ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸೋ ಸ್ವಾಮಿ ನೀಪೂರ್ಣ ಸಾರಸದ್ಗತಿ ಭೂಷಣಾ ತಾರಿಸೋ ಯನ್ನ ನೀ ಪ್ರಾಣಾ ಶ್ರೀ ಹರಿ ಕಂಜಲೋಚನಾ 1 ಸ್ವಾಮಿ ನೀ ಸರ್ವ ಸಾಕ್ಷಾತಾ ಬ್ರಹ್ಮಾದಿದೇವ ವಂದಿತಾ ಮನೋಹರ ಪ್ರಖ್ಯಾತಾ ನೇಮ ನೀ ಕಾಮ ಪೂರಿತಾ 2 ಹಸ್ತಿಗೊಲಿದ ಸುದಾತಾ ವಸ್ತು ಶ್ರೀದೇವ ನಿಶ್ಚಿತಾ ನಿಸ್ತರಿಸುವಾ ಶ್ರೀನಾಥಾ ಕಸ್ತೂರಿರೇಖಾ ಶೋಭಿತಾ 3 ನೀನೆ ನಮಸ್ತ ಕಾಧಾರಾ ಶ್ರೀನಿಧಿ ಜ್ಞಾನ ಸಾಗರಾ ದೀನ ಜನರ ಮಂದಾರಾ ಪೂರ್ಣಾನಂದದಾಗರಾ 4 ಮಹಿಪತಿ ಸ್ವಾಮಿ ಶ್ರೀಪತಿ ಕಾಯೋ ನೀ ಲಕ್ಷ್ಮೀಪತಿ ಶ್ರೀ ಹರಿ ದಿವ್ಯಸುಮೂರ್ತಿ ದೋರೋ ನೀ ದಿವ್ಯಸಂಗತಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಂಗಳ ಮಂಗಳ ಜಯಮಂಗಳ ಶುಭಮಂಗಳ ಸುರಗುರು ಮೂರುತಿಗೆ ಸಹಸ್ರ ಮಂಗಳ ಶ್ರೀನಿಧಿ ಶ್ರೀಪತಿಗೆ ಧ್ರುವ ವಿದುರವಂದಿತ ವಿಶ್ವಪಾಲಗ ಮಂಗಳ ಬುಧಜನ ಸಹಕಾರಗ ಮಂಗಳ ಯದುಕುಲೋತ್ತಮ ಶ್ರೀಧರಗ ಮಂಗಳ ಮದನಮೋಹನ ಮೂರುತಿಗೆ ಮಂಗಳ 1 ಕಸ್ತುರಿಯ ತಿಲಕ ಕಾರುಣ್ಯಗ ಮಂಗಳ ಮಸ್ತಕಲಿಹ್ಯ ಮಣಿಮುಗಟಗ ಮಂಗಳ ಕೌಸ್ತುಭಧರ ಭೂಷಣಗ ಮಂಗಳ ಹಸ್ತಿಗೊಲಿದು ಸುವಸ್ತುಗ ಮಂಗಳ 2 ಭಾಸ್ಕರಕೋಟಿ ಪ್ರಕಾಶಗ ಮಂಗಳ ಭಾಸುವ ಭಾವಭೋಕ್ತಗ ಮಂಗಳ ವಾಸವಾಗಿ ಹ್ಯ ಸದೋದಿತಗ ಮಂಗಳ ದಾಸ ಮಹಿಪತಿ ಸ್ವಾಮಿಗ ಮಂಗಳ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀನೆ ದಯಾಸಂಪನ್ನನೊ - ಕಾವೇರಿ ರಂಗನೀನೆ ಬ್ರಹ್ಮಾದಿವಂದ್ಯನೊ ಪಬಂಧುಗಳೆಲ್ಲರ ಮುಂದಾ ದ್ರುಪದನನಂದನೆಯೆಳತಂದು ಸೀರೆಯ ಸೆಳೆಯಲು ||ನೊಂದು ಕೃಷ್ಣ ಸಲಹೆಂದರೆಅಕ್ಷಯಕುಂದದಲಿತ್ತ ಮುಕುಂದನು ನೀನೇ 1ನಿಂದಿತ ಕರ್ಮಗಳೊಂದು ಬಿಡದೆ ಬೇ-ಕೆಂದು ಮಾಡಿದನಂದಜಮಿಳನು ||ಕಂದಗೆ ನಾರಗನೆಂದರೆ ಮುಕುತಿಯಕುಂದದಲಿತ್ತ ಮುಕುಂದನು ನೀನೇ 2ಮತ್ತಗಜವನೆಗಳೊತ್ತಿ ಪಿಡಿಯೆ ಬಲುಒತ್ತಿ ರಭಸದಿ ಬಿತ್ತರಿಸಲುಗುಣ||ಭೃತ್ಯವರದ ಶ್ರೀ ಪುರಂದರವಿಠಲಹಸ್ತಿಗೊಲಿದ ಪರವಸ್ತುವು ನೀನೇ 3
--------------
ಪುರಂದರದಾಸರು