ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಲಿಯುವೆ ನೀನೆಂತು ಹಲಧರಾನುಜಾ ಪ ಹೊಗಳಲು ನೀ ಮರುಳಾಗುವನಲ್ಲಾತೆಗಳಲು ನೀ ಮುನಿಯುವನಲ್ಲಾಹೊಗಳಲ್ಯೊ ತೆಗಳಲ್ಯೊ ತಿಳಿಯುವುದಿಲ್ಲಬಗೆಯನು ತೋರಲು ಹೇಳಸೊಲ್ಲ 1 ಪಂಚಪಕ್ವಾನ್ನವ ಹಂಚೇನೆಂದರೆಲಂಚಗುಳಿಯು ನೀನಲ್ಲಚಂಚಲಮನದವ ತಾನಾಗಿಹನೈಹಂಚಿಕೆಯನು ಹೇಳ್ ನಿತ್ಯತೃಪ್ತನೆ 2 ಪತಿ ನೀನಹುದೋಘನತರ ಗದುಗಿನ ವೀರನಾರಾಯಣಮನಸಿನ ಇಂಗಿತವನು ಪೇಳೆಲೊ ನೀ 3
--------------
ವೀರನಾರಾಯಣ
ಕಾಲ ಕಳೆವರೆ ಮನವೆ ಪ ಖಲಜನಸಂಗದಲಿ ಸದಾ ಕಲ್ಮಶಭಾಜನನಾಗುತ ಹಲಧರಾನುಜನ ಶ್ರೀ ಪದ ಜಲಜಯುಗಳವ ಸುಜ್ಞಾನದಿ ಅ.ಪ ಇಂದ್ರಿಯಗಳ ಬಂಧಿಸಿ ಮನ- ಸೊಂದಾಗಿ ನಿಲಿಸಿ ಒಳಗೆ ಮು- ಮಂದಬುದ್ಧಿಯಾಗಿ ನೀನು 1 ಯಮನವರೋಡಿ ಬರುತ ನಿ- ಸಮಯದಿ ಭ್ರಮೆಯಿಂದಲ್ಲಿ ಕಾಲ್ಗೆರಗಲು ಬಿಡುವರೆ ನಿನ್ನ 2 ತಾಮಸನಾಗುತ ಶ್ರೀಗುರು- ರಾಮವಿಠಲ ಶರಣೆನ್ನದೆ ಕಾಮಿಸುತಲಿ ಸೊಕ್ಕುತ ನೀ 3
--------------
ಗುರುರಾಮವಿಠಲ
ತಾಳುವಿಕೆಗಿಂತ ತಪವು ಇಲ್ಲ ಪ. ಕೇಳಬಲ್ಲವರಿಗೆ ಹೇಳುವೆನು ಸೊಲ್ಲ ಅ.ಪ. ದುಷ್ಟಮನುಜರು ಪೇಳ್ವ ನಿಷ್ಠುರದನುಡಿ ತಾಳುಕಷ್ಟಬಂದರೆ ತಾಳು ಕಂಗೆಡÀದೆ ತಾಳುನೆಟ್ಟಸಸಿ ಫಲಬರುವತನಕ ಶಾಂತಿಯ ತಾಳುಕಟ್ಟುಬುತ್ತಿಯ ಮುಂದೆ ಉಣಲುಂಟು ತಾಳು1 ಕುಹಕ ಕುಮಂತ್ರವನು ತಾಳುಅಳುಕದಲೆ ಬಿರುಸು ಬಿಂಕದ ನುಡಿಯ ನೀ ತಾಳುಹಲಧರಾನುಜನನ್ನು ಹೃದಯದಲಿ ತಾಳು 2 ನಕ್ಕನುಡಿವರ ಮುಂದೆ ಮುಕ್ಕರಿಸದೆ ತಾಳುಅಕ್ಕಸವ ಮಾಡುವರ ಅಕ್ಕರದಿ ತಾಳುಉಕ್ಕೋಹಾಲಿಗೆ ನೀರು ಇಕ್ಕಿದಂದದಿ ತಾಳುಪಕ್ಷೀಶ ಹಯವದನ ಶರಣೆಂದು ಬಾಳು 3
--------------
ವಾದಿರಾಜ
