ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನೊರತು ಇನ್ನಿಲ್ಲ ಹನುಮಾ ಜಯ ಭೀಮಾ ಗುರುಮಧ್ವರಾಯಾ ಪ ಅನ್ನವಸ್ತ್ರವ ಕೊಟ್ಟು ಅನ್ಯರಿಗೆ ಬೇಡಿಸದೆ ಅನುಗಾಲವೂ ಕಾಯೋ ಅನುಪಮ ಚಿಂತನ 1 ಬಂದ ಬಂದ ಕಂಟಕವನ್ನು ಬಂದು ಬಂದೂ ಬಯಲು ಮಾಡಿ ಎಂದೆಂದಿಗೂ ಕಾಯೋ ಸುಂದರ ಮೂರುತಿಯೇ 2 ಕದರೂರು ಹನುಮೇಶ ಹಸನ್ಮುಖವಿಠಲನ ಮುದದಿಂದಲಿ ಒಲಿಸಿದ ಚದುರ ಮೂರುತಿಯೆ 3
--------------
ಮಹಾನಿಥಿವಿಠಲ
ನೋಡೋ ಹನುಮ ನಂಬಿದೆ ಭೀಮಾ ವರಮಧ್ವರಾಯಾ ಪ ಆ ಲಂಕೆಯ ಬೆಂಕಿಗೆ ಆಹುತಿ ಇತ್ತ 1 ಹೃದಯವ ಹರಿಸಿದನವ ಮಾಡಿದ ಹದನವ ತೋರಿಸೋ ಬುಧಜನ ನಮಿತನೆ 2 ದ್ವಾಪರ ಯುಗದಲಿ ಪರಮಾತ್ಮನ ಪೂಜಿಸಿ ತೋರಿಸಿದಂಥ ಅಪಾರ ಮಹಿಮನೆ 3 ಕಲಿಯುಗದೊಳು ಮಹಾ ಖಳಮತಗಳನೆಲ್ಲಾ ನಿನ್ನ ಸರಳಿಗಳಿಂದೊರಿಸಿದೆ ಅಕಳಂಕ ಮಹಿಮನೆ 4 ತಂದೆ ಹಸನ್ಮುಖವಿಠಲನ ಚಂದದಿಂದಲಿ ಪಾಡುವ ಸುಂದರಮೂರುತಿಯೆ 5
--------------
ಮಹಾನಿಥಿವಿಠಲ