ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂದವ ಜರೆವರಾರು ರಂಗ ನಿನ್ನ ಅಂಗವ ಹಳಿವರಾರು ಪ ಅಂದವ ಜರೆವರಾರೋ ಇಂದೀವರಾಕ್ಷ ಗೋವಿಂದ ನಿ ನ್ನಂದಕೇಣಿ ಬಂದವರಿಲ್ಲವಯ್ಯ ಅ.ಪ ನೀರಮೀನು ಎಂಬರೇನೋ ರಂಗಯ್ಯ ಭಾರಿ ಕೂರ್ಮನೆಂಬರೇ ಭಾರಿ ರೋಮ್ಯನು ಎನೆ ಭೂರಿಸಂತಸವಿತ್ತೇ 1 ಕೋರೇ ಹಲ್ಲವನೆಂಬರೇ ರಂಗಯ್ಯ ಕೇಸರಿ ಎಂಬರೇ ಕೋರೆ ಹಲ್ಲಿಗೆ ಶೃಂಗಾರ ಧರಣಿದೇವಿ ಘೋರ ಕೇಸರಿಗೆ ಹತ್ತಾರು ಕೈಗಳು ಚಂದ 2 ಕೊಡಲಿ ಹಿಡಿದನೆಂಬರೇ ಕೊಡೆಯ ಹಿಡಿದಡೇನು ಬಲಿಯ ಬಾಗಿಲ ಕಾಯ್ದೆ ಕೊಡಲಿ ಹಿಡಿದು ಕಾರ್ತವೀರ್ಯಾರ್ಜುನನ ಕೊಂದೆ 3 ಎಂಜಲ ತಿಂದರೇ ರಂಗಯ್ಯ ಗುಂಜುಗದಾತನೆಂಬರೇ ಎಂಜಲ ತಿಂದಾ ಬಲದಿ ಮಾರೀಚನ ಕೊಂದೇ ಗುಂಜುಗ ವೇಗದಿಂದ ಸತಿಯ [ಬಿಡಿಸಿ ಕಂದೆ] ಕಂಜನೇತ್ರೆಯಳ ಕೈ [ಹಿಡಿದು ಬಂದೆ] 4 ದುರುಳ ಚೋರನು ಎಂಬರೇ ರಂಗಯ್ಯ ತುರಗವನೇರಿದನೆಂಬರೇ ದುರುಳ ಕೌರವರೆದೆ ಬಿರಿವಂತೆ ಮಾಡಿದೆ ದುರಿತಾರಿ ನೀ ಮಾಂಗಿರಿಯ ರಂಗಯ್ಯ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಾ ಧನ್ಯ ನಾ ಧನ್ಯ ನಾ ಧನ್ಯನಿಂದು ಪ ಹೇ ದಯಾನಿಧೇ ನಿನ್ನ ಪಾದಾನುಗ್ರಹದಿಂದ ಅ.ಪ. ಏತರವ ನಾನೆಂದುದಾಸೀನ ಮಾಡದೆಲೆ ಲೇಸು ಮಮತೆಯ ಕೋರಿ ಈ ಸ್ಥಳಕೆ ಬಂದಿ ಆಸುರೀ ಭಾವವನು ನಾಶಗೊಳಿಸಿ ಎನ್ನ ನೀ ಸಲಹಿದೆಯೋ ಜಗದೀಶ ನಿರುಪಮ ಕರುಣಿ 1 ಸತ್ವಗುಣ ಪ್ರಚುರರಲಿ ನೀ ತೋರುವುದಕ್ಕಿಂತ ಅತ್ಯಧಿಕ ವಾತ್ಸಲ್ಯವೆನ್ನೊಳಗೆ ತೋರ್ಪೆ ಕರ್ತೃ ನೀನೆಂಬ ತತ್ವ ಮನಸಿಗೆ ತಂದೆ ಭಕ್ತವಾತ್ಸಲ್ಯಕ್ಕಿದು ಕುರುಹಲ್ಲವೇ ದೇವ 2 ಸುರಲೋಕಕ್ಕಿಂತಧಿಕ ಪದವಿ ಎನಗಿತ್ತೆ ನಿರುತಲೆನ್ನಯ ಬೆನ್ನು ಕಾಯುತಲಿರುವೆ ಕರುಣಿಗೆಣೆಗಾಣೆ ಕರಿಗಿರೀಶನೇ ನಿನ್ನ ಸ್ಮರಣೆಯನನವರತ ಇರುವಂತೆ ಕೃಪೆಮಾಡೋ 3
--------------
ವರಾವಾಣಿರಾಮರಾಯದಾಸರು
ಬಾರೋ ಬಾರೋ ಕೋಪವಿನ್ಯಾತಕೆನ್ನ ಕೂಡಾ ರಂಗರಾಯಾ| ಸಾರಿದ ನಿನ್ನರಸಿಯ ತಪ್ಪನೊಳ್ಪರೇ ರಂಗರಾಯಾ ಪ ಚಲ್ವ ಕಣ್ದೆರೆವುತ ಮೊಗವತಿರಹುವರೇ ರಂಗರಾಯಾ| ಹಲ್ಲವ ಮಸೆಯುತ ಘುಡುಘುಡಿಸುವರೇ ರಂಗರಾಯಾ 1 ಭೀಕರಾಕೃತಿಯಾಗಿ ಕೊಡಲಿಯ ಪಿಡವರೇ ರಂಗರಾಯಾ| ಏಕಾಂಕಿಯಾಗಿ ಕದ್ದು ತಿರುಗುವರೇ ರಂಗರಾಯಾ 2 ಆಗೋಚರವಾಗದೇ ತುರಗೇರಿ ತ್ವರಿತದಿ ರಂಗರಾಯಾ| ಸುಮದಿ ಬಾ ಮಹಿಪತಿ ಸುತ ಜೀವನ ರಂಗರಾಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿದಾಸನವನೇ ನೋಡಿ| ಬರೇ ವೇಷ ದೋರಲ ಬೇಡಿ ಪ ಒಂದರ ಘಳಗೆಯ ಕುಂದದಿ ಕಳೆಯಾ|ಮು| ಕುಂದನ ನಾಮವ ಛಂದದಲಿಹ 1 ಅನ್ಯರ ದೂಷಿಸಿ ತನ್ನನೇ ಹೊಗಳನು| ಸಣ್ಣ ದೊಟ್ಟದರಲಿ ಘನ್ನರಿತಿಹ 2 ಹುಲ್ಲ ಮನುಜರಿಗೆ ಹಲ್ಲವದೆರಿಯದೆ| ಫುಲ್ಲನಾಭನಪದದಲಿಹ ಮನ 3 ಮುಂದಿನ ಹಾನಿಯು ಇಂದಿವೆ ತೋರಲಿ| ಮುಂದಿಟ್ಟಟಡಿಯನು ಹಿಂದಕೆಳೆಯ 4 ನುಡಿವದು ಸಲಭ ನಡೆವುದು ದುರ್ಲಭ| ನಡೆನುಡಿಯಲಿ ಸಮಧೃಡಗಂಡಿಹ 5 ಹಂಗವಳಿದು ಸತ್ಸಂಗದಿ ಶ್ರವಣದಿ| ಕಂಗಳ ಸಿರಿಸುಖ ಮಂಗಳಲಿಹ 6 ತಂದೆ ಮಹಿಪತಿ ನಂದನ ಪ್ರಭುದಯ| ದಿಂದ ಭವಾಲಯ ಸಂದ ಜರಿದ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು