ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನರಹರಿ ದೀನದಯಾಳೊ ನರಹರಿ ಪ ನರಹರಿ ಕಾಯೊ ನೀಯೆನ್ನ | ಮಹಾ ದುರಿತಂಗಳ ಮರಿಯೊ ಮುನ್ನ | ಆಹ ಪರಮ ಭಕುತಿಲಿ ನಿನ್ನ ಚರಣಾರಾಧನೆ ಮಾಳ್ಪೆ ವರಭಯ ಹಸ್ತವೆನ್ನ ಸಿರದಲಿಡುತಲಿ ಅ.ಪ. ಹಿಂದೆ ಪ್ರಹ್ಲಾದದೇವನಂದು | ಪಿತನ ಬಂಧನದೊಳು ಸಿಲ್ಕಿ ಬಹುನೊಂದು | ತಾನು ಸಂಧ್ಯಾಕಾಲದೊಳಾಗ ನಿಂದು ನಿನ್ನ ಒಂದೇ ಮನದಿ ಸ್ತುತಿಸೆ ದಯಸಿಂಧು | ಆಹ ಮಂದಮತಿಯ ಹಿರಣ್ಯಕನುದರವ ಬಗೆದು ಛಂದದಿ ಕರುಳ ಮಾಲೆಯ ಧರಿಸಿದ ಧೀರ 1 ಕಂದು ಕೊರಳನಂತರ್ಗತದೇವ | ಸಕಲ ವೃಂದಾರಕ ವೃಂದವ ಕಾವ | ಭಕುತ ಸಂದಣಿಗೆ ಬೇಡಿದನೀವ | ಭವ ಬಂಧನವೆಂಬ ವಿಪಿನಕೆ ದಾವ | ಆಹ ಎಂದಿಗೆ ನಿನ್ನಯ ಸಂದರುಶನವೀವೆ ಮಂದಮತಿಯಾದೆನ್ನ ಮುಂದಕೆ ಕರೆಯೊ 2 ನೊಂದೆ ಸಂಸಾರದೊಳು ಮಾಲೋಲ | ಕರುಣ ದಿಂದ ನೋಡೆನ್ನ ದೀನಜನಪಾಲ | ದಿವ್ಯ ಸುಂದರ ಮೂರುತಿಯೆ ಗೋಪಾಲ | ಪವನ ವಂದಿತ ಶ್ರೀ ರಂಗೇಶವಿಠಲ | ಆಹ ಬಂದೆನ್ನ ಹೃದಯಮಂದಿರದಿ ನೆಲೆಯಾಗಿ ನೀ ನಿಂದು ಸಲಹೋ ಎನ್ನ ಕುಂದುಗಳೆಣಿಸದೆ 3
--------------
ರಂಗೇಶವಿಠಲದಾಸರು