ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತುಂಗಭದ್ರೆ ಸುತರಂಗಿಣಿ ತೀರಗನ್ಯಾರೇ ಪೇಳಮ್ಮಯ್ಯ ಪ ಮಂಗಳ ಮಹಿಮ ಶುಭಾಂಗ ಮೂರುತಿ | ಶ್ರೀ ಹರಿಹರ ಇವ ಕಾಣಮ್ಮ ಅ.ಪ. ಬಹು ಕಂಟಕಿ ಆ ಗುಹನ ತಪಸಿಗೆ | ಮೆಚ್ಚಿದ ಹರ ನೋಡಮ್ಮಮ್ಮ |ಅಹಿ ಭೂಷಣ ತಾ ವರವನು ಕೊಟ್ಟನು | ಬಹು ಬೇಗನೆ ನೋಡಮ್ಮಮ್ಮ|ವಿಹಗವಾಹ ಹರಿ ಮತ್ತೆ ರುದ್ರನಿಂ | ಇವನ ಜೇಯ ನೋಡಮ್ಮಮ್ಮ |ಮಹಿಯೊಳು ಸುರರಾಹವ ಕೆಡಸುತ | ಬಹು ಹಿಂಸಕ ನೋಡಮ್ಮಮ್ಮ 1 ಸುರಲೋಕಕು ಈ ಅಸುರನ ಬಾಧೆಯು | ತಟ್ಟಿತು ನೋಡಮ್ಮಮ್ಮ |ಸುರ ಭೂಸುರರೆಲ್ಲರು ಮೊರೆಯಿಟ್ಟರು | ಹರಿಯಲಿ ನೋಡಮ್ಮಮ್ಮ |ಸಿರಿಯರಸನು ತಾನಭಯವನಿತ್ತವರನು | ಕಳುಹಿದ ನೋಡಮ್ಮಮ್ಮ | ಕರುಣಾಕರ ತಾ ಹರಿಹರ ರೂಪದಿ | ದುರುಳನ ತರೆದ ನೋಡಮ್ಮಮ್ಮ 2 ಕೃತ್ತಿವಾಸ ತಾ ನಿತ್ತ ವರವ ಹರಿ | ಪಾಲಿಸಿದನು ನೋಡಮ್ಮಮ್ಮ | ದಿತಿಸುತನಾಯುವು ದಶಶತಕಳೆಯಲು | ವತ್ತಿದ ಕೆಳಗವನಮ್ಮಮ್ಮ |ಹಿತದಿಂದಲಿ ತಾ ಭಕುತರ ಪೊರೆಯುವ | ಹರಿಹರನ ನೋಡಮ್ಮಮ್ಮ | ದೈತ್ಯನ ಪೆಸರಿಲಿ ಪಾವನವಾಯಿತು | ಈ ಕ್ಷೇತ್ರವು ಕಾಣಮ್ಮಮ್ಮ 3 ದಕ್ಷಿಣ ಪಾಶ್ರ್ವದಿ ಅಭಯ ಹಸ್ತ | ತ್ರಿಶೂಲ ಧರನ ನೋಡಮ್ಮಮ್ಮ | ಅಕ್ಷಿಯ ಮಾನಿಯು ದಕ್ಷಿಣ ಶಿರದಲಿ | ಮೆರೆಯುವನು ನೋಡಮ್ಮಮ್ಮ | ದಕ್ಷಸುತೆಯು ತಾ ವಿರೂಪಾಕ್ಷನ | ಸೇವಿಪಳೂ ನೋಡಮ್ಮಮ್ಮ |ಪಕ್ಷಿವಾಹಗೆ ತಾನರ ಮೈಯ್ಯಾದನು | ತ್ರ್ಯಕ್ಷನು ಕಾಣಮ್ಮಮ್ಮ 4 ಕಂಬು | ಧರನಾ ನೋಡಮ್ಮಮ್ಮ ಲಕ್ಷ್ಮೀವನಿತೆಯು ಕಾಮನ ಜನಕನ | ಸೇವಿಪಳೂ ನೋಡಮ್ಮಮ್ಮ ಶುಮಲಾಂಗ ವನಮಾಲೆಗಳನು | ಧರಿಸಿಹ ನೋಡಮ್ಮಮ್ಮ |ಸಾಮಸನ್ಮುತ ಗುಣಧಾಮನ ಲೀಲೆ | ಇದೆಲ್ಲವು ಕಾಣಮ್ಮಮ್ಮ 5 ಕ್ರೋಶ ಪಂಚ ನಾಲ್ಕಾರದಿ ಮೀಸಲು | ಸುಕ್ಷೇತ್ರವ ನೋಡಮ್ಮಮ್ಮ | ಭಾಸಿಸುವವು