ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಿಳಿಯು ಪಂಜರದೊಳಿಲ್ಲ - ಶ್ರೀ ರಾಮ ರಾಮ |ಗಿಳಿಯು ಪಂಜರದೊಳಿಲ್ಲ ಪ.ಅಕ್ಕ ಕೇಳೆ ಎನ್ನ ಮಾತು ||ಚಿಕ್ಕದೊಂದು ಗಿಳಿಯ ಸಾಕಿದೆ ||ಅಕ್ಕ ನಾನಿಲ್ಲದ ವೇಳೆ |ಬೆಕ್ಕು ಕೊಂಡು ಹೋಯಿತಯ್ಯೋ 1ಅರ್ತಿಗೊಂದು ಗಿಳಿಯ ಸಾಕಿದೆ |ಮುತ್ತಿನ ಹಾರವನು ಹಾಕಿದೆ ||ಮುತ್ತಿನಂಥ ಗಿಳಿಯು ತಾನು |ಎತ್ತ ಹಾರಿ ಹೋಯಿತಯ್ಯೋ 2ಹಸಿರು ಬಣ್ಣದ ಗಿಳಿಯು |ಹಸಗುಂದಿ ಗಿಳಿಯು ತಾ |ಮೋಸ ಮಾಡಿ ಹೋಯಿತಯ್ಯೋ 3ಮುಪ್ಪಾಗದ ಬೆಣ್ಣೆಯ |ತಪ್ಪದೆ ಹಾಕಿದೆ ಹಾಲು ||ಒಪ್ಪದಿಂದ ಕುಡಿದು ತಾನು |ಗಪ್ಪನೆ ಹಾರಿ ಹೋಯಿತಯ್ಯೋ 4ಒಂಬತ್ತ ಬಾಗಿಲ ಮನೆಯು |ತುಂಬಿದ ಸಂರ್ದಶಿ ಇರಲು ||ಕಂಬ ಮುರಿದುಡಿಂಬ ಬಿದ್ದು |ಅಂಬರಕಡರಿ ಹೋಯಿತಯ್ಯೋ 5ರಾಮ ರಾಮ ಎಂಬ ಗಿಳಿಯು |ಕೋಮಲ ಕಾಯದ ಗಿಳಿಯು ||ಸಾಮಜಪೋಷಕ ತಾನು |ಪ್ರೇಮದಿ ಸಾಕಿದ ಗಿಳಿಯು 6ಅಂಗೈಯಲಾಡುವ ಗಿಳಿಯು |ಮುಂಗೈಯ ಮೇಲಿನ ಗಿಳಿಯು ||ರಂಗ ಪುರಂದರವಿಠಲನಂತ |ರಂಗದೊಳಿಹ ಗಿಳಿಯು 7
--------------
ಪುರಂದರದಾಸರು