ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸರಾಯರಾ ಚರಣಕಮಲ ಭಜಿಸೋ |ದುರ್ವಿಷಯವ ತ್ಯಜಿಸೋ ||ಶ್ರೀಶ ಭಜಕ ಗುರು ಪ್ರಾಣೇಶದಾಸಾರ್ಯ |ಹರಿದಾಸ ವರ್ಯಾ ಪ ಸದ್ವೈಷ್ಣವ ಅಧ್ಯಕ್ಷರೆಂದೆನಿಪರೊ |ಕರ್ಮಠರೆನಿಪರೋ |ಮಧ್ವಮತ ಪ್ರವರ್ತಕರೆನಿಪರೋ |ಜ್ಞಾನಿಗಳೆನಿಪರೊ ||ಪದ್ಧತಿ ಪೂರ್ವಕ ಕವನವ ಪೇಳುವರೊ |ಹರಿ ಪರನೆಂಬುವರೊ |ಶುದ್ಧಾತ್ಮರಿಗತಿ ಪ್ರಿಯರೆಂದೆನಿಸುವರೋ |ಸತ್ಕಥಾಲಾಪರೋ 1 ಕಾಮಕ್ರೋಧ ಮದಮತ್ಸರವನು ಗೆಲಿದೂ |ತಾಮಸರನು ಹಳಿದೂ |ನೇಮದಿಂದ ಯಮನಿಯಮಗಳನು ವಹಿಸೀ |ಇಂದ್ರಿಯಗಳ ಜೈಸೀ |ತಾಮುದದಿಂದಲಿ ಹರಿಗುಣ ಕೀರ್ತನೆಯಾ |ಮಾಡುತ ನರ್ತನೆಯಾ ||ಪ್ರೇಮದಿಂದ ಮಾಡಿ ದೇಶದಲ್ಲಿ ಮೆರೆದಾ |ನಾಮ ಸುಧೆಯನ್ನೆರದಾ 2 ಏಸು ಪೇಳಲಿ ಇವರ ಚರಿತೆಯನ್ನು |ಆ ಪಾರವು ಇನ್ನೂ |ಸೋಸಿನೋಡಲು ಎನಗೆ ವಶವಲ್ಲಾ |ಇದು ಪುಸಿಯೂ ಅಲ್ಲಾ ||ಮೀಸಲ ಮನದಲಿ ತುತಿಸಲು ಸಂತಾಪಾ |ಪೋಪದು ನಿರ್ಲೇಪಾ |ಶ್ರೀಶ ಪ್ರಾಣೇಶ ವಿಠಲ ತಾ ಬಲ್ಲಾ |ವಲಿದಿಹನಲ್ಲಾ 3
--------------
ಶ್ರೀಶಪ್ರಾಣೇಶವಿಠಲರು
ಶ್ರೀಪತೀ-ಎನಗೇನು ಗತೀ ನನಗಾಗಲಿ ನಿನ್ನಲಿ ರತೀ ಪ ಚಪಲ ತನದಿ ಬಹು ಕಪಟಭಕುತಿನಟಿಸಿ ಗುಪಿತ ದೋಷಿಯು ಆದೆ ಅ.ಪ. ಬಟ್ಟೆ ನೋಡಲು ಬಹು ಛಂಧ-ಮೇಲೆ ಘಟ್ಟಿ ಬಣ್ಣದ ಕಾವಿ ಶಾಟಿ ಹಾಗೆ ಪಟ್ಟೆಮಡಿಗಳ ಭಾರೀ ಥಳಕೊ-ಬಹಳ ದಟ್ಟ ತುಳಸೀಸರಗಳ ಹೊಳಪೂ ಆಹಾ ಸೃಷ್ಠಿಗೊಡೆಯನೆ ಎನ್ನ ಕೆಟ್ಟ ತನಗಳನ್ನು ಎಷ್ಟೆಂದು ಬಣ್ಣಿಪೆ ನಿಟ್ಟ ನೆನೆಯದೆ ಪರರ ದೃಷ್ಟಿನೋಡುತ ಹಿಗ್ಗಿ ಅಟ್ಟಹಾಸದಿ ಕುಣಿದು ಮಾನವ ನನಗೇ 1 ವೇದ ವಾದಗಳೇನು ಕಾಣೆ-ಶುದ್ಧ ಸಾಧು ಕರ್ಮಗಳೊಂದು ಇಲ್ಲ-ಜನರ ಮೋದಗೋಸುಗವೇನೆ ಎಲ್ಲ_ಕಾಮ ಕ್ರೋಧವ ನಿಬಿಡಿತೇನೇ ಬಿಚ್ಚೆಹೃದಯಾ ಆಹಾ ಮಧ್ವರಾಯರ ಶಾಸ್ತ್ರ ಗ್ರಂಥ ಸಹ ತಿಳಿಯದೆಲೆ ಸಿದ್ಧ ಸಾಧಕನಂತೆ ಸಾಧುಲಿಂಗವ ತೋರಿ ಮುಗ್ಧಗೈಯ್ಯುತ ಮಂದಿ ಮೆದ್ದು ಪಕ್ವಾನ್ನಗಳ ಗೆದ್ದುಕೊಳ್ಳುವೆ ಬಹಳ ದಕ್ಷಿಣೆ ಬಹುಮಾನ 2 ನೇಮನಿಷ್ಠೆಗಳಾಟ ಹೊರಗೆ-ಗೃಹದಿ ಪ್ರೇಮವಿಲಾಸ ಆಟ ಕೂಟಜನ ಸ್ತೋಮರೆಲ್ಲವ ನುಡಿವ ನೀತಿ ಖ್ಯಾತಿ ಕಾಮುಕನಾಗಿ ಚರಿಸಿದೆ ಜಗದೀ ಆಹಾ ಹೇಮದಾಸೆಗೆ ಸೂಳೆ ಪ್ರೇಮವ ತೋರ್ಪಂತೆ ಕಾಮಿತಪ್ರದ ನಿನ್ನ ನಾಮ ಸವಿಯನುಣ್ಣದೆ ತಾಮಸರಿಗೆ ಉಪದೇಶ ನೀಡುತ ಸತ್ಯ- ಭಾಮೆಯರಸ ನಿನಗೆ ದೂರನಾದೆನಲ್ಲಾ 3 ಹಾಡಿಹಾಡುವೆ ಎತ್ತಿ ಸುತ್ತ ಜನರು ನೋಡಿ ಹಿಗ್ಗುತ ಬಾಪು ಬಾಪು ನುಡಿಗೆ ಹಾಡಿನಲ್ಲಿಹ ಸವಿಯುಣ್ಣ ದೇನೆ ಆಡಿ ಆಡಿಪೆ ಶಿರವ ಜ್ಞಾನಿಯಂತೆ ಆಹಾ ಕೇಡು ಚಿಂತಿಸಿ ಪರರ ಸ್ವಾರ್ಥಗೋಸುಗನಿತ್ಯ ಕಾಡಿ ಬೇಡುತ ಜನರ ದೂಡುತಿಹೆ ಸಂಸಾರ ಪ್ರೌಢ ಭಕ್ತರ ಗೋಷ್ಠಿಕೂಡಿ ಭಜಿಸದ ಎನ್ನ ಗಾಢ ಡಂಭಕೆ ಜಗದಿ ಈಡು ಕಾಣಿಸು ಸ್ವಾಮಿ4 ಭಾರಿ ಶಾಲುಗಳನ್ನೆ ಹೊದ್ದು-ನಿತ್ಯ ಕೇರಿಕೇರಿ ಪುರಾಣಗಳನ್ನು ಮೆದ್ದು-ಹಾರಿ ಹಾರುತ ತತ್ವರಾಶಿ ನುಡಿದು-ಊರು ಜ- ನರಮುಂದೆ ಪಾಂಡಿತ್ಯ ತೋರ್ಪೆ ಆಹಾ ತೋರಿ ತೋರುವೆ ಪರಮವೈರಾಗ್ಯ ಭಕ್ತಿಯ ದೂರಿ ದೂಡುವೆ ಪರರ ಹುಳುಕುಗಳನು ಎತ್ತಿ ಪಾರುಗಾಣದ ಕರುಣ ತೋರದಿದ್ದರೆ ಇನ್ನು 5 ಗುಡಿಗೆ ಹೋಗುವೆ ನಾನು-ನಿತ್ಯ ಅಲ್ಲಿ ಬೆಡಗು