ರಕ್ಷಿಸೋಯನ್ನ ರಕ್ಷಿಸೋ ರಕ್ಷಿಸೋ ಬೇಗ ಉಪೇಕ್ಷಿಸದಲೆ ಜಲ ಜಾಕ್ಷ ಯನ್ನ ಮೊರೆ ಪಕ್ಷಿವಾಹನ ದೊರೆ ಪ ವಾರಿಧಿ ಮತ್ಸ್ಯಾವತಾರದಿ ಧರಿಸಿ ಪೊಕ್ಕು ಘೋರದೈತ್ಯನ ಕೊಂದು ಇನ್ನು ಚಾರು ಚರಿತ ವಿಸ್ತಾರ ಶೃತಿಗಳನು ವಾರಿಜಾಸನಗಿತ್ತ ವರದ ಜಗನ್ನಾಥ 1 ವರಕೂರ್ಮನಾಗಿ ಮಂದರಗಿರಿ ಪೊತ್ತು ನಿರ್ಜರರಿಗೆ ಸುಧೆಯನುಣಿಸಿ ಹರುಷದಲಿ ಕರುಣಿಸೋಯಂದರೆ ಕಠಿಣತ್ವ ವಹಿಸುವರೇ ಪರಮ ಪುರುಷ ನೀನು ಭಜಕರ ಕಾಮಧೇನು 2 ಧರೆಯ ಕದ್ದು ಒಯ್ದವನ ಕೋಪದಿ ಘನತರ ಕೋರೆಯಲಿ ಸೆಳದೆ ದನುಜಹರ ವರಾಹನಾದ ಶ್ರೀ ವತ್ಸಲಾಂಛನ ದೇವ ಶರಣಜನ ಮಂದಾರ ಶರನಿಧಿ ಗಂಭೀರ 3 ಗರುಡಗಮನ ಶ್ರೀ ಹರಿ ಸರ್ವೋತ್ತಮನೆಂಬ ತರುಳನ ತಂದೆಯ ತಾಮಸದಿ ಪರಿಪರಿಹಿಂಸೆಯ ಪಡಿಸುತಿರಲು ನರಹರಿ ರೂಪತೋರಿ ಪ್ರಹ್ಲಾದಗೊಲಿದ ಧೊರೆ 4 ಬಲಿಯದಾನವು ಬೇಡಿ ಬ್ರಹ್ಮಾಂಡ ಭಾಂಡವು ಅಳೆದು ಮೂರು ಪಾದದೊಳಗೆ ಮಾಡಿ ತುಳಿದವನ ಪಾತಾಳಕಿಳಿಯಲು ವಾಮನ ಬಲಭೇದಿ ಸನ್ನತ ಪಾಲಿಸೋ ಪ್ರಖ್ಯಾತ 5 ಪರಶುರಾಮ ಬಾಹು ಬಲದಿ ಸಕಲ ರಾಜರನೆಲ್ಲ ಗೆದ್ದು ಸುಸ್ಥಿರ ಮೂರ್ತಿ ಧುರದಿಂದ ಭೂಮಿ ಭೂಸುರರಿಗೇ ಧಾರೆಯ ನೆರೆದ ಶ್ರೀಮದನಂತ ನಿರತದಿ ಭಗವಂತ 6 ಅನಿಮಿಷರೊಡೆಯ ಶರಣು ಶರಣೆನುತ ರಾವಣನನು ಜನು ವಿಭೀಷಣನು ಬರಲು ಘನದಿ ಪಂಕ್ತಿ ಕಂಧರನ ಜಯಿಸಿ ಲಂ- ಇನಕುಲ ಪಾವನ 7 ಬಲದು:ಶಾಸನ ಸೀರಿಸೆಳಿಯೇ ದ್ರೌಪದಿ ಮನದಲಿ ಕಾಮಿತಾರ್ಥ ಫಲದಾಯಕ ಮಾನವ ರಕ್ಷಿಸೆಂದು ಸ್ತುತಿಸಲು ಪೊರೆದೆ ಹಲಧರಾನುಜ ಮುದದಿ 8 ಅಂಗಜ ಪಿತ ತ್ರಿಪುರಾಂಗನೆಯರ ವ್ರತ ಭಂಗಮಾಡಿದೆ ಹಿಂಗದಲೇ ಮಂಗಳಮಹಿಮ ಕೃಪಾಂಗ ಗಂಗೆಯನು ಪಾದ 9 ಚಲುವ ಕುದುರೆಯನೇರಿ ಕಲ್ಕಿಕಯ್ಯೊಳು ಖಂಡೆಯ ಪಿಡಿದು ಝಳಪಿಸುತ ಕಲುಷಾತ್ಮರೆಲ್ಲರ ಖಂಡಿಸಿ ಧರ್ಮವು ಪರಿಪಾಲನೆಮಾಳ್ಪ ಶ್ರೀ ಭೂದುರ್ಗಾಧಿಪಾ 10 ಪಾವನಚರಿತ ಕೃಪಾವನ ರಾಶಿ ಶ್ರೀ ದೇವಕೀಸುತ `ಹೆನ್ನೆಪುರೀಶ’ ದೀನ ದೇವೋತ್ತಮ ದೀನ ಬಾಂಧವ ವೃಂದಾವನ ನಿಲಯಾನಂದ ಸುಂದರಕಾಯಾ 11
