ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಸುಕೃತವ ಮಾಡಿ ಜನಿಸಿದಳೊ ಯಶೋದೆ ದೀನಪಾಲಕ ನಿನ್ನ ಮಗನೆಂದು ಮನದಣಿಯೆ ಸೇವಿಪೆಳೊ ಪ. ಅನುದಿನ ಜಪತಪಾನುಷ್ಠಾನದಿಂದಿರುತಾ ಪಾದ ಸೇವಿಪ ಮುನಿಗಳಿಗೆ ದೊರೆಯುವ ವನಜನಾಭನೆ ನಿನ್ನ ವನರುಹಾನನ ನೋಡಿ ದಿನದಿನದಿ ಸುಖಿಸುವ ಘನ ಪುಣ್ಯ ಗಳಿಸಿದಳೋ 1 ದುಷ್ಟರನು ಸಂಹರಿಸಿ ಮೈ ಎಷ್ಟು ನೋವೊ ಎಂದು ದಿಟ್ಟೆ ಬಿಸಿನೀರೆರೆಯುವಳೊ ಇಷ್ಟ ಮೂರುತಿ ನಿನ್ನ ಶ್ರೇಷ್ಠತರ ಆಭರಣ ದಿಟ್ಟ ಕೃಷ್ಣ ನಿನಗಿಟ್ಟು ನೋಡುವಳೊ 2 ಕಸ್ತೂರಿ ತಿಲಕವನು ಶಿಸ್ತಿನಲಿ ಶೃಂಗರಿಸಿ ಕಸ್ತೂರಿರಂಗ ಶ್ರೀ ಶ್ರೀನಿವಾಸ ನಿನ್ನೆತ್ತಿ ತೊಡೆಯಲ್ಲಿ ಸ್ವಸ್ಥದೊಳು ಮಲಗೆಂದು ಪೊಂಬಟ್ಟಲೊಳು ಕ್ಷೀರವನು ಹಸ್ತಿವರದನೆ ಕುಡಿಯೆಂದು ಜೋಗುಳವ ಪಾಡುವಳೊ 3
--------------
ಸರಸ್ವತಿ ಬಾಯಿ
ಮಂದರೋದ್ಧಾರಾನಂದನ ಕಂದ ಬಾ ಬೇಗಾ ನಿನ್ನ ಸುಂದರಾನನಾನಂದದಿ ನೋಳ್ಪೆ ಬಾ ಬೇಗಾ ಪ. ಮದನ ಮೋಹನ ಚದುರ ಶ್ರೀ ಕೃಷ್ಣ ಬಾ ಬೇಗ ಸುದತಿಯೇರ ಮುದವಿಹಾರ ಮದಸೂದನ ಕೃಷ್ಣ ಅ.ಪ. ಕಸ್ತೂರಿತಿಲಕ ಶಿಸ್ತಲಿ ಪೊಳೆಯೆ ಬಾ ಬೇಗಾ, ನಿನ ಮಸ್ತಕದರಳೆಲೆ ಶಿಸ್ತನು ನೋಳ್ವೆ ಬಾ ಬೇಗಾ ಹಸ್ತದಿ ಕಡಗ ಕಂಕಣ ಶೋಭಾ ಬಾ ಬೇಗಾ ಶಿಸ್ತಿನಿಂದ ಕೊಳಲನೂದೆ ಹಸ್ತಿವರದನೆ 1 ಕೊರಳೊಳು ತುಲಸಿಮಾಲಾ ಶೋಭಾ ಬಾ ಬೇಗಾ ನಿನ ಮುಂಗುರುಳು ಕೂದಲೊಳು ಮೆರೆವ ಕಿರೀಟ ಬಾ ಬೇಗಾ ವೈಜಯಂತಿ ಮಾಲಾ ಶೋಭಾ ಬಾ ಬೇಗಾ ಸರಿಯಾರೊ ಜಗದಿ ನಿನಗೆ ವರ ಶ್ರೀ ಶ್ರೀನಿವಾಸ2
--------------
ಸರಸ್ವತಿ ಬಾಯಿ
ಮುದದಿ ನಂಬಿದೆನೊ ಹಯವದನನೆ ಪ. ಭಕ್ತರನ್ನು ಭವಸಮುದ್ರದಿಂದ ನೂಕೊಇತ್ತ ಒಂದು ತಿಳಿಯಧ್ಹಾಗೆ ಹೀಗೆ ಇರುವರೊ 1 ಮಾಯಪಾಶದೊಶಕೆ ಕೊಟ್ಟ ಮಾಯಕಾರನ ತೋಯಜಾಕ್ಷ ನಾನಿದಕುಪಾಯ ಕಾಣೆನೊ2 ಸತ್ಯಸಂಧÀನೆಂಬೊ ಬಿರುದು ಎತ್ತಹೋಯಿತೊ ಹಸ್ತಿವರದನೆಂಬೋ ಕೀರ್ತಿ ಸುತ್ತಮೆರೆಸಿತೊ 3 ಗೂಢತನದಿ ಗುಡಿಯ ಮಾಡದಲ್ಲಿ ಇರುವರೆನಾಡಜನರು ನಿನ್ನ ಆಡಿಕೊಳದೆ ಬಿಡುವರೆ4 ಸಿರಿಹಯವದನ ಶೈನ (ಎನ್ನ?) ಗುರು ಶಿರೋಮಣಿಧರೆಯೊಳರಸಿದೆನೊ ನಿನಗೆ ಸರಿಯು ನಾ ಕಾಣೆ 5
--------------
ವಾದಿರಾಜ