ಒಟ್ಟು 10 ಕಡೆಗಳಲ್ಲಿ , 7 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಲಯ ರಘುವಂಶಾಬ್ಧಿಸೋಮಂ ಕಲ್ಯಾಣರಾಮಂ ಸಲಲಿತ ಗುಣಾಭಿರಾಮಂ ಸಕಲದಾನವವಿರಾಮಂ ಪ ಹರಿಹಯ ಸನ್ನುತಮಂಬುಜನೇತ್ರಂ ಪರಮಪವಿತ್ರಂ ಬಾನುಜ [ಸಖ]ಮಿತ್ರಂ 1 ಕಮನೀಯಾನನ ಕಾಂಚನಚಲಂ ದ್ಯುಮಣಿಕುಲಂ ರಣದೋರ್ಬಲಶೀಲಂ 2 ಹನುಮತ್ಸೇವಿತ ಆಹವಭೀಮಂ ಘನ [ಕೋಸಲಪುರ] ಕಲ್ಯಾಣರಾಮಂ 3
--------------
ಕೋಸಲ ಪುರೀಶರ
ಭಾರತೀಶನೆ ಉದ್ಧರಿಸುವದೆನ್ನ ಪ ಕಂಸಾರಿ ಪ್ರೀಯ ಸಂ - ಸಾರ ಬಂಧನ ನಿವಾರಿಸೊ ಜವದಿ ಅ.ಪ ಅಂಜನಾದೇವಿಯ ಸಂಜಾತನೆ ಭವ ಭಂಜನ ಹರಿಪದಕಂಜಾರಾಧಕ 1 ಮಾರುತಿ ನಿನ್ನ ಸುಕೀರುತಿ ತ್ರಿಜಗದಿ ಸಾರುತಲಿದೆಯುದ್ಧಾರಕನೆಂದು 2 ಹರಿಕುಲಜಾತನೆ ಹರಿಸಂಪ್ರೀತನೆ ಹರಿಹಯ ವಿನುತನೆ ಹರಿದುರಿತವನು 3 ಕಾಮಿತ ಫಲದ ನಿಸ್ಸೀವÀು ಪರಾಕ್ರಮಿ ಪ್ರೇಮವ ಕೊಡು ಶ್ರೀ ರಾಮನ ಪದದಿ 4 ಕುಂತಿ ಕುಮಾರಾದ್ಯಂತ ವಿದೂರನೆ ಅಂತರಂಗದಿ ಹರಿಚಿಂತನೆಯಕೊಡು 5 ಧರ್ಮಾನುಜಸದ್ಧರ್ಮ ಸ್ಥಾಪಕನೆ ಕಿರ್ಮೀರಾಂತಕ ನಿರ್ಮಲ ಚರಿತ 6 ಭೀಮನೆ ಸುದ್ಗುಣ ಧಾಮನೆ ಕುರುಕುಲ ಸೋಮನೆ ಸುರಮುನಿಸ್ತೋಮನಮಿತನೆ 7 ಅರ್ಜುನಾಗ್ರಜನೆ ದುರ್ಜನ ಶಿಕ್ಷಕ ಧೂರ್ಜಟಿವಂದ್ಯನೆ ಮೂರ್ಜಗ ಕರ್ತಾ 8 ಆರ್ಯನೆ ಕೃತ ಸತ್ಕಾರ್ಯನೆ ಜಗದೊಳು ನಾರ್ಯಕುರುಪನೂರು ಶೌರ್ಯದಿ ತರಿದ 9 ಕರಿವರದನ ಚರಣಾರವಿಂದ ಯುಗ ನಿರುತ ಸ್ಮರಿಪತೆರ ಕರುಣಿಸು ಭರದಿ 10 ದುಷ್ಟದ್ವಂಸಕನೆ ಶಿಷ್ಟಪಾಲಶ್ರೀ - ಕೃಷ್ಣನಂಘ್ರಿಯಲಿ ನಿಷ್ಠೆಯ ತೋರೋ 11 ಮಧ್ಯಗೇಹ ಸುತ ಸದ್ವೈಷ್ಣವ ಯತಿ ಅದ್ವೈತಕರಿ ಹರಿ ಸಿದ್ಧಾಂತ ಕರ್ತಾ 12 ಮಿಥ್ಯಾವಾದಿಬಾಯಿ ಎತ್ತದಂತ ಶ್ರು - ತ್ಯರ್ಥವ ಪೇಳ್ದ ಸಮರ್ಥನಹುದು ನೀ 13 ಹರಿಸರ್ವೋತ್ತಮ ಸಿರಿಯು ಅಕ್ಷರಳು ಸುರರೊಳು ನೀನೆ ಪಿರಿಯನು ಸತ್ಯ 14 ಸದಮಲಚರಿತನೆ ಹೃದಯದ ತಿಮಿರವ ವದೆದು ತರಿವುದಕೆ ಉದಿತ ಭಾಸ್ಕರ 15 ಮೂರು ರೂಪಾತ್ಮಕ ಸಾರಿದೆಯನ್ನಯ್ಯs ಪಾರದುರಿತ ಪರಿಹಾರವ ಗೈಸೊ 16 ಹೇಸಿಕೆ ಭವದಲಿ ನಾಶಿಲುಕಿಹೆ ವರ - ದೇಶ ವಿಠಲನ ಸೋಶಿಲಿ ತೋರೊ 17
--------------
ವರದೇಶವಿಠಲ
ಮೋಹನಾರ್ಯನೆ ಯೆನ್ನಾ | ಪೀಡಿಸುವ ಭವಮೋಹಕಳೆವುದು ಮುನ್ನಾ | ಹರಿಯಂಘ್ರಿ ಭಜನೆಯಈಹ ಕೊಡುವುದು ಇನ್ನಾ | ಭೂಸುರವರೇಣ್ಯಾ ಪ ದೇಹ ಮಮತೆಯ ದಾಶೆಯಲಿ ಸುಖ | ವಾಹಿನಿಗಳನುಭವಿಸೆ ಬಲುದುರ್‍ದೇಹ ಪೋಷಣೆಗೈದು ಹರಿಪದ | ಈಹಿಸದೆ ಬಲುನೊಂದೆ ಭವದಲಿ ಅ.ಪ. ಜಯದಲುದಿಸುತಲಂದೂ | ತಾರುಣ್ಯವನುನಿರ್‍ಭಯದಿ ಕಳೆದಿಹೆ ಬಂಧೂ | ವಿದ್ವೇಷದೊಳಗ್ಹರಿಹಯನನುಜ ವರ್ತಿಗಳಂದೂ | ಸಲಹಿದರು ಎನ್ನಯ ಭಯ ನಿವಾರಿಸುತಂದೂ | ಕಾರುಣ್ಯ ಸಿಂಧೂ ||ಹಯಮುಖನ ಪದ ಸತ್ಸರೋಜಗಳ್ | ದ್ವಯಭಜಿಪ ಮನವಿರದೆ ವಿಷಯದಹುಯಿಲಿನಲಿ ಬೆಂಡಾಗಿ ತಾಪದ | ತ್ರಯದಿ ಬಲು ಬಳಲಿರುವೆನಯ್ಯ |ಜಯದ ಸಂವತ್ಸರವು ಮರಳಿ | ಬಯಲು ಆಗದ ಮುನ್ನ ಹರಿಪದದ್ವಯಗಳನು ಕಾಂಬಂಥ ಹದನವ | ದಯದಿ ತೋರುತ ಸಲಹೊ ಬಂಧು 1 ಕಾಮಮದ ಮಾತ್ಸರ್ಯಾ | ಅರಿಗಳನಮನನೇಮನಿಷ್ಟಯ ಚರ್ಯಾ | ಕುಂದಿಸುತ ವಿಷಯಸ್ತೋಮ ಕಳೆಯುವರಯ್ಯ | ಈ ಪರಿಯ ಪರಿಭವಸೀಮೆ ಮೀರುವ ಚರ್ಯಾ | ಪರಿಹರಿಸೊ ಜೀಯ ||ಭ್ರಾಮಕತ್ರಯ ಮಾರಿಗೆನ್ನ ಸು | ಹೋಮಿಸುವ ದುರುಳನನು ಸದೆವತಾಮರಸಭವ ಪದಕೆ ಬರುತಿಹ | ಆ ಮಹಾ ಮಾರುತ ನೊಳಿರುವ |ರಾಮ ಚಂದ್ರ ಪದಾರವಿಂದವ |ಕಾಮಿಸುತ ತನ್ಮಹಿಮೆಗಳ ಸನ್‍ನಾಮ ಕೀರ್ತನೆಗೈದು ಮೋದಿಪ | ಪ್ರೇಮಮನವಿತ್ತೆನ್ನ ಸಲಹೋ 2 ನೀರೊಳಾಡುತ ಬಂದಾ | ಬೆನ್ನಿನಲಿ ಬಹುಭಾರ ಪೊತ್ತುದೆ ಛಂದಾ | ಅವನಿಯನು ತನಕೋರೆದಾಡೆಗಳಿಂದಾ | ತರಳನನು ಬಹುಘೋರರೂಪದಲಿಂದಾ | ಸಲಹಿದುದೆ ಛಂದಾ ||ಮೂರು ಪಾದವ ಬೇಡಿ ಬಲಿಯನು | ಭಾರಿ ಕೊಡಲಿಯ ಪೆತ್ತು ಪೆಗಲೋಳು |ಘೋರ ಅಟವಿಯ ತಿರುಗಿ ತಿರುಗಿ | ನಾರೆರೊಲುಮೆಗೆ ಸಿಲ್ಕಿ ತ್ರಿಪುರದನಾರಿಯರ ವ್ರತಗೆಡಿಸಿ ಹಯವನು | ಏರ್ದ ಗುರುಗೋವಿಂದ ವಿಠ್ಠಲಕಾರಣನು ಜಗಕೆಂಬ ಮತಿಯನು | ಧೀರಗುರು ಮೋಹನ್ನ ಕರುಣಿಸು 3
--------------
ಗುರುಗೋವಿಂದವಿಠಲರು
