ಒಟ್ಟು 5 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನಾಗಮವ ಹೀಗಾಯಿತೊ ದೇವ ಇನ್ನು ನೀ ಎನ್ನನು ಸಲಹುವ ಬಗೆಯಂತೊ ಪ ಸಕ್ಕರಿ ತಾಯೆಂದು ಸಂತಿಗೆ ಕಳುಹಲು ತಕ್ಕಡಿ ಲಶುನವ ತಂದ ತರಳನಂತೆ 1 ಪರಮ ನಿರ್ಮಲವಾದ ತುಲಸಿ ತಾಯೆನೆ ದುಷ್ಟ ತುರುಚಿಯನೆ ತಂದ ತರಳನಂತೆ 2 ಮಸಿಯ ಒರೆಸಿಕೊಂಡು ಬಾಯೆನ್ನೆ ಶಿಶು ತಾನೆ ಕೆಸರು ಪೂಸಿಕೊಂಡು ಬಂದ ತರಳನಂತೆ3 ಕಳುಹಿದಾ ಪಿರಿಯರು ಹಳಿಯಲಿ ಚಿಂತಿಲ್ಲ ಗೆಳೆಯಾರು ನಗುವ ಚಿಂತೆಯೆ ಘನವೆಲೊ ದೇವ4 ಆಪುತ ಪ್ರಿಯ ಬಂಧು ವ್ಯಾಪಕ ನೀನೆಂದು ಜ್ಞಾಪಕಗೊಳಿಸಿದೆ ವಾಸುದೇವವಿಠಲ 5
--------------
ವ್ಯಾಸತತ್ವಜ್ಞದಾಸರು
ಏನೆನ್ನುತ್ಹಳಿಯಲಿ ನಿನ್ನ | ನಾನಾವಿಧದಿ ಬೆಳಗುವ ಮಹಮಹಿಮನ ಪ ಸಾಗರ ನಿಲಯನೆಂದೆನಲೇ ನೀಗದ್ವೊಯ್ಕುಂಠ ಮೇಲು ಮಂದಿರನ ರಾಗದಿಂ ದ್ವಾರಕೆ ಪುರಮನೆಯವನೆನಲೇ ಯೋಗದಿಂದಣುರೇಣುತೃಣದಿ ವ್ಯಾಪಕನ 1 ಪನ್ನಂಗ ಹಾಸಿಗೆ ಮಾಡಿಹ್ಯನೆನಲೇ ಉನ್ನತ್ಹಾಸಿಗೆಯ ಮೇಲೆ ಮಲಗಿಕೊಳ್ವವನ ಭಿನ್ನವಿಲ್ಲದೆ ದರ್ಭೆಶಾಯಿಯೆಂದೆನಲೇನು ಚಿನ್ನಮಂಚದ ಮೇಲೆ ಲೋಲ್ಯಾಡುವವನ 2 ಹೊಟ್ಟಿಗ್ಹುಲ್ಲ ತಿಂದವನೆನಲೇ ಶಿಷ್ಟ ದಿವಿಜರಿಟ್ಟ ಮೃಷ್ಟಾನ್ನುಣ್ವವನ ಕೊಟ್ಟ ಹಣ್ಣಿನ ತೋಟ ಹಸಿದು ತಿಂದವನೆನೆ ಸೃಷ್ಟಿ ಈರೇಳಕ್ಕೆ ಅನ್ನ ಕೊಡುವವನ 3 ಅಸುಬಿಟ್ಟ ದಿಕ್ಕಿಲ್ಲದನೆನಲೇ ಅಸಮಲಬಲವುಳ್ಳಂಥ ಯಾದವಾರ್ಯನ ಕುಸುಮನಾಭಂಗೆ ಸಂಸಾರಿಯೆಂದೆನಲೇನು ಎಸೆವ ಪರವಸ್ತು ನಿರ್ಬಯಲು ನಿರ್ಮಯನ 4 ಅಳವಲ್ಲ ಎನಗೆ ನಿನ್ನ ವೊಲಿರೆ ದಿವ್ಯ ಮಹಿಮೆ ತಿಳಿಯುವ ತ್ರಾಣ ಒಲಿದು ಚರಣದಾಸರಾಳಾಗಾಳುವೆನೆಂದು ಇಳೆಯೊಳು ಸಾರುವೆ ನಳಿನಾಕ್ಷ ಶ್ರೀರಾಮ 5
