ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಷ್ಟೇಕೆ ನಿರ್ದಯ ಶ್ರೀಹರಿಯೇ ಸೃಷ್ಟೀಪತಿಯೆ ಪ. ಮುಟ್ಟಿ ಭಜಿಪರ ನಿಟ್ಟಿಸಿ ನೋಡದೆ ನಿಷ್ಠುರವಾಗಿಹುದಿಷ್ಟವೆ ನಿನಗಿದು ಅ.ಪ. ಸಣ್ಣ ಮಾತುಗಳಾಡಿದೆನೇನೊ ದೆನ್ನ ತಲೆಯ ಮೇಲಿನ್ನೊಗೆಯದಿರು 1 ಕೋರೆಯ ತೋರುತ ಕೊಸರುವುದೇಕೋ ಶ್ರೀಹರಿ ನೀ ನೀರೀತಿ ಮಾಡುವ ಬಗೆಯಿನ್ನೇಕೋ ನೀರಜಭವಪಿತ ನೀನೇನಗೈದರು ಸೇರಿದೆ ನಿನ್ನನು ಸಾರೆನದಾರನು 2 ಸಿಂಗನ್ನ ಪೋಲುವ ಮುಖ ಧರಿಸಿ ಕಂಗೆಡೆ ಭಯದಿ ಜಗಂಗಳ ನಡುಗಿಪ ನುಂಗಲು ಬರುವಾಸಿಂಗನ ಬಗೆ ಸಾಕೋ 3 ಮುನ್ನಾ ಶುಕ್ರನ ಕಣ್ಣನು ತಿವಿದಾ ಪುಲ್ಲಿನತುದಿಯಿಂ ಎನ್ನೀ ಕಣ್ಣನ್ನು ತಿವಿಯದಿರಣ್ಣಾ ನಿನ್ನೀಕರದೊಳಿಹ ಘನ ಕೊಡಲಿಗೆ ನೀ ನಿನ್ನಾರನು ಗುರಿಗೈಯದಿರೆಂಬೆನು 4 ಶಿಲೆಯಾಗಿದ್ದವಳ ಕಲುಷವ ಕಳೆದು ಪಾವನೆಯೆನಿ ಕಾಳಿಂಗನ ಫಣೆಯೊಳು ಕುಣಿಕುಣಿದೇ ಭಳಿರೆನೆ ಬಾಲ ಗೋಕುಲ ಬಾಲೆಯರೆಲ್ಲರ ಜಾಲವಿದ್ಯೆಯಿಂ ಮರುಳುಗೊಳಿಸಿದೆ 5 ತುರುಗವನೇರುತ ತರುಬಲು ಬೇಡೈ ಧರೆಯೊಳು ನೀನೆತ್ತಿದ ಪರಿಪರಿ ರೂಪವ ಸ್ಮರಿಸಿ ಸ್ಮರಿಸಿ ಮನಬೆರಗಾಗಿದೆ ಹರಿ6 ಶರಣಾಭರಣನೇ ನೀನೆಂದು ಮನದೆಂದು ಮರೆಬೇಡುವೆನೈ ಬಳಿಸಂದು ವರಶೇಷಗಿರಿ ದೊರೆನೀನಿಂದು 7
--------------
ನಂಜನಗೂಡು ತಿರುಮಲಾಂಬಾ
ಮಧ್ವೇಶ - ಮಧ್ವೇಶಾ ಪ ಸಿದ್ಧ ಮುನಿಯಲಿಂ | ದುದ್ಬವಿ ಶಾಸ್ತ್ರಗಳಬ್ದಿಯ ರಚಿಸುತ | ಉದ್ದರ ಸುಜನರ ಅ.ಪ. ವೇದ ವಿಭಾಗಗ | ಳಾದರದಿಂದಲಿಗೈದು ಋಷಿಗಳಿಗೆ | ಭೋದಿಸಿರುವೆ ಹರಿ 1 ನಿತ್ಯ ವೇದಾರ್ಥದ | ಸತ್ಯವನರಿಯಲುಕೃತ್ಯ ಮೀಮಾಂಸದ ಶಾಸ್ತ್ರ ನಿನ್ನೆಂದೆ 2 ಸೃಷ್ಟಿಗೀಶ ಹರಿ | ಅಷ್ಟಾದಶವೆನೆಸುಷ್ಠು ಪುರಾಣಗ | ಳಷ್ಟು ವಿರಚಿಸಿದೆ 3 ಈಶ ಮುಖ್ಯದಿವಿ | ಜೇಶ ನಮಸ್ಕøತವ್ಯಾಸಾಭಿಧ ಹರಿ | ಪೋಷಿಸು ಎಮ್ಮನು 4 ಉಂಬುವುಡುವುದು | ಕೊಂಬ ಕೊಡುವದನುಬಿಂಬ ಕೃತಗಳನೆ | ನಂಬಿಗೆ ಈಯೋ 5 ಮನಚಂಚಲ ತವ | ಗುಣ ರೂಪಗಳನುಗುಣಿಸಲಸಾಧ್ಯವು | ಮನದಿ ನೆಲಸೊ ಹರಿ6 ಕೀಟನಿಂದ ಭುವಿ | ರೋಟಿಸಿದ ಪ್ರಭುಸಾಟ ರಹಿತ ಹರಿ | ಕೋಟಿ ತಟತ್ಪ್ರಭ 7 ಸಪ್ತಧಾತು ತನು | ಸಪ್ತ ಕಮಲದಲಿಆಪ್ತನಿದ್ದು ನಿ | ರ್ಲಿಪ್ತನೆಂದೆನಿಸಿದೆ 8 ಭವ | ನೋವನು ಕಳೆಯನು 9
--------------
ಗುರುಗೋವಿಂದವಿಠಲರು
ಬಿಂದುಮಾಧವರಮಾಧವಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಬಿಂದುಮಾಧವಸುಬಂಧು ದೀನಭವ|ಬಂಧತರಣ ಗೋವಿಂದ ಶ್ರೀ ಕೃಷ್ಣ1ಮಂದರಾದ್ರಿಧರಕುಂದರದನಮಹಾ |ಸುಂದರಸಿರಿಹೃನ್ಮಂದಿರ ವಾಸಾ2ಕದ್ದಿಕಾರ ಸುರವೃಂದ ಸುಪೂಜಿತ |ಇದ್ದಿ ದೇವ ಕಚವೃಂದ ಸಮೇತಾ3ನಂದ ನಂದನ ಸುಸಿಂಧುರ ವರದ ಮು-ಕುಂದಗೋಪಿಕಾ ವೃಂದ ವಿಹಾರಾ4ಮಲ್ಲಿಖೇಡ ಸ್ಥಳ ಹೊಳೆ ಕಾಗಿಣಿ ಥಡಿಬಳಿಗೆ ರಾಯರು ಕುಳಿತಲ್ಲಿರುವ5ಪಂಕಜಾಕ್ಷ ಮೀನಕೇತು ಜನಕ ಗರು-ಡಾಂಕಶಶಿಧ್ವಜ ಶಂಕರಪ್ರಿಯ ಹರಿ6
--------------
ಜಕ್ಕಪ್ಪಯ್ಯನವರು