ಒಟ್ಟು 9 ಕಡೆಗಳಲ್ಲಿ , 8 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕ್ಕ ಕೇಳೆ ನಿನ್ನ ತಪಸಿಯರೊಳಗೊಬ್ಬ ಮುಕ್ಕಣ್ಣಗೀವರಂತೆ | ವಿಗಡ ಮುನಿಯ ಮಾತಾ ಲೆಕ್ಕಿಸಿ ಮದುವೆಯ ಮಾಡಿಕೊಡುವನಂತೆ 1 ತಲೆಯೆಲ್ಲಾಜಡೆಯಂತೆ | ಅದರೋಳಗ ಜಲವಂತೆ | ತಿಲಕ ಪಣೆಗೆ ಬಾಲಚಂದ್ರನಂತೆ | ಹೊಳೆವ ಕಿಡಿಗಣ್ಣಂತೆ | ನಂಜುಗೊರಳನಂತೆ | ಸಲೆರುಂಡ ಮಾಲೆಯಾ | ಸರವ ಹಾಕಿಹನಂತೆ | 2 ಉರಗಾಭೂಷಣನಂತೆ | ಭಸ್ಮಲೇಪನನಂತೆ | ಕರಿಯ ಚರ್ಮಾರಂಬರದುಡಿಗೆಯಂತೆ | ನಿರುತ ಡಮರು ಬಾರಿಸುವ ಜೋಗಿಯಂತೆ 3 ಅಡವಿ ಗಿರಿಗಳಲಿ ಇಪ್ಪನಂತೆ | ಒಡನೆ ಪುಲಿದೊಗಲದ ಹಾಸಿಗೆ ಇಹುದಂತೆ | ನುಡಿಗೊಮ್ಮೆ ರಾಮ ರಾಮಾಯಂಬ ಸ್ಮರಣೆಯಂತೆ 4 ಆರೊ ಇಲ್ಲದ ಪರದೇಶಿಯಂತೆ | ಭವ |ತಾರಕ ಶಿವನೆಂದು ಮೊರೆಯ ಹೊಗಬೇಕಂತೆ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಅಳಬ್ಯಾಡೆಲವೊ ರಂಗಮ್ಮ ನಿನ್ನ ಇಳಿಯಾರ ನೋಡುತಿದೆ ಗುಮ್ಮ ಪ ಒದರಿದರೆ ಕೇಳೆಲೆವೊ ತಮ್ಮಾ | ಅದು ಅದರುತಿದೆ ಬೊಮ್ಮಾಂಡ ತಮ್ಮ ಬೆದರಿ ದಿವಿಜರು ತಮತಮ್ಮ | ನಿಜ ಸದನ ಬಿಡುತಿಹರು ನೋಡಮ್ಮ 1 ಬೆರಳುಗುರು ಗಾಯಗಳಿಂದ | ಆ ದುರುಳರನ್ನ ಜಠರ ತಳದಿಂದ ಕರುಳು ಮಾಲಿಕೆ ಕಿತ್ತಿ ತಂದ | ತನ್ನ ಕೊರಳಲಿ ಹಾಕಿಹ ಚಂದ2 ಏಸು ದೈತ್ಯರಾಸಿಗಳನು | ತಾನು ಮೋಸಗೊಳಿಸಿ ಕೊಲ್ಲುವನು ದಾಸನೆಂದರೆ ಕಾಮಧೇನು ಸುಮ್ಮಗಿ | ರುವ ವಾಸುದೇವವಿಟ್ಠಲ ನೀನು 3
--------------
ವ್ಯಾಸತತ್ವಜ್ಞದಾಸರು
ಏನೆಂದು ಪೇಳಲಿ ಹರಿಶರಣರ ನಿಜ ಆನಂದ ಸೌಭಾಗ್ಯದಲಂಕಾರ ಪ ಆನಂದ ಪರಮ ಆನಂದ ಹರಿಧ್ಯಾ ನಾನಂದ ಸಂಪದ ಶೃಂಗಾರ ಅ.ಪ ಮಾಧವನ ನಾಮಮಕುಟಿಟ್ಟಹ್ಯರು ಮಧು ಸೂದನನ ಭಕ್ತಿ ಕವಚ ತೊಟ್ಟಿಹ್ಯರು ಯಾದವನ ಜಪಮಾಲ್ಯ್ಹಾಕಿಹ್ಯರು ಯ ಶೋದ ಬಾಲನ ದಯ ಪಡೆದಿಹ್ಯರು 1 ಶ್ರೀಶನ ಧ್ಯಾಸಶಸ್ತ್ರ ಧರಿಸಿಹ್ಯರು ದೋಷ ರಾಶಿಪರ್ವತ ತರಿದೊಟ್ಟಿಹ್ಯರು ಪಾಶ ಜೈಸಿ ನಿರ್ಭೀತಾಗಿಹ್ಯರು 2 ಸರಕು ತುಂಬಿಹ್ಯರು ನರ ಹರಿ ಪ್ರೇಮ ನೌಕೆ ಏರಿಹ್ಯರು ವರದ ಶ್ರೀರಾಮಮಂತ್ರ ಪಠಿಸುವರು ಭವ ಶರಧಿ ಸುಲಭದಿಂದ ದಾಂಟುವರು 3
--------------
ರಾಮದಾಸರು
ಜಯ ಜಯ ಮಂಗಳಜಯ ಮಂಗಳ ಅಮರಾಧೀಶನಿಗೆ ಪ ಕಪ್ಪು ಗೊರಳನಿಗೆ ಕರುಣಾಸಮುದ್ರಗೆ ಕಾಮ ಸಂಹಾರ ಮಾಡಿದಗೆಮುಪ್ಪುರ ಗೆಲಿದಗೆ ಮೂಜಗದೊಡೆಯಗೆ ಮೂರನೆಯ ಗುಣದಾ ಮನೆಯವಗೆಒಪ್ಪುವ ದಶಭುಜ ತೋಳಲಿ ಡಮರುಗ ವಿಡಿದಿಹ ಪಾಶಾಂಕುಶಧರಗೆತಪ್ಪದೆ ಭಕ್ತರಿಗೊಲಿವಗೆ ಪಾಲಿಪ ಕರುಣಕೋಟಿ ಪ್ರಕಾಶನಿಗೆ 1 ಸುರನದಿ ಧರಿಸುತ ಮೆರೆದವಗೆಕೊರಳೊಳು ರುಂಡದ ಮಾಲೆಯ ಹಾಕಿಹಕೋಮಲ ಸ್ಫಟಿಕ ಪ್ರಕಾಶನಿಗೆಕರದಲಿ ಕಂಕಣ ಧರಿಸಿಹ ಮೂರ್ತಿಗೆ ಕಣ್ಣುರಿಭಾಳದಿ ರಂಜಿಪಗೆ 2 ದೇಶದಿ ಪೆಸರಾಗಿರುತಿಹ ಅಮರಾಧೀಶನು ಎನಿಪ ನಾಯಕಗೆಮಾಸದ ಮಂಜಿನ ಮಲೆಯೊಳು ನೆಲಸಿಯೆ ಆಸೆಯನೆಲ್ಲವ ಸಲಿಸುವಗೆಶ್ರೀಸಚ್ಚಿದಾನಂದಾವಧೂತ ದೊರೆ ಶಿರತಾರಕ ಅಮರೇಶನಿಗೆ 3
--------------
ಚಿದಾನಂದ ಅವಧೂತರು
ತನ್ನೊಳಗಿಹುದು ತನಗೆ ತಿಳಿಯದು | ತನ್ನಂಥ ಮಹಿಮಗೆತೋರುವದು | ಇನ್ನೊಬ್ಬ ಮೂಢಗೆ ತೋರಿಸೆನೆಂದರೆಸಕ್ಕರಿಯೊಳಗಿನ ಸವಿ ಇದ್ಧಾಂಗೆ | ಹಾಂಗೆ ನಿಜವಸ್ತು 1 ನೂಕದು ಪೀಕದು ದೇಹಕ್ಕೆ ತಾಕದು | ಏಕಾಗಿ ಇಹುದುಮಾತಾಡದು ಪ್ರಾಕೃತ ಜನರಿಗೆ | ಮುಸುಕು ಹಾಕಿಹುದು ಕಾಷ್ಠದ ಒಳಗಿನ ಅಗ್ನಿ ಇದ್ಧಾಂಗೆ | ಹಾಂಗೆ ನಿಜವಸ್ತು 2 ಕಣ್ಣಿಗೆ ತೋರದು ಬೈಲಾಗಿ ಹೋಗದು | ಕಣ್ಣಿಗೆ ಕಣ್ಣಾಗಿ ನಿಂತಿಹುದು | ಹೆಣ್ಣಿಗೆ ಗಂಡಿಗೆ ಕುಣಿಸ್ಯಾಡುತಿಹುದು | ಕುಸುಮದ ಒಳಗಿನ ಪರಿಮಳದ್ಹಾಂಗೆ | ಹಾಂಗೆ ನಿಜವಸ್ತು 3 ಕೆಳಗದ ಮೇಲದ ಎಡಕದ ಬಲಕದ ಹಿಂದದ ಮುಂದದ ಜಡವದ | ಒಳ ಹೊರಗೆ ತುಂಬೇದ ಬ್ರಹ್ಮಾಂಡ ಮೀರೇದ | ಚಂದ್ರನ ಒಳಗಿನ ಬೆಳದಿಂಗಳ್ಹಾಂಗ ಹಾಂಗೆ ನಿಜವಸ್ತು 4 ನರಸಿಂಹ ಸದ್ಗುರು ರಾಮನ ದಯದಿಂದ ಪರವಸ್ತು ಎನಗೆ ಪ್ರಕಟಾಯಿತೊ ಪರರ ಮುಖದಿಂದಹೇಳುವದಲ್ಲ | ಪರವಸ್ತು ತಿಳಿದಂಥ ಯೋಗಿಯೆಬಲ್ಲಾ || ಹಾಂಗೆ ನಿಜವಸ್ತು 5
--------------
ನರಸಿಂಹ
ತೋರೆನಗೆ ಶ್ರೀ ಕೃಷ್ಣ ತೋಯಜಾಂಬಕ ನಿನ್ನ ಶ್ರೀ ರಮೇಶನೆ ನಾನಾ ಗುಣನಾಮ ಮಾಲೆ ಪ. ವಾರಿಜಾಂಬಕನೆ ಶ್ರೀ ಗುರುಗಳ ರಚಿಸುತಲಿ ಹಾರಹಾಕಿಹರೊ ನಿನಗೆ ಹರಿಯೆ ಅ.ಪ. ಮೋಹನವಿಠ್ಠಲನೆಂಬಾ ಒದ್ದು ತಾಪತ್ರಯವನು ತಿದ್ದಿ ತಿಳಿಸುತಲಿ ಜ್ಞಾನ ಕರ್ಮ ತಿದ್ದಿ ತಿಳಿಸಿದ ಗುರುಗಳು ಇವರು 1 ಇಂದಿರಾಪತಿ ರಂಗನಾಥ ರಘುರಾಮ ಇಂದಿರೇಶ ದಯಾಪೂರ್ಣ ಸೀತಾಪತೇ ವೇದೇಶ ಯಾದವೇಂದ್ರ ಸ್ವಾಮಿ 2 ಇಂದಿರಾರಮಣ ಜಯ ಗೋಪಾಲನೆ ವರದೇಶ ಪ್ರಾಣನಾಥಾ ಪದ್ಮನಾಭ ಶ್ರೀನಾಥ ಜಗದೀಶನೆ ವರದ ಮೋಹನದೇವಾ 3 ಶ್ರೀಕಾಂತ ಪುರುಷೋತ್ತಮ ಪರಮಾನಂದ ಶ್ರೀ ಸುರೇಂದ್ರ ಕರುಣಾಕರ ವೆಂಕಟ ದಯಾಮಯನೆ ಭವತಾರಕ ಹರಿಯೆ 4 ವಸುದೇವ ಪಾರ್ಥಸಾರಥಿಯೆ ಪ್ರಾಣಪ್ರಿಯ ಪರಿಪೂರ್ಣ ಮಧ್ವವಲ್ಲಭಮುಕ್ತಿ ದಾಯಕ ಸತ್ಯೇಶನೆ ಪರಮಪಾವನ ರಮೇಶ ಕರುಣಾನಿಧೆ ಪುಂಡರೀಕಾಕ್ಷ ಸ್ವಾಮಿ 5 ಕಲ್ಯಾಣಗುಣಪೂರ್ಣ ಚಂದ್ರಹಾಸವರದ ಮಾಯಾಪತಿ ಉಪೇಂದ್ರ ಚಕ್ರಪಾಣಿ ಮುಕ್ತೇಶ ಬದರಿನಾಥಾ ಜಯಪ್ರದ ನಿರ್ಜರೇಶ ಜಾನಕೀಪತಿ ವಿಶ್ವನಾಥಾ ಸ್ವಾಮಿ 6 ಭುವನೇಶ ಗಜರಾಜವರದ ಜನಾರ್ಧನ ಮಧ್ವನಾಥ ಆನಂದ ಅರವಿಂದಾಕ್ಷ ಪುಂಡರೀಕವರದ ಶ್ರೀ ಕೃಷ್ಣಸ್ವಾಮಿ 7 ಮಾಧವ ಕಮಲಾನಾಥ ಕಮಲನಾಭ ಸದಮಲಾನಂದ ವೈಕುಂಠವಾಸ ಪದ್ಮೇಶ ಗುರು ಮಧ್ವೇಶ ಇಂದಿರಾಪತಿ ರಮೇಶ ಶ್ರೀಶÀ 8 ನಿಗಮ ಸಿರಿರಮಣ ಕಮಲಾಕಾಂತನೆ ಸರವ ಪೋಣಿಸಿ ಹಾಕುತ ಪರಮ ಪ್ರಿಯ ಶ್ರೀ ಗುರುಗಳು ಉಳಿದ ನಾಮಾ ಪೊರೆಯೋ 9
--------------
ಅಂಬಾಬಾಯಿ
ನಮ್ಮ ನಿಮ್ಮಗೊಂದಾದ ಮಾತು ಬ್ರಹ್ಮಾದಿಗಳು ಹೋದರು ಸೋತು ಒಮ್ಮನಾದರೆ ತಿಳಿವದಂತು 1 ಬಿಟ್ಟು ಕೊಡೊ ನಿನ್ನ ಬಾಜಿ ಗಂಟುಹಾಕಿಹೆ ಬಲು ಗಜಿಬಿಜಿ ಮುಟ್ಟಲಾರದು ಮೊನೆ ಸಣ್ಣ ಸೂಜಿ ಗುಟ್ಟು ಹೇಳೊ ಸದ್ಗುರು ದೇವಾಜಿ 2 ನಮ್ಮ ನಿಮ್ಮಳಗ್ಯಾಕೆ ತೊಡಕು ಇಮ್ಮನಾದರೆ ಹುಟ್ಟಿತು ಒಡಕು ಹಮ್ಮು ಎನ್ನೊಳಗಿಲ್ಲ ನೀ ಹುಡುಕು ಸುಮ್ಮನ್ಯಾಕಿದು ಶ್ರಮೆಯ ತಿಡುಕು 3 ಗುರು ಹೇಳಿದ ಮಾತಿಗೆ ಮುಟ್ಟಿ ತೋರಿ ಕೊಡಬೇಕು ನೀನೆ ಗಟ್ಟಿ ಅರಿತ ಮ್ಯಾಲೆ ಮಿಸುಕನು ತುಟ್ಟಿ ಖರೆ ಮಾಡಿಕೊ ಜಗಜಟ್ಟಿ 4 ಒಂದು ಮಾತು ಎಂಬುದು ಬಲ್ಲಿ ಸಂದ ಸಂದೇಹ್ಯಾರಿಸೊ ನೀ ಇಲ್ಲಿ ಕಂದ ಮಹಿಪತಿ ಮನದಲ್ಲಿ ಚಂದವಾಗಿರೊ ನೀನೆವೆ ಅಲ್ಲಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಮ್ಮಯ್ಯ ಗುರು ನಾ ನಿಮ್ಮ ಮನಿಯ ಶ್ವಾನ ಹೆಮ್ಮೆಯೆಂಬ ಹಲ್ಲು ಮುರಿದೆ ಪೂರ್ಣ ಸುಮ್ಮನಿರುವೆ ಕಂಡು ಸಂತತ ಚರಣ ಒಮ್ಮನದಿಂದೆ ತೃಪ್ತ್ಯಾಯಿತು ಜೀವನ 1 ಸದ್ಭೋಧದನ್ನ ನೀಡಲು ಓಡಿಬಂದೆ ಸದ್ಗುರುವೆ ಒಡೆಯ ನೀನಹುದೆಂದೆ ಬಿದ್ದುಕೊಂಡಿಹೆ ನಾ ನಿಮ್ಮ ಮನೆಯ ಮುಂದೆ ಬುದ್ಧಿವಂತರು ಬೆನ್ನಟ್ಟಿ ಹೋಗೆ ಹಿಂದೆ 2 ಹಳಿಯೆಂದರೆ ನಾ ಹೋಗೆ ಎಂದೆಂದಿಗೂ ಬಿಟ್ಟು ಗುಹ್ಯ ವಾಕ್ಯದ ಹೆಜ್ಜೆ ಮೆಟ್ಟು ಸುಳವುದೋರಲು ನಿಮ್ಮ ಸದ್ಗತಿ ಮುಕ್ತಿಯುಂಟು ತಿಳದ್ಹಾಕಿಹನಾ ನಿಮ್ಮ ಪಾದರಕ್ಷಕೆ ಗಂಟು 3 