ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೆಳೆತನ ಹಿಡಿದನೆ ಬಗಳೆಯ ಕೂಡೆಗೆಳೆತನ ಆರಿಗೂ ದೊರಕದತನಯ ಸತಿಯು ಧನವೆಂಬುದ ಸೇರದಜನನ ಮರಣಕೆ ಹೊರತಾದ ಪ ಎನ್ನ ಕಾಲು ಬಗಳೆ ಕಾಲಾಗಿಎನ್ನ ಹಸ್ತ ಬಗಳೆ ಹಸ್ತವಾಗಿಎನ್ನ ಬುಜ ಬಗಳೆ ಬುಜವಾಗಿಎನ್ನ ಕಣ್ಣೇ ಬಗಳೆ ಕಣ್ಣಾಗಿ 1 ಎನ್ನ ದೇಹವು ಬಗಳೆ ದೇಹವಾಗಿಎನ್ನ ಇಂದ್ರಿಯ ಬಗಳೆ ಇಂದ್ರಿಯವಾಗಿಎನ್ನ ಮನವು ಬಗಳೆ ಮನವಾಗಿಎನ್ನ ಜೀವ ಬಗಳೆ ಜೀವವಾಗಿ 2 ನಾನೇ ಬಗಳೆಯಾಗಿ ಬಗಳೆಯೇ ನಾನಾಗಿನಾನು ನೀನು ಎಂಬೆರಡುಳಿದುಜ್ಞಾನ ಚಿದಾನಂದ ಬ್ರಹ್ಮಾಸ್ತ್ರ ತಾನಾಗಿತಾನೇ ತಾನಾದ ಗೆಳೆತನವ 3
--------------
ಚಿದಾನಂದ ಅವಧೂತರು
ಗೋವಿಂದ ನಿನ್ನಾನಂದದಲ್ಲಿಡೋ ಗೋವಿಂದ ಪ ಗೋವಿಂದ ಹೃದಯಾರವಿಂದದಲ್ಲಿ ಇಂದೂ ಮುಂದೂ ಚರಣಾರವಿಂದ ತೋರೊ ಅ.ಪ ಬೆಟ್ಟದ ದರುಶನ ಲಾಭವು ಕಷ್ಟ ಪಟ್ಟರು ದೊರೆಯಲಸಾಧ್ಯವು ನೋಡೆ ಸುಟ್ಟು ಹೋಗುವುದಘರಾಶಿಯು ಪಟ್ಟ ಶ್ರಮವು ಇಷ್ಟಾರ್ಥವು ದಿಟ್ಟ ಮನವ ಕೊಟ್ಟು ಅಟ್ಟುರಿಯ ಕಳೆದು ಮೆಟ್ಟು ಮೆಟ್ಟಲನೇರಿ ದಿಟ್ಟಿಪರೋ ನಿನ್ನ1 ಪದುಮಜಾಂಡ ಕೋಟಿ ನಾಯಕ ದೇವ ಶ್ರೀದ ಸೃಷ್ಟಾದ್ಯಷ್ಟ ಕರ್ತೃ ನೀನೆ ಆದ್ಯಂತ ಜಗದಾಧಾರಕ ಅಂತರಾತ್ಮಕ ವಿಶ್ವವ್ಯಾಪಕ ಆದಿಮೂಲ ಚತುಷ್ಪಾದ ಎಂದೆನಿಸಿ ತ್ರಿ- ಪಾದ ಇಳೆಯೊಳಿಟ್ಟೆ 2 ಸದಮಲಾತ್ಮಕನೇ ದೇವ ಸರ್ವದಾ ಎಲ್ಲಾ ಹದಿನಾಲ್ಕು ಲೋಕವ ಧರಿಸಿದೆ ದಿವ್ಯ ನೆಲೆಸಿದೆ ಸರ್ವರ ಹೃದಯದ ಪದುಮದಲಿ ಪೊಳೆದು