ಒಟ್ಟು 6 ಕಡೆಗಳಲ್ಲಿ , 3 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡಿರೆ ಶ್ರೀ ಕೃಷ್ಣನ ಪ. ಪುಂಡರಿಕಾಕ್ಷ ಪುರುಷೋತ್ತಮನ ಅಂಡಜವಾಹನ ಅಸುರಾಂತಕನ ಅ.ಪ. ಅರುಣ ಕಿರಣ ಸೋಲಿಪ ಚರಣ ವರ ಗೆಜ್ಜೆಯ ಧರಿಶಿಹನ ಕಿರುನಗೆಯಿಂದಲಿ ಬೆರಳಲಿ ಮುರಳಿಯ ಸ್ವರÀ ಊದಿದ ಮುರಹರನ 1 ಸೂರ್ಯ ಕಿರೀಟ ಧರಿಸಿ ಹಾಟಕಾಂಬರಧರ ನಮ್ಮ ಊಟ ಮಾಡಿ ಪಾಲ್ ಬೆಣ್ಣೆಯ ಮೆದ್ದು ವಾರೆ ನೋಟದಿ ಮನ ಸೆಳೆಯುವನ2 ಅಂಗಿಯ ತೊಡಿಸಿ ಉಂಗುರವಿಟ್ಟು ಅಂಗಳದೊಳು ಬಿಟ್ಟೆನಮ್ಮ ರಂಗ ಶ್ರೀ ಶ್ರೀನಿವಾಸನ ಕಾಣೆ ನಿ ಮ್ಮಂಗಳದೊಳು ಇಹನೇನಮ್ಮ ಇಹನೇನಮ್ಮ 3
--------------
ಸರಸ್ವತಿ ಬಾಯಿ
ಕಮಲನಾಭ ಕ್ಷಮೆಯಳೆದ ಪಾದ ರಮೆಯರಸನೆ ರಮ್ಯ ಚರಿತ ಕಮಲ ಪಾದವ ತೋರೋ ಅ.ಪ. ಸೂರ್ಯ ತೇಜ ಪೊಳೆವ ಶೇಷಶಯನ ತಲ್ಪದಿ ಹಾಟಕಾಂಬರಧರ ಕಿರೀಟ ಮಾಲ ಶೋಭ ಕೃಷ್ಣನೆ ಸಾಟಿಯಿಲ್ಲದ ಕರದಿ ಲಕುಮಿ ಧಾಟಿಯಿಂದ ವೊತ್ತುವ ಪಾದ ಸಾಟಿಯಿಲ್ಲದೆ ನಿನ್ನ ಭಕ್ತರ ಪೊರೆವ ದೇವ ನಿನ್ನ ಪಾದವು 1 ದುಷ್ಟರನ್ನು ಮೆಟ್ಟಿ ತುಳಿದ ದಿಟ್ಟ ಕೃಷ್ಣನ ಪಾದವು ಮೆಟ್ಟಿ ಕಾಳಿಂಗನ ಹೆಡೆಯ ದಿಟ್ಟ ರಂಗನ ಪಾದವು ಕಟ್ಟಿದ ವರಳನೆಳೆದು ಮತ್ತಿ ಮರವ ಮುರಿದ ಪಾದವು ಕೊಟ್ಟ ಅಭಯ ಭಕ್ತರ ಪೊರೆವಡಿಟ್ಟ ಪಾದವು 2 ಕೂರ್ಮ ವರಹ ನರಹರಿ ಅಚ್ಚವಾಮನ ಪಾದವು ಸಯಿಚ್ಚೆ ಪರಶುಧರ ಶ್ರೀರಾಮ ಕೃಷ್ಣ ನಿನ್ನ ಪಾದವು ಅಚ್ಚವರವನಳಿದು ತೇಜ ಹತ್ತಿ ಮೆರೆವ ಪಾದವು ಅಚ್ಚುತ ಶ್ರೀ ಶ್ರೀನಿವಾಸ ಕೃಷ್ಣ ನಿನ್ನ ಪಾದವು 3
--------------
ಸರಸ್ವತಿ ಬಾಯಿ
