ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವಾದಿ ದೇವ ನೀನವಧರಿಸು ಭಿನ್ನಪವ ಪ ಈ ವಿವಿಧ ಸುರರೊಳಗೆ ಸರಿಯಲ್ಲ ನಿನಗೆ ಅ.ಪ. ಸರಸಿಜಾಸನ ಶಂಭು ಮೊದಲಾದ ಸುರರೆಲ್ಲಾ ಪರತಂತ್ರರವರಲಿ ಕೊರತೆಯುಂಟು ನಿರ್ದೋಷ ನಿರವಧಿಕ ಕಲ್ಯಾಣಗುಣಪೂರ್ಣ ನಿರ್ದುಃಖ ನಿರತಿಶಯ ನಿರುಪಮಾನಂದಾತ್ಮ ಸರ್ವಜ್ಞ ಸರ್ವೇಶ ಸರ್ವತಂತ್ರ ಸ್ವತಂತ್ರ ಸರ್ವವಸ್ತುಗಳಲಿ ಸರ್ವದಾ ಪರಿಪೂರ್ಣ ಪರಿಪೂರ್ಣಕಾಮ ನಿನ್ನುರದಲೆನಗೆ ಸ್ಥಿರವಾಸಕೆಡೆಯ ನೀ ಕರುಣದಿಂದಿತ್ತು ಹರುಷಪಡಿಸುವುದೆನ್ನ ಶರಧಿಮಂದಿರನೆ ಗಿರಿಯ ಧರಿಸಿದೆ ಕರಿಗಿರೀಶನೆ
--------------
ವರಾವಾಣಿರಾಮರಾಯದಾಸರು
ಯತಿಗಳು (ಶ್ರೀ ಬ್ರಹ್ಮಣ್ಯತೀರ್ಥರು) ಕೈಪಿಡಿದು ಪಾಲಿಸೈ ಬ್ರಹ್ಮಣ್ಯಗುರುವೇ ಪ ಅಯ್ಯನೀನೆಂದು ನಿನ್ನಡಿಗೆ ವಂದಿಸುವೇ ಅ.ಪ ಮೂಢವiತಿಗಳು ಬಂದು ಬೇಡಿ ಕೊಳ್ಳಲು ಕರುಣ ನೀಡಿ ನಿನ್ನವರನ್ನು ಕಾಯ್ದರೀತಿ ಗಾಢದಿಂದಲಿ ಬಂದು ಮೂಢನಾದೆನ್ನನು ಗೂಢದಿಂದಲಿ ಕಾಯೊ ಗುಣನಿಧಿಯೆ ಗುರುವೇ . . 1 ಪುರುಷೋತ್ತಮಾರ್ಯರ ವರಪುತ್ರನೆಂದೆನಿಸಿ ಹರುಷದಿಂದಲಿ ಬಂದ ಭಕ್ತಜನರ ಮೊರೆಯಲಾಲಿಸಿ ಸ್ವಾಮಿ ಸ್ಮರಣೆಯ ಕೊಟ್ಟೆನ್ನ ಹರುಷಪಡಿಸುವ ಗುರುವು ನೀನೆಂದು ನಾ ಬಂದೆ 2 ವರಕಣ್ವನದಿ ಕೂಲದಲಿ ಕಲ್ಮಷ ತೊಳೆದು ಸಾರ್ವಭೌಮನ ಗುಣವ ಸರ್ವದಾ ಪಾಡುತಲಿ ಸರ್ವಜನರನು ಕಾವೆ ಸರ್ವಕಾಲದಲಿ 3 ಸರ್ವಗುಣ ಪೂರ್ಣ ಬ್ರಹ್ಮಣ್ಯಪುರ ವಾಸ ನರಹರಿಯ ಪಾದವನು ಸ್ಮರಿಸಿನಿತ್ಯ ಸರಸದಲಿ ಅಬ್ಬೂರು ಪುರವಾಸಿಗಳನೆಲ್ಲ ಅರ್ಭಕರ ತೆರನಂತೆ ರಕ್ಷಿಸುವ ಗುರುವರ್ಯ 4 ಮಣಿದು ಬೇಡುವೆ ನಿನ್ನ ಚರಣದಾಶ್ರಯವಿತ್ತು ಅಣುಗನೆಂದೆನಿಸೆನ್ನ ಸಲಹಬೇಕೊ ಗುಣನಿಧಿ ಶ್ರೀ ಪ್ರಾಣನಾಥ ವಿಠ್ಠಲನ ಘನ ಚರಣ ಸ್ಮರಣೆಯ ನೀಯೊ ಗುರುವೆ 5
--------------
ಬಾಗೇಪಲ್ಲಿ ಶೇಷದಾಸರು