ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೈಯ ತೋರಿದ ಬಗೆಯ, ಅಮ್ಮಮ್ಮ ಯಾದವಗಿರಿ ಕಲ್ಯಾಣಿ ನೀನು ಪ ವತ್ಸರ ಚೈತ್ರ ದ್ವಿತೀಯೇಕಾದಶಿಯೊಳುಪ್ರಕಟಿತಾ ಶುಕ್ರವಾರದೊಳು ತನ್ನಭಕುತರಿಗುತ್ಸಾಹ ಸಂಧ್ಯಕಾಲದೊಳು 1 ಕಡಗ ಕಂಕಣ ಗೀರುಗಂಧ ಮಿಗೆಕಡು ಚೆಲುವಿನ ಬಣ್ಣ ಕುಪ್ಪುಸದಿಂದನಡು ಬೆರಳುಂಗುರದಿಂದ ಕೈಯಬೆಡಗ ನೋಡಿದ ಜನರಿಗೆ ಪುಟ್ಟಿತಾನಂದ 2 ಜನರೆಲ್ಲ ಯದುಶೈಲೋತ್ಸವವ ಕೇಳಿಘನ ಕಾಲದೇಶದಜಿತ ಭಯವನಿಮಗೆ ಬಿನ್ನೈಪೆನು ನಯವ ಕೊಟ್ಟಮನೋಹರುಷದಿ ನಮಗಿತ್ತ ವೈಭವವ 3 ಚೆಲುವರಾಯನ ರಥೋತ್ಸವದೀ ತೀರ್ಥಕೊಲಿದು ಗಂಗಾದೇವಿ ಬರುವ ಸಂಭ್ರಮವನೆಲೆಯ ಸರ್ವರಿಗನುಭವವ ಕೋಟಿಮನೋಹರುಷವನ್ನು ನಮಗಿತ್ತ ವೈಭವವ 4 ನಿನ್ನ ಮೋಹದ ಕಂದ ನಾನೊ ಕೇಳೆನಿನ್ನೊಮ್ಮೆ ದಿವ್ಯ ಹಸ್ತಂಜವನೀವಚೆನ್ನಿಗ ವರದ ವೆಂಕಟಾದಿಕೇಶವನುತನ್ನ ನಂಬಿದ ಭಕ್ತರಾಶ್ರಿತ ಕಾಮಧೇನು 5
--------------
ಕನಕದಾಸ
ಜ್ಞಾನವಂತರ ಸಂಗವಿರಲು ಸ್ನಾನವ್ಯಾತಕೆ ಪ ನಾನು ಎಂಬುದ ಬಿಟ್ಟ ಮೇಲೆ ನರಕವ್ಯಾತಕೆ ಅ.ಪ. ಮೃತ್ತಿಕೆ ಶೌಚ ಮಾಡದವನ ಆಚಾರವ್ಯಾತಕೆಸತ್ಯವಾದಿ ಆಗದವನ ನಂಬಿಗೆ ಯಾತಕೆ ||ಚಿತ್ತಶುದ್ಧಿ ಇಲ್ಲದವನ ವೈರಾಗ್ಯವ್ಯಾತಕೆಉತ್ತಮ ಹಿರಿಯರಿಲ್ಲದಂಥ ಸಭೆಯು ಯಾತಕೆ 1 ಪತಿಯ ಆಜ್ಞೆ ಮೀರಿದವಳ ವ್ರತಗಳ್ಯಾತಕೆಸತಿಗೆ ಅಳುಕಿ ನಡಿಯುವವನ ಸಾಹಸವ್ಯಾತಕೆ ||ಯತಿಯ ನಿಂದೆ ಮಾಡುವವನ ಮತಿಯು ಯಾತಕೆಅತಿ ವಿರೋಧ ಬಡಿಸುವಂಥ ಅಣ್ಣನ್ಯಾತಕೆ 2 ಹರಿಕಥೆಯ ಕೇಳದವನ ಕಿವಿಯು ಯಾತಕೆಮುರಹರನ ಮೂರ್ತಿಯ ನೋಡದಂಥ ಕಂಗಳ್ಯಾತಕೆ ||ಮರುತ ಮತವ ಪೊಂದದವನ ಬಾಳ್ವೆ ಯಾತಕೆಎರಡಾರು ನಾಮವಿಡದ ಶರೀರವೇತಕೆ3 ತಂದೆ ತಾಯಿ ಮಾತು ಕೇಳದ ಮಕ್ಕಳ್ಯಾತಕೆಬಂಧು ಬಳಗ ಉಳ್ಳದವನ ಭಾಗ್ಯವ್ಯಾತಕೆ ||ಬಂದ ಅತಿಥಿಗನ್ನವನಿಕ್ಕದ ಸದನವೇತಕೆ ಗೋ-ವಿಂದನಂಘ್ರಿ ಸ್ಮರಿಸದಂಥ ನಾಲಿಗ್ಯಾತಕೆ 4 ಮಕ್ಕಳನ್ನ ಮಾರಿಕೊಂಬ ತಂದೆಯಾತಕೆರೊಕ್ಕಕಾಗಿ ಬಡಿದಾಡುವ ತಮ್ಮನ್ಯಾತಕೆ ||ಕಕ್ಕುಲಾತಿ ಬಡುವ ಸಂನ್ಯಾಸವ್ಯಾತಕೆಠಕ್ಕು ಭಕುತಿ ಮಾಡುವಂಥ ದಾಸನ್ಯಾತಕೆ 5 ಆಗಿ ಬರದವರ ಅನ್ನ ಉಣ್ಣಲ್ಯಾತಕೆರೋಗವಾದ ನರಗೆ ಹೆಣ್ಣಿನ ಭೋಗವ್ಯಾತಕೆ ||ಯೋಗಿಯಾದ ಮೇಲೆ ದ್ರವ್ಯದ ಆಶೆಯಾತಕೆಭಾಗೀರಥಿಯ ಮಿಂದ ಮೇಲೆ ಪಾಪವ್ಯಾತಕೆ 6 ವೇದವನ್ನು ಓದದಂಥ ವಿಪ್ರನ್ಯಾತಕೆಕಾದೊ ರಣಕೆ ಅಂಜುವಂಥ ಕ್ಷತ್ರಿಯನ್ಯಾತಕೆ ||ವಾದವನ್ನು ಮಾಡುವಂಥ ಬಂಟನ್ಯಾತಕೆಸಾಧುಗಳಿಗೆ ಎರಗದವನ ಶಿರವಿದ್ಯಾತಕೆ 7 ಯಾತ್ರೆ ತೀರ್ಥ ಮಾಡದಂಥ ಪಾದವ್ಯಾತಕೆಪಾತ್ರರ ಸಂಗವಾಗದವನ ಜನ್ಮವ್ಯಾತಕೆ ||ಸ್ತೋತ್ರಕೆ ಮರುಳಾಗುವವಗೆ ಸಾಧನ್ಯಾತಕೆಪಾರ್ಥ ಸಖನ ತಿಳಿಯದವನ ಜ್ಞಾನವ್ಯಾತಕೆ 8 ಗುರೂಪದೇಶವಿಲ್ಲದಂಥ ಮಂತ್ರವ್ಯಾತಕೆಅರಿತು ವಿದ್ಯ ಪೇಳದ ಉಪಾಧ್ಯನ್ಯಾತಕೆ ||ಹರುಷವನ್ನು ತಾಳದಂಥ ಜ್ಞಾನಿ ಯಾತಕೆಕರಣ ಶುದ್ಧಿ ಇಲ್ಲದವನ ಸ್ನೇಹವ್ಯಾತಕೆ 9 ಗಾಣ ಕಟ್ಟಿದೆತ್ತಿಗೆ ಗೆಜ್ಜೆಯಾತಕೆ ||ರಾಣಿ ಇಲ್ಲದವನು ಮಾಡುವ ಬದುಕು ಯಾತಕೆತಾನು ಉಣ್ಣದೆ ಪರರಿಗಿಕ್ಕದ ಧನವಿದ್ಯಾತಕೆ 10 ಧರ್ಮವಿಲ್ಲದೆ ರಾಜ್ಯ ಆಳುವ ಪ್ರಭುವಿದ್ದ್ಯಾತಕೆಮರ್ಮವರಿತು ನಡೆಯದಂಥ ಹೆಣ್ಣು ಯಾತಕೆ ||ನಿರ್ಮಲಾಂಗನಾದ ಮೋಹನ ವಿಠಲನ ಗುಣಕರ್ಮ ಕ್ರಿಯಾ ತಿಳಿದ ಮ್ಯಾಲೆ ನಿರ್ಣಯವ್ಯಾತಕೆ 11
--------------
ಮೋಹನದಾಸರು
ಶ್ರೀತುಳಸಿ162ಶ್ರೀ ತುಳಸಿ ಮಹಿಮೆಯನು ಪೊಗಳಲಳವಲ್ಲ ಶ್ರೀನಾಥ ನಾರಾಯಣನ ಅರ್ಚನೆಗೆ ಸರ್ವದಾಪ್ರೀತಿಕರಳಾಗಿ ರಾಜಿಪಳು ಕಲಿಯುಗದಲ್ಲಿ ನೋಂತವರಭಾಗ್ಯವೆಂತೊ ಪ .ಶ್ರೀಮದಾರ್ಜಿತ ಕ್ಷೀರವಾರಿಧಿಯ ಮಥಿಸುತಿರೆಆ ಮಹಾವಿಷ್ಣುವಿನ ನೇತ್ರದಿಂದಲಿ ಹೊರಟಪ್ರೇಮಜಲದುದ್ಭವಿಸಿ ನಳನಳಿಸಿ ದಿವ್ಯ ಆಮೋದ ಪೂರ್ಣಳಾಗಿಭೂಮಿ ಪಾವನವ ಮಾಡುತಲಿ ಭೂನಿರ್ಜರರಧಾಮಧಾಮಗಳಲ್ಲಿ ವೃಂದಾವನದಿ ನೆಲಸಿಕಾಮಿತ ಫಲವನೀವ ಕಲ್ಯಾಣಿ ಕೃಷ್ಣನಿಗೆ ನೇಮದಿಂ ಪ್ರಿಯಳಾದ 1ಈ ಮನುಜ ದೇಹದಲಿದಾವಪ್ರಾಣಿಯು ಪಿತೃಸ್ತೋಮವನ್ನುದ್ಧರಿಪೆನೆಂದರೆ ಸುಲಭ ಸಾಧ್ಯಕೋಮಲ ದಳವನೊಂದು ತಂದು ಮಾಧವನಚರಣತಾಮರಸಕರ್ಪಿಸುವದುತಾ ಮುನ್ನ ಮಾಡಿದಘ ಪಂಚಕಗಳೋಡಿದವುಸಾಮಾನ್ಯವಲ್ಲ ತುಳಸಿಯ ವನವಸೋಂಕಿಬಂದಾ ಮರುತದಿಂದ ದೇಶ ಗ್ರಾಮಗಳು ಪಾವನವುಧೀಮಂತ ಮಾನ್ಯಳಾದ 2ತುಳಸಿ ನೆಳಲಲ್ಲಿ ಅಂಕುರಗಳೆದ್ದಲ್ಲಿ ಪಿತೃಗಳಿಗನ್ನವಿತ್ತರಕ್ಷಯಫಲವು ಊಧ್ರ್ವಪುಂಡ್ರತಳದ ಮೃತ್ತಿಕೆಯಲಿಟ್ಟರೆ ಕೋಟಿ ತೀರ್ಥಗಳ ಮುಳುಗೆದ್ದಫಲ ಸಿದ್ಧವುನಿಲಯದಲಿ ಪತ್ರಮೃತ್ತಿಕೆಕಾಷ್ಠವಿರಲಲ್ಲಿಕಲಿಮುಟ್ಟಲಂಜಿ ತೊಲಗುವನು ಮಣಿಸರಗಳನುಗಳದೊಳಾಂತರಾಕಲುಷಸಂಹರವು