ಬಾಗಿಲಕಾಯಿಕೊಂಡು ಬಿದ್ದಿಹ್ಯ ನಿಮ್ಮ ಶ್ವಾನ ಹಗಲಿರುಳು ನಾ ನಿಮ್ಮ ಬೊಗುಳವೆ ನಿಜಗುಣ ಜಾಗಿಸುವದೆನ್ನೊಳು ನಮ್ಮಯ್ಯ ನಿಮ್ಮ ಖೂನ ಸುಗುಮದಿಂದ ದೊರೆಯಿತು ನಿಜ ಸ್ಥಾನ 4 ಹಿಡಿದು ಕಚ್ಚಿಹೆ ನಿಮ್ಮ ಪಾದರಕ್ಷ ಸಂಪೂರ್ಣ ಬಿಡೆ ಎಂದೆಂದು ನಾ ಹೋದರೆ ಜೀವ ಪ್ರಾಣ ಪಿಡಿದು ಮಾಡುವೆ ನಾ ಜತನ ಮೂಢ ಮಹಿಪತಿಗಿದೆ ಸುಖಸಾಧನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀ ಪ್ರಾಣೇಶದಾಸರ ಸಂಪ್ರದಾಯದ ಹಾಡುಗಳು240ಶ್ರೀದೇವರ ವಿವಾಹ ಮಹೋತ್ಸವದ ಪದಗಳುಏನು ನೋಡಿತ್ತ ನೀ ವರಕೆ ಮಗಳಾ |ಹೀನವಳಿತೆನ್ನದಲೆ ತ್ವರದಿ ಜಲನಿಧಿಯೂ ಪಕಪ್ಪು ರೂಪವು ಇವನ ನೆಲಿ ಒಬ್ಬರರಿಯರೂ |ಸರ್ಪಶಯನನು ತಿರಿದುಕೊಂಡು ತಿಂಬಾ ||ಮುಪ್ಪಿನವ ಇವ ಹುಟ್ಟಿದುದನಾರು ಬಲ್ಲವರು |ತಪ್ಪಿ ಕೊಟ್ಟನೆ ಎಲ್ಲರನುಜರಿದುಹೀಂಗೇ 1ಕದ್ದು ಪೊಟ್ಟೆಯ ಪೊರೆವ ಎಂಜಲೆನ್ನದೆ ತಿಂಬ |ಹದ್ದನೇರುವ ಅಡವಿಯೊಳು ಚರಿಸುವಾ ||ಬುದ್ಧಿಹೀನರ ತೆರದಿ ಹಡದವಳ ಶಿರ ಕಡಿದ |ಸದ್ಯ ವಸನವ ಕಳದು ಬತ್ತಲಿರುವವಗೇ 2ಹೇಸಿಕಿಲ್ಲದೆ ಕರಳ ಮಾಲಿಕಿಯ ಹಾಕಿಹನು |ದೋಷಕಂಜನು ಜಾರತನವ ಮಾಳ್ಪಾ ||ದಾಸನಂದದಿ ಬಲಿಯ ಮನಿಯ ಬಾಗಿಲ ಕಾಯ್ದ |ಆ ಸವ್ಯಸಾಚಿ ತೇರಿಗೆ ಸೂತನಾದವಗೆ 3ಹೆಣ್ಣುಗಳ ಅಂಬರವ ಕೊಂಡು ಮರನೇರುವನು |ತನ್ನ ಮಕ್ಕಳ ತಾನೆ ಹತಗೈಸುವಾ ||ಮಣ್ಣನೂ ಬೆಂಕಿಯನು ತಿಂಬ ವಾವಿಯನರಿಯ |ತನ್ನ ಪುತ್ರರಿಗೆ ತನ್ನಯ ಮಕ್ಕಳಿತ್ತವಗೆ 4ಪ್ರಾಣೇಶ ವಿಠಲನಲ್ಲಿಹವಿಂಥ ಸುಗುಣಗಳು |ತಾನೊಂದು ಪೂರ್ತಿ ತಿಳಿಯನು ಸಮುದ್ರಾ ||ಶ್ರೀ ನಾರಿಯನು ಕೊಟ್ಟ ಅವನ ಬುದ್ಧಿಯೊ ಅಥವ |ಏನು ವ್ರತ ಸೇವಿಸಿದ್ದಳೊಕಮಲಮಂದಿರಿಯು 5
--------------
ಪ್ರಾಣೇಶದಾಸರು