ದಯದಿಂದಲಿ ನೋಡೊ ಎನ್ನಾ ಹಯವದನ್ನಾ ಶ್ರೀಹರಿ ಪ ವರಗಳ ನೀಡಿ ಅ.ಪ. ಭಕುತದಿ ಕೂಡಿ ಆಡುವೆ ನೀ ನಿತ್ಯ ಸುಜನರಿಗೆ ಕಾಡಿ ಕೆಣಕುವ ಈ ಖೋಡಿ ಅನುದಿನ ಸಾಮಗಾನ ಪ್ರೇಮಾ ಬ್ರಹ್ಮಾದಿಗಳಿಗೆ ಕಾಮಿತಪ್ರದ ರಾಮಾ ಪರಿಪೂರ್ಣ ರಾಮಾ 1 ಶಾಮಸುಂದರ ಶಕಟಾಸುರಮರ್ದನ ಸಾಮಜವರದನೆ ಮಾತುಳಾಂತಕ ಮದನ ಜ£ಕÀನೆ ಕರುಣಿಸಿ ಎನ್ನನು 2 ಏನು ಬಲ್ಲೆನು ನಾನು ನಿನ್ನ ಮಹಿಮೆಯನ್ನು ದೀನ ಸುರಧೇನು ಬಣ್ಣಿಸಲಳವೆ ನಿನ್ನ ಮಹತ್ತನ್ನು ಮುನಿಮೌನಿವರರಿಂದ ಅನಘನೆನಿನ್ನಮಿತ ಗುಣಗಣನ ಕಾಣದೆ ಲಕುಮಿ ಮನದಲ್ಲಿ ಅನುವು ತಪ್ಪೆ ನಿತ್ಯ 3 ಹಾಟಕಾಂಬರಧರ ಶ್ರೀವತ್ಸಲಾಂಛನ ಜಟಾಮಕುಟ ಕುಂqಲ ಕೈಟಭಾಂತಕನೆ ಕಡಲಮಂದಿರ ಕುಟಿಲ ಕಟುಮತಿ ಖಳರನು ಶಿಕ್ಷಿಸಿ ಕೈಯ್ಯ ಬಿಡದೆ ಎನ್ನಾ ಮಾನಿಧಿವಿಠಲ ಕಾಲಿಗೆ ಬೀಳುವೆ 4
--------------
ಮಹಾನಿಥಿವಿಠಲ
ದೇವಕಿ ನಂದನ ಕೃಷ್ಣಾ ಭಂಜನ ಭಾವಜಪಿತ ಶ್ರೀಕೃಷ್ಣಾ ಪ ಇಭರಾಡ್ಪರದ ಶ್ರೀಕೃಷ್ಣ 1 ಶ್ರೀಕೇಶವ ಶಶಿ ಶೇಖರನುತ ಕರುಣಾಕರ ರೂಪ ಶ್ರೀಕೃಷ್ಣ 2 ಕುಂದರದನ ಕಾಲಿಂದೀವರ ಮನ್ಮಂದಿರೋದ್ಧಾರ ಶ್ರೀಕೃಷ್ಣಾ 3 ಶ್ರೀ ಖಗಪತಿವಾಹನ ಕೃಷ್ಣ 4 ಚಾರುಚರಿತ ವಿಸ್ತಾರ ಮಹಿಮಾ ನೀರೇರುಹಲೋಚನ ಕೃಷ್ಣ 5 ಕೈಟಭ ದಾನವ ಖಂಡನ ಭಾಸುರ ಹಾಟಕಾಂಬರಧರ ಕೃಷ್ಣ 6 ಶ್ರೀಪತಿಭವ ಸಂತಾಪಹರಣ 'ಹೆನ್ನೆಪುರನಿಲಯ' ಕೃಷ್ಣಾ 7
--------------
ಹೆನ್ನೆರಂಗದಾಸರು
ರಾಮರಾಮ ರಾಮ ರಾಮಸೀತಾರಾಮ ದಶರಥನಂದನ ರಾಮ ದಯಮಾಡು ಶ್ರೀರಾಮ ಪಶುಪತಿ ಪಾಲಕರಾಮ ಪಾಲಿಸೊಯನ್ನನು ಶ್ರೀರಾಮ ಪ ಭಕ್ತವತ್ಸಲರಾಮ ಪಾಂಡವ ಪಕ್ಷಕರಾಮ ಮುಕ್ತಿದಾಯಕ ರಾಮ ಮುನಿಗಣ ವಂದ್ಯರಾಮ ಯುಕ್ತ ಜಗತ್ಕರ್ತರಾಮ ಇನಕೂಲಭೂಷಣರಾಮ ಮೌಕ್ತಿಕ ಮಣಿಗಣರಾಮ ಮಾಣಿಕ್ಯ ಮುಕುಟಧರರಾಮ 1 ಅಹಿಪಶಯನ ಶ್ರೀರಾಮ ಅನೇಕ ಚರಿತರಾಮ ಅಮಿತ ಪರಾಕ್ರಮ ರಾಮ ಇಹಪರ ಬಾಂಧವ ರಾಮ ವಿಶ್ವಕುಟುಂಬ ರಾಮ ಮಹಾಮಹಿಮ ಶ್ರೀರಾಮ ಮನುಜಾಧಿಪತಿರಾಮ 2 ಭೂತದಯಾಪರರಾಮ ಪುಣ್ಯಪುರುಷ ಶ್ರೀರಾಮ ಪಾತಕ ಭಯಹರರಾಮ ಪತಿತ ಪಾವನ ರಾಮ ನಾಥ ಜಗತ್ರಯರಾಮ ಅನಾಥ ರಕ್ಷಕರಾಮ ಸೇತುಬಂಧನ ರಾಮ ಶಾಶ್ವತ ವಿಗ್ರಹರಾಮ 3 ಮಂಗಳ ಮೂರುತಿ ರಾಮ ಮಧುಸೂದನ ಶ್ರೀರಾಮ ಗಂಗಾಪಿತ ಹರಿರಾಮ ಗೌರೀವಲ್ಲಭರಾಮ ಶೃಂಗಾರಾಂಗ ರಾಮಾಶ್ರಿತಜನ ಪೋಷಿತರಾಮ ರಾಜೀವ ನಯನ ರಾಮ 4 ಸತ್ಯವಾಕ್ಯ ಶ್ರೀರಾಮ ಸದಾನಂದ ರಾಮ ನಿತ್ಯನಿರಂಜನ ರಾಮ ನಿರ್ವಿಕಲ್ಪ ಶ್ರೀರಾಮ ಭೃತ್ಯಕೋಟಿ ಸಂಘರಾಮ ಪುಣ್ಯಪ್ರಭಾವ ಶ್ರೀರಾಮ ದೈತ್ಯಾಂತಕ ಶ್ರೀರಾಮ ತಾಟಕಮರ್ದನ ಶ್ರೀರಾಮ 5 ನವನೀತ ಹೃದಯರಾಮ ಕೋಟಿ ಭಾನುತೇಜ ರಾಮ ಕರುಣಸಾಗರ ರಾಮ ಹಾಟಕಾಂಬರಧರ ರಾಮ ಆದಿನಾರಾಯಣ ರಾಮ ಕೋಟಿಕಂದರ್ಪರೂಪ ರಾಮ ಕೋಮಲಗಾತ್ರರಾಮ 6 ಯದುಕುಲಾಬ್ಧಿಚಂದ್ರ ರಾಮ ಯಶೋದಾನಂದನ ರಾಮ ಮೃದು ಮಧು ಭಾಷಣರಾಮ ಮೂಲರೂಪ ಶ್ರೀರಾಮ ಗದಧರ ವಂದ್ಯರಾಮ ಘನಗಂಭೀರರಾಮ ಪದುಮನಾಭ ಶ್ರೀರಾಮ ಪರಮಕೃಪಾಳುರಾಮ 7 ಸರಸಿಜಭವನುತರಾಮ ಸದ್ವಿಲಾಸ ಶ್ರೀರಾಮ ಕರಿರಾಜ ಪಾಲಕ ರಾಮ ಕಲ್ಮಷ ಪರಿಹರರಾಮ ಸುರಪತಿ ವಂದ್ಯರಾಮ ಸುಜನಾಂತರ್ಯಾಮಿ ರಾಮ ಶರಧಿಶಯನ ಶ್ರೀರಾಮ ಶಾಙ್ರ್ಞಪಾಣಿ ರಾಮ 8 ಕಮಲೋದರರಾಮ ಘನಗುಣಶಾಂತ ರಾಮ ಸಾರಥಿ ರಾಮ ಕಮಲಮನೋಹರ ರಾಮ ಗರುಡವಾಹನರಾಮ ಕಮಲಾಪ್ತ ಶಶಿನೇತ್ರ ಕರ್ಮಸಾಕ್ಷಿ ಭೂತರಾಮ 9 ಈಶ ಜಗತ್ರಯ ರಾಮ ವಿಷ್ಣುಸರ್ವೋತ್ತಮ ರಾಮ ವಾಸುದೇವ ಕೃಷ್ಣರಾಮ ವಸುದೇವ ನಂದನ ರಾಮ ಭೂಸುರಪ್ರಿಯ ಶ್ರೀರಾಮ ಸರ್ವಪೂಜಿತರಾಮ ವಸುಗಿರಿ ವಾಸರಾಮ ವೈಕುಂಠನಿಲಯರಾಮ 10 ನೀಲಮೇಘವರ್ಣರಾಮ ನಿಖಿಲವೈಭವರಾಮ ಪುಂಡರೀಕ ವರದ ರಾಮ ಫಾಲಲೋಚನ ಪ್ರಿಯರಾಮ ಪಾಂಡುರಂಗ ಶ್ರೀರಾಮ ಕಾಲಿಯಾಮರ್ದನರಾಮ ದ್ವಾರಕಾವಾಸರಾಮ 11 ವೇಣುನಾದ ಶ್ರೀರಾಮ ವೆಂಕಟರಮಣ ರಾಮ ಗಾನಲೋಲ ಶ್ರೀ ರಾಮ ಕಂಬುಕಂಧರರಾಮ ಮಾನಿತ ತ್ರಿಭುವನರಾಮ ಮಂದರಧರ ಶ್ರೀರಾಮ ಧೇನು ಪಾಲಕ ರಾಮ ದೇವಾಧಿದೇವ ರಾಮ 12 ಕುಂಭಿನೀಧವ ರಾಮ ಕುಶಲವ ಜನಕರಾಮ ಅಂಬರ ಧ್ರುವನಂತೆ ರಾಮ ಅಜಮಿಳನಂತೆ ರಾಮ ಪೊರೆದಂಥ ರಾಮ 13 ತಾಪತ್ರಯದಲಿ ರಾಮ ನಾತಪಿಸುತಿರುವೆ ರಾಮ ಪರಿ ತಾಪವ ರಾಮ ಹೆದರಿಸಿ ಕಳೆಯೊ ರಾಮ ಭೂಪ ನೀನಲ್ಲದೆ ರಾಮ ಭೂವಿಯೊಳಧಿಕ ನೀನಲ್ಲವೆರಾಮ ಕಾಪಾಡುವ ಭಾರರಾಮ ಕರ್ತನು ನೀನೆ ರಾಮ 14 ನಿತ್ಯ ಕಲ್ಯಾಣರಾಮ ಅಘನಾಶನ ಶ್ರೀರಾಮ ಅನಂತನಾಮರಾಮ ಜಗದೊಳಧಿಕನಾದರಾಮ ಜಯ`ಹೆನ್ನೆವಿಠಲ’ ರಾಮ ಮನ್ನಿಸಿ ಸಲಹೊರಾಮ 15
--------------
ಹೆನ್ನೆರಂಗದಾಸರು
ವೃಂದಾವನದಿ ನಿಂದಿಹನ್ಯಾರೆ ಗೋವಿಂದನಲ್ಲದೆ ಚಂದಿರವದನೆ ನೋಡುವ ಬಾರೆ ಪ. ಕೋಟಿಸೂರ್ಯ ಪ್ರಕಾಶ ಕಿರೀಟದ ಬೆಳಕಿದು ಹಾಟಕಾಂಬರಧರನ ನೋಟದಿ ಸುಖಿಸೆ ಕೋಟಲೆ ಸಂಸಾರ ದಾಟಿ ಪೋಗಿ ಕೃಷ್ಣ ನಾಟ ನೋಡಿ ಮನ ಕವಾಟವ ಬಿಚ್ಚೆ ಪೂರ್ಣ ನೋಟದಿ ನೋಡುವ 1 ರಂಗನಾ ಕೊಳಲ ಬೆಳದಿಂಗಳ ಸೊಗವಿಲೆ ಮ್ಮಂಗವ ಅಂಗಜನೈಯ್ಯಗೀಯುತೆ ಕಂಗಳಿಗ್ಹಬ್ಬವೆ ರಂಗನ ನೋಡುತೆ ಗಂಗಾಜನಕನ ವಲಿಸಲು ನಮಗೆ ಹಿಂಗದ ಮುಕುತಿಯ ರಂಗಗೊಡುವ ಬಾರೆ 2 ಜಯ ಜಗದೀಶನ ಜಯ ರಮಕಾಂತನ ಜಯ ಕರ್ಮನೀಯನ ಜಯ ಶ್ರೀ ಶ್ರೀನಿವಾಸನ ಜಯ ಯದು ತಿಲಕನ ಜಯ ಕೂಡಾಡುವ ಜಯಪ್ರದನಾಗುತೆ ಜಗದಿ ಪೊರೆವ ಬಾರೆ 3
--------------
ಸರಸ್ವತಿ ಬಾಯಿ