ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಚ್ಚಳಾಗಲಿ ಬೇಕು ತಿಳಿದು ನಿಚ್ಚಳಾಗಲಿ ಬೇಕು ಪ ನಿಚ್ಚಮಾಡುವ ದೋಷರಾಶಿಗಳಳಿದು ನಿಚ್ಚಳಾಗಲಿ ಬೇಕು ಅ.ಪ ಪಾಪವೆಂಬುದು ಹೊರಗಿಹುದೆ ತನ್ನ ಅಪವರ್ಗಕೆ ಮಾರ್ಗವಹುದೆ ಬಲು ತಾಪಸಿಗಾದರು ಅದು ಸಾಧನವಹುದೆ 1 ಪುಣ್ಯವೆಂಬದು ಬೇರೆಯಿಲ್ಲಾ ನಾನಾ ರಣ್ಯ ಚರಿಸಿದರು ದೊರಕುವದಲ್ಲಾ ಮನ್ಯು ಬಿಡದೆ ಮತ್ತೊಂದಲ್ಲಾ ನಿರುತ ಅನ್ಯರಾಶಿ ಬದಲು ಗತಿಗವಸಲ್ಲಾ 2 ವೈಕುಂಠವೆಂಬೋದು ಅಲ್ಲೆ ಬರಿದೆ ಲೌಕೀಕ ತೊರದರೆ ಇಪ್ಪದು ಇಲ್ಲೆ ಈ ಕಲಿಯೊಳಗೆ ಈ ಸೊಲ್ಲೆವೊಲಿಸ ಬೇಕೆನೆ ಮಾರಿ ಓಡುವುದು ನಾ ಬಲ್ಲೆ 3 ಹರಿಸ್ಮರಣೆಗೆ ಪೋಪ ದೋಷ ಬಲು ಪರಿ ಧರ್ಮವ ಮಾಡಲು ಲೇಶ ಸರಿಯಾವು ತರುವಾಯ ಮೋಸದಿಂದ ತಿರುಗಿ ತಿರುಗಿ ಪುಟ್ಟಿ ಬಡವನು ಕ್ಲೇಶಾ4 ಒಬ್ಬರ ಸರಿಗಟ್ಟದಿರೊ ನಿನ ಕರ್ಮ ಸುಖವೆಂದು ಸಾರೊ ಉಬ್ಬಲ ದಾಡಿಪರಾರೊ ಎಲೆ ಲ್ಹಬ್ಬಿದ ವಿಜಯವಿಠ್ಠಲನೆಂದು ಸಾರೋ 5
--------------
ವಿಜಯದಾಸ
ಬರಿದೆ ಬಿಡದೆನ್ನ ಹರುಬೆಂಬೆಯೋತೆರಹುಗೊಡದು ಹರಿಸ್ಮರಣೆಗೆಂಬೆಯೊ ಪಒಲ್ಲೆನೆಂದರೆ ನಿನ್ನ ಕೊಲ್ಲುವುದೆ ಬರಿದುಸೊಲ್ಲಿಸದಿರೆ ನಿನ್ನನೀಯುವದೆತಲ್ಲಣಗೊಳದಿರೆ ವಟಯನೊಡೆಯುವದೆಬಲ್ಲೆನೆನ್ನಲಿದಾರಲು ಬಾಯಬಡಿವದೇನೊ 1ಪರರೊಳಿಪ್ಪುದೊ ನಿನ್ನ ಕರಣದೊಳಿಪ್ಪುದೊಹರುಬುತಿಂ ಬೀದಿಯಲಿರುತಿಪ್ಪುದೊತಿರುಗುತಿಪ್ಪುದೊ ಬೆಂಬಿಡದೆ ಸಾಲವಕೊಂಡಿಹುದೊಬರಿದೆ ಪತ್ರವೊ ಪೇಳು ಮರುಳೆ 2ಪರರು ನುಡಿಯುತಿರೆ ಮರುನುಡಿಯುವೆ ನೀನೆಕರೆಯದಿದ್ದರು ಪೋಗಿ ಬೆರೆಯುತಿಹೆತೊರೆದು ಬಿಡುವ ಬುದ್ಧಿ ಬರದಾದ ಕಾರಣಾಉರುಳಿಗೆ ಸಿಕ್ಕಿದುರುಗನಂತೆ ಹೊರಳುವೆ 3ಆಶಾ ಪಿಶಾಚಿ 'ಡಿದ ಕಾರಣ ನೀನುಮೋಸ ಹೋಗಿಯೆ ನೀನೆ ಮುಂಬರಿದುಹೇಸದೆ 'ೀನಾಯಗೆ ಮೈಗೊಡುವೆ ಬಪ್ಪನಾಶವನರಿಯೆ 'ರತಿುರುವುದಾ 4ಬೆರೆದು ಸಂಸಾರದೊಳಿರುವಂತೆ ಚಿಕ್ಕನಾಗಪುರವಾಸಿ ಗುರುವಾಸುದೇವಾರ್ಯನಾಚರಣ ಸೇವೆಯೊಳ್ಮನ'ರಿಸಿ ಬಾಳ್ದರೆ ಸುಖಶರಧಿಯಾಗುವೆ ದುಃಖವರುಗಸಿರದು ನಿನ್ನ 5
--------------
ವೆಂಕಟದಾಸರು
ಹೆದರಿಕೆ ಯಾತರದೋ ತ್ರಿಜಗದಿ ಪಾದ ಸದಮಲದಾಸರಿಗೆ ಪ ಗರುಡನ ಮಂತ್ರಕೆ ಉರಗನ ಭಯವುಂಟೆ ದುರಿತದಂಜಿಕೆಯುಂಟೆ ನರಹರಿಸ್ಮರಣೆಗೆ 1 ಬಿರುಗಾಳಿ ಬೀಸಲು ಗಿರಿ ನಡುಗುವುದುಂಟೆ ಪರಿಭವ ಬಂಧಮುಂಟೆ ಸಿರಿವರನರ್ಚಕರಿಗೆ 2 ಶ್ರೀರಾಮನಡಿವಾರಿಜಭಜಕರ್ಗೆ ಸಾರಮೋಕ್ಷಂಗಳು ದೂರವಿನ್ನುಂಟೆ 3
--------------
ರಾಮದಾಸರು