ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಜ್ಞಾನಿ ನೀನೀಗ ಕೇಳು ಸುಜ್ಞಾನಿಗಳನು ನೀ ನಿಂದಿಸುವೆಭಗ್ನವಾಗುವೆ ನೀನು ಯಮನ ಕೈಯಿಂದಪ ವಿಷಯದೊಳಗೆ ಹುಟ್ಟಿ ಬೆಳೆದುವಿಷಯದೊಳಗೆ ಮುಳುಗಿ ತೇಲಿವಶವಲ್ಲದ ಮಾತುಗಳ ನುಡಿವೆ ನೀನು ಕೇಳೋ ಅಜ್ಞಾನಿ 1 ಅಸಮ ಗುಣಗಳ ನೋಡೆ ಋಷಿಗಳ ಅನುಭವಗಳನು ಹಳಿವೆದುಷ್ಮಾನ ನೀನು ಕೇಳೋ ಅಜ್ಞಾನಿ2 ಒಂದು ನಿನಗ್ಹೋಗಲಿಲ್ಲ ಒಂದು ನುಡಿನಯವಿಲ್ಲಇಂದು ಅನುಭವಿ ತಾನು ಎಂಬೆಯಲ್ಲೊ ಕೇಳೋ ಅಜ್ಞಾನಿ3 ಸುಂದರ ಸಾಕ್ಷಿಯ ನಲಿಯದೆ ನೀನೀಗಇಂದೀಗ ನಾನೆಂದು ಕಂಡೆಯಲ್ಲೋಚಂದ ಚಿದಾನಂದ ನೀನಾಗಿಹೆ ಕೇಳುಮಂದ ಮತಿಯ ಬಿಡು ನೀನು ಕೇಳೋ ಅಜ್ಞಾನಿ 4
--------------
ಚಿದಾನಂದ ಅವಧೂತರು
ತಾಮರಸ ನೆರೆ ನಂಬಿದೆ ಪ ಕಾಮಕ್ರೋಧವ ಕಳೆದು ನಿನ್ನ ನಾಮಾಮೃತವ ಪ್ರೇಮದಲಿ ಎನಗುಣಿಸೋ ಸ್ವಾಮಿ ಅ.ಪ. ಉಪರಾಗ ದಶಮಿ ದ್ವಾದಶಿ ದಿವಸ ಮೊದಲಾದ ಉಪೇಕ್ಷೆ ಮಾಡಿ ಕಳೆದೆ ಉಪಕಾರಯೆಂದು ನಿಜ ಉಕ್ತಿ ಪೇಳಿದರೆನಗೆ ಅಪಕಾರ ಕಾಣುತಿದೆಕೋ ನಿಪುಣನೆನಿಸುವೆನೆಂದು ಅಜ್ಞಾನಿಗಳ ಮುಂದೆ ತಪ ವೃದ್ಧರನ್ನು ಹಳಿವೆ ಸ್ವಪನದೊಳಗಾದರೊ ವೈರಾಗ್ಯ ಬಯಸದಲೆ ಕಪಟ ಮನುಜರೊಳಾಡಿ ನಿನ್ನ ಮರೆದೆ ಸ್ವಾಮೀ 1 ಮಾರನ ಉಪಟಳಾಕಾರದಲಿ ನಾ ಬಲು ಪೋರ ಬುದ್ಧಿಯನು ಮಾಡಿ ಆರು ಇಲ್ಲದ ಸಮಯದೊಳವಳು ಕಣ್ಣು ಸನ್ನೆಯ ಮಾಡಿ ಕೋರಿದ್ದು ಇತ್ತು ನೀಡಿ ಕ್ರೂರಮಾನವರೊಳಗೆ ಆಡಿ ವಾರಿಜನಾಭ ನಿನ್ನ ಆರಾಧನೆಯ ಮರೆದು ಧಾರಿಣೀ ಭಾರದೆ ಪರಲೋಕ ಮರೆದೆ 2 ಭೂಸುರರು ಚಂಡಾಲ ಜಾತಿಯೆನ್ನದೆ ಬಲು ಹೇಸಿಕಿಲ್ಲದೆ ತಿರುಗುವೆ ಪರಿ ವೇಷವನು ಧರಿಸಿ ಮೆರೆದೇ ಆಶೆಯುಳ್ಳ ಮಹಪಿಶಾಚಿಗೊಳಗಾಗಿ ಹರಿ ದಾಸ ಸಹವಾಸ ಜರೆದೆ ವಾಸುಕೀಶಯನ ವಸುದೇವತನಯನೆ ನಿನ್ನ ದಾಸನೆನ್ನಿಸದೆ ಅಪಹಾಸ ಮಾನವನಾದೆ 3 ಹರಿದಾಸರ ಬಳಿ ಅರಘಳಿಗೆ ಕೂತರೆ ಶಿರವ್ಯಾಧಿಯೆಂದೇಳುವೇ ದುರುಳ ದುರ್ವಾರ್ತೆಗಳ ಪೇಳಲು ಹಸಿವು ತೃಷೆ ಮರೆದು ಲಾಲಿಸಿ ಕೇಳುವೆ ತರುಣಿ ಮಕ್ಕಳು ಎನ್ನ ಪರಿಪರಿ ಬೈದರೆ ಪರಮ ಹರುಷವ ತಾಳುವೆ ಗುರುಹಿರಿಯರೊಂದುತ್ತರವನಾಡಲು ಕೇಳಿ ಧರಿಸಲಾರದೆ ನಾನು ಮತ್ಸರಿಪೆನವರೊಡನೇ 4 ನಾ ಮಾಡಿದಪರಾಧ ಎಣಿಸಿ ಬರೆದರೆ ಈ ಭೂಮಂಡಲವು ಸಾಲದಿಹುದೊ ಕ್ಷಮೆಯೊಳಗುಳ್ಳ ದುರ್ಮತಿ ಕೂಡಿಡಲು ಈ ಮತಿಯ ಅದು ಪೋಲದು ಹೋಮ ಜಪತಪಗಳನು ಎಷ್ಟು ಮಾಡಲು ಪಾಪ ಸ್ತೋಮ ಎಂದಿಗು ಪೋಗದೊ ಸಾಮಜವರದ ಜಗನ್ನಾಥ ವಿಠಲ ನಿನ್ನ ಕಾಣಿ 5
--------------
ಜಗನ್ನಾಥದಾಸರು
ನೀನೇಯೆಂದು ಮರೆ ಹೊಕ್ಕೆನೋ ರಂಗ |ದೀನ ಜನರ ಪಾಲಿಪ ದಯಾಸಾಗರ ಪಉತ್ತಮ ದ್ವಿಜರು ಮನೆಗೆ ಬರಲು |ಪ್ರತ್ಯುತ್ಥಾನವ ಕೊಡದಲೆ ಉ ||ನ್ಮತ್ತತನದಿ ಬಹು ಪಾಪವ ಗಳಿಸಿದೆ |ಚಿತ್ತಜಜನಕನೆ ದೋಷನಗ ಕುಲಿಶ 1ಪಾತ್ರರ ಸಂಗಡ ಕ್ಷೇತ್ರಗಳ |ಯಾತ್ರೆ ಚರಿಸದೆ ನಿರರ್ಥಕದಿ ||ಗಾತ್ರವ ಬೆಳಸಿದೆ ರುಕ್ಮಿಣೀವರನೆ ವಿ- |ಧಾತೃ ಕರಾರ್ಚಿತ ಕುಂದನೆಣಿಸದಿರು 2ಸ್ನಾನ ಸಂಧ್ಯಾವಂದನೆ ಬಿಟ್ಟು |ಜ್ಞಾನಿಗಳಾದವರನು ಹಳಿವೆನು ||ಧ್ಯಾನಿಪೆ ಸರ್ವದಾ ಪರರ ಕೇಡನು |ಏನೆಂಧೇಳಲಿ ಯನ್ನಯ ಅವಗುಣ 3ಮರೆತಾದರೂ ಹರಿಯೆಂದೊಮ್ಮೆ |ಸ್ಮರಿಸಿದವರ ದುರ್ಗುಣಗಳನು ||ಪೊರೆವನೆಂಬ ನಿನ ಬಿರುದುಕೇಳಿಪದ |ಸರಸಿಜಕೆರಗಿದೆ ಕರುಣಿಸೋ ಮಾಧವ 4ಪುಸಿಯಲ್ಲವೋ ಇದು ಅಜಾಮಿಳ |ಪೆಸರಾಗಿಹ ಪಾಪಿಷ್ಠರೊಳು ||ವಶ ಮೀರಿ ಸುತನ ಕರೆಯಲಾಕ್ಷಣ |ಪೋಷಿಸಿದೆ ತ್ವರದಿ ಶ್ರೀ ಪ್ರಾಣೇಶ ವಿಠ್ಠಲಾ 5
--------------
ಪ್ರಾಣೇಶದಾಸರು