ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ನರಸಿಂಹದೇವ ಶರಣ ರಕ್ಷಕನೆ ದಾನವಾರಿ ಸುಭಕ್ತಾಧೀನ ಮೂರುತಿಯೆ ಪ. ಹರಿ ತನ್ನ ದೈವವೆಂದು ಸ್ಮರಿಸುತಿರಲು ಬಾಲ ನಿರವ ಕಾಣದೆ ದುಷ್ಟಹಿರಣ್ಯಕಾಸುರನು ಪರಿ ಹಿಂಸಿಸೆ ಮೊರೆದು ಕೋಪದೊಳೆದ್ದು ತರಳಗೊಲಿದೆ ಬಹು ಕರುಣಾನಿಧಿಯೆ 1 ಛಿಟಿ ಛಿಟಿಲೆಂದಾರ್ಭಟಿಸಿ ಕಂಬವು ಸಿಡಿಯೆ ಕಟಿ ಮಸಿದಗ್ನಿ ನಿಟ್ಟುಸಿರಿನಿಂ ಹಲ್ಗಳ ಕಟಿ ಕಡಿವುತುಬ್ಬಸ ತೋರಿ ನಿಂದ ಕಠಿಣ ಮೂರುತಿಯೆ 2 ಕೊಬ್ಬಿದ ಹಿರಣ್ಯಕನುಬ್ಬ ಮುರಿವೆನೆಂದು ಹೆಬ್ಬಾಗಿಲೊಳು ಸಂಜೆ ಮಬ್ಬಿನಲಿ ಧನುಜನ ಗರ್ಭವ ನಖದಿಂದ ಇಬ್ಭಾಗವನು ಮಾಡಿ ಹಬ್ಬಿದ ಕರುಳನು ಹರುಷದಿ ಧರಿಸಿದೆ 3 ಭೀತರಾದ ಸುರವ್ರಾತ ಪ್ರಾರ್ಥಿಸೆ ಬಹು ಶಾಂತನಾಗಿ ಸಂತೋಷಪಡಿಸಿದ ಅ- ನಾಥ ರಕ್ಷಕನೆ ಕಾತರವಳಿದೆ 4 ಖಳನ ಮರ್ದಿಸಿ ಬಹು ಇಳೆಯ ಪಾಲಿಸಿದೆ ನಳಿನ ಸಂಭವಗೆ ಬಲು ಹರುಷವನಿತ್ತೆ ಹೆಳವನಕಟ್ಟೆ ಶ್ರೀ ರಂಗ ದಾಗಿನಕಟ್ಟೆನೆಲೆವಾಸ ಕಂಬದ ನರಸಿಂಹದೇವ 5
--------------
ಹೆಳವನಕಟ್ಟೆ ಗಿರಿಯಮ್ಮ
ಕರವಮುಗಿದ-ಮುಖ್ಯಪ್ರಾಣ-ಕರವ ಮುಗಿದಪಕರವಮುಗಿದ ಶ್ರೀಹರಿಗೆ ತಾನೆದುರಾಗಿದುರುಳರ ಸದೆದು ನೀ ಶರಣರ ಪೊರೆಯೆಂದು ಅ.ಪಜೀವೇಶ್ವರೈಕ್ಯವು ಜಗತು ಮಿಥ್ಯವೆಂದುಈ ವಿಧ ಪೇಳುವ ಮಾಯಿಗಳನಳಿಯೆಂದು 1ಇಲ್ಲಿ ಮಾತ್ರ ಭೇದ ಅಲ್ಲಿ ಒಂದೇಯೆಂಬಕ್ಷುಲಕರನು ಪಿಡಿದು ಹಲ್ಗಳ ಮುರಿಯೆಂದು 2ತಾರತಮ್ಯಪಂಚಭೇದಸತ್ಯವೆಂದುಮಾರುತ ಮತ ಪೊಂದಿದವರನು ಪೊರೆಯೆಂದು 3ಪರಿಪರಿ ಭಕ್ತರು ಹೃದಯ ಕಮಲದೊಳುನಿರುತ ಮಾಡುವ ಪೂಜೆ ನಿನಗರ್ಪಿತವೆಂದು 4ಹರಿಯ ಮನೋಗತವರಿತು ಮಾಡುವೆನೆಂದುಪುರಂದರವಿಠಲನ ಚರಣದ ಬಳಿಯಲ್ಲಿ5
--------------
ಪುರಂದರದಾಸರು