪಿಶಾಚಿಗಳಿಂದ ಒಂದಿಷ್ಟು ಸುಖವಿಲ್ಲ 3 ಖಂಡೇರಾಯ ಮಲಕಚ್ಚಿನ ಗಡಿಗೆಮ್ಮ ಮುಂಡೆ ಮೂಕಾರುತಿ ಬೆಂಚೆಮ್ಮನು ಭಾಂಡಾರದ ದುರ್ಗಿ ಹಿರಿಯಣ್ಣ ಮೈಲಾರ ಹಿರಚು ಗುಂಪಿನ ಬಳಗ ಕಂಡರೇನಿಲ್ಲ 4 ಸುಣ್ಣದ ಕೆಸರು ಹಾಲು ಕೂಡಿ ಕುಡಿದಂತೆ ಅನ್ಯದೇವತೆಗಳ ಭಜನೆ ಹೊಲ್ಲ ಸಿರಿ ವಿಜಯವಿಠ್ಠಲನ ಯುಗಳಪಾದ ಸನ್ನುತಿಸಿದರೆ ಪರಮ ಪದವಿಯಮ್ಮ 5
--------------
ವಿಜಯದಾಸ
ರಂಗ ರಂಗ ಎಂಬ ನಾಮವ ನೆನೆವರ |ಸಂಗದೊಳಿರಿಸು ಎನ್ನ ಪಅಂಗದೊಳ್ಲೆವರು ದೆಸೆದಸೆಗೆಳೆಯುವ |ಭಂಗವ ಬಿಡಿಸೊ ಹರಿಯೆ-ಸ್ವಾಮಿ ಅ.ಪಹರೆಕೃಷ್ಣ ಎಂದೆಂಬೆಜಿಹ್ವೆತಾನಿರುತಿರೆ |ಬರಿಯೆ ಮಾತಾಡುವೆ ನಾ ||ಗುರು-ಹಿರಿಯರ ವಂದನೆಗೆ ಕರ-ಶಿರವಿರೆ |ಗುರುವಹಂಕಾರತನ ||ಪರಿಪರಿ ಪುಷ್ಪದಲಿ ಪೂಜಿಸದೆ ಅಚ್ಯುತನ |ಮರೆತಿಹೆ ನಾನನುದಿನ |ಅರಿವ ನೋಡಿದರೆ ಎನ್ನಲಿ ಕಾಣೆನೈ ದೇವ |ಮೊರೆಹೊಕ್ಕೆ ಸಲಹೊ ಎನ್ನ-ಸ್ವಾಮಿ 1ವೇದ ಶಾಸ್ತ್ರ ಪುರಾಣ ನಾಮವ ನೆನೆವರ |ಚೋದ್ಯವ ನಾನರಿಯೆನು ||ಹಾದಿಬೀದಿ ತಿರುಗುವ ಜಾರಸ್ತ್ರೀಯಳ ಕಂಡು-ವಿ-|ನೋದಗಳ ಮಾಡುತಿಹೆನು ||ಮಾಧವಗೋವಿಂದ ಎನ್ನದೆ ಕಾಲನ |ಬಾಧೆಗಳಿಗೊಳಗಾದೆನೊ ||ಈ ಧರೆಯೊಳಗೆನ್ನ ರಕ್ಷಿಸುವವರ ಕಾಣೆ |ಶ್ರೀಧರ ನೀನೆ ಸಲಹೊ-ಸ್ವಾಮಿ 2ಮಡದಿ-ಮಕ್ಕಳಿಗೆಲ್ಲ ಒಡವೆ ಬೇಕೆಂಬುವ |ಕಡುಲೋಭತನವ ಬಿಡಿಸೊ ||ಅಡಿಗೆ ಅಡಿಗೆ ನಾರಾಯಣನೆಂಬ ನಾಮವನು |ನುಡಿವ ನಾಲಗೆಗಿರಿಸೊ ||ಪೊಡವಿಯೊಳುಪುರಂದರವಿಠಲರಾಯನೆ ನಿನ್ನ |ಅಡಿಯದಾಸನೆನಿಸೊ-ಸ್ವಾಮಿ 3
--------------
ಪುರಂದರದಾಸರು