ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈಗುಂಟೋ ಆಗುಂಟೋ ಈ ದೇಹ ಏಗಬಲ್ಲರು ಯಾರು ಈ ಜಗದ ಗುಂಟ ಪ ನಾಲ್ಕು ದಿನ ಇರುವಾಗ ಚೆನ್ನಾಗಿ ಇರಬೇಕು ನಾಲ್ಕಾರು ಜನರಿಗೆ ಉಪಕಾರ ಮಾಡಬೇಕು ಬಾಲೆ ಸರಸತಿಗೆ ಪರಧನಕೆ ವಸ್ತುವಿಗೆ ಏಕೆ ಹಾಳು ಮನವನು ನಿಲಿಸಿ ಕೆಡಿಸಬೇಕು 1 ಹಾರುವ ಮನವನ್ನು ಕಟ್ಟಿ ಹಾಕಬೇಕು ಹಾರುವನ ಕಂಡರೆ ತಡೆಯಬೇಕು ಹಾರಲೇಕೆ ಪರರ ಒಡವೆ ಕಂಡೊಡನೆಯೆ ಬಾರಿಬಾರಿಗೆ ಬರಿದೆ ಕೆಣಕಲೇಕೆ 2 ವಿಚಾರಿಸಿಕೋ ದೇವ ಶಿಷ್ಟರ ಭಂಟ ಊರೊಳಗೆ ಉಚಾಯಿಸುತಿದ್ದಾರೆ ಐದಾರು ಮಂದಿ ಎಚ್ಚರಿಕೆ ಹಾಕುತ್ತ ಇದ್ದಾರೆ ದುಷ್ಟ ಮಂದಿ ಎಚ್ಚರಿಸೊ ಉದ್ಧರಿಸೊ ನೆಂಟ ಜಾಜಿಪುರೀಶ3
--------------
ನಾರಾಯಣಶರ್ಮರು
ಬೇಸಾಯ ಮಾಡಬೇಕು ಬೇಸಾಯ ಮಾಡಬೇಕು ಪ ಹೃದಯವೆಂಬ ಕ್ಷೇತ್ರದಲಿ ಬೇಸಾಯ ಮಾಡಬೇಕು ಅ.ಪ ಮಧ್ವಾಚಾರ್ಯರವರ ಗ್ರಂಥಗಳೆಂಬ ಸರೋವರ ತುಂಬಿಹುದು ಬುದ್ಧಿ ಜಲವ ವರಗುರುಗಳೆಂಬ ತೂಬಿನಲಿ ತರಲಿಬೇಕು ಶುದ್ಧ ಧರ್ಮದಾಚರಣೆಗಳೆಂಬ ನೇಗಿಲ ಪಿಡಿಬೇಕು ಪರಿ ನೆಲವನುಳಲಿಬೇಕು 1 ತತ್ವಜಲವು ಹರಿದೋಡದ ಪರಿಯಲಿ ತೆವರಿ ಹಾಕಬೇಕು ಸುತ್ತಲು ದುರ್ಜನ ನರಿಗಳ ತಡಿಯಲು ಬೇಲಿ ಹಾಕಬೇಕು ಉತ್ತಮ ರೀತಿಯ ಭಕುತಿ ಪೈರುಗಳ ನಾಟಿ ಮಾಡಬೇಕು ಮತ್ತೆ ಪೈರುಗಳು ಒಣಗದಂತೆ ಜಲವನು ಹಾಯಿಸುತಿರಬೇಕು 2 ಬೆಳೆಯುವ ವಿಷಯದ ಅನುಭವದಾಸೆಯ ಕಳೆಯು ಕೀಳಬೇಕು ಕೊಳೆವೆಯ ರೋಗಕೆ ಸಜ್ಜನ ಸಂಘದ ಔಷಧಿ ಕೊಡಬೇಕು ಕಲಿಪುರುಷನ ತಲೆಯೆಂಬ ಗೊಬ್ಬರವ ತುಳಿಯುತಲಿರಬೇಕು ಕುಳಿತೆಡೆಯಲಿ ವರಭಕುತ ಪ್ರಸನ್ನನು ಕೊಡುವ ಮುಕುತಿ ದವಸ 3
--------------
ವಿದ್ಯಾಪ್ರಸನ್ನತೀರ್ಥರು
ಮಗನೆಂದೆಂಬುವ ಇನ್ನು ಮತ್ತಾವನೊ ಜಗದೊಳಗೆ ನಿನ್ನ ವಿನಾ ಕಾಣೆಯೆಲ್ಲಿ ಪ ರಕ್ತ ಶುಕ್ಲ ಮಿಶ್ರವಾದ ಸಮ್ಮಂಧ ವಿಷ_ ಭುಕ್ತನಾಗಿದ್ದ ಸಂಸಾರದೊಳಗಾ ಸಕ್ತತನದಲಿ ಇಪ್ಪ ಎಂದಿಗೆಂದಿಗೆ ಇವನು ಮುಕ್ತಿ ಕೊಡುವನೇನೊ ಮುಂದೊಲಿದು ಕೊಂಡಾಡೆ1 ಪ್ರಕೃತಿ ಬದ್ಧನಾಗಿ ನಾನಾ ಜನುಮಗಳಲ್ಲಿ ವಿಕೃತಿಯ ಮಾಡುವ ಮದದಿಂದಲೀ ಸುಕೃತವನು ಮರೆದು ದೂರಾಗಿ ಸಂಚರಿಸುವ- ನುಕ್ರ ಮವಂದುಮಾಸ ಜನತೆ ಕ್ಯೆಡೆಯಿರದವ 2 ಪುತ್ರ ಉಳ್ಳರೆ ಅವಗೆ ಕಂಡಕಡೆ ತಿರುಗಿ ಉ- ನ್ಮತ್ತನಾಗಿ ಕೆಟ್ಟ ಗ್ರಾಸವನ್ನು ಹೊತ್ತಹೊತ್ತಿಗೆ ತಂದು ಹಾಕಬೇಕು ಸಾಕಿ ನಿತ್ಯದಲ್ಲಿ ಅವಗಾಗಿ ಕ್ಲೇಶಬಡಲಿ ಬೇಕು 3 ನಾಡೊಳಗೆ ನೀನೆ ಮಗನೆಂದವನ ಭಾಗ್ಯಕ್ಕೆ ಈಡುಗಾಣೆನು ಎಲ್ಲಿ ವಿಚಾರಿಸೆ ಕಾಡಿ ಬೇಡುವೆ ಮುನ್ನೆ ಪರಿಪರಿಬಾಧೆಬಡಿಸಿ ಕೂಡಿರುವೆ ಮುಕ್ತರೊಳು ಮುಕ್ತಿಗಳವಲ್ಲಿದೊ 4 ನಿನ್ನಂಥ ಮಗನ ಪಡದಮ್ಯಾಲೆ ಎನಗೆ ಅನ್ಯಚಿಂತೆಗಳಿಲ್ಲ ಚಿಂತಾಮಣೀ ಘನ್ನಮೂರುತಿ ನಮ್ಮ ವಿಜಯವಿಠ್ಠಲರೇಯ ಅನಂತಕಾಲಕ್ಕೆ ವಹಿಸುವ ದೇವ 5
--------------
ವಿಜಯದಾಸ