ಒಟ್ಟು 7 ಕಡೆಗಳಲ್ಲಿ , 4 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರೆ ಕರೆ ಭವದೊಳು ಮುಳುಗಿರುವೆ ದುರಿತದೂರನೆ ದು:ಖ ತರ ತರ ವ್ಯಥೆಯಲಿ ಪ ಅಗಣಿತ ಮಹಿಮನೆ ಸುಗುಣಗಳನುದಿನ ಬಗೆ ಬಗೆ ಸ್ಮರಿಸುವ ಬಗೆ ಮರೆದು ಹಗಲಿರುಳೆನ್ನದೆ ನಿಗಮವೇದ್ಯನ ನಾಮ ಬಗೆ ಬಗೆ ಪೊಗಳಿ ಕೊಂಡಾಡಿ ಸ್ತುತಿಸದಲೆ 1 ಜನುಮ ಜನುಮದಲಿ ಜನಿಸಿ ಬರುವ ದು:ಖ ಕೊನೆಗಾಣದಾಗಿದೆ ಕರುಣಾನಿಧೆ ಅನಿಮಿಷರೊಡೆಯ ಶ್ರೀ ಘನ ಮಹಿಮನ ನಾಮ ಮನದಣಿ ಪೊಗಳಿ ಕೊಂಡಾಡಿ ಸ್ತುತಿಸದಲೆ2 ನಾನು ನನ್ನದು ಎಂಬ ಹೀನವೃತ್ತಿಗಳಿಂದ ಹಾನಿಯಾಯಿತು ಆಯು ಶ್ರೀನಿಧಿಯೆ ಜ್ಞಾನಿಗಳೊಡನಾಡಿ ಮೌನದಿಂದಿರದಲೆ ಶ್ವಾನಸೂಕರನಂತೆ ತಿರುಗಿ ಬಾಯ್ಬಿಡುತಲಿ 3 ರಂಗನ ಮೂರ್ತಿಯ ಕಂಗಳಿಂದಲಿ ನೋಡಿ ಭಂಗಗಳಳಿಯುವ ಹರಿದಾಸರ ಸಂಗದೊಳಿರಿಸು ಉತ್ತುಂಗ ಮಹಿಮಪಾಂಡು- ಭವ ಭಂಗ ಬಿಡಿಸೆನ್ನದೆ4 ಪಾದ ಪೊಂದಿ ಭವದಘ ವೃಂದವ ಕಳೆಯುವನೆಂದೆನ್ನುತ ಬಂಧಕ ಮೋಚಕನೆಂದರಿಯದೆ ಭವ ಬಂಧನದೊಳು ಸಿಕ್ಕಿ ಬಳಲಿ ಬಾಯ್ಬಿಡುತಲಿ5 ಪರಿ ಮೋಹ ಮಾತುಳಾಂತಕ ಕೃಷ್ಣ ಮಾತು ಮಾತಿಗೆ ಹರಿ ಹರಿ ಎನ್ನದೆ ಸೋತು ಬಂದೆನೊ ದೇವ ಮಾತರಿಶ್ವನಪ್ರಿಯ ಕೋತಿ ಬುದ್ಧಿಯ ಬಿಡಿಸೆಂದು ತುತಿಸದಲೆ 6 ಕಮಲ ಪತ್ರಾಕ್ಷ ಶ್ರೀ ಕಮಲಜಾತೆಯ ಪ್ರಿಯ ಕಮಲನಾಭ ವಿಠ್ಠಲ ವಿಠ್ಠಲ ಹರೇ ಸುಮನಸರೊಡೆಯ ಶ್ರೀ ಭ್ರಮರಕುಂತಳೆ ಪ್ರಿಯಶ್ರಮ ಪರಿಹರಿಸೆಂದು ನಮಿಸಿ ಸ್ತುತಿಸುವೆನು 7
--------------
ನಿಡಗುರುಕಿ ಜೀವೂಬಾಯಿ