ಶರಣೆಂಬೆ ಗುರುರಾಯಾ ಶರಣ ಜನರಾಶ್ರಯಾ ಶರಣು ಸಮೀರ ಕುಮಾರ ಉದಾರನೆ ಶರಣು ಪಾವನ ಕಾಯಾ ಪ ಹರಿ ಪೂರ್ಣಾಂಶದಿ ಜನಿಸಿ ಹರಿ ಕುಲೋದ್ಬವ ನೆನಿಸಿ ಹರಿಯತುಡಕಿ ಬಂದು ಹರಿತೇಜದಿ ನಿಂದು ಹರಿಸೆ ಧನುಜ ಮೃಗವಾ ಹರಿರೂಪದಲಿ ನಿಂದೆಹರಿಮಂದಿರದಲಿನಲಿದೆ ಹರಿಬರಲು ನಮಿಸಿ ಹರಿದಶ್ವಜ ಗೊಲಿಸಿ ಹರಿಹಯಜಗ ಮುನಿದೇ 1 ಗೋಪೆಂದ್ರ ನಾಜÉ್ಞಯಲಿ ಗೋಪದಾಂಬುಧಿ ಪರಿಲಿ ಗೋಪನಲಂಘಿಸಿ ಗೋಪುತ್ರಿಯ ಕಂಡು ಗೋಪೀಡಕರ ಮುರಿದೇ ಗೋಪಾಲಗಿದಿರಾಗಿ ಗೋಪಾಸ್ತ್ರವಶವಾಗಿ ಗೋಪುರವ ನುರುಹಿ ಗೋಪಾನ್ವಯ ಗುರುಹಿ ಗೋಪದವಿಯ ಪಡೆದೆ 2 ಮಹಿದರಾನೇಕವತಂದು ಮಹೋದಧಿಯನೆ ಜಿಗಿದು ಅಹಿ ಮಹಿರಾವಣಾನ್ವಯ ಮಹಿರುಹದಲಿ ತರಿದೇ ಮಹಿಯೋಳು ಮೂರವತಾರಿ ಮಹಿಮಾನೆಕವಬೀರಿ ಮಹಿಪತಿ ಸುತಪ್ರಭು ಮಹಿಜಳ ಕೂಡಿಸಿ ಮಹದಾ ಗ್ರಣಿಯಾದೆ ||
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶರ್ವೇಡ್ಯ ಮೋಹನ ವಿಠಲ ಪೊರೆ ಇವನ ಪ ಸರ್ವತ್ರ ಸರ್ವದಾ | ಸರ್ವ ಮಂಗಳನೇ ಅ.ಪ. ಸುಕೃತ | ರಾಶಿ ಫಲಿಸಿತೋ ಇವಗೆದಾಸ ದೀಕ್ಷೆಯಲಿ ಮನ | ಲೇಸುಗೈದಿಹನೋ |ವಾಸವಾದೀ ವಂದ್ಯ | ಭಾಸುರಾಂಗನೆ ದೇವದೋಷಾಗಳನಳಿದು ಸಂ | ತೋಷವನೆ ಪಡಿಸೋ1 ಹರಿದಾಸ ರೊಲಿದಿವಗೆ | ದರುಶನವನಿತ್ತಿಹರುಗುರು ರಘೋತ್ತಮರಂತೆ | ಬೃಂದಾವನಸ್ಥಾನರಹರಿಯು ಸ್ವಪ್ನದಲಿ | ಹರಿಹಯಾಸ್ಯವ ತೆರದಿದರುಶನಕೆ ಕಾರಣವು | ಪರಮ ಪ್ರಿಯರ್ದಯವೂ 2 ಅದ್ವೈತ ತ್ರಯಜ್ಞಾನ | ಸಿದ್ಧಿಸುತ ಸಂಸಾರಅಬ್ಧಿಯನೆ ಉತ್ತರಿಸೊ | ಮಧ್ವಾಂತರಾತ್ಮಾ 3 ಕಿಂಕಿಣಿಯ ಶೋಭಿತನೆ | ಶಂಕರೇಡ್ಯನೆ ನಿನ್ನಅಂಕಿತವ ನಿತ್ತಿಹೆನೊ | ಲೆಂಕತನದವಗೇವೆಂಕಟ ಕೃಷ್ಣ ಹೃತ್ | ಪಂಕಜದಿ ತವರೂಪಕಿಂಕರಗೆ ತೋರೆಂದು | ಶಂಕಿಸದೆ ಬೇಡ್ವೇ 4 ಸರ್ವಜ್ಞ ಸರ್ವೇಶ | ದುರ್ವಿಭಾವ್ಯನೆ ಹರಿಯೆದರ್ವಿಜೀವನ ಕಾವ | ಹವಣೆ ನಿನದಲ್ಲೇ |ಪರ್ವ ಪರ್ವದಿ ಇವಗೆ | ನಿರ್ವಿಘ್ನ ನೀಡಯ್ಯಗುರ್ವಂತರಾತ್ಮ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
