ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂತುಜನಕನ ನೆನೆಯಲೆ ಬರಿದೆ ಮನ ಚಿಂತಿಸಿ ಫಲವಿಲ್ಲಲೇ ಪ ಕುಂತಿಸುತರಪಾಲ ಸಂತಜನರ ಪ್ರೀಯ ಚಿಂತೆಯಳಿದು ನಿಶ್ಚಿಂತೆ ಪಾಲಿಸುವಂಥ ಅ.ಪ ಕೀಳುಯೋಚನೆ ಅಳಿಯೆಲೆ ವೈಕುಂಠನ ಶೀಲತನದಿ ಭಜಿಸೆಲೆ ಮೂಲಮಂತ್ರವ ಕೇಳೋ ನೀಲವರ್ಣನ ಜಪ ಕಾಲನ ಬಾಧೆಯ ಗೆಲಿಸಿ ಪಾಲಿಸುವಂಥ 1 ಕರಿಧ್ರುವರೆಂಬುವರೊ ಹರಿಹರಿಯೆಂದು ಸ್ಥಿರಮುಕ್ತಿ ಪಡೆದಿಹ್ಯರೊ ಹರಿಯೆಂದು ಪ್ರಹ್ಲಾದ ಪರಮಕಂಟಕ ಗೆದ್ದ ಹರಿಯೆಂದು ವಿಭೀಷಣ ಸ್ಥಿರಪಟ್ಟ ಪಡೆದನು 2 ವಾಸನಾದೇಹವಿದು ಶಾಶ್ವತವಲ್ಲ ನಾಶನಹೊಂದುವುದು ಬೇಸರಿಲ್ಲದೆ ಪಠಿಸೀಶ ಶ್ರೀರಾಮನ ಧ್ಯಾಸÀವ ಮರೆಯದಿರು ಹೇಸಿಭವವ ಗೆಲಿಪ 3
--------------
ರಾಮದಾಸರು
ಕರುಣವ ಬೀರು ಚೆನ್ನ ಕಾಯಬೇಕೋ ಎನ್ನಮರೆತಿರೆ ಕಾವರ ಕಾಣೆಪ. ಸೊಪನ ಜಾಗರದಲ್ಲಿ ನಿನ್ನ ಧ್ಯಾನವೆ ಬಂದುತೃಪ್ತನಾಗಿ ನಾನು ಜೀವಿಸುವೆಕಪಟದ ನುಡಿಯಲ್ಲ ನೀನೆ ಬಲ್ಲೆವಿಪತ್ತುಗಳನೆ ಬಿಡಿಸಯ್ಯ 1 ಕಡಲಮಗಳ ಗಂಡ ಕಾಮಧೇನು ನೀ ಕಂಡ್ಯಾಬಡವ ನಿನ್ನಡಿಗೆ ಪೊಡಮಡುವೆಒಡಲ ಬಳಿಯ ನೆಳಲಂತೆ ಬಿಡದೆ ನಿನ್ನದೃಢವಾಗಿ ನಾನು ಕೂಡುವೆನು 2 ತಂಡ ತಂಡದ ವ್ಯಾಧಿಯ ಉಂಡು ಉಂಡು ಬಳಲಿದೆಕಂಡ ಕಂಡವರ ಬೇಡಿ ನೊಂದೆಹಿಂಡುಹಿಂಡುಗಟ್ಟಿ ಬಂದ ಚಂಡ ದಂಡಧರನವರುತುಂಡು ತುಂಡು ಮಾಡಿ ಕಾಡುವರು 3 ಘೋರತರ ವ್ಯಾಧಿಗಳ ತೋರಿ ತೋರಿ ನರಕದಿಮುರಹರನುಣಿಸದೆ ಬಿಡನುಮೀರಿ ಮೀರಿ ಬಹ ಮೃತ್ಯು ಆರನಂಜಿಸುವುದುಭಾರಿ ಭಾರಿ ಗಳಿಸಿದ ಪಾಪ 4 ಹರಿ ನಿನ್ನ ಚರಣದ ಸ್ಮರಣೆ ಒಂದಿರೆ ಸಾಕುಮರಣಗಿರಣಕಂಜೆನಯ್ಯಶರಣಜನರು ನಿನ್ನ ಪ್ರಾಣಕ್ಕೆ ಸರಿಯೆಂಬೆಸಿರಿರಮಣನೆ ಸಲಹೆನ್ನ 5 ಶರಧಿಯೊಳಾಡುವ ಮಂದರಧರ ವರಾಹನೆಹಿರಣ್ಯಾಕ್ಷವೈರಿ ವಾಮನನೆಪರಶುರಾಮನೆ ರಘುರಾಮ ಕೃಷ್ಣ ಬೌದ್ಧನೆಧುರದಿ ಕಲ್ಕಿಯಾಗಿ ಮೆರೆದೆ 6 ಕರಕರ ಮತತತ್ವವ ಒರದೊರೆದು ಪೇಳುವೆಥÀರಥರದ ಹಿರಿಯರನೆಲ್ಲಮಿರಿ ಮಿರಿ ಮಿಂಚುತಿಹ ಮುರಹರನ ಭಜಿಸದೆಹರಿಹರಿಯೆಂದು ಪೇಳೆನೊಮ್ಮೆ 7 ಮನೆಮನೆವಾರ್ತೆಗೆ ಧನಂಗಳ ಗಳಿಸಿದೆಚಿನಿಚಿನಿಯಂಬರಕೆ ಮರುಳಾಹೆಮನೆಮನೆ ಮಹಿಮೆಯ ಕಾಣೆ ಕಾಣೆ ಕೆರೆಗಳನೆನೆನೆನೆದಾಡುತ್ತ ನಾ ಭಜಿಸಿ 8 ತನು ಜೀರ್ಣವಾಯಿತು ಕರಣ ಎನ್ನಿಚ್ಛೆಯೊಳಿಲ್ಲಮನವೆನ್ನ ಮಾತು ಕೇಳದಯ್ಯಇನಿತು ಸಂಕಟದವ ಇನ್ನು ನಾನೆಂತರ್ಚಿಪೆವನಜನಾಭನೆ ಹಯವದನ9
--------------
ವಾದಿರಾಜ
ಕಾಯೊ ಕರುಣಾಭಯ ಕೃದ್ಭಯ ನಾಶನ ಧ್ರುವ ಕಂದ ಪ್ರಲ್ಹಾದಗಾಗಿ ಸಂಧಿಸೊದಗಿನಿಂತು ಬಂದು ರಕ್ಷಿಸಿದೆ ಪ್ರಾಣ ಚಂದವಾಗಿ ನೀ 1 ಕರಿಯ ಮೊರೆಯ ಕೇಳಿ ನೆರಯ ಬಿಡಿಸಿದೆ ಎಂದು ಮೊರೆಯ ಹೊಕ್ಕೆನು ನಿಮಗೆ ಹರಿಹರಿಯೆಂದು 2 ದ್ರೌಪದಿಯ ಅಭಿಮಾನ ಕೃಪೆಯಿಂದ ನೀ ಪೂರ್ಣ ಉಪಾಯದಲಿಗಾಯ್ದ ಅಪಾರ ಮಹಿಮ 3 ಸ್ಮರಿಸಿದಾಕ್ಷಣ ಬಂದು ಕರುಣದಿಂದನ್ಯರಿಗೆ ಪರಿಪರಿಯಿಂದ್ಹೊರೆದೆ ವರಮುನಿಗಳ 4 ಶರಣು ಹೊಕ್ಕೇನು ನಿಮ್ಮ ತರಳ ಮಹಿಪತಿ ಪ್ರಾಣ ಹೊರೆದು ರಕ್ಷಿಸು ಎನ್ನ ಪರಮಪಾವನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಡಿ ಮಡಿ ಮಡಿಯೆಂದು ಅಡಿಗಡಿಗೆ ಹಾರುವೆ |ಮಡಿ ಮಾಡುವ ಬಗೆ ಬೇರುಂಟು ಪ.ಪೊಡವಿ ಪಾಲಕನ ಧ್ಯಾನ ಮಾಡುವುದು |ಬಿಡದೆ ಭಜಿಸುಮದು ಅದು ಮಡಿಯಾ ಅಪಬಟ್ಟೆಯ ನೀರೊಳಗಿಟ್ಟು ಒಣಗಿಸಿ |ಉಟ್ಟರೆ ಅದು ತಾ ಮಡಿಯಲ್ಲ ||ಹೊಟ್ಟೆಯೊಳಗಿನ ಕಾಮ - ಕ್ರೋಧಗಳ |ಬಿಟ್ಟರೆ ಅದು ತಾ ಮಡಿಯೊ 1ಪರಧನ ಪರಸತಿ ಪರನಿಂದೆಗಳನು |ಜರೆದಹಂಕಾರಗಳನೆ ತೊರೆದು ||ಹರಿಹರಿಯೆಂದು ದೃಢದಿ ಮನದಲಿಇರುಳು ಹಗಲು ಸ್ಮರಿಸಲು ಮಡಿಯೋ 2ಎಚ್ಚರವಿಲ್ಲದೆ ಮಲ ಮೂತ್ರ ದೇಹವ |ನೆಚ್ಚಿ ಕೆಡಲು ಬೇಡಲೊ ಮನವೆ ||ಅಚ್ಚುತಾನಂತನ ನಾಮವ ಮನಗೊಂಡು |ಸಚ್ಚಿಂತೆಯಲಿರುವುದೆ ಮಡಿಯೊ 3ಭೂಸುರರು ಮಧ್ಯಾಹ್ನಕಾಲದಲಿ |ಹಸಿದು ಬಳಲಿ ಬಂದರೆ ಮನೆಗೆ ||ಬೇಸತ್ತು ನಮಗೆ ಗತಿಯಿಲ್ಲ ಹೋಗೆಂದು |ಹಸನಾಗಿ ಉಂಬುವುದು ಅದು ಮಡಿಯೊ ? 4ದಶಮಿ - ದ್ವಾದಶಿಯ ಪುಣ್ಯಕಾಲದಲಿ |ವಸುದೇವ ಸುತನ ಪೂಜಿಸದೆ ||ದೋಷಕಂಜದೆ ಪರರನ್ನು ಭುಜಿಸಿ ಯಮ - |ಪಾಶಕೆ ಬೀಳ್ವುದು ಹುಸಿಮಡಿಯೊ ? 5ಸ್ನಾನ -ಸಂಧ್ಯಾನ ಮೊದಲಾದ ಕರ್ಮಗಳೆಲ್ಲ |ಜಾÕನ -ಮಾನ - ಸುಮ್ಮಾನದಿಂದ ||ದೀನವಂದ್ಯನಸುಜನ ಸಂತರ್ಪಣ |ಅನುದಿನಮಾಡುವುದು ಘನಮಡಿಯೊ6ಗುರು ಹಿರಿಯರ ಹರಿದಾಸರ ನೆನೆದು |ಚರಣಕೆರಗಿ ಭಯ ಭಕ್ತಿಯಿಂದ ||ಪರಿಪರಿ ವಿಧದಲಿ ಪುರಂದರವಿಠಲನ |ನೆರನೆಂಬುವುದು ಉತ್ತಮ ಮಡಿಯೊ 7
--------------
ಪುರಂದರದಾಸರು