ಧನ್ವಂತ್ರಿ ನಿನ್ನ ಸ್ಮರಿಸಿ ಧನ್ಯರಾಗಿಹರ ಪಾದ ಧ್ಯಾನದೊಳಿರೆಸೆನ್ನ ಧನ್ಯನೆಂದೆನಿಸೊ ಪ ನಿನ್ನ ದಾಸರ ಕೀರ್ತಿ ನಿನ್ನ ದಾಸರ ವಾರ್ತೆ ನಿನ್ನ ನಾಮಾಮೃತವು ಎನ್ನ ಕಿವಿ ತುಂಬಿರಲಿ ಅ.ಪ ನಿನ್ನ ಪಾದದ ಸ್ಮರಣೆಯನ್ನು ಮಾಳ್ಪರ ಸಂಗ ಇನ್ನು ಪಾಲಿಸು ದೇವನೆ ಘನ್ನ ಮಹಿಮನೆ ಪರಮ ಪುಣ್ಯಶೀಲರ ಸೇವೆ ಇನ್ನು ಕರುಣಿಸೊ ಕೇಶವಾ ಸನ್ನುತಾಂಗನೆ ಭವಭಯವನ್ನು ಬಿಡಿಸೆಂದು ನಾ ನಿನ್ನ ಮೊರೆಯಿಡುವೆ ಹರಿಯೇ ಚನ್ನ ಶ್ರೀಗೋಪಾಲ ಗೋವಿಂದ ಕೇಶವ ನಿನ್ನ ನಾಮನಿರಂತರವು ಪಾ- ವನ್ನ ಮಾಡಲಿ ಎನ್ನ ಜಿಹ್ವೆಯಾ 1 ಆದರದಿ ನಿನ್ನ ಸ್ಮರಿಪ ಸಾಧುಜನರ ಸಂಗ ಭೇದವಿಲ್ಲದೆ ಕರುಣಿಸೊ ಆದಿ ಮೂರುತಿ ನಿನ್ನ ಆದರದಿ ಸ್ಮರಿಪ ಪರ- ಮಾದರವ ನಿತ್ತು ಸಲಹೊ ಮೋದ ಪಡುವ ಭಾಗ್ಯ ಮಾಧವನೆ ದಯಪಾಲಿಸೋ ಮಾಧವ ಜನಾರ್ದನ ಕ್ರೋಧಿ ಸಂವತ್ಸರವು ಭಕುತರ ಕ್ರೋಧಗಳ ಕಳೆಯುತ್ತ ಸಲಹಲಿ2 ಶರಣೆಂದು ಬೇಡುವೆ ಪರಿಪರಿ ಅಘಗಳ ಪರಿಹರಿಸೆಂದು ನಾ ಸ್ಮರಿಸಿಬೇಡುವೆನು ಸರಸಿ ಜೋದ್ಭವÀಪಿತನೆ ಸರಸಿಜಾಕ್ಷಿಯ ಕೂಡಿ ಹರುಷದಿ ನೆಲಸೆನ್ನ ಹೃದಯದಲಿ ದೇವ ಸರಸಿಜನೇತ್ರನೆ ಬಿಡದೆ ನಿನ್ನನು ಸ್ಮರಿಪ ಕಡುಭಾಗವತರ ಸಂಗವನೆ ನೀಡೈ ಮೃಡನ ಸಖನೆ ನಿನ್ನಂಘ್ರಿ ಸ್ಮರಿಸುವ ಭಾಗ್ಯ ತಡೆಯದಲೆ ಪಾಲಿಸುತ ಪೊರೆ ಶ್ರೀ ಕಮಲನಾಭ ವಿಠ್ಠಲನೆ ದಯದಲಿ 3
--------------
ನಿಡಗುರುಕಿ ಜೀವೂಬಾಯಿ
ಬಿನ್ಯೈಪೆ ನಿನಗಾನು ಭೀಮಸೇನ ಪ ಬನ್ನಬಡುತಿಹ ಜನರ ಭಯವ ಪರಿಹರಿಸೆಂದು ಅ.ಪ. ನೀಚರಿಂದಲಿ ಬಂದ ಭಯಗಳಿಂದಲಿ ಜನರು ಯೋಚಿಸುವರೆಮಗಾರು ಗತಿಯೆನುತಲಿ ಕೀಚಕಾಂತಕ ನಿನ್ನ ಕೀರ್ತಿ ಬಹುವಿಧ ಕೇಳಿ ಯಾಚಿಸುವೆ ನಿನಗಾನು ಎಲ್ಲರನು ಸಲಹೆಂದು 1 ಭವ ವಿಮೋಚಕನು ನೀನೆ ಸಚ ರಾಚರಕೆ ಸಂತತ ಪುರೋಚನಾರಿ ಪ್ರಾಚೀನ ಕರ್ಮಾಬ್ಧಿ ವೀಚಿಯೊಳು ಮುಳುಗಿಹ ಖೇಚರೇಂದ್ರಾಹಿಪ ತ್ರಿಲೋಚನರ ಗುರುವೆ 2 