--------------
ರಾಮದಾಸರು
ಧ್ರುವತಾಳ ಹಿಂದಿನ ಜನ್ಮಜನ್ಮಾಂತರದಿ ಮಾಡಿದಘವ ನಿವಾರಿಸುವರು ನಿನ್ನ ದಾಸರು ದುರಿತ ದುರ್ಜಯ ದುಃಖವ ದೂರ ಮಾಡುವರು ನಿನ್ನ ದಾಸರು ಮುಂದಣ ಅಪಾರ ಆನಂದ ಸುಖವ ಅನವರತ ಈವರು ನಿನ್ನ ದಾಸರು ಯೆಂದು ಇಲ್ಲದಿರೆ ಬ್ಯಾರೆಗತಿಯುಂಟೆ ನಿನ್ನನರಿವ ಬಗೆ ಮತ್ತುಂಟೆ ಎಲೆದೇವ ನಂದನಂದನ ನಿನ್ನವರೆ ಜೀವನ ಅಚಲಾನಂದವಿಠಲರೇಯ ಬ್ಯಾರೆಗತಿ ಮತ್ತುಂಟೆ 1 ಮಠ್ಯತಾಳ ಭೂತದಯಾಪರ ನರನಾಥ ದೇವತೆಯೆಂಬರು ಭೂತವಿರೋಧ ಮಾಡಿ ಕೈಯ್ಯಾತು ಬೇಡುವ ದೈವವ ಸಾತ್ವಿಕವೆಂದು ಬಗೆವರು ಜನರು ಈ ರೀತಿಯೇನೆಂಬೆ ಅಜಾತ ಸಕಲದೇವರ ದಾತನೆ ಅಚಲಾನಂದವಿಠಲ ನೀನಿರೆ ಸಾತ್ವಿಕವೆಂದು ಅನ್ಯದೈವವ ಈ ಭೂತಳದ ಜನರು ಬಗೆವರು ಪ್ರತಿದಿನ 2 ತ್ರಿಪುಟತಾಳ ಮಾನವನೆ ಕೇಳು ಕಬ್ಬಿಣ ಸೋಸಿ ಕಾಸಿ ಬಡಿಯಲು ತಾನು ಪರುಷ ಸೋಕದೆ ಸುವರ್ಣ ಅಪ್ಪುದೇ ಅನಾದಿ ಅವಿದ್ಯ ತಾಪದಿಂದ ಬೆಂದು ತಾನು ನೀರೊಳು ಮಿಂದರೇ ಹೋಹುದೇನೊ ಅನಾದಿದೈವ ಅಚಲಾನಂದವಿಠಲನ ಧ್ಯಾನಮಾಳ್ಪರ ಪಾದಪರುಷ ಸೋಕದನಕ 3 ಅಟ್ಟತಾಳ ಎನ್ನ ಹಳಿಯಲಿ ಉಗುಳಲಿ ಬಂಧುಗಳೆನ್ನ ಮನ ರಂಗ ನಿನ್ನನೆ ನೆಚ್ಚಿಹ್ಯದೆನ್ನಮನ ಕೃಷ್ಣ ನಿನ್ನನೆ ನಂಬಿಹ್ಯದೆನ್ನ ಮನ ಅಚಲಾನಂದವಿಠಲರೇಯ ನಿನ್ನವರೊಲುಮೆಯ ಸಾರಿತೆನ್ನ ಮನ 4 ಆದಿತಾಳ ಹಲವು ಮಾತೇನು ಹಲಧರನನುಜನ ಚೆಲುವಿಕೆಯನೆ ಕಂಡು ಮನಸೋತೆನವ್ವ ಕೆಲಬಲದಾ ಕುಲದವರೆನ್ನ ಹಳಿಯಲಿ ಚಲಿಸದು ಚಿತ್ತ ಚಂಚಲವಾಗದೆನ್ನ ಮನ ಕೆಲಚಿತಿ ವೆಂಣೆಲ್ಲ (?) ತಾನೊಲಿವಂತೆ ಮಾಡಿದ ನಿಲುಕುವನಚಲಾನಂದವಿಠಲರೇಯ ಕ್ಯಲಬಲದ ಕುಲದವರೆನ್ನ ಹಳಿಯಲಿ 5 ಜತೆ ಬೆಂದ ಸಂಸಾರದಿ ಬಂದು ಬಂದು ಹೋದೆನೊ
--------------
ಅಚಲಾನಂದದಾಸ