124-1ಸತ್ಯಪ್ರಿಯ ತೀರ್ಥಾರ್ಯರಂಘ್ರಿ ವೃತತಿಜಯುಗ್ಮನಿತ್ಯಸ್ಮರಿಸುವೆ ಎನ್ನ ಹಿತದಿ ಕಾಯುತಿಹರು |ಸತ್ಯಾರುಕ್ಮಿಣೀ ರಮಣ ವ್ಯಾಸ ನರಹರಿಹಯವಕ್ತ್ರಶ್ರೀರಾಮನಿಗೆ ಪ್ರಿಯತರಮಹಂತಪಸತ್ಯವರ್ಯ ತೀರ್ಥರು ಭಾವಿ ಸತ್ಯಪ್ರಿಯರುಗೋದಾವರಿಯಿಂದ ರಾಯಚೂರು ಪೋಗಿಆ ದೇಶ ಅಧಿಪತಿ ಪೀತಾಸಿಂಗನಿಗೆಒದಗಿ ಅನುಗ್ರಹಿಸಿ ಬಂದರು ಮೇಲುಕೋಟೆ 1ಮೇಲುಕೋಟೆ ರಾಜನು ಸ್ವಾಮಿಗಳಲಿ ಬಹುಭಕ್ತಿಯಿಂದಲಿ ಪೂಜೆ ಮಾಡಿದನು ಆಗ್ಗೆಮೇಲುಕೋಟೆ ಗಿರಿ ಮೇಲೆ ನರಸಿಂಹನ ಗುಡಿಬೀಗ ಹಾಕಿತ್ತು ಸ್ವಾಮಿಗಳು ಹೋದಾಗ 2ಶ್ರೀ ಸ್ವಾಮಿಗಳು ಬಾಗಿಲ ಸ್ಪರ್ಶ ಮಾಡಿದರುಸ್ಪರ್ಶಮಾತ್ರದಿ ಬಾಗಿಲು ತೆರೆಯಿತು ಆಗಶ್ರೀಸ್ವಾಮಿ ನರಸಿಂಹನ ಮುದದಿ ಪೂಜಿಸಲುಶ್ರೀ ಸ್ವಾಮಿಗಳ ಅರಸ ಪೂಜಿಸಿದನು 3ತರುವಾಯ ಶ್ರೀರಂಗಪಟ್ಟಣಕೆ ಬಂದುಶ್ರೀರಂಗನಾಥನ್ನ ಸೇವಿಸಲು ಮುದದಿಶ್ರೀರಂಗಪಟ್ಟಣದ ಅರಸನು ಭಕ್ತಿಯಿಂಪರಿಪರಿವಿಧದಿ ಕಾಣಿಕೆಗಳ ಅರ್ಪಿಸಿದ 4ರತ್ನ ಖಚಿತ ಪೂಜಾ ಸಾಧನಗಳು ಸ್ವರ್ಣರಜತ ದಂಡಗಳುಶ್ವೇತಛತ್ರಇಂಥಾವು ಸಂಸ್ಥಾನ ಚಿಹ್ನೆಗಳ ರಾಜನುಇತ್ತನು ಶ್ರೀಗಳಿಗೆ ಭಕ್ತಿಪೂರ್ವಕದಿ 5ನಂತರ ಸ್ವಾಮಿಗಳು ಶ್ರೀತುಂಗಭದ್ರಾದಿತೀರ್ಥಾಟನ ಮಾಡಿ ಗದ್ವಾಲು ಸೇರಿಮತ್ತೆತೋಂಡದೇಶದ ಆರ್ಕಾಟಿಗೆ ಹೋಗಿಆದೇಶ ಮಂತ್ರಿಯಿಂದ ಕೊಂಡರು ಸೇವ 6ಈ ಸಮಯ ಶ್ರೀ ಸತ್ಯವಿಜಯ ತೀರ್ಥಾರ್ಯರುಸಂಸ್ಥಾನ ಸಹ ಹತ್ತಿರ ಪ್ರಾಂತದಲ್ಲಿಶಿಷ್ಯೋದ್ಧಾರಕ್ಕೆವಿಜಯಮಾಡುತ್ತಿರಲುಶ್ರೀ ಸತ್ಯವರ್ಯರು ಬಂದರು ಆರಣಿಗೆ 7ಆರಣೀರಾಯನು ವೇಂಕಟನು ಸ್ವಾಮಿಗಳಚರಣಕ್ಕೆ ಎರಗಿ ಪೂಜೆಯನ್ನು ಸಲ್ಲಿಸೇವಸ್ತ್ರಾಭರಣ ಹೇಮಾಭೀಷೇಕಾದಿಗಳಅರ್ಪಿಸಿದ ಭಕ್ತಿಯಿಂ ಕೃಷ್ಣಾಜಿಪಂತ 8ಈ ರೀತಿ ಪೂಜೆ ಮರ್ಯಾದೆಗಳ ತಾ ಕೊಂಡುಹರಿಕೃಷ್ಣ ಶ್ರೀಶನಿಗೆ ಸಮಸ್ತ ಅರ್ಪಿಸುತಹೊರಟರು ಮುಂದಕ್ಕೆ ದಿಗ್ವಿಜಯ ಕ್ರಮದಲ್ಲಿಪುರಿ ಜನರು ಜಯ ಘೋಷ ಮಾಡುತಿರಲು 9ಎನ್ನ ಎನ್ನಂಥವರ ಅನಂತ ಅಪರಾಧಗಳಘನದಯದಿ ಕ್ಷಮಿಸಿ ಬಹು ಕೃಪದಿ ಪಾಹೀವನರುಹಾಸನಪಿತ ಮಧ್ವಸ್ಥ ಶ್ರೀಪತಿ`ಪ್ರಸನ್ನ ಶ್ರೀನಿವಾಸ' ಪ್ರಿಯ ಸತ್ಯಪ್ರಿಯ ಆರ್ಯ 10 ಪ
--------------
ಪ್ರಸನ್ನ ಶ್ರೀನಿವಾಸದಾಸರು
124-2ಸತ್ಯಪ್ರಿಯ ತೀರ್ಥಾರ್ಯರಂಘ್ರಿ ವೃತತಿಜಯುಗ್ಮನಿತ್ಯಸ್ಮರಿಸುವೆ ಎನ್ನ ಹಿತದಿ ಕಾಯುತಿಹರು |ಸತ್ಯಾರುಕ್ಮಿಣೀ ರಮಣ ವ್ಯಾಸ ನರಹರಿಹಯವಕ್ತ್ರಶ್ರೀರಾಮನಿಗೆ ಪ್ರಿಯತರಮಹಂತಪಆರಣೀ ಸಜ್ಜನರ ಸೌಭಾಗ್ಯ ಏನೆಂಬೆಸೂರಿವರ ಸತ್ಯವರ್ಯ ಭಾವಿ ಸತ್ಯಪ್ರಿಯರಆರಾಧಿಸಿ ಕಳುಹಿಸಿದ ಸ್ವಲ್ಪ ಕಾಲದಲೆಆರಣಿಗೆ ಬಂದರು ಸತ್ಯವಿಜಯಾರ್ಯ 1ಸಂಸ್ಥಾನ ಮೂರ್ತಿಸ್ಥ ಹರೀಪೂಜೆ ವೈಭವವುನಿತ್ಯಪ್ರವಚನ ಪಾಠ ಕೀರ್ತನೆ ಏನೆಂಬೆಸತ್ಯವಿಜಯರು ಯುಕ್ತ ಕಾಲದಲಿ ದೇಹಅದಾರುಢ್ಯ ಹೊಂದಿದರು ರಾಜಗೆ ಹೇಳಿದರು 2ತಮ್ಮ ತರುವಾಯ ಸಂಸ್ಥಾನ ಸರ್ವಾಡಳಿತಶ್ರೀಮನೋಹರ ಹರಿಪ್ರಿಯರು ಸತ್ಯವರ್ಯಸುಮನೋಹರ ಸತ್ಯಪ್ರಿಯ ತೀರ್ಥ ನಾಮದಲಿರಮಾರಮಣನ ಸೇವೆಗೆ ವಹಿಸಬೇಕೆಂದು 3ಆದ ಕಾರಣ ಆ ಸ್ವಾಮಿಗಳ ಕರೆತರಿಸಿಭಕ್ತಿ ವಿನಯದಿ ಮಠವ ಒಪ್ಪಿಸಬೇಕೆಂದುಹಿತದಿ ಆಜ್ಞಾಪಿಸಿ ಹರಿಪುರಯೈದಿದರುಚೈತ್ರ ಕೃಷ್ಣ ಪುಣ್ಯದಿನ ಏಕಾದಶಿ ದ್ವಾದಶಿಲಿ 4ಆರಣೀರಾಜನು ಸತ್ಯವರ್ಯ ತೀರ್ಥರಲಿಅರಿಕೆ ಮಾಡಿ ಸ್ವಾಮಿಗಳು ಕೆಲವು ದಿನಮೇಲ್ಆರಣಿಗೆ ಪೋದರು ಶ್ರೀಮಠದ ಆಡಳಿತಹರಿಪ್ರೀತಿ ಸೇವೆಗೆ ಕೊಂಡರು ತಾವು5ಮೊದಲೇವೆ ಶ್ರೀ ಸತ್ಯವರ್ಯ ತೀರ್ಥರ ಮಠಸಂಸ್ಥಾನ ವೈಭವದಿ ಪ್ರಕಾಶಿಸುತ್ತಿತ್ತುಸತ್ಯ ವಿಜಯರ ಕೋರಿಕೆಯಂತೆ ಈವಾಗಹೊಂದಿದರು ಸತ್ಯವಿಜಯರ ಸಂಸ್ಥಾನ 6ಸತ್ಯಾಭಿನವರ ಪದ್ಧತಿಯಲ್ಲಿ ಶ್ರೀಮಠಸತ್ಯಪೂರ್ಣ ಸತ್ಯವಿಜಯರಿಂದ ವೈಭವದಿಇದ್ದ ಆಮಠ ಪೀಠ ಅಲಂಕರಿಸಿದರೀಗಸತ್ಯವರ್ಯ ವೈರಾಗ್ಯ ನಿಧಿಯು ಶ್ರೀಮಾನ್ 7ಬಾದರಾಯಣರಾಮ ಯದುಪತಿಯ ಸೇವೆಗೆಪ್ರೀತಿಗೆ ಸ್ವಾಮಿಗಳು ಮಠವನ್ನು ಹೊಂದಿಸತ್ಯವಿಜಯರು ಕೋರಿದಂತೆ ತಮ್ಮಯನಾಮಸತ್ಯಪ್ರಿಯತೀರ್ಥರೆಂದು ಕೊಂಡರು ಮುದದಿ 8ಧನ ಸತ್ಯಪ್ರಿಯ ತೀರ್ಥರುವಿಜೃಂಭಣೆಯಿಂದ ಚರಿಸಿ ಪುರಜನರ್ಗೂರಾಜನಿಗೂ ಫಲ ಮಂತ್ರಾಕ್ಷತೆಗಳ ಕೊಟ್ಟುರಾಜ ಮಾರ್ಯಾದೆ ಕೊಂಡುಹೊರಟರು ಅಲ್ಲಿಂದ 9ಆಂಧ್ರದೇಶದ ಕಡಪ ಉತ್ತರ ಕರ್ನಾಟಕಮತ್ತು ದಕ್ಷಿಣ ಕರ್ನಾಟಕ ಶ್ರೀರಂಗಇಂಥ ಸ್ಥಳಗಳಲ್ಲಿ ಸಂಚಾರ ಮಾಡುತ್ತಾಹಿತದಿ ಅನುಗ್ರಹಿಸಿದರು ಭಕ್ತವೃಂದಕ್ಕೆ 10ಪೀತಾಸಿಂಗ ರಾಘವಜಿ ಮುರಾರಿ ಮೊದಲಾದಕೃತಜÕ ಜನ ಪ್ರಮುಖರ ಭಕ್ತಿ ಯುತವಾದಭೂದಾನ ಗ್ರಾಮದಾನ ಮಾಡಿದ್ದ ಸ್ವೀಕರಿಸಿಶ್ರೀದನಿಗೆ ಅರ್ಪಿಸುತ ಒಲಿದರು ಸಜ್ಜನಕೆ 11ರಾಯಚೂರು ಹರಿಯಾಚಾರ್ಯರೆಂಬ ವೈಷ್ಣವಕಾಯವಾಙ್ಮನ ಇದ್ದ ಬ್ರಾಹ್ಮಣ ದಂಪತಿಯುಪ್ರಿಯ ವತ್ಸರುಗಳೊಡೆ ಸ್ವಾಮಿಗಳ ಕಡೆ ಬಂದುವಿನಯದಿ ನಮಿಸಿ ನಿಂತರು ಮಠದಲ್ಲಿ 12ಹರಿಯಾಚಾರ್ಯರ ಮಕ್ಕಳಲಿ ರಾಮಾರ್ಯಸ್ಫುರದ್ವರ್ಚಸ್ ಯುತ ಬಹುಚೂಟಿಯಾದ ಮಗನುಶ್ರೀ ಶ್ರೀಗಳು ಆ ಹುಡುಗಗೆ ಮಠದಲ್ಲಿಶಾಸ್ತ್ರಾಭ್ಯಾಸಾದಿಗಳ ಒದಗಿಸಿದರು 13ಕಾಲಕ್ರಮದಲ್ಲಿ ವಟುಗೆ ವಿವಾಹ ಮಾಡಿದರುಮಕ್ಕಳು ರಾಮಚಾರ್ಯರಿಗೆ ಎರಡುಮಾಲೋಲ ಇಚ್ಛೆಯಿಂ ಸ್ವಾಮಿಗಳು ದಕ್ಷಿಣಸ್ಥಳ ಯಾತ್ರೆ ಗೈದರು ಸೇತು ಸಮೀಪ 14ಮಾನಾಮಧುರೆಯ ವೇಗವತೀ ತೀರವುತನ್ನ ಮಠವನ್ನು ಸ್ಥಾಪಿಸಿದರು ಅಲ್ಲಿಘನಮಹಾ ಸೂರಿಯು ರಾಮಚಾರ್ಯರನ್ನತನ್ನ ಸಮೀಪದಲ್ಲೇ ನಿಲ್ಲಿಸಿದರು 15ಬಹು ವರ್ಷ ಸಂನ್ಯಾಸ ರತ್ನರಾಗಿ ಬೆಳಗಿವಹಿಸಿ ಸಂಸ್ಥಾನವ ಏಳು ವರ್ಷಶ್ರೀಹರಿಗೆ ಪ್ರಿಯರಾಮಾಚಾರ್ಯರಿಗೆ ಸಂನ್ಯಾಸವಿಹಿತದಿ ಇತ್ತರು ಶ್ರೀ ಸ್ವಾಮಿಗಳು 16ಸತ್ಯಪ್ರಿಯ ಗುರುವರ್ಯ ತಮ್ಮ ಪ್ರಿಯ ಶಿಷ್ಯರಿಗೆಸತ್ಯಬೋಧ ತೀರ್ಥವೆಂಬ ಸಂನ್ಯಾಸ ನಾಮವನ್ನಿತ್ತುಚೈತ್ರ ಶುದ್ಧ ಹದಿಮೂರನೆ ಪುಣ್ಯ ದಿನದಿಯದುಪತಿಯ ಧ್ಯಾನಿಸುತ ಹರಿಪುರಯೈದಿದರು 17ಮತ್ತೊಂದು ಅಂಶದಲಿ ಬೃಂದಾವನದಲ್ಲಿನಿಂತಿಹರು ಅಶ್ವಾಸ್ಯಧ್ಯಾನಪರರಾಗಿಹಿತದಿ ಕೊಡುತಿಹರು ವಾಂಛಿತವ ಶರಣರಿಗೆಸದಾನಮೋ ಮಾಂಪಾಹಿ ಗುರುವರ್ಯ ಶರಣು 18ಎನ್ನ ಎನ್ನಂಥವರ ಅನಂತ ಅಪರಾಧಗಳಘನದಯದಿ ಕ್ಷಮಿಸಿ ಬಹು ಕೃಪದಿ ಪಾಹೀವನರುಹಾಸನಪಿತ ಮಧ್ವಸ್ಥ ಶ್ರೀಪತಿ`ಪ್ರಸನ್ನ ಶ್ರೀನಿವಾಸ' ಪ್ರಿಯ ಸತ್ಯಪ್ರಿಯ ಆರ್ಯ 19 ಪ
--------------
ಪ್ರಸನ್ನ ಶ್ರೀನಿವಾಸದಾಸರು
ಕೊಡು ಬೇಗ ದಿವ್ಯ ಮತಿ - ಸರಸ್ವತಿಕೊಡು ಬೇಗ ದಿವ್ಯಮತಿ ಪಮೃಡಹರಿಹಯ ಮುಖರೊಡೆಯಳೆ ನಿನ್ನಯ |ಅಡಿಗಳಿಗೆರಗುವೆ ಅಮ್ಮನ ಬ್ರಹ್ಮನ ರಾಣಿ ಅ.ಪಇಂದಿರಾರಮಣನ ಹಿರಿಯ ಸೊಸೆಯು ನೀನು|ಬಂದೆನ್ನ ವದನದಿನಿಂದುನಾಮವ ನುಡಿಸಿ1ಅಖಿಳವಿದ್ಯಾಭಿಮಾನಿ ಅಜನ ಪಟ್ಟದ ರಾಣಿ |ಸುಖವಿತ್ತು ಪಾಲಿಸೆಸುಜನಶಿರೋಮಣಿ2ಪತಿತ ಪಾವನೆಯೆ ನೀ ಗತಿಯಂದು ನಂಬಿದ |ವಿತತಪುರಂದರವಿಠಲನ ತೋರೆ3
--------------
ಪುರಂದರದಾಸರು
