ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಣದೇವರ ಸ್ತೋತ್ರ ನೋಡಿದ್ಯಾ ಸೀತಮ್ಮ ನೀ ನೋಡಿದ್ಯಾ || ಪ || ನೋಡಿದ್ಯಾ ಹನುಮನಾರ್ಭಟವ - ಹಾಳುಮಾಡಿದ ಕ್ಷಣದಲಿ ವನವಾ ||ಆಹಾ|| ಝಾಡಿಸಿ ಕಿತ್ತು ಈಡ್ಯಾಡಿ ವೃಕ್ಷಂಗಳ ಕೊಂ-ಡಾಡುವ ನಿನ್ನಯ ಕೋಡಗನ್ಹರುಷವಾ || ಅ.ಪ. || ಮಾತೆ ನಿನ್ನಾಜ್ಞೆಯ ಕೊಂಡು - ಆರಭೀತಿಯಿಲ್ಲದೆ ಫಲ ಉಂಡು -ದೈತ್ಯದೂತ ಬರಲು ಭಾರಿ ಹಿಂಡೂ||ಆಹಾ||ವಾತ ಜಾತ ಬಂದ ಪಾತಕಿಗಳನೆಲ್ಲತಾ ವಕದಿ ಕೊಂದು ಭೂತಳಕ್ಹಾಕಿದಾ 1 ಸೊಕ್ಕಿ ರಾವಣನೆಂಬ ಗಂಡ - ಮಹ ಲಕುಮಿಯನೆ ಕರಕೊಂಡ - ರಾಮ ರಕ್ಕಸಾಂತಕ ಆಕೆ ಗಂಡ - ಕಪಿ-ಗಿಕ್ಕಿರೆಂದ ಯಮದಂಡ ||ಆಹಾ||ಮಿಕ್ಕ ಖಳರು ಕೂಡಿ ಲೆಕ್ಕಿಸಿ ಮಾತಾಡಿಸಿಕ್ಕರೆ ಬಿಡನೆಂದು ದಿಕ್ಕು ಪಾಲಾದ 2 ಎಷ್ಟೇಳ್ಹಲವನ ಪ್ರತಾಪ - ನೋಡುಸುಟ್ಟನೆಂಬ ಲಂಕಾ ದ್ವೀಪ - ಎಂಥಗಟ್ಟಿಗ ನೋಡೆ ನಮ್ಮಪ್ಪ ||ಆಹಾ||ಸೃಷ್ಟೀಶ ಕೇಶವ ವಿಠ್ಠಲರಾಯನ ಮುಟ್ಟಿ ಭಜಿಸಲಜ ಪಟ್ಟಾಳೆನೆಂದ್ಹೋದಾ
--------------
ಕೇಶವವಿಠ್ಠಲರು
ಬಾರೋ ಬಾಲಾ ಬಾ ಅಪ್ಪುವೆ ತಾರೋ ತೋಳನು ತಾಭೂರಿ ದೃಷ್ಟಿಯ ಮಾಲಿಯನ್ಹಾಕಿದಾಪಾರ ಮಹಿಮ ಬಾ ಪ ಐದು ವರುಷ ಬಾ ಎನಗೆ ಬೋಧವ ನೀಡಿದಿ ಬಾಸಾಧು ಸೇವಿತ ಶ್ರೀಧರ ಭೂಧರ ಗೋಧರಧರನೇ ಬಾ 1 ಗೌರ ಮುಖನೆ ಬಾ ಕರುಣಾವಾರಿ ನಿಧಿಯೇ ಬಾಆರ ಮಾತನು ಹಚಿಕೋ ಬ್ಯಾಡೆಲೆ ಸಾರಿದ ಕೃಷ್ಣ 2 ಗೋಪಿ ಬಂಧನ ಹರಣಾ ಬಾಮುಂದೆ ನಿಲ್ಲುತ ಮಾತುಗಳಾಡಿಸಿ ಇಂದಿರೇಶ ಬಾ 3
--------------
ಇಂದಿರೇಶರು
ಶ್ರೀ ಸತ್ಯಪರಾಯಣರು ನೋಡು ಮನವೆ ಸತ್ಯಪರಾಯಣರ ಪದಗಳ ಬೇಡು ಬೇಡು ಬೇಡಿದಿಷ್ಟವೀವ ಯತಿಗಳ ಪ ಮಾರುತಿಯ ಬಲದಿ ದಕ್ಷಿಣ ದೇಶವ ಜೈಸಿದಾ ಸಾರಸಚ್ಛಾಸ್ತ್ರವನ್ನು ಸ್ಥಿರವಗೊಳಿಸಿದಾ ನಾರಾಯಣನ ಜಗತ್ಕಾರಣನೆನಿಸಿದಾ ಧೀರ ಸತ್ಯಸಂತುಷ್ಟ ಕುವರನೆನಿಸಿದಾ 1 ಭೀಮಸೇನ ಸನ್ಮತ ಸರಿಯಾಗಿ ನಡಿಸಿದಾ ಪ್ರೇಮದಿಂದ ರಘುಜಿಗೆ ವನಮಾಲೆ ಮುಡಿಸಿದಾ ತಾಮಸ ಮತದವರ ಮತವ ಮುರಿದು ಹಾಕಿದಾ ರಾಮನ್ನಾಮ ನುಡಿಸಿ ನುಡಿಸಿ ಹರುಷಬಡಿಸಿದಾ2 ವರ ಕದರುಂಡಲಗೀಶನ್ನೊಡೆಯ ರಾಮನ್ನ ನಿರುಪಮಾನಂದ ತೀರ್ಥ ಸುಪ್ರೇಮನ್ನ ಕರುಣದಿಂದ ಶಿಷ್ಯನಾಗಿ ಸಂದೋಹಪಾಲನ್ನ ಸ್ಮರನ ಜನಕಾ ಪಾಂಡುರಂಗನ ಸ್ಮರಿಪ ಲೋಲನ್ನ 3
--------------
ಕದರುಂಡಲಗೀಶರು
ಸಾರಿಗೆಯ ಮಾಡೋಣ ಸಜ್ಜನರು ಬನ್ನಿರೋನಾರಾಯಣನ ದಿವ್ಯನಾಮ ಭಾರಿ ಕೊಂಬ ಬನ್ನಿರೋ ಪ.ಹೃದಯವೆಂಬ ಚೀಲದೊಳಗೆ ಹರಿಯ ನಾಮ ಹೊನ್ನಹಾಕಿತುದಿ ನಾಲಿಗೆಯಿಂದ ತೆಗದು ವೆಚ್ಚವನ್ನು ಮಾಡಿರೊ 1ಙ್ಞÕನವೆಂಬ ಎತ್ತಿನಲ್ಲಿ ಕರುಣವೆಂಬ ಗೋಣಿಹಾಕಿದಾನ - ಧರ್ಮವೆಂಬ ದವಸ ಸರಕುಗಳ ತುಂಬಿರೊ 2ನೇಮ - ನಿತ್ಯವೆಂಬ ಗಟ್ಟಿ ನಡುವಿನಲ್ಲಿ ಬಿಗಿದು ಸುತ್ತಿಪ್ರೇಮವೆಂಬ ಚೊಕ್ಕ ಬುತ್ತಿ ಸೆರಗಿನಲ್ಲಿ ಕಟ್ಟಿರೋ 3ಕಾವಲಿಗರೈವರನ್ನು ಕಾಣದಂತೆ ಟಕ್ಕುದೋರಿಭಾವವೆಂಬ ಮಾರ್ಗದಲ್ಲಿ ಬೇಗ ಬೇಗ ಬನ್ನಿರೊ 4
--------------
ಪುರಂದರದಾಸರು