ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನರಹರಿ ತೀರ್ಥಯತಿವರ್ಯ ಇಷ್ಟೆಂದೊ ಚರಿಯ ಪ ಸುರವಿನುತ ಪದಹರುಷತೀರ್ಥರ ಕರಕಮಲ ಸಂಜಾತರೆನಿಸುತ ಧರೆಯೊಳಗೆ ಸಿರಿಸಹಿತರಾ ಮನ ಕರೆದು ಧರೆಸುರ ಜನಕೆ ತೋರಿದ ಅ.ಪ ಚರಿಸುತ ಬರಲು ಗಜಪುರದಿ ಪುರ- ದರಸನಿಲ್ಲದಿರೆ ಯೋಚಿಸುತ ಕರಿಕರದಿ ವರಮಾಲಿಕೆಯ ಕೊಡಲಾಕ್ಷಣದೀ ಯತಿ ವರರ ಕಂಠದಲಿ ಹಾಕಲು ಜನ ಸಭದಿ ಪುರಜನದ ಪ್ರಾರ್ಥನದಿ ದ್ವಾದಶ ವರುಷ ಪ್ರಜರನು ಪೊರೆದು ಕೋಶದೊಳಿ- ರುವ ಧರಿಜಾಸಹಿತ ರಾಮನ ತರಿಸಿ ಪೊರಟರು ಕುದುರೆಯೇರುತ1 ಆ ಮಹಾಮುನಿಪರು ತ್ವರದಿ ಬಂದು ಶ್ರೀ ಮದಾನಂದ ತೀರ್ಥರ ಪದಯುಗದಿ ಪ್ರೇಮವಂದನ ಪೂರ್ವಕದಿ ಸೀತಾ ರಾಮಮೂರ್ತಿಯ ನೊಪ್ಪಿಸಿದರು ಕರದೀ ಶ್ರೀ ಮನೋಹರ ನಂಘ್ರಿಯುಗಲವ ಪ್ರೇಮದಿಂದಲಿ ಪೂಜಿಸುತಲಿರೆ ಈ ಮಹಾತ್ಮರ ಕರೆದು ಕೊಟ್ಟರು ನೇಮದಿಂದರ್ಚಿಸಿರಿ ಎನುತಲಿ 2 ಭಾಸುರ ಹೇಮಮಂಟಪದಿ ನಿತ್ಯಾ ಶ್ರೀಸೀತಾರಾಮನರ್ಚಿಪರು ವೈಭವದೀ ಭೂಸುರ ಕೃತ ವೇದಘೋಷದಿ ಮತ್ತೆ ವ್ಯಾಸಸೂತ್ರಗಳ ನಾಮಾವಳಿ ಪಠಣ ದಿ ದೇಶ ದೇಶಗಳಲ್ಲಿ ಚರಿಸುತ ತೋಷತೀರ್ಥರ ಮತವ ಬೋಧಿಸಿ ಸಿರಿ ನರ ಕೇಸರಿಗೆ ಪ್ರಿಯದಾಸರೆನಿಸಿದ 3
--------------
ಕಾರ್ಪರ ನರಹರಿದಾಸರು
ಮುಕ್ತಿಮಾರ್ಗಕೆ ಸೋಪಾನ ಪ ಕರ ಪರಿಶೇವನಾ 1 ತಿಮಿರ ಭಾಸ್ಕರನೆಂಬುವ ತವ ಬಿರುದಾವಳಿ ಸಂಕೀರ್ತನಾ 2 ಕ್ಷೋಣಿಸುರರಿಗೆ ದ್ರವ್ಯ ದಾನದಿಂದಲಿ ಜಿತ ಭಾನುಜರೆಂಬುವ ಭಾಷಣ 3 ಹರುಷತೀರ್ಥರ ಮತ ಶರಧಿಗೆ ಪೂರ್ಣ ಚಂದಿರನೆಂಬುವ ಶುಭಗಾಯನ 4 ಶರಣರ ಪೊರಿವ 'ಕಾರ್ಪರನರಸಿಂಹ'ನ ಕರುಣ ಪಾತ್ರ ತವಶೇವನಾ 5
--------------
ಕಾರ್ಪರ ನರಹರಿದಾಸರು
ದುಮ್ಮಿಸಾಲೆನ್ನಿರಣ್ಣ ದುಮ್ಮಿಸಾಲೆನ್ನಿರೊದುಮ್ಮಿಸಾಲೆನ್ನಿ ಪರಬೊಮ್ಮನಾಳು ಮೂರುರೂಪಕಮ್ಮಗೋಲನಳಿದನೊಡೆಯ ನಮ್ಮಗುರುಬಳಗವೆಂದುಪ.ಮುಟ್ಟಿಸೆ ಸುದ್ದಿಯ ರಾಮನಟ್ಟಿದರೆ ರಕ್ಕಸರಕಟ್ಟಿಕುಟ್ಟಿ ಕುಣಪ ಮೆದೆಗಳೊಟ್ಟಿಲೊಟ್ಟಿದದಿಟ್ಟತನದಲ್ಲಿ ಲಂಕಾಪಟ್ಟಣ ಮಂದಿರ ಹೋಳಿಸುಟ್ಟು ಬೊಬ್ಬೆಯಿಟ್ಟ ಜಗಜಟ್ಟಿ ಹನುಮಪ್ಪನ 1ಕುರುಕಂಟಕ ಠಕ್ಕಿಸಿ ಕೊಟ್ಟರಗಿನ ಮನೆಯಲಿಕಾಯಲೊರಗಿದರನುರುಹಿ ನಿಜರ ಹೊರಗೆ ಮಾಡಿದಕುರುಗಣವನಕ್ಕೆ ರಣದಿ ಎರಗಿ ಅಗ್ನಿಯಂತೆ ಹುರಿದಾವರಗದಾಧರ ಭೀಮ ಸಾರ್ವಭೌಮನ 2ಧರೆಸಮಗ್ರರಾಜಕೆಂದು ಅರಸುಪದವಿಗಳು ಸೊಕ್ಕಿಸರಸವಾಡಿ ಸರಿಯನುಡಿಯೆ ಹರುಷತೀರ್ಥರುವಿರಸಪೋಕರಳಿದು ಸರ್ವಹರಿ ಸಮರ್ಪಣೇಕಚಿತ್ತವಿರಿಸಾ ಶ್ರೀ ಪ್ರಸನ್ನವೆಂಕಟರಸ ಸಮತೆನಾಡಿದ 3
--------------
ಪ್ರಸನ್ನವೆಂಕಟದಾಸರು