ಸಹ ಸಲೆವಿಷ್ಣುಪದವಿಯನೀವ 3ಶತಸಾಸಿರಪರಾಧವಿರಲಿನ್ನು ಮೃತ್ತಿಕೆಲಿಪಿತ ಕಾಯದನಿಗೆ ಬಹುಜನ ನೋಡೆ ವಿಘ್ನಗಳಗತಿಯುಡುಗಿ ದುಷ್ಟಗ್ರಹಗಳೆಲ್ಲನುಕೂಲಗತಿಯಾದ ಫಲವೀವವುಪ್ರತಿದಿನದಿ ನಾಭಿಕಕರ್ಣದಲಿ ಶಿರದಲ್ಲಿ ಶ್ರೀಪತಿಯ ನಿರ್ಮಾಲ್ಯದಳ ಧರಿಸಿ ಹರಿಪಾದ ತೀರಥವೊಮ್ಮೆ ಸೇವಿಸಿದವರ ಮುಕ್ತಿ ಕರತಳವು ಪತಿತಪಾವನಿಎನಿಸುವಾ 4ದರುಶನದಿ ಸ್ಪರುಶನದಿ ಧ್ಯಾನದಿಂ ಕೀರ್ತನೆಯುನಿರುತ ಪ್ರಣಾಮಗಳು ಸ್ತೋತ್ರದಾರೋಪಣಿಂಪರಮಜಲ ಶೇಚನಾರ್ಚನ ನಿಷ್ಠೆಯಿಂದ ನವ ಪರೀಕ್ಷೆಯನುಮಾಡಲುಹರಿಚರಣ ಕಮಲರತಿ ದೊರಕಿ ಯುಗ ಕೋಟಿ ಸಾಸಿರಕಾಲತಿರುಗಿ ಬಂದರೆ ಸತತ ಮಾಂಗಲ್ಯಹರಿಯ ಮನೆಯಲ್ಲಿ ನಿಜ ಹರುಷವನ್ನುಂಬುವರು ಮುರಾರಿವರದಂತೆ ಪದವ 5ಒಂದೊಂದುದಳಕೋಟಿ ಸ್ವರ್ಣಭಾರಕೆ ಮಿಗಿಲುಎಂದು ವಿಶ್ವಾಸದಲಿ ತಂದು ಸಾಸಿರನಾಮದಿಂದ ಗೋವಿಂದಗರ್ಪಿಸಿದರಿಲ್ಲಿಹ ಭವದಂದುಗವು ಮಾನಿಸರ್ಗೆಸುಂದರ ತುಲಸಿ ಮೂಲವನ್ನು ತೊಡಕಿರ್ದಕಳೆಯಂದೆಗೆದು ಶಾಖೋಪಶಾಖದಿಂ ವೃದ್ಧಿಸಾನಂದವಿತ್ತರಾ ನೂರೊಂದು ಕುಲ ನರಕವನು ಹೊಂದಲೀಸರುಪುಣ್ಯದಾ 6ಶ್ರೀ ವಿಷ್ಣುವಲ್ಲಭೆಯ ಮೂಲದಲಿ ತೀರ್ಥಗಳುಬಾವನ್ನಗಂಧಿಯಳ ಮಧ್ಯದಲಿ ಸುರನಿಕರಪಾವನಿಯಳಾ ಹರಿಯ ಕೊನೆಯಲಿಶ್ರುತಿಸಮೂಹಲಾವಣ್ಯ ಗುಣರಾಸಿಯುಭಾವಶುದ್ಧಿಯಲಿ ಉದಯದಿ ಸ್ಮರಿಸಿ ನಿರುತದಿನಾವ ಕಾರ್ಯಕೆ ಗೆಲುವು ಇಹಪರದ ಸೌಖ್ಯವಿತ್ತಾವ ಕಾಲಕ್ಕೆಹೊರೆವಪ್ರಸನ್ನವೆಂಕಟ ದೇವನಂಗ ದೊಳೊಪ್ಪುವಾ7
--------------
ಪ್ರಸನ್ನವೆಂಕಟದಾಸರು