ಖಚರೋತ್ತಮನೆ ನಿನ್ನ ಸುಚರಿತೆಗಳನು ಕೇಳಿ ರಚನೆಗೈಯ ಬಲ್ಲೆನೆ ಅಚಲ ಸತ್ವ ಪ್ರಚಲಿಸುತಿಹ ಮನೋವಚನ ಕಾಯುವ ಘಟೋ ಪ್ರಚಯ ಮಾಡುವುದೆಂದು 3 ಲೋಚಿತದ ಧರ್ಮಗಳ ಸೂಚಿಸೆಮಗೆ ಪಾಚಕನೆ ನಿನ್ನಡಿಗೆ ಚಾಚುವೆನು ಶಿರ ಸವ್ಯ ಸಾಚಿ ಸೋದರನೆ ದಯದಿ ಗೋಚರಿಸಿ ಸಲಹೆಂದು 4 ವಾಚಾಮಗೋಚರ ಜಗನ್ನಾಥ ವಿಠ್ಠಲನ ಶ್ರೀ ಚರಣ ಭಜಕನೆ ನಿಶಾಚರಾರಿ ಮೈಚರ್ಮ ಸುಲಿದು ದುಶ್ಯಾಸನನ ರಕುತ ಪರಿ ಷೇಚನೆಯ ಮಾಡಿದೆ ಮಹೋಚಿತವಿದೆಂದರಿದು 5
--------------
ಜಗನ್ನಾಥದಾಸರು
ಮನ್ಮಥನಯ್ಯನ ಮನದಲಿ ಸ್ಮರಿಸಿರೊ ಮನ್ಮಥ ನಾಮ ಸಂವತ್ಸರದಿ ಪ ಸುಮ್ಮನೆ ಕಾಲವ ಕಳೆಯುವದೇತಕೆ ಬ್ರಹ್ಮನಪಿತ ನಂಘ್ರಿಗಳ ಭಜಿಸುತ ಅ.ಪ ಬಂಧು ಬಳಗ ಮಂದಿಮಕ್ಕಳೆಲ್ಲರು ಕೂಡಿ ಒಂದೆ ಸ್ಥಳದಿ ಭಜನೆಯಮಾಡಿ ಇಂದಿರಾರಮಣನ ಚಂದದಿ ಪೊಗಳಲು ಬಂದ ದುರಿತಗಳ ಪೊಂದಿಸನೆಂದೆಂದು 1 ಮಾಕಮಲಾಸನ ಲೋಕದ ಜನರಿಗೆ ತಾಕಾಣಿಸಿ ಕೊಳ್ಳದೆ ಇಹನು ಶ್ರೀಕರ ಸಲಹೆಂದು ಏಕ ಭಕುತಿಯಲಿ ಲೋಕವಂದ್ಯನ ಸ್ತುತಿಗೆ ನೂಕುವ ಅಘಗಳ 2 ಅತಿಶಯದಿಂದಲಿ ಸತಿಸುತರೆಲ್ಲರು ಪತಿತಪಾವನನ ಕೊಂಡಾಡುತಲಿ ಗತಿ ನೀನಲ್ಲದೆ ಮತ್ತೆ ಹಿತರ್ಯಾರಿಲ್ಲವೆನೆ ಸತತ ಸುಕ್ಷೇಮವಿತ್ತು ಪಾಲಿಸುವಂಥ 3 ಶ್ರಮವ ಪರಿಹರಿಸೆಂದು ನಮಿಸಿಬೇಡುವ ಭಕ್ತ ಜನರನು ಸಂತೈಸುತಲಿಹನು ಹನುಮ ಭೀಮ ಮಧ್ವಮುನಿಗಳ ಸೇವಿಪ ಮನುಜರ ಮನೋರಥಗಳನೆ ಪೂರೈಸುವೊ 4 ವತ್ಸರ ಆದಿಯಲಿ ಅಕ್ಷರೇಡ್ಯನ ಪಾದ ಕ್ಷಿಪ್ರದಿಂದಲಿ ಸೇವಿಪ ನರನ ಭಕ್ತವತ್ಸಲ ತನ್ನ ಭಕ್ತರ ಸಂಗದೊಳಿಟ್ಟು ಸಂತೈಸುವ ಸತ್ಯಸಂಕಲ್ಪ ಶ್ರೀ5 ತಾಳ ತಂಬೂರಿ ಸುಸ್ವರಗಳಿಂದಲಿ ಬಹು ನೇಮದಿಂದಲಿ ಸರುವರು ಕೂಡಿ ಗಾನಲೋಲನ ಭಜನೆಯ ಮಾಡುತ ಸತ್ಯ ಸ್ವಾಮಿಯ ಗುಣಗಳ ಪೊಗಳುವ ಸುಜನರು 6 ಸಡಗರದಿಂದಲಿ ಕಡಲೊಡೆಯನ ಗುಣ ಪೊಗಳುತ ಹಿಗ್ಗುತ ಅಡಿಗಡಿಗೆ ಕಡಲ ಶಯನ ಕಮಲನಾಭ ವಿಠ್ಠಲನೆಂದು ತೊಡರು ಬಿಡಿಸುವ ಶ್ರೀ 7