ಸ್ತ್ರೀಯರ ಹುಡುಕುವುದೇನೆ ಕೃತ್ಯ ದೃಢಭಕುತಿಯನು ಮಾಡಲೊಲ್ಲೆ ಸತ್ಯ-ನ ಮಡದಿ ಮಕ್ಕಳಿಗಿಲ್ಲ ಭೃತ್ಯಾನುಭೃತ್ಯಾ ಆಹಾ ಹುಡುಕೀ ನೋಡಿದಾಗ್ಯೂ ವಿರಕ್ತಿ ಭಕ್ತಿಗಳಿಲ್ಲ ಬಿಡಲು ಪೊರೆಯೆ ಪುರಾಣಶಾಸ್ತ್ರಗಳನ್ನು ನಿತ್ಯ ಎನ್ನ ಅನಾದಿ ನೀ ಕಲಿಸದಿದ್ದರೆ ಈಗ 6 ದೊಡ್ಡ ಪಂಡಿತ ನಾನೆಂಬ ಹೆಮ್ಮೆ-ಶುದ್ಧ ದಡ್ಡನೆಂಬುದ ಬಲ್ಲೆ ಮನದಿ-ಹಾಗೂ ಅಡ್ಡ ಬೀಳೆನು ಭಕ್ತ ಗಣಕೆ ಸುಳ್ಳು ವೊಡ್ಡುತವರನು ಹಳಿದೂ-ಕುದಿದೇ ಮನದೀ ಆಹಾ ದುಡ್ಡುಗೋಸುಗ ಬಹಳ ದೊಡ್ಡ ದಾಸನು ಎನಿಸೀ ಹೆಡ್ಡಮಂದಿಯ ಮುಂದೆ ದೊಡ್ಡ ಭಾಷಣ ಮಾಳ್ವೆ ಗುಡ್ಡದೊಡೆಯನೆ ಭಕ್ತಜಿಡ್ಡುಲೇಶವು ಕಾಣೆ ದೊಡ್ಡ ನಾಮವ ಹಾಕಿ ಸಡ್ಡೆ ಮಾಡದೆ ತಿರಿವ 7 ಕಚ್ಚಿ ಬಿಡದಿಹ ತುಚ್ಛ ಕಲಿಯು-ಬಹಳ ಮೆಚ್ಚಿ ಬಂದಿಹ ನವನು ಬಿಡುವನೇನು ಇಚ್ಛೆ ನನ್ನದು ನಡೆಯದೇ ನೊಂದು ತುಚ್ಛ ವಿಷಯದಿ ಸೆಳೆದು ಸೆಳೆಯುತಿಹನು ಆಹಾ ಇಚ್ಛೆಯಿಂದಲಿ ಜಗವ ಸೃಜಿಸಿ ಪಾಲಿಪಲೀಲೆ ಹಚ್ಚಿಕೊಂಡಿಹ ನಿನಗೆ ನನ್ನ ಪಾಲಿಪುದೇನು ಹೆಚ್ಚು ಕಾರ್ಯವೆ ಜೀಯ ಮುಚ್ಚಿಕೊಂಡಹ ನಿನ್ನ ಸ್ವಚ್ಛ ಬಿಂಬವ ತೊರಿ ಮೆಚ್ಚಿ ಕೊಡದಿರೆ ಜ್ಞಾನ 8 ಶ್ವಾಸಮತದಲಿ ಜನ್ಮ ವಿತ್ತೆ-ವಿಜಯ ದಾಸರ ಪ್ರಿಯ ಮೋಹನ್ನ ಪರಂಪರೆಯ ದಾಸನೆನಿಸಿ ಯೆನ್ನ ಮೆರೆಸಿ ಹೀಗೆ ದೋಷಿಗೈವುದು ಥರವೆ ಶ್ರೀಭಕ್ತಪ್ರಿಯ ಆಹಾ ವಾಸುದೇವನೆ ತುರ್ಯಲೇಸು ದೃಷ್ಟಿಯ ಬೀರೆ ನಾಶವಾಗದೆ ದೋಷ ಭಾಸವಾಗದೆ ಜ್ಞಾನ ಕಾಸುಬೀಡೆನು ಹಿರಿಯ ದಾಸರ ಗುಣ ನೋಡಿ ಲೇಸು ನೀಡೆಂತೆಂಬೆ ಶ್ರೀಕೃಷ್ಣವಿಠಲಾ9
--------------
ಕೃಷ್ಣವಿಠಲದಾಸರು