ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲೆ ಎಲೆ ಎಲೆ ಮುದಿಮೂಳಿ ನಿನ್ನ ಕಲ್ಮಷ ಇನ್ನು ತೊಳಿವಲ್ಲಿ ಪ ತಿಳಿಯದೆ ಸುಮ್ಮನೆ ಕಳಕೊಂಡಿ ವಯವೆಲ್ಲ ಸುಳ್ಳೆ ಸುಳ್ಳಿಗಾಗಿ ಹೋಗಿ ಮೃತ್ಯುಕೈಲಿ ಅ.ಪ ಹಿಡಿದಿದ್ದಿ ಸುಡುಗಾಡ ಪಥವ ಇನ್ನು ಬಿಡವಲ್ಲಿ ಮಾಯಮತವ ಹೆಡತಲೆಮೃತ್ಯು ನಾಳೆ ಅಡರಿ ಪಿಡಿದು ನಿನ್ನ ಕೆಡ ಕೆಡವಿ ಒದೆವಾಗ ಬಿಡಿಸೊರಾರವ್ವ 1 ಇನತು ನಾಚಿಕಿಲ್ಲ ರೋಗಿ ನೀನು ತಿಣಿತಿಣಿಕಾದಿ ಮುದಿಗೂಗಿ ಕನಿಕರಿಲ್ಲದೆ ಯಮನ ಠೊಣಪರ್ಹಿಡಿದು ನಿನ್ನ ಹೊಗೆರ್ಹೊಣಿಕಿಲ್ಹೇರುವಾಗ ನಿನಗ್ಯಾರೆ ಕಾಗಿ 2 ಹಣವೆಷ್ಟಿರಲು ನಿನ್ನದಲ್ಲ ನಾಳೆ ಮನೆಮಾರು ಬರದು ಹಿಂಬಲ ಮಣಿಕಟ್ಟೆಲವು ಮುರಿದ್ಹಣಿಯುವಾಗ ನಿನ್ನ ತನುಜನುಜರು ಯಾರು ಹಣಿಕ್ಹಾಕುವರಿಲ್ಲ 3 ಎಷ್ಟು ನಿನ್ನಗೆ ಬಡೆದಿದಮ್ಮಾ ನಿನ್ನ ಖೊಟ್ಟಿ ಕಡೆಯಿಲ್ಲಮ್ಮ ಉಟ್ಟ ಸೀರೆಯ ಬಿಡಿಸಿ ಕೊಂಡೊಯ್ದು ನಿನ್ನ ಸುಟ್ಟು ಸುರೆಹೊಯ್ವಾಗ ಆಟ ನೋಡಮ್ಮ 4 ಭಿನ್ನ ಭೇದಗಳನ್ನು ಕಡಿ ನಿನ್ನ ಒಡಲೊಳು ತಿಳಕೊಂಡುನೋಡಿ ಧನ್ಯ ಶ್ರೀರಾಮನ ಉನ್ನತ ಚರಣ ಇನ್ನಾದರು ಮನಮುಟ್ಟಿ ನೆನೆಕಂಡ್ಯ ಖೋಡಿ 5
--------------
ರಾಮದಾಸರು
ಓಹೊ ಎನ ಜೀವ ಮೈಯೆಲ್ಲ ನವಗಾಯ ಪ ಗಾಯ ಕಟ್ಟುವರಿಲ್ಲ ಗಾಳಿ ಹಾಕುವರಿಲ್ಲ ಅ ಮಾಡಿಲ್ಲ ಮಳೆಯಿಲ್ಲ ಮರದ ಮ್ಯಾಲೆ ನೀರ ಕಂಡೆಕಾಡು ಸುಡುವುದ ಕಂಡೆ ಬೂದಿಯ ಕಾಣಲಿಲ್ಲ 1 ಬಿತ್ತಲಿಲ್ಲ ಬೆಳೆಯಲಿಲ್ಲ ನೆಟ್ಟು ನೀರ ತೋರಲಿಲ್ಲಹೊತ್ತುಕೊಂಡು ತಿರುಗಿದೆ ರೊಕ್ಕದಾ ಪ್ರಾಣಿಯನ್ನು 2 ಅಡಿಕೆಯಷ್ಟು ಆಕಳಣ್ಣ ಹಿಡಿಕೆಯಷ್ಟು ಕೆಚ್ಚಲಣ್ಣಒಡನೆ ಕರೆದಾರ ಕರಿತೈತಿ ರಂಜಣಿಗಿ ಹಾಲಣ್ಣ 3 ಮೂರು ಮೊಳದಾ ಬಳ್ಳಿಗೆ ಆರು ಮೊಳದ ಕಾಯಣ್ಣಆರು ಹತ್ತರ ಮೊಳದ, ಕಾಯಿ ಕೊಯ್ಯುವ ಕುಡುಗೋಲಣ್ಣ 4 ಊರ ಮುಂದೆ ಹಿರಣ್ಯಕನ ಕೊರಳ ಕೊಯ್ವುದ ಕಂಡೆಕೊರಳ ಕೊಯ್ವುದ ಕಂಡೆ ರಕುತವ ಕಾಣಲಿಲ್ಲ 5 ಕಾಗಿನೆಲೆಯ ಕನಕದಾಸ ಹೇಳಿದಂಥ ಮುಂಡಿಗೆಯಮಿಗೆ ಒಳ ಹೊರಗೆಲ್ಲ ಬಲ್ಲ ಬಾಡದಾದಿ ಕೇಶವರಾಯ 6
--------------
ಕನಕದಾಸ