--------------
ನಿಡಗುರುಕಿ ಜೀವೂಬಾಯಿ
ಶಯನ ಸುಖವೇ ಸುಖವೆ ರಂಗನಾಥ ಭಯಗೊಂಡ ಭಕ್ತರೊಳು ದಯವಿಲ್ಲವೆ ಪ ಶರಣನ ಕೈ ನೀಡಿ ಪೊರೆಯೆಂದು ಪೇಳ್ವಾಗ ದುರಿತಗಳ ಹರಿಸೆಂದು ಬೇಡುವಾಗ ಕರುಣಾನಿಧಿ ನೀನೆಂದು ಹಾಡಿ ಹಂಬಲಿಪಾಗ ಶಿರಬಾಗಿ ಪಾದಕೆ ವಂದಿಸುವಾಗ ರಂಗಾ 1 ಜೀವಿಗಳ ಪಾಲಿಸುವ ಹೊಣೆ ನಿನಗೆ ಸಲುವಾಗ ದೇವ ನೀನೋಬ್ಬನೇ ದಿಕ್ಕೆನುವಾಗ ಭಾವದಲಿ ನಿನ್ನಮೂರ್ತಿಯ ನೆನೆದು ನಲಿವಾಗ ದೇವ ಎನ್ನಪ್ಪ ಬಾಯೆನುವಾಗ ರಂಗಾ 2 ಸ್ವಾಭಿಮಾನದಿ ನೀನು ಲೋಕವನು ಮರೆವಾಗ ಲೋಭಿ ನೀನೆನ್ನದೇ ಜಗವೆಲ್ಲ ರಂಗಾ ಲಾಭವುಂಟೇ ಭಕ್ತಜನಕೆಲ್ಲ ಕ್ಷಯರೋಗ ನಾಭಿಗಂಟದೆ ಪೇಳು ಮಾಂಗಿರಿಯರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹರಿ ನಿನ್ನ ನಾಮದ | ಸ್ಮರಣೆಯ ನಾನು || ನಿರುತವು ಮಾಡುವೆ | ಪೊರೆಯೆನ್ನ ನೀನು ಪ ಶರಣರ ಪೊರೆವ| ಪರಮ ಪಾವನನು | ಕರುಣಾಳು ನಿನ್ನಯ | ಶರಣನಾಗಿಹೆನುಅ.ಪ ಕರಿರಾಜಗಿತ್ತೆ ನೀ | ವರ ಮುಕ್ತಿಪಥವ || ತರಳನಿಗೊಲಿದಿತ್ತೆ | ವರಧ್ರುವಪದವ 1 ಹರಿಯನು ತೋರೆಂದು | ಗರ್ಜಿಸಿ ಜರೆದ|| ದುರುಳನ ಬಗಿಯುತ್ತ| ತರಳನಿಗೊಲಿದ 2 ಕಾಮಿತಾರ್ಥವನಿತ್ತೆ| ಪ್ರೇಮದೊಳನಿಶ 3 ಮರಣದ ಸಮಯದಿ | ಕರೆದಜಾಮಿಳಗೆ|| ಪರಮಪದವನಿತ್ತು | ಕರುಣದಿ ಪೊರೆದ 4 ಅರಿತಾದರು ಮನ| ಕ್ಕರಿಯದೆ ಗೈದ || ದುರಿತಂಗಳಿರೆ ಪರಿ| ಹರಿಸೆಂದು ಸತತ 5 ನೀನಲ್ಲದೆನ್ನನು | ಪೊರೆಯುವರಿಲ್ಲ || ನಿನ್ನ ಸೇವೆಯ ಮಾಡ | ಲರಿಯೆ ನಾನಲ್ಲ6 ಇಹಪರಸುಖವಿತ್ತು | ಮುಕ್ತಿಯನೀವ || ಮಹಿಮನೆಂದರಿತಿಹೆ | ಭಕ್ತಸಂಜೀವ 7