ಶ್ರೀ ವೆಂಕಟೇಶ ಸಲಹು ವೆಂಕಟೇಶಭಾವಿಕ ಸೇವಕ ಭವಭಯನಾಶ ಪ.ಸುರಾರಿ ಗಜಗಳೆಂಬ ಗಣಕೆಕಂಠೀರವಕರಿರಾಜ ಸಂಕಟ ಛಿತ್ತ ದೇವಪರಮಭಾಗವತರ ಸಮೂಹ ಸಂಜೀವನಪುರಹರವರಮತ್ತವೃಕ( ಷ?)ಮಥನ 1ವನಜಭವ ಸವಿೂರರೊಡೆಯ ಶ್ರೀರಮಣಮುನಿ ಹೃದಯಾಲಯ ಪರಿಪೂರ್ಣಫಣಿವರಶಾಯಿಪರಾತ್ಪರಅಗಣಿತಗುಣಗಂಭೀರ ಜಗದದಾತ2ಶುಕಶೌನಕ ಸನಕಾದಿ ದೇವಋಷಿಸಕಳ ಸುರಭೂಸುರ ರಾಜಾಧೀಶಭಕುತವತ್ಸಲಬಾದರಾಯಣಹರಿಹಯಮುಖ ಪ್ರಸನ್ವೆಂಕಟ ಗಿರಿನಿಲಯ 3
--------------
ಪ್ರಸನ್ನವೆಂಕಟದಾಸರು
ಶ್ರೀ ಸತ್ಯಪ್ರಿಯ ತೀರ್ಥವಿಜಯ124ಸತ್ಯಪ್ರಿಯ ತೀರ್ಥಾರ್ಯರಂಘ್ರಿ ವೃತತಿಜಯುಗ್ಮನಿತ್ಯಸ್ಮರಿಸುವೆ ಎನ್ನ ಹಿತದಿ ಕಾಯುತಿಹರು |ಸತ್ಯಾರುಕ್ಮಿಣೀ ರಮಣ ವ್ಯಾಸ ನರಹರಿಹಯವಕ್ತ್ರಶ್ರೀರಾಮನಿಗೆ ಪ್ರಿಯತರಮಹಂತಪಅಶೇಷಗುಣಗಣಾಧಾರ ವಿಭುನಿರ್ದೋಷಹಂಸ ಶ್ರೀ ಪತಿಯಿಂದುದಿತ ಗುರುಪರಂಪರೆಗೆಬಿಸಜಭವ ಸನಕಾದಿದೂರ್ವಾಸಮೊದಲಾದವಂಶಜರು ಅಚ್ಚುತ ಪ್ರೇಕ್ಷರಿಗೆ ನಮಿಪೆ 1ಪುರುಷೋತ್ತಮ ತೀರ್ಥ ಅಚ್ಚುತ ಪ್ರೇಕ್ಷರಕರಕಮಲ ಜಾತರೂ ಮಹಾಭಾಷ್ಯಕಾರರುವರವಾಯು ಅವತಾರ ಆನಂದ ತೀರ್ಥರಚರಣವನಜದಿ ನಾ ಸರ್ವದಾ ಶರಣು 2ಪದ್ಮನಾಭನರಹರಿಮಾಧವಅಕ್ಷೋಭ್ಯಅದ್ವಿತೀಯ ಸುಸ್ಪಷ್ಟ ಟೀಕಾಗಳಿತ್ತಮೇಧಾ ಪ್ರವೀಣ ಜಯ ತೀರ್ಥಾರ್ಯರಿಗೂವಿದ್ಯಾಧಿರಾಜರಿಗೂ ನಮೋ ನಮೋ ಶರಣು 3ವಿದ್ಯಾಧಿರಾಜರಿಗೆ ಶಿಷ್ಯರು ಈರ್ವರುಮೊದಲನೆಯವರು ರಾಜೇಂದ್ರ ತೀರ್ಥಾರ್ಯನಂತರ ಕವೀಂದ್ರ ತೀರ್ಥಾರ್ಯ ಇವರುಗಳಪಾದಾರವಿಂದಗಳಿಗೆ ನಾ ನಮಿಪೆ 4ವಾಗೀಶತೀರ್ಥರು ಕವೀಂದ್ರ ಹಸ್ತಜರುವಾಗೀಶಕರಜರು ರಾಮಚಂದ್ರಾರ್ಯಈ ಗುರುಗಳಿಗೀರ್ವರು ಶಿಷ್ಯರು ಇಹರುಬಾಗುವೇ ಇವರ್ಗಳಿಗೆ ಸಂತೈಸಲೆಮ್ಮ 5ಮೊದಲನೆಯವರು ವಿಭುದೇಂದ್ರ ತೀರ್ಥಾರ್ಯರುವಿದ್ಯಾನಿಧಿ ತೀರ್ಥಾರ್ಯರು ಅನಂತರವುವಿದ್ಯಾನಿಧಿ ಸುತ ರಘುನಾಥ ತೀರ್ಥರುವಂದಿಸುವೆ ಈ ಸರ್ವಗುರು ವಂಶಕ್ಕೆ 6ರಘುನಾಥ ಕರಕಮಲ ಜಾತ ರಘುವರ್ಯರಿಗೂರಘೂತ್ತಮ ವೇದವ್ಯಾಸ ವಿದ್ಯಾಧೀಶವೇದನಿಧಿ ಸತ್ಯವ್ರತ ಸತ್ಯನಿಧಿ ಸತ್ಯನಾಥಸತ್ಯಾಭಿನವ ಸತ್ಯಪೂರ್ಣರಿಗೆ ನಮಿಪೆ 7ಸತ್ಯಪೂರ್ಣ ತೀರ್ಥರಿಗೆ ಶಿಷ್ಯರು