ಒಟ್ಟು 8 ಕಡೆಗಳಲ್ಲಿ , 3 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಲ್ಲೆ ನೋಡಿದರೀಹ್ಯ ಇಲ್ಲೆ ನೋಡಿದರೀಹ್ಯ ಎಲ್ಲಾ ಕಡೆಯಲ್ಲೇಕೋಮಯವೋ 1 ಸುಲ್ಲಭವಾಗಿ ನಮ್ಮ ಫುಲ್ಲಲೋಚನ ಕೃಷ್ಣ ಬಲ್ಲ ಮಹಿಮರಿಗೆ ಭಾಸುವನು 2 ಭೇದಿಸಿ ನೋಡಿರಯ್ಯ ಸಾಧು ಜನರೆಲ್ಲ ಮೇದಿನಿಯೊಳು ಘನತುಂಬಿಹುದು 3 ಕಣ್ಣಾರೆ ಕಂಡೆವಯ್ಯ ಪುಣ್ಯಚರಣಮಹಿಮೆ ಸಣ್ಣ ದೊಡ್ಡದರೊಳು ಸಾಕ್ಷಾತವೊ 4 ನಂಬಿನಡಿಯಲಿಕೆ ಅಂಜುಜಾಕ್ಷನ ಪಾದ ಗುಂಭಗುರುತವಾಗಿದೋರುವದು 5 ಗುರುಕೃಪೆಯಿಂದ ನೋಡಿ ಹರುಷವಾಯಿತು ಜೀವ ಬೆರತುಕೂಡಿತು ಸಮರಸವೊ 6 ಬೆರೆದು ಕೊಡುವದು ಹರಿಯ ಕಟಾಕ್ಷವಿದು ಮರುಳ ಮಂಕಗಳಿದು ಅರಿಯಾವೊ 7 ವದಗಿ ಬಂದತಿದರಿಟ್ಟು ಸದಮಲಬ್ರಹ್ಮಸುಖಾ ಮೊದಲಿನ ಪುಣ್ಯ ಪೂರ್ವಾರ್ಜಿತವೊ 8 ಧನ್ಯವಾಯಿತು ಮೂಢ ಮಹಿಪತಿ ಪ್ರಾಣಜೀವ ಮನವು ಆಯಿತು ಉನ್ಮನವೊ 9
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಕ್ಕೊ ಇಲ್ಲೆ ಸಿಕ್ಕಿದ ಶ್ರೀಗುರು ಪರಬ್ರಹ್ಮ ತೆಕ್ಕಿಸಿಕೊಂಬುವ ಬನ್ನಿ ಅಖರದಿ ನಮ್ಮ ಧ್ರುವ ಎಂದಿಗೆ ಬಿಡಬಾರದಿನ್ನು ತಂದೆ ನಮ್ಮಪ್ಪನ ಹೊಂದಿ ಸುಖಿಯಾಗಬೇಕು ಭಕ್ತಪಾಲಿಪನ ವಂದಿಸಬೇಕಿಂದು ಸಹಸ್ರಳದಲಿಪ್ಪನ ಸಂದೇಹವಿಲ್ಲದೆ ನೋಡಿ ಸ್ವರ್ಗಕೆ ಸೋಪಾನ 1 ಹರುಷವಾಯಿತು ಎನಗೆ ಧರೆಯೊಳಿಂದು ನೋಡಿ ಕರುಣಾಳು ಗುರುಮೂರ್ತಿಯ ಸ್ತುತಿಸ್ತವನ ಪಾಡಿ ಎರಡಿಲ್ಲದೆ ಶ್ರೀಚರಣ ವರಕೃಪೆಯ ಬೇಡಿ ಶಿರಸಾ ನಮಿಸಿದೆ ಗರ್ವಾಂಹಕಾರ ಈಡ್ಯಾಡಿ2 ಲೇಸುಲೇಸಾಯಿತು ನಮ್ಮ ವಾಸುದೇವನ ಕಂಡು ಭಾಸ್ಕರಕೋಟಿ ತೇಜನ ಸ್ಮರಣಿಯ ಸವಿಯುಂಡು ವಾಸನೆ ತೃಪ್ತ್ಯಾಯಿತು ಶ್ರೀಯೀಶನಾ ಮನಗಂಡು ದಾಸಮಹಿಪತಿಗಾನಂದವಾಯಿತು ಸದ್ಗತಿ ಸೂರೆಗೊಂಡು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವಿಜಯದಾಸರ ಸ್ತೋತ್ರ ಪದಗಳು ಪರಮ ಹರುಷವಾಯಿತು ವಿಜಯರಾಯಗುರುಗಳಂಘ್ರಿಯನೆ ಕಂಡು ಪ ಪರಿಪರಿ ಜನುಮದ ಥರಥರದಘಗಳುತಿರುಗಿ ನೋಡದಲೇವೆ ತೆರಳಿ ಪೋದವು ಯಿಂದು ಅ.ಪ. ಕಾನನದೊಳು ತಿರುಗಿ ತನ್ನ ಮಾತಿ-ಯಾನು ಕಾಣದೆ ಚಿಂತಿಸಿ ||ಧೇನಿಸಿ ಅರಸಲಾಕ್ಷಣದೊಳಗವಳ ವತ್ಸತಾನು ಕೂಗಲು ಕಾಮಧೇನು ಒದಗಿದಂತೆ 1 ತರಣಿಯ ಕಿರಣದಿಂದ ತಪಿಸಿನೆರ ಬಾಯ ಬಿಡವುತ ಬಪ್ಪರನ ||ಕರವ ಪಿಡಿದು ಸುರತರುವಿನಡಿಯಲ್ಲಿ ಕು-ಳ್ಳಿರಿಸಿ ಕುಡಿಯೆ ದಿವ್ಯ ಸರಸಿಯನಿತ್ತಂತೆ 2 ಧನವ ಪೋಗಾಡಿ ಕೊಂಡು ನರನು ಬಲುಮನ ಕ್ಲೇಶದಿಂದಿರಲು ||ಘನ ಮಹಿಮನೆ ನಮ್ಮ ಮೋಹನ ವಿಠಲ-ವನ ಕೈಯ್ಯೊಳಗ ಚಿಂತಾಮಣಿಯನುಯಿತ್ತಂತೆ 3
--------------
ಮೋಹನದಾಸರು
ವೆಚ್ಚಕುಂಟು ನಮಗೆ ಅಚ್ಯುತನಾಮ ನಿಶ್ಚಯದ ಧನವು ಧ್ರುವ ವೆಚ್ಚಮಾಡಿದರೆಂದಿಗೆ ಅಚ್ಚಳಿಯದು ನಿಶ್ಚಯದ ಬದಕು ಬಚ್ಚಿಟ್ಟುಕೊಂಡು ನಿಜ ಎಚ್ಚರಿಕಿಂದ ನಿಶ್ಚಿಂತದಲಿ ಉಂಬೆನು 1 ಸಂಚಿತ ಧನವು ಬಡತನವನು ಹಿಂಗಿಸಿತು ಒಡಿಯನಖಂಡ ಕೃಪೆಯಿಂದಲಿ 2 ಸಾದ್ಯವಾಯಿತು ಎನಗೆ ಸದ್ಗುರು ಕೃಪೆಯಿಂದ ನಿಜಧನವು ಮಾಡಿ ಸಾಧಿಸೊಕೊಂಬುವದು 3 ಕಟ್ಟಬಿಡಲಾಗುದು ವಿಟ್ಟಿ ಹ್ಯಧನಕೊಟ್ಟರೆಂದಿಗೆ ತೀರದು ಇಟ್ಟಿಹ ತನುಮನದಲಿ ಘಟ್ಯಾಗಿ ಕೇಳಿರೊ ಈ ಮಾತವ 4 ಅರುಹು ಅಂಜನವಿಟ್ಟಿ ತೋರಿದ ಗುರುಕರದಲಿ ಈ ಧನವು ಹರುಷವಾಯಿತು ಎನಗೆ ಧರೆಯೊಳು ತರಳಮಹಿಪತಿಗೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸವಿಸುಖ ಕಂಡೆ ಸುವಿದ್ಯ ಬ್ರಹ್ಮರಸವ ಧ್ರುವ ಅಧ್ಯಾತ್ಮಾನಂದದೂಟ ಸಿದ್ಧಾಂತನುಭವದಿಂದ ಬದ್ಧವಾಗಿ ಸೇವಸಿದ ಇದು ಏಕಾಗ್ರ 1 ಉಂಡು ಹರುಷವಾಯಿತು ಮಂಡಲದೊಳಗಿಂದು ಕಂಡು ಆನಂದ ಸುಖವ ಪಿಂಡಾಂಡದೊಳು 2 ಸುರಸ ಸಾರಾಯದೂಟ ಪರಿಪರಿ ಸವಿದಿನ್ನುಹರುಷವಾಯಿತು ಎನಗೆ ತರಳ ಮಹಿಪತಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸೋಜಿಗವಾಯಿತು ಸದ್ಗುರುವಿನ ಕೃಪೆ ಹೇಳಲೇನು ನಿಜಗುಹ್ಯದ ಮಾತು ಗುರುತವಾಗಿ ಹ್ಯ ಸಾಧು ಬಲ್ಲ ಖೂನ ಧ್ರುವ ನೀಗದ ನೀಗಿತು ಹೋಗದ ಹೋಯಿತು ತ್ಯಾಗಲ್ಯೊಂದು ಬಾಗದ ಬಾಗಿತು ಸಾಗದ ಸಾಗಿತು ಯೋಗಲ್ಯೊಂದು ಆಗದ ಆಯಿತು ಕೂಗದ ಕೂಗಿತು ಈಗಲ್ಯೊಂದು ತೂಗದ ತೂಗಿತು ಸುಗಮ ತಾ ತೋರಿತು ಜಗದೊಳೊಂದು 1 ಹುರಿಯಲೊಂದು ಅರಿಯಿತು ಅರಿವಿಲೊಂದು ಸುರಿಯದ ಸುರಿಯಿತು ಗರೆಯದ ಗರಿಯಿತು ತ್ಯರಿಯಲೊಂದು ಜರಿಯದ ಜರಿಯಿತು ಬೆರಿಯದೆ ಬೆರಿಯಿತು ಕುರಿವಿಲೊಂದು 2 ಜಾರದ ಜಾರಿತು ಮೀರದ ಮೀರಿತು ಹಾರಲೊಂದು ತೋರದ ತೋರಿತು ಸೇರದ ಸೇರಿತು ಸಾರಲೊಂದು ಬೀರದ ಬೀರಿತು ಸಾರಸದೋರಿತು ಕರದಲೊಂದು ತರಳ ಮಹಿಪತಿಗ್ಹರುಷವಾಯಿತು ಗುರುಕರುಣಲಿಂದು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರುಷವಾಯಿತು ಮನಕೆ ಪ. ನಿರುತದಿ ಎನ್ನಯ ಹೃದಯದಲ್ಲೇ ನಿಂದು ಶ್ರೀ ಅನುದಿನ ಅ.ಪ. ತ್ರೇತ್ರಾಯುಗದಲಿ ಜನಿಸಿ ರಘುಪತಿಯ ದಾಸನೆಂದೆನಿಸೆ ಸೀತೆಗೆ ಉಂಗುರವಿತ್ತು ಶರಧಿಯ ಲಂಘಿಸಿ ಮಾತೆಯ ರತ್ನ ರಘುನಾಥ ಗೊಪ್ಪಿಸಿದೆಯೋ 1 ದ್ವಾಪರ ಯಗದಲಿ ಕುಂತಿಯ ಕುಮಾರನೆಂದೆನಿಸಿ ಪಾಪಿ ರಕ್ಕಸರನು ಸಂಹಾರ ಮಾಡಿ ಪ್ರಖ್ಯಾತಿಯ ಪಡೆದು ಭೀಮನೆಂದೆನಿಸಿ 2 ಮೂರನೆ ಅವತಾರದಿ ಮುನಿ ಮಧ್ವರೆಂದೆನಿಸಿ ಮಾರಮಣನ ಗುಣಗಳ ಪೊಗಳುತಲಿ ಮೂರುತಿ ರುಕ್ಮೀಣೀಶ ವಿಠಲನ ಕರುಣದಿ 3
--------------
ಗುಂಡಮ್ಮ