--------------
ವೆಂಕಟ್‍ರಾವ್
ಬಾರಮ್ಮ ಮನೆಗೆ ಸೌಭಾಗ್ಯದ ಮಹಲಕ್ಷ್ಮಿ ಪಬಾರಮ್ಮ ಮನೆಗೆ ಭಕ್ತರು ನಿನ್ನ ಸ್ತುತಿಪರುಮಾರನಯ್ಯನ ಕೂಡಿ ಮನ ಹರುಷದಿ ಬೇಗ ಅ.ಪಶಂಖು ಚಕ್ರ ಗದ ಪದ್ಮವು ಧರಿಸಿದಪಂಕಜಾಕ್ಷನಸಿರಿಪಟ್ಟದರಸಿದೇವಿಕುಂಕುಮಾಂಕಿತೆ ಸರ್ವಾಲಂಕಾರ ಶೋಭಿತೆಬಿಂಕಮಾಡದಲೆ ಬಾ ವೆಂಕಟನರಸಿಯೆ1ಶುಕ್ರವಾರದಿ ನಿನ್ನ ಭಕ್ತಿಲಿ ಸ್ತುತಿಪರಇಷ್ಟ್ಯಾರ್ಥಗಳ ಕೊಟ್ಟುದ್ಧರಿಪಭಾರ್ಗವಿತಾಯೆಭಕ್ತವತ್ಸಲನೊಡಗೂಡುತ ಬಾರಮ್ಮಮಿತ್ರೇರು ಕರೆವರು ಕೃಷ್ಣವೇಣಿಯೆ ನಿನ್ನ 2ಕನ್ನಡಿ ಕದುಪಿನ ಕಡು ಮುದ್ದು ಮಹಾಲಕ್ಷ್ಮಿರನ್ನ ಪವಳ ಹಾರಾಲಂಕೃತ ಶೋಭಿತೆಸ್ವರ್ಣಮಂಟಪದಿ ಕುಳ್ಳಿರು ಬಾರೆಂದೆನುತಲಿಕರ್ನೇರು ಕರೆವರು ಕಮಲಾಕ್ಷನೊಡಗೂಡಿ 3ನಿಗಮವೇದ್ಯಳೆ ನಿನ್ನಅಗಣಿತಗುಣಗಳಪೊಗಳುವ ಸುಜನರಅಘಪರಿಹರಿಸುತ್ತಬಗೆ ಬಗೆ ನಾಮಗಳಿಂದ ಪೂಜೆಯಗೊಂಬಖಗವಾಹನನ ರಾಣಿ ಲಗುಬಗೆಯಿಂದಲಿ 4ತಡಮಾಡದಲೆ ಬಾ ಬಾ ಮುಡಿದ ಹೂವು ಉದರುತ್ತಬಡನಡು ಬಳುಕುತ್ತ ಕೊಡುತ ವರಗಳನ್ನುಬಿಡಿಮಲ್ಲಿಗೆಯ ತಂದು ನಡೆಮುಡಿ ಹಾಸುವರುಕಡಲೊಡೆಯನ ರಾಣಿ ಸಡಗರದಿಂದೊಮ್ಮೆ 5ಕ್ಷೀರವಾರಿಧಿಯ ಕುಮಾರಿಯೆ ಬಾರೆಂದುಸಾರಸಮುಖಿಯರು ಸರಸದಿ ಕರೆವರುಮೂರ್ಲೋಕ ವಿಖ್ಯಾತೆ ಮಾರಮಣನ ಪ್ರೀತೆಚಾರುಮಂಗಳೆ ಸತ್ಯ ಶ್ರೀ ಭೂದುರ್ಗಾಂಬ್ರಣೆ 6ಕಮಲಾಕ್ಷಿ ಕೇಳಮ್ಮ ಶ್ರಮ ಪರಿಹರಿಸೆಂದುನಮಿಸಿ ಬೇಡುವೆ ನಿನ್ನಭ್ರಮರಕುಂತಳೆ ತಾಯೆಕಮಲನಾಭ ವಿಠ್ಠಲನ ಕೂಡಿ ಹರುಷದಿಸುಮನಸರೊಡೆಯನಸತಿಸಾರ್ವಭೌಮಳೆ7
--------------
ನಿಡಗುರುಕಿ ಜೀವೂಬಾಯಿ