ಇಲ್ಲೆಕಾದಶ ವರ | ತೀರ್ಥಂಗಳು ನೋಡಮ್ಮಮ್ಮ | ಈ ಸುಕ್ಷೇತ್ರವು ಆ ಮಹಕಾಶಿಗೆ | ಸಮವೆನಿಸಿದೆ ನೋಡಮ್ಮಮ್ಮ |ಅಸಮ ಮಹಿಮ ಹರಿ ಅಸುರಗೆ ಕೊಟ್ಟನು | ಈ ಪರಿವರ ಕಾಣಮ್ಮಮ |6| ಕೃತಿ ವಿಧಿ ಜನಕನಿಗೂ | ಭೇದವೆ ಸರಿ ಕೇಳಮ್ಮಮ್ಮ ಮೋದಮಯ ಗುರು ಗೋವಿಂದ ವಿಠಲನ | ಲೀಲೆಗಳಿವು ಕಾಣಮ್ಮಮ್ಮ 7
--------------
ಗುರುಗೋವಿಂದವಿಠಲರು
ನಾನೇನಂದನೆ ಭಾವಕಿ ಒಳ್ಳೆಆನಂದಮಯ ಹರಿಹರ ಮುನಿದಿತ್ತಬಾರ ಪ ರಮಣಿ ಕುಚ ಕುಂಕುಮಾಂಕಿತ ವಕ್ಷವಾರಿಧಿಶಯನ ಶ್ರೀವಾಸವಾರ್ಚಿತನಾರದನುತ ಪಂಕಜದೈತ್ಯ ಸಂ-ಹಾರ ಶ್ರೀ ಹರಿಹರನೆಂದೆನಲ್ಲದೆಮಾರಮರ್ಧನನೆಂದೆನೆ ಮೆರೆವ ಸರ್ಪಹಾರ ಕುಂಡಲನೆಂದೆನೆ ಶೋಭಿಸುವ ವೈಯ್ಯಾರ ವಿಭೂಷಣ ಶಂಕರನೆಂದೆನಲ್ಲದೆ 1 ಮಡದಿಯೋರ್ವಳ ನುಡಿ ಕಳ್ಳನೆಂದೆನಲ್ಲದೆ ಮಿಗೆಜಡೆದಲೆಯವನೆಂದನೆ ಪುಲಿದೊಗಲದೃಢದಿ ಹೊದ್ದಿಹನೆಂದೆನೆ ತ್ರೈಲೋಕ್ಯದೊಡೆಯ ಮುರಾರಿ ಮಹದೇವನೆಂದೆನಲ್ಲದೆಧರೆಯನಳೆದು ಕ್ಷತ್ರಿಯರ ಕೊಂದು ಶರಧಿಯನಿರದೆ ಕಟ್ಟಿದ ಕೃಷ್ಣ ಬಹುರೂಪವರಕವಿಗುರುವ ಕರದಿ ಪಿಡಿದು ರಕ್ಷಿಪಬಿರುದಿನ ರಾಯ ರಾವುತನೆಂದೆನಲ್ಲದೆ2 ಗಿರಿಜಾರಮಣನೆಂದೆನೆ ಗುಹಾರಣ್ಯವಾಸಎರಡು ರೂಪದಲಿರುವ ಮೂರುತಿಯೆಂದೆ ನಾ ನಂಬಿದ-ವರಪೊರೆವ ಶ್ರೀಹರಿಹರಲಿಂಗನೆಂದನಲ್ಲದೆ3
--------------
ಕೆಳದಿ ವೆಂಕಣ್ಣ ಕವಿ
ವಂದಿಪೆ ಹರಿಹರನೇ | ನಿನಗೆ ನಾ ವೃಂದಾರಕನುತನೇ ಪ. ಬಂದು ಈ ಕ್ಷೇತ್ರದಿ ನಿಂದು ಸದ್ಭಕ್ತರ ಮೂರ್ತಿ ಅ.ಪ. ಚತುರ ಹಸ್ತದಿಂದಾ | ಶೋಭಿಸೆ ಅತಿ ಕೌತುಕದಿಂದಾ ಪಾದ ಕಮಲಜನ ತತಿಗೆ ತೋರದಂತೆ ಕ್ಷಿತಿಯಲಡಗಿದೇ 1 ಸೋಮಶೇಖರವಂದ್ಯಾ | ಆರ್ಧದ ಲಾಮಹ ಹರನಿಂದಾ ಪ್ರೇಮದಿ ಕೂಡಿಕೊಂಡೀ ಮಹಿ ಜನರಿಗೆ ನೀಮೋಹಕ ತೋರುವ ಜಗದ್ವಂದ್ಯಾ 2 ಪಾಪಿಗುಹನವರವಾ| ಕೆಡಿಸಲು ರೂಪಧರಿಸಿ ತಾಮಸರಿಗಂಧಮತಮ ಕೂಪದಿ ಕೆಡಹುವೆ ಶ್ರೀ ಮೋಹಿತ 3 ಅರ್ಧಹರನ ರೂಪಾ| ಕೃತಿಯಲಿ ಶುದ್ಧ ವಿಷ್ಣು ರೂಪಾ ಮುದ್ದು ಸುರಿವ ಭವ್ಯಾಂಗ ಸ್ವರೂಪ ಉದ್ಧರಿಸೆನ್ನನು ಶುದ್ಧ ಬುದ್ಧಿಮತಿಯನಿತ್ತು 4 ಶಂಖಚಕ್ರ ಅಭಯಾ| ತ್ರಿಶೂಲವ ಬಿಂಕದಿ ಧರಿಸಿದೆಯಾ ಪಂಕಹೋದ್ಭವೆ ಪಾರ್ವತಿಯ ಉಭ ಯಾಂಕದಲ್ಲಿ ಪೊಂದಿಹೆ ಶುಭಕಾಯಾ 5 ಅರ್ಧಶಿರದಿ ಮಕುಟಾ| ಆರ್ಧದಿ ಶುದ್ಧಗಂಗೆ ತ್ರಿಜಟಾ ಅರ್ಧಚಂದ್ರ ಶೋಭಿಸುತಿದೆ ಜಗತ್ತಿಗೆ ಅದ್ಭುತ ಅಚ್ಚರಿ ರೂಪಧಾರಕ 6 ಪಣೆಯ ತಿಲಕ ಢಾಳಾ | ಕಂಠಾಭ ರಣಗಳು ಪೂಮಾಲಾ ಮಿನುಗುವವಲ್ಲಿ ಪೀತಾಂಬರನುಟ್ಟಿಹ ಗುಣಗಣ ಪೂರ್ಣನೆ ಹನುಮನಯ್ಯ ಹರಿ7 ಮಾಯಾ | ಕವಿಸದೆ ಇನ್ನು ಕಾಯೊ ಜೀಯಾ ಘನ್ನ ಭಕ್ತಿ ಸುಜ್ಞಾನ ವೈರಾಗ್ಯವ ಮನ್ನಿಸಿ ಕರುಣಿಸಿ ನಿನ್ನ ಪದವಿ ಕೊಡು 8 ಹರನೊಳು ಹರ ಶಬ್ದಾ | ವಾಚ್ಯನೆ ಸಿರಿವರ ನಿರವದ್ಯಾ ಸರ್ವ ಶಬ್ದ ಸುರವಾಚ್ಯ ಈ ಪರಿಯೊಳು ಹರಿಹರ ಕ್ಷೇತ್ರದಿ ವರಗೃಹ ಮಾಡಿದಿ 9 ತುಂಗಭದ್ರ ತೀರಾ | ವಾಸನೆ ರಂಗ ಪಾಪ ದೂರಾ ಮಂಗಳ ಗೋಪಾಲಕೃಷ್ಣವಿಠಲ ಭವಹಿಂಗಿಸಿ ಪೊರೆ ದುಸ್ಸಂಗ ಬಿಡಿಸಿ ಹರಿ 10
--------------
ಅಂಬಾಬಾಯಿ
ಇಂದುನೋಡಿದೆ ಹರಿಹರನ ದೈತ್ಯ |ವೃಂದಕ ಪ್ರಿಯನ ವರವ ಕೊಡುವನಾ ಪಶಾಮವರ್ಣನ ವಿಷ ಹರನ ಪೂರ್ಣ |ಕಾಮನ ಶಿವನ ಕೇಶವನ ಶಂಕರನ ||ಕಾಮಿನಿಯರ ಮೋಹಿಸಿದನ ಚಂದ್ರ |ವ್ಯೋಮನದಿಯು ಮಸ್ತಕದೊಳೊಪ್ಪುವನ 1ಕರಿಬಾಧೆಯನು ಕಳೆದವನ, ಭಸ್ಮ |ಧರನ ಪೀತಾಂಬರ ನಿಭ ಚರ್ಮಾಂಬರನ ||ಅರಿಧರನ ಶೂಲಕರನ ಲಕ್ಷ್ಮೀ |ವರನ, ಗೌರಿಪನ, ರಕ್ಷಕನ, ಶಿಕ್ಷಕನ 2ಸ್ವಾಮಿ ಪ್ರಾಣೇಶ ವಿಠ್ಠಲನ ರಾಮ |ನಾಮವೇ ತಾರಕವೆಂದು ಪೇಳುವನ ||ಶ್ರೀ ಮಧ್ವ ಮುನಿಗೊಲಿದವನ ಪಾರ್ಥ |ಪ್ರೇಮಕೆ ಮೆಚ್ಚಿ ಬಾಣವನು ಕೊಟ್ಟವನ 3
--------------
ಪ್ರಾಣೇಶದಾಸರು