ಇಬ್ಬರುಸತ್ಯವರ್ಯ ತೀರ್ಥರು ಮೊದಲನೆಯವರುಸತ್ಯವಿಜಯ ತೀರ್ಥರು ಎರಡನೆ ಶಿಷ್ಯರುವಂದನಾದಿ ಮರ್ಯಾದೆ ಮಾಳ್ಪುದು ಜೇಷ್ಠರಿಗೆ 8ಸತ್ಯವರ್ಯ ತೀರ್ಥರೇ ಮುಂದಕ್ಕೆ ಸತ್ಯಪ್ರಿಯರೆಂದು ಕರೆಸಿಕೊಂಡರು ವಿರಾಗಿಕೋವಿದರುಸುಂದರ ದೇಶವು ಗೋದಾವರೀ ಕ್ಷೇತ್ರಕ್ಕೆಸತ್ತತ್ವ ಬೋಧಿಸಲುವಿಜಯಮಾಡಿದರು9ಸತ್ಯ ವಿಜಯರುಗುರುಆಜೆÕಯಿಂ ತಾವೂನೂತತ್ವಬೋಧಸಂಚಾರ ಮಾಡಿದರು ಆಗಸತ್ಯಪೂರ್ಣ ತೀರ್ಥರು ತಾವೇ ಕರ್ನಾಟಕಪ್ರಾಂತ್ಯಕ್ಕೆ ಹೊರಟರು ದಿಗ್ವಿಜಯಕಾಗಿ 10ಸತ್ಯವರ್ಯ ತೀರ್ಥರು ಭಾವಿ ಸತ್ಯಪ್ರೀಯರುಗೋದಾವರೀ ತೀರವಿಜಯಮಾಡುವಾಗಭೂದೇವ ನರದೇವಪುರಿನಗರಪ್ರಮುಖರುಉತ್ಸಾಹದಿ ಭಕ್ತಿ ಮರ್ಯಾದೆ ಮಾಡಿದರು 11ಬಿಸಾಜಿಪಂತ ನಾರಾಯಣ ನರಳೀಪಂತವಿಶ್ವಾಸದಿ ಇಂಥಾ ಪ್ರಮುಖ ಜನರುಈ ಸಂನ್ಯಾಸ ರತ್ನ ಸತ್ಯಪ್ರಿಯ ಆರ್ಯರಿಗೆಸ್ವಾಗತ ಪೂಜೆ ಮಾಡಿದ್ದು ಖ್ಯಾತ 12ಸಜ್ಜನರು ದೊಡ್ಡವರು ನಾಯಕರು ಗುರುಗಳಪೂಜಿಸುವ ಸಮಯ ಬಂದು ಅಲ್ಲಿ ಮೊದಲನೆಬಾಜೀರಾವ್ ಎಂಬಂಥ ಅರಸನು ಅವನೂ ಸಹನಿಜ ಭಕ್ತಿ ಭಾವದಿಂದಲಿ ಪೂಜಿಸಿದ 13ತಾನು ಪೂಜಿಸಿ ಗ್ರಾಮ ದಾನ ಮಾಡಿದ್ದಲ್ಲದೆಘನಮಹಾತ್ಮ ಸ್ವಾಮಿಗಳ ಪೂಜಿಸಿರೆಂದುತ್ನನ ಮುದ್ರೆ ಪತ್ರ ಬೇರೆ ರಾಜರ್ಗೆ ಕಳುಹೆಂದುತನ್ನ ಸಹ ಬಂದಿದ್ದ ಮಂತ್ರಿಗೆ ಹೇಳಿದನು 14ಗೋದಾವರೀ ತೀರ ಸ್ಥಳಗಳಲಿ ಈ ರೀತಿಸತ್ಯಪ್ರಿಯ ಆರ್ಯರು ಸಂಚರಿಸಲಾಗಸತ್ಯ ಪೂರ್ಣ ತೀರ್ಥರು ದಕ್ಷಿಣದಲ್ಲಿಕ್ಷೇತ್ರಾಟನದಿ ಇರುತಿದ್ದರು ಮುದದಿ 15ಸತ್ಯಪೂರ್ಣರಿರುತ್ತಿದ್ದ ಸಂಚಾರ ಸ್ಥಳದಹತ್ತಿರವೆ ಕೊಂಗು ನಾಡುತೋಂಡದೇಶಸತ್ಯವಿಜಯರು ಅಲ್ಲಿ ಸಂಚರಿಸಿ ಬಂದರುಸತ್ಯ ಪೂರ್ಣರುಹರಿಪಾದಸೇರುವಾಗ16ಸತ್ಯವಿಜಯರ ಕೈಗೆ ಸಂಸ್ಥಾನ ಬರಲುಸತ್ಯಭಿನವ ಸತ್ಯಪೂರ್ಣರ ಪದ್ಧತಿಯಂತೆ ಸಂಸ್ಥಾನ ಆಡಳಿತ ಮಾಡುತ್ತಾಮತ್ತೂತೋಂಡದೇಶ ಸಂಚಾರಕ್ಕೆ ಹತ್ತಿದರು17ಎನ್ನ ಎನ್ನಂಥವರ ಅನಂತ ಅಪರಾಧಗಳಘನದಯದಿ ಕ್ಷಮಿಸಿ ಬಹು ಕೃಪದಿ ಪಾಹೀವನರುಹಾಸನಪಿತ ಮಧ್ವಸ್ಥ ಶ್ರೀಪತಿ`ಪ್ರಸನ್ನ ಶ್ರೀನಿವಾಸ' ಪ್ರಿಯ ಸತ್ಯಪ್ರಿಯ ಆರ್ಯ 18 ಪ
--------------
ಪ್ರಸನ್ನ ಶ್ರೀನಿವಾಸದಾಸರು