ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಮ ತನ್ನ ಪುರದಿ ಸಾರಿದನು ಎಮ್ಮ ಕಮಲನಾಭನ ದಾಸರ ಮುಟ್ಟದಿರಿಯೆಂದು ಪ. ಭುಜದಲೊತ್ತಿದ ಶಂಖಚಕ್ರಾಂಕಿತವನ್ನು ನಿಜ ದ್ವಾದಶನಾಮ ಧರಿಸಿಪ್ಪರಾ ತ್ರಿಜಗವಂದಿತ ತುಲಸಿಯ ಮಾಲೆ ಹಾಕಿದ ಸುಜನರಂಗಣವ ಪೊಗದೆ ಬನ್ನಿರೆಂದು 1 ಗೋಪಿಚಂದನ ಬಿಟ್ಟು ದೇಹಕ್ಕೆ ಭಸ್ಮವ ಲೇಪಿಸಿ ಹರಿಹರರೊಂದೆಂಬ ಪಾಪಿಗಾಳೆಳತಂದು ಕಣ್ಣು ಕಳಚಿ ಅಂಧ ತಾಮಸಿನೊಳಗ್ಹಾಕಿ ಕಲ್ಲು ದಬ್ಬಿರೊ ಎಂದು 2 ತಾಳದಂಡಿಗೆ ನೃತ್ಯಗೀತ ಸಮ್ಮೇಳದಿ ಊಳಿಗವನು ಮಾಳ್ಪ ಹರಿದಾಸರ ಕೇಳುತಲೊಮ್ಮೆ ಕರಗಳ ಮುಗಿದು ನ - ಮ್ಮಾಳುಗಳೆನುತ ಪೇಳದೆ ಬನ್ನಿರೆಂದು 3 ಗುರುಮುದ್ರೆಯವನು ತಾನೆಂದು ಪ್ರಾಣಿಗಳ ಮಂ- ದಿರಕೆ ಪೋಗಿ ಪೋಗಿ ನಿರ್ಬಂಧಿಸಿ ಬರಿದೆ ಬೈದು ಬಳಲಿಸುವ ಪಾಪಿಗಳ ಕೊರೆದು ಕುಟ್ಟಿತಂದು ಮುರಿದು ಕೊಲ್ಲಿರೊ ಎಂದು 4 ಅನ್ಯದೈವ ಅನ್ಯಮಂತ್ರ ತಂತ್ರವ ಬಿಟ್ಟು ಪನ್ನಗಶಯನನೆ ಗತಿಯೆನುತ ಉನ್ನತ ಹರಿದಿನ ವ್ರತವನಾಚರಿಪ ಪ್ರ- ಸನ್ನರ ಗುಣವ ಕೆಣಕದೆ ಬನ್ನಿರೆಂದು 5 ಚರ್ಮಕ್ಕೆ ಸಿಡಿ ಊರಿ ಬೇವಿನುಡುಗೆವುಟ್ಟು ಚಿಮ್ಮುತ ಚೀರುತ ಬೊಬ್ಬೆಗಳಿಡುತ ಕರ್ಮ ಕೂಗುರಿಯಾಗಿ ಪ್ರಾಣಹಿಂಸೆಯ ಮಾಳ್ಪ ಬ್ರಹ್ಮೇತಿಕೋರನ ಬ್ಯಾಗನೆ ಎಳತನ್ನಿ 6 ಕೇಶವ ಹರಿ ಅಚಲಾನಂದವಿಠಲನ್ನ ಶೇಷಗಿರಿಯ ತಿರುಮಲೇಶನ ದಾಸರ ದಾಸರ ದಾಸನೆಂದೆನಿಸುವ ದಾಸರ ಗುಣವ ಕೆಣಕದೆ ಬನ್ನಿರಿ ಎಂದು 7
--------------
ಅಚಲಾನಂದದಾಸ
ಯಮರಾಯ ಪೇಳ್ದ ದೂತರಿಗೆ ಲಕ್ಷ್ಮೀ ರಮಣನ ದಾಸರಿದ್ದೆಡೆಗೆ ಪೋಗದಿರೆಂದು ಪ ವೇದ ವ್ಯಾಕರಣ ಶಾಸ್ತ್ರಗಳೋದಿ ಶ್ರಾದ್ಧವೇ ಕಾದಶಿ ದಿನದಿ ಮಾಡುತಲಿಪ್ಪರಾ ಭೇದಮತವ ಮಿಥ್ಯವೆನುತಲಿಪ್ಪ ಮಾಯ ವಾದಿಗಳೆಳ ತಂದು ನರಕದೊಳಿಡಿರೆಂದು 1 ತಿರಿಪುಂಡ್ರವನಿಟ್ಟು ಭಸ್ಮದೇಹಕೆ ಪಟ್ಟೆ ಕೊರಳಿಗೆ ರುದ್ರಾಕ್ಷಿ ಸರವ ಕಟ್ಟಿ ಕುರಿಗಳ ಕೊಯ್ದು ಯಜ್ಞವ ಮಾಳ್ಪೆವೆನುತಲಿ ಹರಿಹರರೊಂದೆಂಬರೆಳತನ್ನಿರೆಂದು 2 ಶಿವನೆ ತಾನೆಂದು ಜಾನ್ಹವಿ ತೀರದಲಿ ಪಾ ರ್ಥಿವ ಲಿಂಗನ ಪೂಜಿಪ ಅವಿವೇಕರಾ ಶಿವರಾತ್ರಿಗಳಲಿ ಆಹಾರ ಬಿಡುವವರ ಉ ರವ ನರಕದೊಳ್ಪವಣಿ ಬಿಡಿಸಿರೆಂದು 3 ಮಳೆ ಚಳಿ ಬಿಸಿಲು ಕತ್ತಲೆಯೊಳು ಬರಲು ನ ಮ್ಮಿಳೆಯದೊಳು ಸ್ಥಳವಿಲ್ಲೆಂಬರ ಕಳವಿಲವರ ದ್ರವ್ಯಗಳನಪಹರಿಸುವ ಬಲು ನೀಚರ ಪಿಡಿದೆಳೆದು ತನ್ನಿರೋ ಎಂದು 4 ಶ್ರೀ ತುಳಸಿಯ ಬಿಟ್ಟು ಹಲವು ಪುಷ್ಪದಿ ಜಗ ನ್ನಾಥವಿಠಲನ ಪೂಜಿಸುತಿಪ್ಪರಾ ಮಾತನಾಡಿ ವೇದಮಂತ್ರ ಬಿಡುವರ ಯಾತನ ದೇಹವ ಕೊಟ್ಟು ಬಾಧಿಸಿರೆಂದು 5
--------------
ಜಗನ್ನಾಥದಾಸರು