ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಂಗಿ ಕೇಳೆ ಅತಿಕೌತುಕ ಒಂದು ಸುದ್ಧಿಯ ಸಿಂಗನ ಮೋರೆ ಮಗುವು ಪುಟ್ಟಿ ಮಾಡಿದಾ ಚರ್ಯ ಪ. ತಂದೆ ತಾಯಿಗಳಿಲ್ಲಾದ್ಹಾಂಗೆ ಕಂದ ಪುಟ್ಟಿತು ಬಂಧು ಎತ್ತು ಕೊಂಬೇನೆಂದರೆ ಗುಡು ಗುಡುಗುಟ್ಟಿತೂ ಅಂದ ಛಂದವ ನೋಡೇನೆಂದರೆ ಘೊರಾಕೃತಿಯಾಯ್ತು ತಂದ ತೊಟ್ಟಿಲೊಳಿಟ್ಟೀನೆಂದರೆ ಹೊಸಲೊಳ್ ಕೂತೀತು 1 ತೊಡೆಯಲ್ಲಿಟ್ಟು ತಟ್ಟೀನೆಂದರೆ ಕಿಡಿ ಕಿಡಿ ಉಗುಳೀತು ಕಡುಪಾಪಿ ರಕ್ಕಸನ ತನ್ನ ತೊಡೆಯಲ್ಲಿಟ್ಟಿತೂ ಕಡು ಕೋಪದಿಂದಾಲಿ ಅವನ ಒಡಲ ಬಗೆದಿತು. ಎಡಬಲಕೊಬ್ಬರು ಬರದಂತೆ ಆರ್ಭಟಿಸುತಲಿದ್ದಿತು 2 ರುಧಿರ ಪಾನವ ಮಾಡಿತು ಮಾಲೆ ಹಾಕಿ ಮುದ್ದಿಪನೆನೆ ಕರುಳ್ಮಾಲೆ ಹಾಕೀತು ಮೇಲೆ ಕೇಶ ಕಟ್ಟೀನೆಂದರೆ ಕೆದರಿಕೊಂಡೀತೂ ಬಾಲಲೀಲೆ ನೋಡೇನೆಂದರೆ ಜಗವ ಬೆದರಿಸಿತು 3 ಸಿರಿಕಂಡೂ ಬೆರಗಾಗೆ ಮನವು ಕರಗದೆ ಕಲ್ಲಾಯ್ತು ತರಳನೊಬ್ಬನ ಕೂಡೆ ತಾನೂ ಆಟವನಾಡಿತು ಉರಿಮುಖ ಹುಬ್ಬೂ ಗಂಟೂ ಬಿಟ್ಟು ಕಿರುನಗೆ ನಕ್ಕೀತು 4 ಶ್ರೀಪತಿ ಎಂದು ತರಳನು ಪೊಗಳೇ ಸಿರಿಯ ಬೆರತೀತು ಆಪತ್ತನು ಪರಿಹರಿಪ ಲಕ್ಷ್ಮೀನರಹರಿ ಎನಿಸೀತು ದ್ವಾಪರದಲ್ಲಿ ಮತ್ತೆ ಪುಟ್ಟಿ ಮುದುವ ಬೇಡೀತು ಗೋಪಾಲಕೃಷ್ಣವಿಠ್ಠಲನೆನಿಸಿ ಗೋಪಿಯ ಮಗುವಾಯ್ತು 5
--------------
ಅಂಬಾಬಾಯಿ
ಪಾಲಿಸೆನ್ನನು ದೇವಾ ಪರಮ ಪುರುಷಾ ಶ್ವೇತ ವರಹಾ ಪ ಸ್ವಾಯಿಚ್ಛೆಯಲಿ ಬಂದು ಮೆರೆದು ಮಹಾಕೀರ್ತಿಯನು ಪಯೋನಿಧಿಸುತೆಯಿಂದ ತುತಿಸಿಕೊಳ್ಳುತಾ ಜಯಜಯದೇವನಾಶ್ರಯ ಕಾಮಧೇನು ನೀ ದಯಮಾಡಿ ನೋಡುವದು ದಾಸ ನೆನೆಸುವದು 1 ಪರಾಕು ಬೊಮ್ಮಾಂಡವನು ಹೊತ್ತು ನಸುನಗು ನಾಗಾರಿಗಮನಾ ಮಣಿ ಮಯದಾಭರಣದಿಂದೆಸೆವ ದೇ ವೋತ್ತಮನೆ ದಾನವರ ಬಲವಳಿದಾ ಧೈರ್ಯ 2 ನಿತ್ಯ ಪುಷ್ಕರಣಿಯಲಿ ನಿರುತ ಪೂಜೆಯಗೊಂಡು ಪ್ರತ್ಯಕ್ಷವಾಗಿ ವರಗಳನೀವುತ ಸಿರಿ ವಿಜಯವಿಠ್ಠಲ ವರಹ ಭೃತ್ಯನೆನೆಸಿ ನಿನ್ನ ಸ್ತೋತ್ಯದೊಳಗಿಡು ದೇವಾ3
--------------
ವಿಜಯದಾಸ
ಬರಬಾರದೇನೋ ಹರಿಯೇ | ಹೇ ದೊರೆಯೆ ಪ ಕರೆದು ಚೀರುತಲಿರೇ | ಮರೆಯಲಿಪ್ಪುದು ಥರವೇ ಅ.ಪ. ಅಕ್ಷಯ ಹಾಕೀ | ಭರದಿ ಸಲಹಿದೆ ಅಂದೂ1 ಸರಿ ಅಧಿಕರು ನಿನಗೇ | ನರ ಸುರರಲಿ ಯಾರೂಇರರು ಎಂಬುದ ತಿಳಿದು | ಗರುವ ಮಾಡುವಿ ಏನೊ 2 ಬಂಧು ನೀನಲ್ಲವೇನೋ | ಎಂದೆಂದಿಗೂ ನೀನುಇಂದು ಎನ್ನಯ ಕಣ್ಣಾ | ಮುಂದಕೆ ಬಂದು ನಿಲ್ಲೋ3 ದೇಹದಿ ಜೀವಾಂತರದೀ | ಬಹಿರಂತರದಿ ವ್ಯಾಪ್ತಮುಹುರ್ಮುಹು ಪ್ರಾರ್ಥಿಸುವೇ | ಮಹ ಮಹಿಮನೆ ಬಾರೊ 4 ಗುರು ಗೋವಿಂದ ವಿಠಲಾ | ಸುರ ಶತೃಗಳು ಪಟಳಾಹರಿಸೆನ್ನ ವಿದ್ಯಾಪಟಲಾ | ತೋರೋ ನಿನ್ನ ಮುಖ ಕಮಲಾ 5
--------------
ಗುರುಗೋವಿಂದವಿಠಲರು
ಲೀಲಾ ಮನೋಹರ ವಿಠಲ | ಪಾಲಿಸೊ ಇವಳಾ ಪ ನೀಲ ಮೇಘ ಶ್ಯಾಮ | ಕಾಳಿಂದಿ ರಮಣಾಅ.ಪ. ಆಪನ್ನ ಪಾಲಾ |ನಿನ್ನವಾಳೆಂದೆನುತ | ಮನ್ನಿಸೀ ತಪ್ಪುಗಳಘನ್ನ ಮಹಿಮನೆ ಕಾಯೊ | ಕಾರುಣ್ಯ ಮೂರ್ತೇ1 ಸತ್ಸಂಗದಲಿ ಇಟ್ಟು | ಸತ್ಸಾಧನೆಯಗೈಸಿಮತ್ಸರಾದ್ಸರಿಗಳನ | ಕತ್ತರಿಸಿ ಹಾಕೀಉತ್ಸಹದಿ ಸಂಸಾರ | ಯಾತ್ರೆಗಳ ಚರಿಸಯ್ಯಮತ್ಸ್ಯ ಮೂರುತಿ ಹರಿ | ಸತ್ಯವ್ರತ ಪಾಲಾ 2 ತರತಮಾತ್ಮಕ ಜ್ಞಾನ | ಸದನದಲಿ ತಿಳಿ ಪಡಿಸಿಹರಿ ಭಕ್ತಿ ವೈರಾಗ್ಯ | ಎರಡು ಅನುಸರಿಸೀ |ಬರುವಂತೆ ಗೈದು ಉ | ದ್ಧರಿಸೊ ಹರಿ ಇವಳನ್ನನರಹರೀ ಮಾಧವನೆ | ಪರಿಪೂರ್ಣ ಕಾಮಾ 3 ಕಾಮ ಜನಕನೆ ದೇವ | ಕಾಮಿನಿಯ ಮನ ಬಯಕೆಪ್ರೇಮದಲಿ ನೀನಿತ್ತು | ಭೂಮ ಗುಣಧಾಮಾ |ಈ ಮಹಾ ಕಲಿಯುಗದಿ | ನಾಮ ಸ್ಮರಣೆಯ ಸುಖವಾನೇಮದಲಿ ನೀನಿತ್ತು | ಪಾಮರಳ ಉದ್ಧರಿಸೋ 4 ಕೈವಲ್ಯ ಪದದಾತಭಾವುಕಳ ಪೊರೆಯೆಂದು | ಭಾವದಲಿ ಬೇಡ್ವೇ |ಭಾವ ಜನಯ್ಯ ಗುರು | ಗೋವಿಂದ ವಿಠ್ಠಲನೆಭಾವದಲಿ ನೀ ತೋರಿ | ಹರುಷವನೆ ಪಡಿಸೋ 5
--------------
ಗುರುಗೋವಿಂದವಿಠಲರು
ಭೀಮ ಶ್ಯಾಮ | ಕಾಮಿನಿಯಾದನೂ ಪಹೆಂಗಳೆ ನೂತನ ಶ್ರೀಂಗಾರವಾದನುಉಂಗುರಗೂದಲೊಳಿಂಗಿಸಿ ರಾಗಟಿ ||ಹಿಂಗೂವ ತೆರ ಕಳಿಂಗನ ವೇಣಿಗೆರಂಗನಿಕ್ಕಿದ ಚವುರಿಂಗೆ ಗೊಂಡೆಯೂ ||ತಿಂಗಳರ್ಧಾಫಣಿಮಂಗಾಳ ಕುಂಕುಮಕಂಗಳಿಗೆ ಕಪ್ಪು ಭಂಗಾರದೋಲಿಯು ||ಜಂಗು ಬ್ಯಾಳೀ ಸರ ಅಂಗಾಜ ಸತಿಯಭಂಗೀಪ ಚಲುವ ಅಂಗವಾದ 1ಏಕಾವಳಿಸರ ತೂಕದ ಸರಿಗೆ |ಲೋಕದೊಳಿಲ್ಲದ ಬೇಕಾದ ಭಾಪುರೆ ||ಹಾಕೀದ ಚಿತ್ರ ಕಂಚೂಕವ ಬಿಗಿದ-ನೇಕಪರಿವಸ್ತವೂ ಕರಕೇ ||ಆ ಕಂಠೀರವನ ಸೋಲಿಪ ಕಟಿಪಟ್ಟಿಸೋಕೆಯಿಳೀ ಸೀರಿ ಮೂಖ ಹರಿದ್ರ ನಾ- |ಸೀಕಾದಿ ಮೂಗುತಿಯು ಕಟ್ಟಿದಾ ಗಿಳಿಯಾಕಾನಾ ಬಾವುಲಿಯೂ ಕಿವಿಗೇ 2ಲುಲ್ಲುರುಳೀ ಪದದಲ್ಲಿ ಕಡಗಾವುಘಲ್ಲೆಂಬೊ ಗೆಜ್ಜಿಯ ಬಲ್ಲೀದ ಶಬ್ದವು ||ಎಲ್ಲೆಲ್ಲಿ ಜಗದೋಳಿಲ್ಲದ ಪರೀಯಪಿಲ್ಲ್ಯಾವನ್ನು ಬಟ್ಟಿನಲ್ಲಿಟ್ಟಾನೋ ||ಕೊಲ್ಲೂವೆನುವ ಆವಲ್ಲಿಹನೆನುತಹಲ್ಲು ತಿನುತಾಲಿಸೊಲ್ಲುಸೊಲ್ಲೀಗೆ ತಾ |ಕುಲ್ಲೂತ ಪಾತಕಿದ್ದಲ್ಲಿಗೆ ನಡೆದನಿಲ್ಲಾದೆದನುಜದಲ್ಲಾಣನೂ 3(ಈ ಪದವನ್ನು ದಾಸರಾಯರ ಕೃತ ಭೀಮಸೇನ ವಿಲಾಸದಿಂದ ಸಂಗ್ರಹಿಸಿದೆ.)
--------------
ಪ್ರಾಣೇಶದಾಸರು