ತ್ರಿಜಗವಂದಿತನಾಗಿ ಮೇದಿನಿಯೊಳು ಮೆರೆಯುತಿಹೆ 3 ಧ್ವಜವಜ್ರಾಂಕುಶಯುಕ್ತಲಾಂಛನ ದೆÉೀವ ಅಬ್ಜಭವಾರಾಧ್ಯ ಚರಣದಿವ್ಯ- ಅಬ್ಜಸಖಕೋಟಿಕಿರಣ ಪಾದಾಭರಣದಿಂದ ಕಿರಣಾ ತಾ ಝಗಝಗಿಸುತ್ತ ನೂಪುರ ಕಾಲಂದಿಗೆ ಗೆಜ್ಜೆ ಸಜ್ಜುಗೊಂಡಿಹ ಮೂರ್ಜಗದೊಡೆಯನೆ ಹರಿ 4 ತಟಿತಕೋಟಿನಿಭಸಮಕಾಯ ಕಟಿಯ ದಿವ್ಯರತ್ನಖಚಿತದಟ್ಟಿಯಾ ತೊಟ್ಟ ಪಟ್ಟೆಪೀತಾಂಬರ ಬಟ್ಟೆಯಾ ಸೊಂಟಪಟ್ಟಿಯ ಇಟ್ಟ ಪರಿಯಾ ಅಟ್ಟಹಾಸದಿ ನಿಂದ ಸೃಷ್ಟಿಗೊಡೆಯ ಮನೋ- ಭೀಷ್ಟದಾಯಕ ಬೆಟ್ಟದೊಡೆಯನೆ 5 ಕರಚತುಷ್ಟಯದಲ್ಲಿ ಮೆರಯುವಾ ಶ್ರೀ ಸು- ದರ್ಶನ ಶಂಖದಿಂದಿರುವಾ ದೀನ ಶರಣಜನರಿಗಭಯ ಹಸ್ತವಾ ಕರೆದು ನೀಡುವ ಕಾಮಿತಾರ್ಥವ ಪರಿಪರಿ ಭಾಪುರಿ ಭುಜಗಾಭರಣಾದಿಗಳ ಧರಿಸಿರುತ ಭಕ್ತಜನರಘ ಹರಿಸುವಾ6 ವಕ್ಷಸ್ಥಳದಲ್ಲಿ ಶ್ರೀವತ್ಸವೂ ಕಂಠ ದಕ್ಷಿಣದಲ್ಲಿ ತೋರ ನಕ್ಷತ್ರದಂತಿಹ ಹಾರವೂ ಕುಕ್ಷಿ ಅಂದವೂ ಮೋಕ್ಷದಾತೃವು ಅಕ್ಷರ ವಾಚ್ಯತ್ರ್ಯಕ್ಷಾದಿ ಸುರವಂದ್ಯ ಈ ಕ್ಷಿತಿಗಿಳಿದು ಪ್ರತ್ಯಕ್ಷನಾಗಿ ನಿಂದೆ 7 ಮಂದಹಾಸಮುಖ ಅರವಿಂದ ದಂತ ಚಂದಕರ್ಣಕುಂಡಲದಿಂದ ಕೆಂದುಟಿಯಿಂದ ಒಪ್ಪುವ ಚೆಂದ ಪೊಂದಿ ಮಕುಟ ಸರ್ವಾಲಂಕಾರ ಪರಿಪೂರ್u ಬಂಧ ಮೋಚನ ಹರಿ ಶ್ರೀ ವೇಂಕಟೇಶನೆ 8 ಪರಿಪರಿ ಮುಕ್ತಜೀವರುಗಳು ಇಲ್ಲಿ ಪರಿವಾರ ತರುಲತೆ ಶಿಲೆಗಳು ಇನ್ನು ವಿರಜೆ ಮೊದಲಾದ ಸರ್ವತೀರ್ಥವು ಸ್ವಾಮಿ ತೀರ್ಥವೂ ಮೋಕ್ಷದಾತೃವೂ ಭವ ಶಕ್ರಾದಿನುತಉರಗಾದ್ರಿವಾಸವಿಠಲ ಜಗದೀಶನೆ 9
--------------
ಉರಗಾದ್ರಿವಾಸವಿಠಲದಾಸರು