ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುಯ್ಯದ ಹಾಡುಗಳು ನೋಡೆ ಧರಣಿ ನಿನ್ನ ಬೀಗರೋಡಿ ಬರುವುದಾ ಕಾಡು ಜನರು ನಗುವ ರೀತಿ ಮಾಡಿ ಮೆರೆವುದಾ ಪ. ಸುತ್ತ ನಾಲ್ಕು ಮುಖದಿ ವೇದ ತತ್ವ ಪೇಳ್ವ ಹಂಸ ಪಕ್ಷಿ ಹತ್ತಿಕೊಂಡು ಬಂದ ಹಳಬ ಮುತ್ಯನೊಬ್ಬನು ಹಸ್ತದೊಳಗಕ್ಷಮಾಲೆಯೆತ್ತಿ ಮಣಿಗಳೆಣಿಸುವಗಿ ನ್ನೆತ್ತ ಪೂಜೆಯಿಲ್ಲವೆಂಬರತ್ಯಾಶ್ಚರ್ಯವರಿಯೆಯ 1 ಮತ್ತೊಬ್ಬನ ನೋಡೆ ಮುದಿಯೆತ್ತನೇರಿ ಬರುವನಿವನ ಜೊತೆಯಲಿರುವ ಭೂತಗಣವು ಸುತ್ತ ಮೆರೆವುದ ಬತ್ತಲಿದ್ದು ಭಸ್ಮ ಪೂಸಿ ಕೃತ್ತಿವಾಸನನಾದ ಫಾಲ ನೇತ್ರ ರುಂಡಮಾಲಶೂಲವೆತ್ತಿ ಕುಣಿವ ಮುತ್ಯತನವ 2 ಗರುವದಿಂದ ಗಜವನೇರಿ ಬರ್ವನ ನೋಡಮ್ಮ ಶತ ಪರ್ವವನ್ನು ಪಿಡಿದ ಸಕಲ ಗೀರ್ವಾಣೀಶನ ಸರ್ವಾವಯವದಲ್ಲಿ ಕಣ್ಣಾಗಿರ್ವದೇನೊ ತಿಳಿಯದು ನಿ ಗರ್ವಿ ಶಿರೋಮಣಿಯೆ ಈತ ಪರ್ವತಾರಿಯೆಂಬುವುದನು 3 ಠಗರು ಕೋಣನೆಗಳ ಮೇಲೆ ಸೊಗಸಿನಿಂದಲೇರ್ದ ಕೆಲಸ ಬಗೆ ಬಗೆ ಬೈರೂಪ ವರ್ಣನೆಗಳು ಸಾಕಿನ್ನು ಸುಗುಣೆ ಮೊದಲೆ ತಿಳಿಯದೆ ನೀ ಮಗಳನೀವ ಭಾಷೆ ಕೊಟ್ಟ ಬಗೆಯ ಪೇಳೆ ಭಾಗ್ಯದ ಹಮ್ಮಿಗೆ ತಕ್ಕಂಥ ನಗೆಯ ಕೇಳೆ 4 ಎರಡು ಮಗುಗಳದರಳೊಂದು ಬಿರುದ ಹೊಟ್ಟೆ ಮೇಲೆ ಕಟ್ಟಿ ದುರಗ ಬೆಳೆವ ಪೋರ ನೋಡೆ ಕರಿಯ ಕುವರನು ಕಿರಿಯ ಕೂಸಿನೊಂದು ನವಿಲ ಮರಿಯನೇರುತ್ತಾರು ಮುಖದಿ ಮೆರೆವ ಛಂದವೇನನೆಂಬೆ ಥರವೆ ನಿನಗೆ ಮಿಸುಣಿ ಗೊಂಬೆ 5 ಅಳಿಯನ ಸಂಸ್ಥಿತಿಯ ನೋಡಿ ತಿಳಿವದೆಂತು ಸುಲಭವಲ್ಲ ಹಲವು ಜನರ ಕೂಡಿಕೊಂಡು ಸುಳಿವರೆ ಬಲ್ಲ ನೆಲೆಯ ಕಾಣದಖಿಳ ವೇದ ಕುಲವು ಭ್ರಮೆಯ ತಾಳ್ವದಿಂಥಾ ಕುಲವೆಂದರಿಯಳಾಗಿ ಲೋಕ ಚೆಲುವೆ ಮಗಳನಿತ್ತೆಯಲ್ಲೆ 6 ಆದರೀತ ಭಕ್ತಜನರ ಕಾದುಕೊಳುವನೆಂಬ ಗುಣವ ಶೋಧಿಪರಿಗೆ ಸಕಲಾನಂದ ಸಾಧಕನೆಂದು ಬೋಧಗೊಳದೆ ನುಡಿದ ಸ್ವಾಪರಾಧವೆಲ್ಲ ಕ್ಷಮಿಸಿ ನಮ್ಮ ಶ್ರೀದ ವೆಂಕಟಾದ್ರಿನಾಥ ಕಾದುಕೊಳಲಿ ಕರುಣವಿಡಲಿ 7
--------------
ತುಪಾಕಿ ವೆಂಕಟರಮಣಾಚಾರ್ಯ
ಶೇಷಶಯನ ನಿನ್ನ ಪರಮ ಭಾಗವತರ ಸಹವಾಸದೊಳಿರಿಸು ಕಂಡ್ಯ ಎನ್ನನು ಪ ಬೇಸರಿಸದೆ ನಿನ್ನ ಹೃದಯಾಬ್ಜದೊಳಗಿರುವದಾಸರೊಳಿರಿಸು ಕಂಡ್ಯ ಎನ್ನನುಅ ತಂದೆಯೊಡಲನು ಸೀಳಿಸಿದವರೊಳು, ದೇ-ವೇಂದ್ರನ ತಲೆಗೆ ತಂದವರೊಳು, ದು-ರ್ಗಂಧ ಪೆಣ್ಣಿಗೆ ಚಂದನದ ಕಂಪನಿತ್ತಂಥಬಾಂಧವರೊಳಗಿರಿಸು ಕಂಡ್ಯ ಎನ್ನನು 1 ತೋಯಜವೆಂಬ ಪುಷ್ಪದ ಪೆಸರವರೊಳುತಾಯ ಸೊಸೆಗೆ ಮಕ್ಕಳಿತ್ತವರೊಳುಆಯದಿ ದ್ವಾದಶಿ ವ್ರತವ ಸಾಧಿಸಿದಂಥರಾಯರೊಳಿರಿಸು ಕಂಡ್ಯ ಎನ್ನನು2 ಗಿಳಿನಾಯಿ ಪೆಸರಿನವರೊಳು, ಮುಗಿಲಹೊಳೆಯ ಹೊಟ್ಟೆಲಿ ಹುಟ್ಟಿದವರೊಳುಕೆಳದಿಯ ಜರಿದು ಶ್ರೀಹರಿದಿನ ಗೆದ್ದಂಥಹಳಬರೊಳಿರಿಸು ಕಂಡ್ಯ ಎನ್ನನು3 ಅನುದಿನ ಸ್ಥಿರರಾಜ್ಯವಾಳಿದಕಿಂಕರರೊಳಿರಿಸು ಕಂಡ್ಯ ಎನ್ನನು 4 ಕಾಟಿಗೆ ಕಾಸಿಲ್ಲದವರು ರಾಯರ ಪಂಕ್ತಿಊಟವ ಬಯಸಿದಂತೆ ನಾ ಬೇಡಿದೆನಾಟಕಧರ ನೆಲೆಯಾದಿಕೇಶವ, ನಿ-ನ್ನಾಟದೊಳಿರಿಸು ಕಂಡ್ಯ ಎನ್ನನು 5
--------------
ಕನಕದಾಸ