--------------
ಹೆನ್ನೆರಂಗದಾಸರು
ಮುತ್ತು ಬಂದಿದೆ ಕೇರಿಗೆ ಜನರುಕೇಳಿ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಮುತ್ತು ಬಂದಿದೆ ಪ.ಭಕ್ತಿಯುಳ್ಳವರೆಲ್ಲ ಕಟ್ಟಿಕೊಳ್ಳಿ ಸೆರಗಿನಲ್ಲಿ ಅಪಥಳಥಳಿಸುವ ಮುತ್ತುಕಮಲ ನೇತ್ರದ ಮುತ್ತುಕಲುಷ ಪರ್ವತಕ್ಕಿದು ಕಲಶವಾಗಿಪ್ಪ ಮುತ್ತುಹಲಧರಾನುಜವೆಂಬ ಪವಿತ್ರ ನಾಮದ ಮುತ್ತುಒಲಿದು ಭಜಿಪರಭವತರಿದು ಕಾಯುವ ಮುತ್ತು1ಅಂಜದಿದ್ದವರಿಗೆ ಅಂಜಿಕೆ ತೋರುವ ಮುತ್ತುಭಂಜಿಸದ ಇತರ ಭಯವ ತೋರುವ ಮುತ್ತುಸಂಜೀವರಾಯ ಹೃದಯದೊಳಗಿಹ ಮುತ್ತು------------------------ 2ಜಾÕನವೆಂಬೊ ದಾರದಲ್ಲಿ ಪೋಣಿಸಿ ನೋಡುವ ಮುತ್ತುಜಾÕನಿಗಳ ಮನದಲ್ಲಿ ಮೆರೆವ ಮುತ್ತುಆನಂದ ತೀರ್ಥರ ಮನದಲ್ಲೊಪ್ಪುವ ಮುತ್ತುಶ್ರೀನಿಧಿ ಪುರಂದರವಿಠಲನೆಂಬೋ ಆಣಿಯ ಮುತ್ತು * 3
--------------
ಪುರಂದರದಾಸರು
ಶ್ರೀ ಪ್ರಣವನಾರಾಯಣ ಕೃಷ್ಣ ಆಗಮನ ಸ್ತೋತ್ರ45ಬಾರೋ ಬಂದಿರೋ ಶ್ರೀಶ | ಶ್ರೀಧರಾ ಸಮೇತ ಬಂದಿರೋ ಈಶ ||ವಿಭುವೇ ಗುಣಾರ್ಣವ ಅಮಿತ ಪೌರುಷ ಸ್ವವಶ | ಅಮಿತಾರ್ಕ ಕಾಶ ||ಸರಸಿಜಾಸನ ಶಿವ ವಿಷಾದಿ ಅಮರವಂದ್ಯನೆಪರಮಭಾಗವತೇಷ್ಟ ಚಿಂತಾಮಣಿಯೇ ಜಯ ಜಯಶರಣು ಪಾಲಿಪ ಪ್ರಭುವೇ ನಾರಾಯಣನೇ ಕೃಷ್ಣನೇ || ಬಾರೋ|| ಪಪ್ರಣವಾಷ್ಠಾಕ್ಷರ ದಿವ್ಯ | ಆರುಅಕ್ಷರಮಂತ್ರ ಸುಪ್ರತಿಪಾದ್ಯವಿಶ್ವಾದಿ ಎಂಟು ರೂಪಚಿನ್ಮಯಕಾಯ|ಅರಿದರಧೃತಹಸ್ತಹಸ್ತವರದಅಭಯ| ಜಯ ಜಯತುಜೀಯಶ್ರೀಧರಾ ಸಮೇತನಾಗಿಹ ಪ್ರೋದ್ಯ ಪೂಷ ಸ್ವಕಾಂತಿ ತೇಜನೇಕೃದ್ಧವೀರ ಮಹಾದ್ಯುಸಹಸ್ರ ಉಲ್ಕ ನಿಜ ಸಚ್ಛಕ್ತ ಲೀಲೆಯಿಂಸರ್ವದಾ ಸರ್ವತ್ರ ಸರ್ವರೋಳ್ ಇದ್ದು ನಿಯಮಿಪ ವಿಭುವೇ ಪರತರ|ಕೃಷ್ಣರಾಮ ನೃಸಿಂಹ ವರಹನೇ ವಿಷ್ಣುವೇ ಪರಂಜ್ಯೋತಿ ಪರಂಬ್ರಹ್ಮ |ವಾಸುದೇವನೆ ಏಕದಶ ಶತಾನಂತರೂಪನಿರ್ದೋಷಗುಣನಿಧೇ |ಎನ್ನ ಪಾಲಿಪ ಪ್ರಭುವೇ ಶ್ರೀಶನೇ ವೇದಹನುಮಶಿವಾದಿ ವಂದ್ಯನೇ || ಬಾರೋ 1ಪ್ರಚುರಅಮಿತ ಆನಂದ ಅವಿಕಾರ ಚಿನ್ಮಯ ಸರ್ವಚೇಷ್ಟಕಕರ್ತಚೇತನಾಚರ ಸರ್ವವಶಿ ಜಗದ್ಭರ್ತಾ ಸೌಂದರ್ಯಸಾರನೆಇಂದ್ರಮಣಿ ದ್ಯುತಿವಂತ ಸೌಭಾಗ್ಯದಾತ |ಚಕ್ರಧರವರ ಅಭಯಹಸ್ತನೇ ಅಜಿತಅಜಜಗದೇಕವಂದ್ಯನೆಉರುದಯಾನಿಧೆ ಭೈಷ್ಮೀ ಸತ್ಯಾರೊಡನೆ ಬಂದು ನಿಂತಿದ್ದಿಲ್ಲಿಪರಮಲಾಭವು ಎನಗೆ ಸುಹೃದನೆ ಭೀಮದ್ರೌಪದಿ ಪಾಂಡವ ಪ್ರಿಯವಿದುರಗೊಲಿದನೆ ದೇವಕೀಸುತ ಸರ್ವಾಭೀಷ್ಟಪ್ರದ ಉದಾರನೆಉತ್ತರಾಸುಧಾಮಉದ್ಧವಗೋಪಿಜನ ಅಕ್ರೂರ ವರದನೇಹಲಧರಾನುಜ ಸುಭದ್ರೆ ಅಣ್ಣ ಷಣ್ಮಹಿಷಿರಮಣನೆ ಶರಣು ಸಂತತ || ಬಾರೋ 2ಸ್ವಾಮಿವೇಂಕಟರಮಣ | ಕುಲದೇವ ಸರ್ವೋತ್ತಮನೆ ಭಕ್ತಪ್ರಸನ್ನಪದ್ಮಾವತೀಶ ಕರುಣಿ ಪಾಲಿಸೋ ಎನ್ನ | ಶ್ರೀವತ್ಸ ಅರಿದರಾಅಭಯವರಕರ ಘನ್ನ | ಅಮಲೇಂದು ವದನಂ ||ಮುಗುಳುನಗೆ ಕಾರುಣ್ಯ ನೋಟವು ಜಗವನಳೆದ ತೀರ್ಥಪದಯುಗತಿರುಮಲೇಶ ಮದ್ಗೇಹನಿಲಯನೆ ರಂಗ ವರದ | ಲಕ್ಷ್ಮೀನೃಸಿಂಹನೆಪೂರ್ಣ ಪ್ರಮತಿಗಳಿಂದ ಪೂಜಿತ ಬೆಣ್ಣೆ ನರ್ತನ ಕೃಷ್ಣರಾಮನೇಇನನಿಗಮಿತ ಸ್ವಕಾಂತಿ ತೇಜನೇ ಕರ್ಣಕುಂಡಲೋಜ್ವಲ ಕಿರೀಟಿಯೆ |ಅನ್ನವಾಹನತಾತಪ್ರಸನ್ನ ಶ್ರೀನಿವಾಸನೆ ಪೂರ್ಣಕಾಮನೇ |ಘನದಯಾಂಬುಧೇ ದೇವ ದೇವಶಿಖಾಮಣಿಯೆ ಬಾ ||ಬಾರೋ ಬಂದಿರೋ ಶ್ರೀಶ|| 3
--------------
ಪ್ರಸನ್ನ ಶ್ರೀನಿವಾಸದಾಸರು