ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬಿದೆನು ಚರಣಗಳ ಪಾಲಿಸೈ ಹರಿಯೇ ನಂಬಿದೆನು ಶ್ರೀ ಚನ್ನಕೇಶವನೆ ದೊರಿಯೇ ಪ ಸರಳೆ ದ್ರೌಪದಿಯಂತೆ ಕರಿರಾಜ ಧೃವರಂತೆ ದುರುಳ ಕನಕಾಸುರನ ನಿಜತನುಜನಂತೇ ಖಗರಾಜ ಕಪಿಯಂತೆ ವರತತ್ತ್ವ ಭೋಧಿಸಿದ ಯತಿಗಣಗಳಂತೇ 1 ಗೌತುಮನ ಸತಿಯಂತೆ ಯಾದವರ ಪಡೆಯಂತೆ ಭೂತಳದಿ ಪೆಸರಾದ ಹರಿದಾಸರಂತೇ ಕೋತಿ ಜಾಂಬವನಂತೆ ಅಮರೇಶ ಸುತನಂತೆ ಆತುರದಿ ನಂಬಿರುವ ಶ್ರೀ ಲಕ್ಷ್ಮೀಯಂತೆ 2 ನಾನಿತ್ತ ಪೂಜೆಯಿಂ ನಾಗೈದ ಭಜನೆಯಿಂ ನಾನಿಂದು ಮಾಡಿದಾ ಹರಿಸ್ಮರಣೆಯಿಂದ ನೀನೊಲಿದೆಯಿಂತೆಂದು ದೃಢವಾಗಿ ನಂಬಿದೆನು ಹೀನನನು ಸಲಹಯ್ಯ ಸ್ವಾಮಿ ಕೇಶವನೇ 3
--------------
ಕರ್ಕಿ ಕೇಶವದಾಸ
ಶ್ರೀಶ ಶ್ರೀಹಯವದನ ಮೂರ್ತಿಗೊಂದಿಸುವೆಸಾಸಿರ ನಾಮದ ಒಡೆಯನೀನೆಂದು ಪನಿನ್ನ ನೋಡುವ ಇಚ್ಛೆಯಿಂದ ನಿನ್ನದಾಸರುಇನ್ನು ಗಾವುದ ದೂರದಿಂದ ಬರುತಿಹರುನಿನ್ನ ಭಕ್ತರ ಕೂಡಿ ನಿನ್ನ ಸೇವೆಯ ಮಾಡಿನಿನ್ನ ದರುಶನದಿಂದ ಧನ್ಯರಾಗುವರು 1ಹರಿದಾಸರೆಲ್ಲರೂ ಪರಮಸಂಭ್ರಮದಿಂದಹರಿದಿನದಜಾಗರಹರಿಸ್ಮರಣೆಯಿಂದಪರಮವೈಭವದಿ ತನ್ನ ಸ್ಮರಿಸುತಿಹ ಸುಜನರನುಕರುಣದಿಂದಲಿಕಾವಸಿರಿರಮಣನೆಂತೆಂದು2ಆಪತ್ತು ತಾಪತ್ರಯಂಗಳೆಲ್ಲವುನೀಗಿಶ್ರೀಪತಿಯೆ ರಕ್ಷಿಸು ರಕ್ಷಿಸೆಂದೆನುತಗೋಪತೀ ಕೃಷ್ಣನ್ನಪಾಡಿ ಪೊಗಳುವರನ್ನುಕಾಪಾಡುವನು ಸಕಲಪಾಪಗಳ ಹರಿಸಿ 3ಸೋದೆಯಲಿ ನೆಲೆಸಿರುವ ವಾದಿರಾಜರಿಗೊಲಿದುಆದರದಿ ಅವರಿತ್ತ ಸೇವೆ ಕೈಗೊಂಡುಶೋಭ ಕೃತುನಾಮ ಸಂವತ್ಸರದಿ ಸುಜನರಿಗೆಶೋಭನಂಗಳನಿತ್ತು ನೀದಯದಿ ಪೊರೆವೆ 4ಕಡು ಹರುಷದಿಂದಿತ್ತ ಕಡಲೆ ಹೂರಣ ಸವಿದುದೃಢ ಭಕ್ತರನು ಪೊರೆದೆ ಕಡುಹರುಷದಿಮೃಡನಸಖನಿನ್ನಂಘ್ರಿ ಬಿಡದೆ ಧ್ಯಾನಿಪ ಭಾಗ್ಯತಡೆಯದಲೆ ಪಾಲಿಸೈ ಕಮಲನಾಭ ವಿಠ್ಠಲ 5
--------------
ನಿಡಗುರುಕಿ ಜೀವೂಬಾಯಿ