ಶ್ರೀರಮಣನೆ ಎನ್ನುದ್ಧಾರ ಮಾಡುವ ಪೂರ್ಣ ಭಾರವೇ ನಿನಗಿಹದೊ ಹೇರನೊಪ್ಪಿಸಿದಂಥ ಹಳಬ ವರ್ತಕಗೆ ಸ- ರ್ಕಾರ ಸುಂಕಗಳುಂಟೆ ವಾರಿಜ ನಯನ ಪ. ಆವ ಕಾಲಕು ಲಕ್ಷ್ಮೀಭೂವರ ತವ ಪಾದ ಸೇವಕನಾಗಿಹೆನು ನಿನ್ನಲಿ ಮನೋ- ಭಾವವಿರಿಸಿಹೆನು ನನಗುಸುರಲೇನು ಜೀವನಕೆ ನೀನಿತ್ತ ಕರ್ತು- ತ್ವಾವಲಿಗಳಿಂದೇನ ಮಾಳ್ಪದ ನೀ ವಳಗೆ ನಿಂತಿದ್ದು ನಿನ್ನ ಕ- ಲಾವಿಶೇಷದಿ ನಡಸಿ ನಟಿಸುವಿ1 ದೇಹವ ಧರಿಸಿಹೆನು ಇದರ ಸ- ನ್ನಾಹವಾಗಿರುವುದನು ಸುಖದು:ಖಗಳನು ಚೋಹಗೊಳದನುಭವಿಸಿ ಸುಖ ಸಂ- ದೋಹಗೊಳಲ್ಯಾಡುತ್ತಿರೆ ಮುಂ- ದಾಹ ಬಾಧೆಯ ಬಿಡಿಸಹಮ್ಮಮ ಮೋಹ ಬಲೆಯನು ಕಡಿದು ಸಲಹುವ 2 ಜನನಿ ಜನಕ ಗೃಹ ವನಿತೆ ಒಡವೆ ಭೂಮಿ ಧನವಸ್ತ್ರ ಧಾನ್ಯಗಳು ನಾನಾ ವಿಧ ವಿನಯದಿ ಸಂಪದವು ಸ್ವರ್ಗಾದಿ ಸುಖವು ತನುಮನಗಳೊಡಗೂಡಿ ಮನ್ಮಥ ಜನಕ ನಿನಗೊಪ್ಪಿಸಿ ನಿರಂತರ ನೆನವೆ ನಿನ್ನ ಪದಾಬ್ಜಯುಗ್ಮವ ವನರುಹಾಂಬಕ ವೆಂಕಟೇಶ್ವರ 3
--------------
ತುಪಾಕಿ ವೆಂಕಟರಮಣಾಚಾರ್ಯ
ವರಕವಿಗಳಿದ್ದಲ್ಲಿ ನರಕವಿಗಳ ಕೊಂಡಾಡಬಾರದು - ಇಂಥಾಧರಣಿಯ ಕಲ್ಲಿಗೆ ಸ್ಥೀರವೆಂದು ಪೂಜೆಯಮಾಡಬಾರದು ಪ.ಆಡಿಗೋದ ಮಡಕಿಗೆ ಜೋಡಿಸಿ ಒಲೆಗುಂಡ ಹೂಡಬಾರದುಬಡತನ ಬಂದರೆ ನಂಟರ ಬಾಗಿಲ ಸೇರಬಾರದು 1ಮಡದಿಯ ನುಡಿಕೇಳಿ ಬಡವರ ಜಗಳಕೆಹೋಗಬಾರದು - ಬಹಳಬಡತನ ಬಂದವಳ ಕೈಯಿಂದ ಅಡಿಗೆಯ ಉಣ್ಣಬಾರದು 2ಪಾಪಿಗಳಿದ್ದಲ್ಲಿ ರೂಪದ ಒಡವೆಯ ತೋರಬಾರದು - ಕಡುಕೋಪಿಗಳಿದ್ದಲ್ಲಿ ಅನುಕೂಲಗೋಷ್ಠಿಮಾಡಬಾರದು3ಪರರ ನಿಂದಿಸಿ ಪರಬ್ರಹ್ಮ ರೂಪೇಂದ್ರನ ಜರೆಯಬಾರದುವರದ ಶ್ರೀ ಪುರಂದರವಿಠಲನ ಸ್ಮರಣೆಯ ಮರೆಯಬಾರದು 4
--------------
ಪುರಂದರದಾಸರು