ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾವದೇವ ನಿನಗೆ ನಾ ಕೈಮುಗಿದು ಬೇಡ್ವೆ ಕಾಮಜಪಿತ ಎನ್ನ ಕಾಯಮೋಹ ಬಿಡಿಸೈ ಪ ಮಸಣಬುದ್ದಿಯ ಮರೆಸು ಪುಸಿನುಡಿಯ ಪರಿಹರಿಸು ವಸನ ಒಡವ್ಯೆಂದೆಂಬ ವ್ಯಸನ ಕಡೆಹಾಯ್ಸು ದಿಸೆಗೆಡಿಸಿ ಬಳಲಿಸುವ ಹಸಿವು ತೃಷೆಯನಡಗಿಸಿ ಹಸನಗೆಡಿಸುವ ಮಮ ರಸನೆರುಚಿ ಕೆಡಿಸು 1 ಅಳದ್ಹೋಗ್ವ ಇಳೆಸುಖದ ಹಲುಬಾಟವನೆ ಬಿಡಿಸು ಮಲಿನಸಂಸಾರಮಾಯ ಕಳವಳಿಕೆ ತಪ್ಪಿಸು ಸಲೆ ಸಾಧುಸಂತತಿಯ ಬಳಗದೊಳು ಕೂಡಿಸು ಹೊಳೆಯಮನಸಿನ ಸಕಲ ಚಲನೆ ದೂರೆನಿಸುತ 2 ದೋಷರಾಶಿಯ ತೊಡೆದು ಮೋಸಪಾಶವ ಕಡಿದು ಆಸೆ ನಾಶಗೈದು ನಿರ್ದೋಷನೆನಿಸಿ ಶ್ರೀಶ ಶ್ರೀರಾಮ ನಿಮ್ಮ ಸಾಸಿರ ನಾಮವೆನ್ನ ಧ್ಯಾಸದಲಿ ಸ್ಥಿರನಿಲಿಸಿ ಪೋಷಿಸನುದಿನದಿ3
--------------
ರಾಮದಾಸರು
ರಾಮ ಮಂತ್ರವ ಜಪಿಸೊ - ಏ ಮನುಜಾ ಶ್ರೀರಾಮ ಮಂತ್ರವ ಜಪಿಸೊ ಪಆ ಮಂತ್ರ ಈ ಮಂತ್ರ ನೆಚ್ಚಿ ಕೆಡಲು ಬೇಡಸೋಮಶೇಖರಗಿದು ಭಜಿಸಿ ಬಾಳುವ ಮಂತ್ರ ಅಪಕುಲಹೀನನಾದರೂ ಕೂಗಿ ಜಪಿಸುವ ಮಂತ್ರಛಲದಿ ಬೀದಿಯೊಳು ಉಚ್ಚರಿಪ ಮಂತ್ರ ||ಹಲವು ಪಾತಕಗಳ ಹಸನಗೆಡಿಸುವ ಮಂತ್ರಸುಲಭದಿಂದಲಿ ಸ್ವರ್ಗ ಸೂರೆಗೊಂಬುವ ಮಂತ್ರ 1ಸನುಮುನಿಗಳಿಗೆಲ್ಲ ಸುಲುಗೆಯಾಗಿಹ ಮಂತ್ರಮನುಮುನಿಗಳಿಗೆಲ್ಲ ಮೌನ ಮಂತ್ರ ||ಹೀನಗುಣಗಳೆಲ್ಲ ಹಿಂಗಿ ಹೋಗುವ ಮಂತ್ರಏನೆಂಬೆ ಧ್ರುವನಿಗೆ ಪಟ್ಟಗಟ್ಟಿದ ಮಂತ್ರ 2ಸಕಲ ವೇದಗಳಿಗೆ ಸಾರವಾಗಿಹ ಮಂತ್ರಮುಕುತಿ ಪಢಕೆ ಇದು ಮೂಲ ಮಂತ್ರ ||ಶಕುತ ಪರಕೆ ಇದು ಬಟ್ಟೆದೋರುವ ಮಂತ್ರಸುಖನಿಧಿ ಪುರಂದರವಿಠಲ ಮಹಾಮಂತ್ರ 3
--------------
ಪುರಂದರದಾಸರು