ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇ ಸಾಧಿಸಿನೋಡಿ ಮನ ಉನ್ಮನÀಮಾಡಿ ಘನಸುಖ ಭೇಧಿಸಿದರ ಭಾಸುತದೆ ತನ್ನೊಳು ತಾನೆ ಕೌತುಕಧ್ರುವ ನೋಡಿ ನೋಡಿ ಖೂನ ಅರುಹು ಇಲ್ಲದೆ ಜನದೊಳು ಬರುದೆ ಹೇಳ್ಯಾಡುದೇನ ನಿರ್ವಿಕಲ್ಪನ ನಿಜನೆಲೆನಿಭವರಿತು ನೋಡಿ ಸ್ಥಾನ ಸರ್ವಸಾಕ್ಷಿ ಸರ್ವಾತೀತವೆಂಬ ವಸ್ತು ನೋಡಿ ಪೂರ್ಣ 1 ಕಣ್ಣಿನ ಕೊನೆ ಮುಟ್ಟಿ ಕರಗಿ ಮನವು ನೋಡಿ ಪೂರ್ಣ ಬೊಧ ಸಣ್ಣ ದೊಡ್ಡವರೊಳಗಿದೆ ಒಂದು ಸಾರುತಿದೆ ವೇದ ಧನ್ಯ ಧನ್ಯಗೈಸುವ ನಿಜ ಪುಣ್ಯ ಗುರುಪಾದ ಚನ್ನಾಗ್ಯನುಭವದಿಂದ ನೋಡಲಿಕ್ಯಾಗದು ಸ್ವಾದ 2 ಸುರಿಮಳಿಗರೆವುತಲ್ಯದೆ ಸ್ವಸುಖದಾನಂದೊ ಬ್ರಹ್ಮ ತೆರೆತಿಳಿಯಲಿಕ್ಕೆ ಗುರು ಶರಣ ಹೋಗಬೇಕು ಇದೇ ವರ್ಮ ಹರುಷಗೈಸಿದ ನೋಡಿ ಪತಿತಪಾವನ ಸದ್ಗುರು ನಮ್ಮ ತರಳ ಮಹಿಪತಿಗಿದೆ ನಿತ್ಯಭಿನವದ ನೋಡಿ ಸಂಭ್ರಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೃಷ್ಣ ಎಂಥಾದೊ ನಿನ್ನ ಕರುಣ ಶಿಷ್ಯ ಜನರುದ್ದೇಶಬಂದ್ಯೊ ನೀ ಕರುಣ ದುಷ್ಟಜನರ ಮಾಡಿದ್ಯೊ ನೀ ಮರ್ದನಿ ದೃಷ್ಟಿಸಿ ಮಾಡುವೆ ಸಾಧು ಸಂರಕ್ಷಣೆ 1 ಹುಟ್ಟಿ ವಸುದೇವನಲ್ಲಿ ಬಂದು ಹೊಳೆದ್ಯೊ ದಿಟ್ಟತನದಲಿ ನಂದಗೋಕುಲದಿ ಬೆಳೆದ್ಯೊ ಮೆಟ್ಟಿ ವಿಷದ ಹಾವಿನ ಹೆಡೆಯ ತುಳಿದ್ಯೊ ಕುಟ್ಟಿ ಕಂಸಾಸುರನ ಪ್ರಾಣವೆಳೆದ್ಯೊ 2 ಮೊಲಿಯನುಂಡು ಕೊಂಡಿ ಪೂತನಿ ಪ್ರಾಣ ಕಾಲಿಲೊದ್ದು ಕೊಂದ್ಯೋ ಶಕಟಾಸುರನ ಬಾಲತನದಲಿ ಕೆಡಹಿದ್ಯೊ ಮಾವನ ನೆಲೆಯು ತಿಳಿಯದು ಇನ್ನೊಬ್ಬರಿಗೆ ಪೂರ್ಣ 3 ತುರುಗಳ ಕಾಯ್ದ್ಯೊ ನೀ ಗೋವಿಂದ ಬೆರಳೆಲೆತ್ತಿದ್ಯೊ ಹಿರಿಯ ಮುಕುಂದ ಮರುಳು ಮಾಡಿದ್ಯೊ ಗೋಪಿಕೇರ ವೃಂದ ಹರುಷಗೈಸಿದೆ ಅನೇಕ ಪರಿಯಿಂದ 4 ಹಾಲು ಬೆಣ್ಣೆ ಕದ್ದು ತಿಂಬು ನಿನ್ನಾಟ ಬಾಲಗೋಪಾಲರ ಕೂಡಿ ನಿನ್ನೂಟ ಚಲುವ ನಾರೇರ ನೋಡುವ ನಿನ್ನೋಟ ಒಲಿದು ಕುಬ್ಜಿಯ ಬೆನ್ನ ಮಾಡಿದ್ಯೊ ನೀಟ 5 ಗುರುಮಗನ ತಂದುಕೊಟ್ಯೋ ನೀ ಪ್ರಾಣ ಸುರಬ್ರಹ್ಮಾದಿಗಳರಿಯರು ನಿನ್ನ ತ್ರಾಣ ಶರಣಾಗತರ ವಜ್ರಪಂಜರು ಪೂರ್ಣ ವರಮುನಿಗಳಿಗಾಗಿಹೆ ನೀ ನಿಧಾನ 6 ಒಲಿದು ಪಾಂಡವರಿ ಗಾದಿ ಸಹಕಾರಿ ಬಲವ ಮುರಿದ್ಯೊ ನೀ ಕೌರವರ ಸಂಹಾರಿ ಪರಿ ಅಟ ನಿನ್ನದೊ ಶ್ರೀ ಹರಿ ಪರಿ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಲೇಸು ಲೇಸಾಯಿತು ನೋಡಿ ಭಾಸ್ಕರನ ಕೂಡಿ ಧ್ರುವ ಲೇಸು ಲೇಸಾಯಿತು ನೋಡಿ ಸ್ವಸುಖಗೂಡಿ ಆಶೆ ಪೂರಿಸಿದ ನೋಡಿ ಭಾಸಿ ನೀಡಿ 1 ಶಿರದಲಿ ಅಭಯನಿಟ್ಟ ಹರುಷವ ಕೊಟ್ಟ ಹರಿದು ಭವಜೀವ ಸುಟ್ಟ ಸ್ಮರಣಿಯೊಳಿಟ್ಟ 2 ಮಾಯದ ಮೊನೆ ಮುರಿದ ಭಯ ಹರಿದ ಸಾಯೋಜ್ಯಪದ ತೋರಿದ ದಯ ಬೀರಿದ 3 ಸದ್ವಾಕ್ಯವೆ ಬೋಧಿಸಿದ ಸದ್ಗುಣದ ಸದ್ಭಾವ ಭಕ್ತಿ ತೋರಿದ ಸದ್ಗೈಸಿದ 4 ಅನುಭವ ಸುಖದೋರಿದ ಸ್ವಾನುಭವದ ಮನವಿಗ್ಯೆನುಕೂಲಾದ ತಾನೆ ತಾನಾದ 5 ಸವಿಸುಖವನುಣಿಸಿದ ಸುವಿದ್ಯದ ರವಿ ಕೋಟಿ ಪ್ರಭೆಯ ತೋರಿದ ಅವಿನಾಶದ 6 ತರಳ ಮಹಿಪತಿ ಪ್ರಾಣ ಗುರುನಿಧಾನ ಹರುಷಗೈಸಿದ ಜೀವನ ಪರಮಪಾವನ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು